Don't Miss

ಉತ್ತರ ಪ್ರದೇಶ, ಬಿಹಾರದ ಜನರನ್ನು ದೆಹಲಿಯಿಂದ ಓಡಿಸಬೇಕು ಎಂದು ಬಿಜೆಪಿ ಸಂಸದ ರಮೇಶ್ ಬಿಧುರಿ ಹೇಳಿದ್ದಾರೆಯೇ? ಸತ್ಯ ಪರಿಶೀಲನೆ

ಭಾರತೀಯ ಜನತಾ ಪಕ್ಷದ (ಬಿಜೆಪಿ) ರಮೇಶ್ ಬಿಧುರಿಯವರು ಸಂಸತ್ ಚರ್ಚೆಯ ಸಂದರ್ಭದಲ್ಲಿ ಬಹುಜನ ಸಮಾಜ ಪಕ್ಷದ ನಾಯಕರೊಬರನ್ನು ನಿಂದಿಸಿದ್ದಕ್ಕಾಗಿ ಇತ್ತೀಚೆಗೆ ಸುದ್ದಿಯಲ್ಲಿ ಬಂದರು. ಅಂದಿನಿಂದ, ಅವರಿಗೆ ಸಂಬಂಧಿತ ಹಲವಾರು ಹೇಳಿಕೆಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ಈ ಬಾರಿ ಅವರಿಗೆ ಸಂಬಂಧಿಸಿದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

FACT CHECK

ಉತ್ತರ ಪ್ರದೇಶ ಮತ್ತು ಬಿಹಾರದಿಂದ ವಲಸೆ ಬಂದಿರುವ ಜನರನ್ನು ದೆಹಲಿಯಿಂದ ಓಡಿಸಬೇಕು ಎಂದು ರಮೇಶ್ ಬಿಧುರಿಯವರು ಹೇಳಿದ್ದಾರೆ ಎಂದು ಪತ್ರಿಕಾ ವಾರ್ತೆಯ ಚಿತ್ರದೊಂದಿಗಿರುವ ಒಂದು ಹೇಳಿಕೆಯು ಪ್ರತಿಪಾದಿಸುತ್ತದೆ. ಈ ಚಿತ್ರದಲ್ಲಿ, ಬಿಧುರಿಯವರು ಹೇಳಿರುವುದಾಗಿ ಒಂದು ಹೇಳಿಕೆಯನ್ನು ಸಹ ನೀಡಲಾಗಿದೆ. ಅದರಲ್ಲಿ ಹೇಳಿರುವುದೇನೆಂದರೆ “ಉತ್ತರ ಪ್ರದೇಶ ಮತ್ತು ಬಿಹಾರದಿಂದ ಬಂದ ಜನರೇ ದೆಹಲಿಯನ್ನು ನರಕವನ್ನಾಗಿಸಿರುವುದು. ಕಳ್ಳತನದಿಂದ ಹಿಡಿದು ದೆಹಲಿಯ ಪರಿಸರವನ್ನು ಹಾಳು ಮಾಡುವುದರವರೆಗೆ ಈ ಜನರು ಎಲ್ಲಾ ತಪ್ಪು ಕೆಲಸಗಳನ್ನು ಮಾಡುತ್ತಾರೆ.”

ಈ ಹೇಳಿಕೆಯ ಸತ್ಯ ಪರಿಶೀಲನೆ ಮಾಡಬೇಕೆಂದು ಕೋರಿ ವಾಟ್ಸಾಪ್‌ನಲ್ಲಿ ಡಿಜಿಟೈ ಇಂಡಿಯಾಗೆ ಕೋರಿಕೆ ಬಂತು. ನಾವದನ್ನು ಪರಿಶೀಲಿಸಿದೆವು, ಆದರೆ ಆ ಪತ್ರಿಕಾ ವರ್ತಾ ಪ್ರಕಟಣೆಯಲ್ಲಿ ದಿನಾಂಕವಿಲ್ಲ. ನಾವು ಗೂಗಲ್ ಮತ್ತು ಟ್ವಿಟರ್ ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು, ಆಗ ಅದೇ ಚಿತ್ರ ಮತ್ತು ಹೇಳಿಕೆಯನ್ನೊಳಗೊಂಡ ಹಲವು ಟ್ವೀಟ್‌ಗಳು ಕಂಡುಬಂದವು. ಗೂಗಲ್ ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದಾಗಲೂ ಇದಕ್ಕೆ ಸಂಬಂಧಿಸಿದ ಯಾವುದೇ ಸುದ್ದಿ ವರದಿಯ ಫಲಿತಾಂಶಗಳು ದೊರಕಲಿಲ್ಲ.

ಅಕ್ಟೋಬರ್ 13, 2018ರ ಟ್ವೀಟ್‌ ಒಂದರಲ್ಲಿ, ರಮೇಶ್ ಬಿಧುರಿಯವರು ಆ ಹೇಳಿಕೆಯನ್ನು ನಿರಾಕರಿಸಿದ ಈ ಹೇಳಿಕೆ ನಮಗೆ ದೊರಕಿತು.

