ಹೇಳಿಕೆ/Claim:ನಿರ್ವಹಣೆಯಡಿಯಲ್ಲಿದ್ದ ಭಾರತೀಯ ಉಪಗ್ರಹವು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಡಿಕ್ಕಿ ಹೊಡೆದಿರುವುದನ್ನು ವೀಡಿಯೊ ತೋರಿಸುತ್ತದೆ. ಈ ಘಟನೆಯಲ್ಲಿ ಅಮೆರಿಕದ ಗಗನಯಾತ್ರಿ ಮೈಕಲ್ ಕಾಲಿನ್ಸ್ ನಿಧನರಾದರು.
ಕಡೆನುಡಿ/Conclusion:ಇದು CGI ಕಲಾವಿದ ಅಲೆಕ್ಸೆ ಪಾತ್ರೇವ್ ರಚಿಸಿದ 3D ಎನಿಮೇಷನ್ ವೀಡಿಯೊವಾಗಿದೆ. ಅಪೊಲೊ 11ರ ಖ್ಯಾತಿಯ ಅಮೇರಿಕನ್ ಗಗನಯಾತ್ರಿ ಮೈಕಲ್ ಕಾಲಿನ್ಸ್ ಅವರು ಏಪ್ರಿಲ್ 2021ರಲ್ಲಿ ತಮ್ಮ 90ನೇ ವಯಸ್ಸಿನಲ್ಲಿ ಕ್ಯಾನ್ಸರ್ ನಿಂದ ನಿಧನರಾದರು.
ರೇಟಿಂಗ್: ಈ ಹೇಳಿಕೆ ಸಂಪೂರ್ಣವಾಗಿ ತಪ್ಪು —
ಸತ್ಯ ಪರಿಶೀಲನೆ ವಿವರಗಳು:
ಭಾರತೀಯ ಉಪಗ್ರಹವೊಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಡಿಕ್ಕಿ ಹೊಡೆಯುತ್ತಿರುವುದನ್ನು ತೋರಿಸುವುದಾಗಿ ಮತ್ತು ಅಮೆರಿಕದ ಗಗನಯಾತ್ರಿ ಮೈಕಲ್ ಕಾಲಿನ್ಸ್ ಈ ದುರ್ಘಟನೆಯಲ್ಲಿ ಸಾವನ್ನಪ್ಪಿರುವುದಾಗಿ ಹೇಳಿಕೆ ನೀಡುವ ಈ 45 ಸೆಕೆಂಡುಗಳ ವೀಡಿಯೊ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಅದನ್ನು ಟ್ವಿಟರ್‌ನಲ್ಲಿ ಇಲ್ಲಿ ಹಂಚಿಕೊಳ್ಳಲಾಗಿದೆ.
FACT CHECK
ವೀಡಿಯೊದ ಕೀ ಫ್ರೇಮ್ ಗಳನ್ನು ತೆಗೆದುಕೊಂಡು ಇಮೇಜ್ ಹುಡುಕಾಟ ನಡೆಸಿದಾಗ ಇದು ಉಕ್ರೇನ್‌ನ CGI ಕಲಾವಿದ ಅಲೆಕ್ಸೆ ಪಾತ್ರೇವ್ ಅವರು ಇನ್ಸ್ಟಾಗ್ರಾಂ ಪುಟದಲ್ಲಿ ಅಪ್‌ಲೋಡ್ ಮಾಡಿದ ದೀರ್ಘ 3D ವೀಡಿಯೊ ಗೇಮ್‌ನ ಭಾಗವಾಗಿದೆ ಎಂದು ಕಂಡುಬಂತು. ವೀಡಿಯೊವನ್ನು ಜುಲೈ 27, 2021 ರಂದು #animation ಹ್ಯಾಶ್‌ಟ್ಯಾಗ್‌ನೊಂದಿಗೆ ಅಪ್‌ಲೋಡ್ ಮಾಡಲಾಗಿತ್ತು ಮತ್ತು ಅವರ ಯೂಟ್ಯೂಬ್ ಚಾನೆಲ್ ಮತ್ತು ಇನ್ಸ್ಟಾಗ್ರಾಂನಲ್ಲಿಯೂ ಇದನ್ನು ಹಂಚಿಕೊಳ್ಳಲಾಗಿತ್ತು.
ಈ ವೀಡಿಯೊವನ್ನು ರಚಿಸಲು ತಮ್ಮನ್ನು “ಗ್ರಾವಿಟಿ” ಚಲನಚಿತ್ರವು ಪ್ರೇರೇಪಿಸಿತು ಎಂದೂ ಸಹ ಅಲೆಕ್ಸಿ ಹೇಳಿದ್ದರು. ಆದ್ದರಿಂದ, ಪ್ರಶ್ನೆಯಲ್ಲಿರುವ ವೀಡಿಯೊ 3D ಎನಿಮೇಷನ್ ಆಗಿದ್ದು, ಅದು ಭಾರತೀಯ ಉಪಗ್ರಹವು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಡಿಕ್ಕಿ ಹೊಡೆಯುವುದನ್ನು ತೋರಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ.
ಈಗ ಎರಡನೇ ಹೇಳಿಕೆಯನ್ನು ನೋಡುವುದಾದರೆ, ಅಮೇರಿಕನ್ ಗಗನಯಾತ್ರಿ ಮೈಕಲ್ ಕಾಲಿನ್ಸ್ ಈ ದುರ್ಘಟನೆಯಲ್ಲಿ ಸಾವನ್ನಪ್ಪಿದರು ಎಂಬ ಹೇಳಿಕೆಯು ಸಂಪೂರ್ಣವಾಗಿ ಆಧಾರರಹಿತವಾಗಿದೆ. ಅಪೊಲೊ 11 ರಲ್ಲಿ ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಬಜ್ ಆಲ್ಡ್ರಿನ್ ಅವರೊಂದಿಗೆ ಚಂದ್ರನ ಮೇಲೆ ಇಳಿದ ಅಪೊಲೊ ಮಿಷನ್‌ನ ಮೂವರಲ್ಲಿ ಇವರು ಒಬ್ಬರಾಗಿದ್ದರು. ಅವರು 2021ರ ಏಪ್ರಿಲ್ ತಿಂಗಳಿನಲ್ಲಿ 90 ವರ್ಷ ವಯಸ್ಸಿನಲ್ಲಿ ಕ್ಯಾನ್ಸರ್‌ನಿಂದ ನಿಧನರಾದರು ಮತ್ತು ಹೇಳಿಕೊಂಡಂತೆ ಬಾಹ್ಯಾಕಾಶ ಘಟನೆಯಲ್ಲಿ ಅವರು ನಿಧನರಾಗಿದ್ದಲ್ಲ.
ಇದನ್ನೂ ಓದಿ: