Claim/ಹೇಳಿಕೆ: ಪಟಾಕಿಗಳ ಮಾರಾಟ ಮತ್ತು ಬಳಕೆಯ ಮೇಲೆ ಸರ್ವೋಚ್ಚ ನ್ಯಾಯಾಲಯವು ನಿಷೇಧ ಘೋಷಿಸಿತು, ಈ ಹಿಂದೆ ದೆಹಲಿ-NCRಗೆ ಸೀಮಿತವಾಗಿದ್ದದ್ದು ಈಗ ರಾಷ್ಟ್ರವ್ಯಾಪಿಯಾಗಿ ಅನ್ವಯಿಸುತ್ತದೆ.
Conclusion/ಕಡೆನುಡಿ: ಪಟಾಕಿಗಳ ಮೇಲಿನ ಸರ್ವೋಚ್ಚ ನ್ಯಾಯಾಲಯದ ನಿಷೇಧವು ಭಾರತದಾದ್ಯಂತ ಬೇರಿಯಂ ಬಳಕೆಗೆ ಸಂಬಂಧಿಸಿದೆ ಮತ್ತಿದು ಎಲ್ಲಾ ಪಟಾಕಿಗಳ ಮೇಲೆ ಹೇರಲಾದ ನಿಷೇಧವಲ್ಲ.
Rating: Misleading —
Fact Check ವಿವರಗಳು:
ಭಾರತದ ಸರ್ವೋಚ್ಚ ನ್ಯಾಯಾಲಯವು ಕೇವಲ ದೆಹಲಿ-NCR ಪ್ರದೇಶಕ್ಕೆ ಸೀಮಿತವಾಗಿರದೆ ಭಾರತದಾದ್ಯಂತ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ ಎನ್ನುವ ತಪ್ಪು ಮಾಹಿತಿಯುಳ್ಳ ಒಂದು ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಹೇಳಿಕೆ ಹೀಗಿದೆ: “ಪಟಾಕಿಗಳ ಮಾರಾಟ ಮತ್ತು ಬಳಕೆಯ ಮೇಲೆ ನಿಷೇಧ ಘೋಷಿಸಿದ ಸರ್ವೋಚ್ಚ ನ್ಯಾಯಾಲಯ, ಈ ಹಿಂದೆ ದೆಹಲಿ-NCRಗೆ ಮಾತ್ರ ಸೀಮಿತವಾಗಿದ್ದುದು ಇನ್ನು ದೇಶಾದ್ಯಂತ ಅನ್ವಯಿಸುತ್ತದೆ. ಈ ಕುರಿತು ಶ್ರೀ. ವಿಷ್ಣು ಶಂಕರ್ ಜೈನ್ ರವರ ಅಭಿಪ್ರಾಯವನ್ನು ಕೇಳಲೇಬೇಕು.”
ಕೆಳಗಿನ ಟ್ವೀಟ್ ನೋಡಿ:
SC declared a ban on the sale and use of firecrackers, previously confined to Delhi-NCR is now applicable nation-wide. Must Listen to Mr.Vishnu Shankar Jain’s views on this. pic.twitter.com/2oqPuLP0p0
— Stranger (@amarDgreat) November 10, 2023
FACT CHECK
ಇದು ನಮ್ಮಲ್ಲಿ ಸತ್ಯಾಂಶ ಪರಿಶೀಲನೆಗಾಗಿ ಬಂದಾಗ, ಮೊದಲು ನಾವು ಗೂಗಲ್ ಸರ್ಚ್ ನಲ್ಲಿ ಸರ್ವೋಚ್ಚ ನ್ಯಾಯಾಲಯದ ಈ ತೀರ್ಪನ್ನು ಹುಡುಕಿದೆವು. ಆಗ, ಈ ಹಿಂದೆ ದೆಹಲಿ-NCR ಪ್ರದೇಶದಲ್ಲಿ ಪಟಾಕಿಗಳನ್ನು ನಿಷೇಧಿಸಿದ್ದ ಸರ್ವೋಚ್ಚ ನ್ಯಾಯಾಲಯವು ಅದರ ಬಗ್ಗೆ ನಿಯತಕಾಲಿಕವಾಗಿ ಸ್ಪಷ್ಟೀಕರಣಗಳನ್ನು ನೀಡುತ್ತಿತ್ತು ಎಂದು ಕಂಡುಕೊಂಡೆವು. 2018ರ ತೀರ್ಪಿನ ಬಗ್ಗೆ ಸ್ಪಷ್ಟೀಕರಣ ನೀಡುವ ಸುದ್ದಿ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಸರ್ವೋಚ್ಚ ನ್ಯಾಯಾಲಯವು ತನ್ನ ನಿರ್ದೇಶನಗಳ ಬಗ್ಗೆ ಮರುಪರಿಶೀಲನಾ ಅರ್ಜಿಯಲ್ಲಿ, ಪಟಾಕಿಗಳಲ್ಲಿ ಬೇರಿಯಂ ಮತ್ತು ನಿಷೇಧಿತ ರಾಸಾಯನಿಕಗಳ ಬಳಕೆಯ ಮೇಲಿನ ನಿಷೇಧವು ದೇಶಾದ್ಯಂತ ಅನ್ವಯಿಸುತ್ತದೆ ಮತ್ತು ಎಲ್ಲಾ ರಾಜ್ಯಗಳು ಇದಕ್ಕೆ ಬದ್ಧ ಎಂದು ಸ್ಪಷ್ಟಪಡಿಸಿದೆ ಎಂಬುದನ್ನು ಗಮನಿಸಬಹುದು. ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ಎಂಎಂ ಸುಂದರೇಶ್ ರವರು ನವೆಂಬರ್ 7, 2023ರಂದು ರಾಜಸ್ಥಾನಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣವನ್ನು ನೀಡಿದರು, ಈ ಆದೇಶಗಳು ಈಗ ರಾಜಸ್ಥಾನ ಸೇರಿದಂತೆ ಭಾರತದ ಎಲ್ಲಾ ರಾಜ್ಯಗಳಿಗೆ ಅನ್ವಯಿಸುತ್ತವೆ ಎಂದು ಸರ್ವೋಚ್ಚ ನ್ಯಾಯಾಲಯವು ಅದರಲ್ಲಿ ಹೇಳಿತು.
