Don't Miss

ಕೇರಳದ ಬಲ್ಲಾ ಬೀಚ್ನಲ್ಲಿ ನಡೆದ ರ್ಯಾಲಿಯಲ್ಲಿ ಪಾಕಿಸ್ತಾನಿ ಧ್ವಜದ ಪ್ರದರ್ಶನ? ಸತ್ಯ ಪರಿಶೀಲನೆ

ಹೇಳಿಕೆ/Claim: ಕೇರಳದ ಬಲ್ಲಾ ಬೀಚ್‌ನಲ್ಲಿ ನಡೆದ ರ್ಯಾದಲಿಯಲ್ಲಿ ಪಾಕಿಸ್ತಾನದ ಧ್ವಜ ಮತ್ತು ಪಾಕಿಸ್ತಾನದ ರಕ್ಷಣಾ ಸಮವಸ್ತ್ರದಲ್ಲಿ ಪುರುಷರು ಕಾಣಿಸಿಕೊಂಡರು.

ಕಡೆನುಡಿ/Conclusion: ಈದ್-ಎ-ಮಿಲಾದ್ ಉನ್-ನಬಿ ಸಂದರ್ಭದಲ್ಲಿ ಬಲ್ಲಾ ಬೀಚ್‌ನಲ್ಲಿ ಈ ರ್ಯಾ ಲಿ ನಡೆಯಿತು. ಧ್ವಜವು ಪಾಕಿಸ್ತಾನದ್ದಲ್ಲ, ಅದು ಸಮಸ್ತ ಕೇರಳ ಜೆಮ್-ಇಯ್ಯತುಲ್ ಉಲಮಾ ಎಂಬ ಕೇರಳದ ಇಸ್ಲಾಮಿಕ್ ಸಂಘಟನೆಯದ್ದು.

ರೇಟಿಂಗ್: ತಪ್ಪು ನಿರೂಪಣೆ-

ಸತ್ಯ ಪರಿಶೀಲನೆ ವಿವರಗಳು:

ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ವ್ಯಾಪಕವಾಗಿ ಹರಿದಾಡುತ್ತಿದೆ. ಸೈನ್ಯದಂತಹ ಖಾಕಿ ಸಮವಸ್ತ್ರವನ್ನು ಧರಿಸಿರುವ ಪುರುಷರನ್ನು ಹೊಂದಿರುವ ರ್ಯಾಲಿಯನ್ನು ವೀಡಿಯೊ ತೋರಿಸುತ್ತದೆ ಮತ್ತು ಈ ರ್ಯಾಲಿಯಲ್ಲಿ ಒಂದು ಧ್ವಜವನ್ನು ಬೀಸಲಾಗುತ್ತಿದೆ. ಕೇರಳದಲ್ಲಿ ಪಾಕಿಸ್ತಾನದ ಧ್ವಜಗಳೊಂದಿಗೆ ಪಾಕಿಸ್ತಾನದ ರಕ್ಷಣಾ ಸಮವಸ್ತ್ರದಲ್ಲಿರುವ ಪುರುಷರನ್ನು ರ್ಯಾಲಿಯು ತೋರಿಸುತ್ತದೆ ಎಂದು ವೀಡಿಯೊದೊಂದಿಗಿರುವ ಹೇಳಿಕೆಗಳು ಆರೋಪಿಸಿವೆ. ಈ ಹೇಳಿಕೆಯು ಹೇಳುವುದೇನೆಂದರೆ,

भारत वर्ष में ऐक और बडी साझीस चलाईं जा रही है| अभ भी वक्त है भारतीय जागो उठो, अरे नहीं नहीं ये सीरिया, सउदी, ईरान का वीडियो नहीं है| ये तो भारत में केरल की बल्ला बीच का वीडियो है। कांग्रेस के राज में इस्लाम नहीं फलेगा फूलेगा तो और कहां फले फूलेगा। आखिर राहुल सर अमेठी रायबरेली छोड़ कर वायनाड से इसीलिए तो जीते थे सर|

(ಅನುವಾದ: ಭಾರತ ದೇಶದಲ್ಲಿ ಮತ್ತೊಂದು ದೊಡ್ಡ ಪಿತೂರಿ ನಡೆಯುತ್ತಿದೆ. ಭಾರತೀಯರು ಇದೀಗ ಎಚ್ಚೆತ್ತುಕೊಳ್ಳಬೇಕಾದ ಸಮಯ. ಅರೆರೆ ಅಲ್ಲ, ಇದು ಸಿರಿಯಾ, ಸೌದಿ ಅಥವಾ ಇರಾನ್ನ ವೀಡಿಯೊ ಅಲ್ಲ. ಇದು ಕೇರಳದ ಬಲ್ಲಾ ಬೀಚ್ನಿಂದ ಬಂದಿರುವ ವೀಡಿಯೊ .ಕಾಂಗ್ರೆಸ್ ಆಡಳಿತದಲ್ಲಿ ಇಸ್ಲಾಂ ಪ್ರವರ್ಧಮಾನಕ್ಕೆ ಬರದೇ ಹೋದರೆ ಅದು ಮತ್ತೆಲ್ಲಿ ವಿಜೃಂಭಿಸುವುದೋ? ಎಷ್ಟಾದರೂ ರಾಹುಲ್ ಸರ್ ಅಮೇಠಿ ಮತ್ತು ರಾಯ್ ಬರೇಲಿ ಬಿಟ್ಟು ವಯನಾಡಿನಿಂದ ಗೆದ್ದು ಬಂದಿದ್ದು ಇದಕ್ಕೇ.)

