Don't Miss

ಹಳೆ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ವೀಡಿಯೊವನ್ನು ಮಧ್ಯ ಪ್ರದೇಶದ ಚುನಾವಣೆಯದ್ದೆಂದು ಹಂಚಿಕೊಳ್ಳಲಾಗಿದೆ; ಸತ್ಯ ಪರಿಶೀಲನೆ

Claim/ಹೇಳಿಕೆ: ಮಧ್ಯಪ್ರದೇಶದಲ್ಲಿ ಮತದಾನಕ್ಕೂ ಮುನ್ನವೇ ಸಾರ್ವಜನಿಕರು ಆಡಳಿತ ಪಕ್ಷದ (ಬಿಜೆಪಿ) ನಾಯಕರನ್ನು ಓಡಿಸಲಾರಂಭಿಸಿದ್ದಾರೆ.
Conclusion/ಕಡೆನುಡಿ:ಸುಳ್ಳು, ಪಶ್ಚಿಮ ಬಂಗಾಳ ಚುನಾವಣೆಗಳ ಹಳೆಯ ವೀಡಿಯೊವನ್ನು ಮಧ್ಯ ಪ್ರದೇಶದ ಮತದಾನವೆಂದು ನವೆಂಬರ್ 17, 2023ರಂದು ಹಂಚಿಕೊಳ್ಳಲಾಗಿದೆ.
ರೇಟಿಂಗ್: ತಪ್ಪು ನಿರೂಪಣೆ.

Fact Check ವಿವರಗಳು:

ನವೆಂಬರ್ 17, 2023 ರಂದು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗಳು ನಡೆಯುವ ಕೆಲವೇ ದಿನ ಮೊದಲು, ರಾಜ್ಯದಲ್ಲಿ ಬಿಜೆಪಿ ನಾಯಕರನ್ನು ಬೂತ್ಗಳಿಂದ ಓಡಿಸಲಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವೀಡಿಯೊದಲ್ಲಿದ್ದ ಹಿಂದಿ ಹೇಳಿಕೆ ಹೀಗಿದೆ: “मध्यप्रदेश में वोटिंग होने से पहले ही जनता ने रिजल्ट देना शुरू कर दिया है मध्यप्रदेश में सत्ताधारी नेताओ को जनता खदेड़ रही है वीडियो पूरा देखो और RT करो बस.” [ಅನುವಾದ ಹೀಗಿದೆ: ಮಧ್ಯಪ್ರದೇಶದಲ್ಲಿ ಮತದಾನಕ್ಕೂ ಮುಂಚೆಯೇ ಸಾರ್ವಜನಿಕರು ಫಲಿತಾಂಶಗಳನ್ನು ನೀಡಲಾರಂಭಿಸಿದ್ದಾರೆ… ಜನರು ಮಧ್ಯಪ್ರದೇಶದಲ್ಲಿ ಆಡಳಿತದಲ್ಲಿರುವ ನಾಯಕರನ್ನು ಓಡಿಸುತ್ತಿದ್ದಾರೆ]

मध्यप्रदेश में सत्ताधारी नेताओ को जनता खदेड़ रही है

वीडियो पूरा देखो और RT करो बस

— 𝐁𝐫𝐢𝐣𝐞𝐬𝐡 𝐅𝐚𝐥𝐝𝐮 (@BrijeshFaldu1) November 14, 2023

FACT CHECK
ನಮ್ಮ ಡಿಜಿಟೈ ಇಂಡಿಯಾ ತಂಡವು ವೀಡಿಯೊದ ಪ್ರಮುಖ ಫ್ರೇಮ್ಗಳನ್ನು ಬಳಸಿ ಹುಡುಕಾಟ ನಡೆಸಿದಾಗ, ಅದು 2021ರಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಯುಟ್ಯೂಬ್ ವೀಡಿಯೊ ಎಂದು ಫಲಿತಾಂಶಗಳಲ್ಲಿ ತಿಳಿಯಿತು.
ಮತದಾನದ ದಿನದಂದು ಬಿಜೆಪಿ ನಾಯಕ ಅನಿರ್ಬನ್ ಗಾಂಗೂಲಿಯವರ ಕಾರ್ ಹಾನಿಗೊಂಡ ನಂತರ ಅವರನ್ನು ಕರೆದುಕೊಂಡು ಹೋಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಸುದ್ದಿ ವರದಿಗಳ ಪ್ರಕಾರ, ಇದು ಏಪ್ರಿಲ್ 29, 2021ರಂದು ಮತಗಟ್ಟೆಯಲ್ಲಿ ಅವರ ಕಾರಿಗೆ ಹಾನಿಯಾಗಿ ಜನರು ಅವರ ಬೆನ್ನತ್ತಿದ್ದಾಗ ಸಂಭವಿಸಿದ ಘಟನೆ. ಭದ್ರತಾ ಸಿಬ್ಬಂದಿ ಅವರನ್ನು ಸ್ಥಳದಿಂದ ಕರೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಸ್ಥಳೀಯ ಸುದ್ದಿ ವಾಹಿನಿಗಳ ಈ ವೀಡಿಯೊವನ್ನು ಇಲ್ಲಿ ನೋಡಿ:


ಘಟನೆಯ ನಂತರ, ಗಾಂಗೂಲಿಯವರು ಸ್ವತಃ ಟ್ವಿಟರ್ನಲ್ಲಿ ತಮ್ಮ ಅನುಭವವನ್ನು ಈ ಕೆಳಗಿನಂತೆ ಹಂಚಿಕೊಂಡಿದ್ದಾರೆ:


ಆದ್ದರಿಂದ, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹಳೆಯ ವೀಡಿಯೊವನ್ನು, ಮಧ್ಯಪ್ರದೇಶ ಚುನಾವಣೆಗಳ ವೀಡಿಯೊ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿತ್ತು.

ಇದನ್ನೂ ಓದಿ:

ಈ ದೀಪಾವಳಿಗೆ ಚೀನಾದ ಪಟಾಕಿಗಳನ್ನು ಖರೀದಿಸುವುದನ್ನು ತಪ್ಪಿಸಬೇಕೆಂದು ಗೃಹ ಸಚಿವಾಲಯವು ಜನರಿಗೆ ಹೇಳಿದೆಯೇ? ಸತ್ಯ ಪರಿಶೀಲನೆ ;

ಉತ್ತರ ಪ್ರದೇಶ, ಬಿಹಾರದ ಜನರನ್ನು ದೆಹಲಿಯಿಂದ ಓಡಿಸಬೇಕು ಎಂದು ಬಿಜೆಪಿ ಸಂಸದ ರಮೇಶ್ ಬಿಧುರಿ ಹೇಳಿದ್ದಾರೆಯೇ? ಸತ್ಯ ಪರಿಶೀಲನೆ]

 

 

 

Leave a Reply

Your email address will not be published. Required fields are marked *

*