Don't Miss

ಅಮೇರಿಕಾದಲ್ಲಿ ವಿಶ್ವದ ಅತಿದೊಡ್ಡ ಒಂದು ಗ್ರಂಥಾಲಯವನ್ನು ತೆರೆಯಲಾಗಿದ್ದು, ಅದಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ರವರ ಹೆಸರಿಸಲಾಗಿದೆ? ಸತ್ಯ ಪರಿಶೀಲನೆ

ಹೇಳಿಕೆ/Claim:: ಯುನೈಟೆಡ್ ಸ್ಟೇಟ್ಸ್ನಲ್ಲಿ ಒಂದು ಗ್ರಂಥಾಲಯವನ್ನು ತೆರೆಯಲಾಗಿದ್ದು ಅದಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ರವರ ಹೆಸರನ್ನಿಡಲಾಗಿದೆ.

ಕಡೆನುಡಿ/Conclusion: ಅಂತಹ ಯಾವುದೇ ಗ್ರಂಥಾಲಯವನ್ನು ತೆರೆಯಲಾಗಿಲ್ಲ ಮತ್ತು ಹೇಳಲಾಗಿರುವಂತೆ ಅದಕ್ಕೆ ಅಂಬೇಡ್ಕರ್ ಅವರ ಹೆಸರನ್ನು ಖಂಡಿತವಾಗಿಯೂ ಇಡಲಾಗಿಲ್ಲ. ಚಿತ್ರವು ಚೀನಾದಲ್ಲಿ ಮಾರ್ಚ್ 2018 ರಲ್ಲಿ ತೆರೆಯಲಾದ ಗ್ರಂಥಾಲಯದ್ದು.

ರೇಟಿಂಗ್: ಸಂಪೂರ್ಣವಾಗಿ ಸುಳ್ಳುFive rating

ಸತ್ಯ ಪರಿಶೀಲನೆ ವಿವರಗಳು

ವಿಶ್ವದ ಅತಿದೊಡ್ಡ ಗ್ರಂಥಾಲಯವನ್ನು ಯುನೈಟೆಡ್ ಸ್ಟೇಟ್ಸ್ ತೆರೆದಿದೆ ಮತ್ತು ಅದಕ್ಕೆ ಭಾರತೀಯ ಸಂವಿಧಾನದ ಲೇಖಕರಾದ ಡಾ.ಬಿ.ಆರ್. ಅಂಬೇಡ್ಕರ್ ರವರ ಹೆಸರನ್ನಿಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ ಒಂದು ಹೇಳುತ್ತದೆ. 

“भारत देश के मसीहा डॉ .भीम राव अम्बेदकर जी के नाम अमेरिका ने खोलाविश्व का सबसे बडा पुस्तकालय , नमस्ते अमेरिका , जय भीम, जय भारत, जय संविधान.” ಕನ್ನಡದ ಅನುವಾದ ಹೀಗಿದೆ: ಯುನೈಟೆಡ್ ಸ್ಟೇಟ್ಸ್ ವಿಶ್ವದ ಅತಿದೊಡ್ಡ ಗ್ರಂಥಾಲಯವನ್ನು ತೆರೆದಿದೆ ಮತ್ತು ಅದಕ್ಕೆ ಭಾರತೀಯ ಸಂವಿಧಾನದ ಲೇಖಕ ಡಾ. ಬಿ.ಆರ್. ಅಂಬೇಡ್ಕರ್ ರವರ ಹೆಸರು ಕೊಟ್ಟಿದೆ. ನಮಸ್ತೆ ಅಮೇರಿಕಾ, ಜೈ ಭೀಮ್, ಜೈ ಭಾರತ್, ಜೈ ಸಂವಿಧಾನ.]

ಈ ಹೇಳಿಕೆಯನ್ನು ಬೆಂಬಲಿಸಲು, ಆ ಸಂದೇಶವು ಕಪಾಟಿನಲ್ಲಿ ಜೋಡಿಸಲಾದ ಹಲವಾರು ಪುಸ್ತಕಗಳನ್ನು ಹೊಂದಿರುವ ಬಿಳಿ ಕಟ್ಟಡವನ್ನು ಸಹ ತೋರಿಸುತ್ತದೆ.