2018ರ ತೀರ್ಪಿನ ಪ್ರಕಾರ, “ಹಸಿರು ಪಟಾಕಿ”ಗಳ ಕುರಿತಾದ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳು ಪರಿಸರದ ಮೇಲೆ ಪಟಾಕಿಗಳ ಪ್ರಭಾವವು ಗಾಳಿಯ ಗುಣಮಟ್ಟದ ಮೇಲೆ ಪರಿಣಾಮವನ್ನುಂಟು ಮಾಡಬಾರದು ಎಂದು ನಿರ್ದೇಶಿಸಿ, ಕಡಿಮೆ ಮಾಲಿನ್ಯಕಾರಕಗಳನ್ನು ಹೊರಸೂಸುವ ಮತ್ತು ಕಡಿಮೆ ಸದ್ದು ಮಾಡುವ ಪರಿಸರ ಸ್ನೇಹಿ ಅಥವಾ “ಹಸಿರು” ಪಟಾಕಿಗಳನ್ನು ತಯಾರಿಸಲು ಕಡ್ಡಾಯವಾಗಿಸಿತು.
ಸರ್ವೋಚ್ಚ ನ್ಯಾಯಾಲಯವು 2021ರ ತೀರ್ಪಿನಲ್ಲಿ, ದೀಪಾವಳಿ ಪಟಾಕಿಗಳಲ್ಲಿ ಬೇರಿಯಮ್ ಸ್ಲ್ಯಾಟ್ಸ್ ನಂತಹ ನಿಷೇಧಿತ ರಾಸಾಯನಿಕಗಳ ಬಳಕೆಯನ್ನು ತಡೆಯಲು, ಈ ರಾಸಾಯನಿಕಗಳನ್ನು ಹೊಂದಿರುವ ಪಟಾಕಿಗಳನ್ನು ನಿಷೇಧಿಸಲಾಗಿದೆ ಮತ್ತು “ಹಸಿರು ಪಟಾಕಿ” ಗಳನ್ನು ಅನುಮತಿಸಲಾಗಿದೆ ಎಂದು ಹೇಳಿತು.
ಆದ್ದರಿಂದ, ಪೋಸ್ಟ್ ನಲ್ಲಿ ಹೇಳಿರುವಂತೆ ಸದರಿ ನಿಷೇಧವು ರಾಷ್ಟ್ರವ್ಯಾಪಿ ಪಟಾಕಿ ತಯಾರಿಕೆಯಲ್ಲಿ ಬೇರಿಯಂನಂತಹ ಹಾನಿಕಾರಕ ರಾಸಾಯನಿಕಗಳ ಬಳಕೆಗೆ ಸಂಬಂಧಿಸಿದೆ ಮತ್ತು ದೇಶಾದ್ಯಂತ ಎಲ್ಲಾ ಪಟಾಕಿಗಳ ಮೇಲೆ ಹೇರಲಾಗಿರುವ ನಿಷೇಧವಲ್ಲ. ವಾಸ್ತವಿಕವಾಗಿ, ಮೇರು ನ್ಯಾಯಾಲಯವು ನಿಗದಿಪಡಿಸಿದ ಮಾರ್ಗಸೂಚಿಗಳ ಪ್ರಕಾರ ಉತ್ಪಾದಿಸಿರುವ ಹಸಿರು ಪಟಾಕಿಗಳನ್ನು ಅನುಮತಿಸಲಾಗಿದೆ. ಹಾಗಾಗಿ, ಹೇಳಿಕೆ ತಪ್ಪುದಾರಿಗೆಳೆಯುವಂತಿದೆ.
[ಇದನ್ನೂ ಓದಿ: ಹಮಾಸ್ ಇಸ್ರೇಲ್ ನೊಳಗೆ ಪ್ಯಾರಾಗ್ಲೈಡ್ ಮಾಡಿ ಆಟದ ಮೈದಾನವನ್ನು ಪ್ರವೇಶಿಸಿತು ಎಂದು ವೈರಲ್ ವೀಡಿಯೊ ಆರೋಪಿಸಿದೆ; ಸತ್ಯ ಪರಿಶೀಲನೆ