ಈ ವೀಡಿಯೊವನ್ನು ಟ್ವಿಟರ್ನಲ್ಲಿಯೂ ಹಂಚಿಕೊಳ್ಳಲಾಗಿದೆ.

ಡಿಜಿಟೈ ಇಂಡಿಯಾ ತಂಡಕ್ಕೆ ಈ ವೈರಲ್ ವೀಡಿಯೊ ಸತ್ಯ-ಪರಿಶೀಲನೆಗಾಗಿ ವಾಟ್ಸಾಪ್‌ ಮೂಲಕ ದೊರಕಿತು.

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ವೀಡಿಯೊವನ್ನು ಹಲವು ಕೀಫ್ರೇಮ್ಗಳಾಗಿ ವಿಭಜಿಸಲು ಇನ್ವಿಡ್- ವೀಡಿಯೊ ಪರಿಶೀಲನಾ ಟೂಲ್ ಬಳಸಿತು. ನಾವು ಈ ಕೀಫ್ರೇಮ್ಗಳನ್ನು ಬಳಸಿ ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಒಂದು ಫಲಿತಾಂಶವು ನಮ್ಮನ್ನು ಸೆಪ್ಟೆಂಬರ್ 28, 2023ರಂದು ಅಪ್ಲೋಡ್ ಮಾಡಲಾದ ಯೂಟ್ಯೂಬ್ ವೀಡಿಯೊಗೆ ಕರೆದೊಯ್ಯಿತು. ಅದು ನಬಿದಿನ ರ್ಯಾಲಿಯದ್ದು ಎಂದು ವೀಡಿಯೊದ ವಿವರಣೆಯಿಂದ ನಮಗೆ ತಿಳಿದುಬಂತು. ಅದೇ ಸಮಯದಿಂದ ರ್ಯಾಲಿಯ ಇತರ ವೀಡಿಯೊಗಳೂ ನಮಗೆ ದೊರೆತವು. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ವೈರಲ್ ವೀಡಿಯೊದಲ್ಲಿರುವ ಅದೇ ಧ್ವಜವನ್ನು ಈ ವೀಡಿಯೊಗಳಲ್ಲಿಯೂ ಕಾಣಬಹುದು.

ಕೇರಳದ ಕಾಞಂಗಾಡ್ ಪಟ್ಟಣವಾದ ಬಲ್ಲಾ ಬೀಚ್ನಲ್ಲಿ ಈದ್-ಎ-ಮಿಲಾದ್ ಉನ್-ನಬಿಯಂದು ನಬಿದಿನ ರ್ಯಾಲಿಯನ್ನು ನಡೆಸಲಾಯಿತು. ಈ ವರ್ಷ ಈದ್-ಎ-ಮಿಲಾದ್ ಉನ್-ನಬಿ ಸೆಪ್ಟೆಂಬರ್ 27-28 ರಂದು ಇತ್ತು. ಯೂಟ್ಯೂಬ್ ನಲ್ಲಿ ವೀಡಿಯೊಗಳನ್ನು ಅಪ್ಲೋಡ್ ಮಾಡಿದ ದಿನಾಂಕಗಳೊಂದಿಗೆ ಈ ದಿನಾಂಕಗಳು ಹೊಂದಿಕೆಯಾಗುತ್ತವೆ.

ಧ್ವಜದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಾವು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಆ ಧ್ವಜವು ಪಾಕಿಸ್ತಾನದ್ದಲ್ಲ, ಅದು ಕೇರಳದ ಸಮಸ್ತ ಕೇರಳ ಜೆಮ್-ಇಯ್ಯತುಲ್ ಉಲಮಾ ಇಸ್ಲಾಮಿಕ್ ಸಂಘಟನೆಯದ್ದು ಎಂದು ಫಲಿತಾಂಶಗಳು ಬಹಿರಂಗಪಡಿಸಿದವು. ವೈರಲ್ ವೀಡಿಯೊದಲ್ಲಿ ಕಂಡುಬರುವ ಧ್ವಜಗಳು ಸಮಸ್ತ ಕೇರಳ ಜೆಮ್-ಇಯ್ಯತುಲ್ ಉಲಮಾದ ಉಪ-ಭಾಗವಾದ ಸಮಸ್ತ ಕೇರಳ ಸುನ್ನಿ ಯುವಜನ ಸಂಘಂ(SYS) ಗೆ ಸೇರಿವೆ.

ರ್ಯಾಲಿಯಲ್ಲಿ ಪಾಕಿಸ್ತಾನದ ಧ್ವಜಗಳಿದ್ದವು ಎಂಬ ಆರೋಪ ಸುಳ್ಳು.

ಇದನ್ನೂ ಓದಿ:

ಲಾಸ್ ಏಂಜಲೀಸ್ನಲ್ಲಿ ಬ್ಲ್ಯಾಕ್ ಫ್ರೈಡೆಯಂದು ನೈಕಿ ಅಂಗಡಿಯಲ್ಲಿ ದರೋಡೆಯಾಗಿದೆಯೇ? ಸತ್ಯ ಪರಿಶೀಲನೆ

ಸತ್ಯ ಪರಿಶೀಲನೆ: ಕೋಮುಗಳ ನಡುವಿನ ಜಗಳವೆಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ, ಸ್ಟಂಟ್ ತಂಡವೊಂದು ಮಾಡಿದ ಬೀದಿ ಕಾಳಗ.

 

One comment

Leave a Reply

Your email address will not be published. Required fields are marked *

*