 ಸತ್ಯ ಪರಿಶೀಲನೆ

ಈ ಹಿಂದೆ ಇಂತಹುದೇ ಹೇಳಿಕೆಯನ್ನು ತಪ್ಪೆಂದು ಸಾಬೀತುಪಡಿಸಿದ್ದರಿಂದ ಡಿಜಿಟೈ ಇಂಡಿಯಾ ಇದನ್ನು ಕೈಗೆತ್ತಿಕೊಂಡಿತು. ಬಿಳಿ ಕಟ್ಟಡದ ಚಿತ್ರವನ್ನು ಬಳಸಿಕೊಂಡು ನಾವು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ, ಮೂಲ ಕಟ್ಟಡವು ಯು.ಎಸ್‌.ನಲ್ಲಿ ಅಲ್ಲ, ಚೀನಾದಲ್ಲಿದೆ ಎಂದು ನಮಗೆ ತಿಳಿದುಬಂತು. ಈ ಕಟ್ಟಡವು ಚೀನಾದ ಟಿಯಾಂಜಿನ್‌ನಲ್ಲಿರುವ ಬಿನ್ಹೈ ಲೈಬ್ರರಿಗೆ ಸೇರಿದೆ. ಕೆಳಗೆ ಕಾಣುವಂತೆ ಹಲವಾರು ಸುದ್ದಿ ವರದಿಗಳು (CNN) ಅದೇ ಮಾಹಿತಿಯನ್ನು ಬಹಿರಂಗಪಡಿಸುತ್ತವೆ:

ಟಿಯಾಂಜಿನ್ ಬಿನ್ಹೈ ಗ್ರಂಥಾಲಯವು MVRDVಯ ಅತ್ಯಂತ ವೇಗವಾಗಿ ನಿರ್ಮಿಸಲಾದ ಯೋಜನೆಯಾಗಿದ್ದು, ಇದನ್ನು ಕಟ್ಟಲು ಕೇವಲ ಮೂರು ವರ್ಷಗಳು ಬೇಕಾದವು ಎಂದು ಇತರ ವರದಿಗಳು ದೃಢೀಕರಿಸುತ್ತವೆ. ಕ್ಸಿನ್ಹುವಾ ಸುದ್ದಿ ಸಂಸ್ಥೆಯಿಂದ ಕೆಳಗಿನ ವೀಡಿಯೊವನ್ನು ನೋಡಿ:

ನವೆಂಬರ್ 2, 2017 ರಂದು ಅಪ್‌ಲೋಡ್ ಮಾಡಲಾದ ಈ ಮೇಲಿನ ವೀಡಿಯೊ ಟಿಯಾಂಜಿನ್ ಬಿನ್ಹೈ ಗ್ರಂಥಾಲಯದ ವಿವರಗಳನ್ನು ನೀಡುತ್ತದೆ, ಇದನ್ನು ಉತ್ತರ ಚೀನಾದ ಬಂದರು ನಗರವಾದ ಟಿಯಾಂಜಿನ್‌ನಲ್ಲಿ ತೆರೆಯಲಾಗಿದ್ದು, ಇದು ಪುಸ್ತಕಗಳೊಂದಿಗೆ ಅಭೂತಪೂರ್ವ ಅನುಭವವನ್ನು ಒದಗಿಸಸುತ್ತದೆ.

ಆದ್ದರಿಂದ, ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಡಾ.ಬಿ.ಆರ್ ಅಂಬೇಡ್ಕರ್ ರವರ ಹೆಸರನ್ನುಳ್ಳ ಯಾವುದೇ ಗ್ರಂಥಾಲಯವು ಅಮೇರಿಕದಲ್ಲಿ ಇಲ್ಲ. ಅಂಬೇಡ್ಕರ್. ಇಂತಹ ಯೋಜನೆಗೆ ಸಂಬಂಧಿಸಿದ ಯಾವುದೇ ವರದಿಗಳೂ ಕಂಡುಬಂದಿಲ್ಲ.

ಇದನ್ನೂ ಓದಿ:

ಈ ವೀಡಿಯೊ 170-ವರ್ಷ-ಹಳೆಯ ಟಿಸ್ಸಾಟ್ ವಾಚ್ನ ಮರುಸ್ಥಾಪನೆಯನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಸತ್ಯ ಪರಿಶೀಲನೆ: ಸುಡಾನ್‌ನಲ್ಲಿ ಡ್ರೋನ್ ದಾಳಿಯ ಒಂದು ಹಳೆಯ ವೀಡಿಯೊಗೂ ಗಾಜಾ಼ ಮೇಲಿನ ದಾಳಿಗೂ ಸಂಬಂಧ ಕಲ್ಪಿಸಲಾಗಿದೆ