“ಜನರು ಅಧಿಕಾರದ ದುರಾಸೆಯಲ್ಲಿ ಯಾವ ಮಟ್ಟಿಗೆ ಹೋಗಬಹುದು, ಉತ್ತರ ಪ್ರದೇಶ ಮತ್ತು ಬಿಹಾರದ ನಿವಾಸಿಗಳಿಗೆ ನನ್ನ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಹೇಳಿಕೆ ನೀಡಲಾಗಿದೆ ಎಂಬ ಮಾಹಿತಿ ನನಗೆ ಈಗಷ್ಟೇ ಸಿಕ್ಕಿತು, ಆದರೆ ಯಾವುದೇ ಪತ್ರಿಕೆಯ ಹೆಸರಾಗಲಿ ಅಥವಾ ಪ್ರಕಾಶಕರ ಹೆಸರಾಗಲಿ ನೀಡಲಾಗಿಲ್ಲ, ಜೂನ್ 25ರಂದು ಕೂಡ ಅಂತಹ ಪತ್ರಿಕೆಯನ್ನು ಪ್ರಕಟಿಸಲಾಗಿತ್ತು.” ದೆಹಲಿ ಬಿಜೆಪಿ ಕೂಡ ಈ ಸುದ್ದಿ ಸುಳ್ಳು ಎಂದು ಹೇಳಿದೆ.

ರಮೇಶ್ ಬಿಧುರಿ ಮತ್ತು ಬಿಜೆಪಿ ದೆಹಲಿ ಇದನ್ನು ಅಲ್ಲಗಳೆದಿದ್ದಾರೆ. ಆದ್ದರಿಂದ, ಸುಳ್ಳು.

Claim/ಹೇಳಿಕೆ:ಉತ್ತರ ಪ್ರದೇಶ ಮತ್ತು ಬಿಹಾರದ ಜನರನ್ನು ದೆಹಲಿಯಿಂದ ಓಡಿಸಬೇಕು ಎಂದು ಬಿಜೆಪಿ ಸಂಸದ ರಮೇಶ್ ಬಿಧುರಿ ಹೇಳಿದ್ದಾರೆ.

Conclusion/ಕಡೆನುಡಿ:ರಮೇಶ್ ಬಿಧುರಿ ಮತ್ತು ಬಿಜೆಪಿ ದೆಹಲಿ 2018 ರಲ್ಲಿ ಈ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಅಂತಹ ಯಾವುದೇ ಸುದ್ದಿ ವರದಿಯನ್ನು ಯಾವುದೇ ಮಾಧ್ಯಮ ಸಂಸ್ಥೆ ನೀಡಿರುವುದು ಕಂಡುಬಂದಿಲ್ಲ.

Rating : Misrepresentation–

[ಇದನ್ನೂ ಓದಿ: ನಂದಿನಿ ತುಪ್ಪದ ಪೂರೈಕೆಗೆ ಕೆಎಂಎಫ್ ನೀಡಿದ ಬೆಲೆ ಹೇಳಿಕೆಯನ್ನು ಟಿಟಿಡಿ 50 ವರ್ಷಗಳ ನಂತರ ತಿರಸ್ಕರಿಸಿತೇ? ಸತ್ಯ ಪರಿಶೀಲನೆ;      ಕೆನಡಾ ಸರ್ಕಾರವು  ಆರ್‌ಎಸ್‌ಎಸ್  ಅನ್ನು ನಿಷೇಧಿಸಿದೆಯೆಂದು ಹೇಳುವ ವೀಡಿಯೊ; ಸತ್ಯ ಪರಿಶೀಲನೆ ]

 

 

 

 

 

 

 

 

 

 

 

8 comments

  1. Pingback: ಕೌನ್ ಬನೇಗಾ ಕರೋರ್ಪತಿಯಲ್ಲಿ ಮಧ್ಯ ಪ್ರದೇಶದ ಶಿವರಾಜ್ ಸಿಂಘ್ ಚೌಹಾನ್ ರವರನ್ನು ಕೆಣಕುವ ರಾಜಕೀಯ ಪ್ರಶ್ನೆಯನ್ನ

  2. Pingback: ಹಮಾಸ್ ಇಸ್ರೇಲ್‌ ನೊಳಗೆ ಪ್ಯಾರಾಗ್ಲೈಡ್ ಮಾಡಿ ಆಟದ ಮೈದಾನವನ್ನು ಪ್ರವೇಶಿಸಿತು ಎಂದು ವೈರಲ್ ವೀಡಿಯೊ ಆರೋಪಿಸಿದ

  3. Pingback: ನಡೆಯುತ್ತಿರುವ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದ ನಡುವೆಯೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತ

  4. Pingback: ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ನಿಧನರಾದರೇ? ನಕಲಿ ಟ್ವಿಟರ್ ಖಾತೆಯ ಹೇಳಿಕೆ ವೈರಲ್ ಆಗಿದೆ; ಸತ್ಯ ಪರ

  5. Pingback: 1982 ರ ಈ ಭಾರತೀಯ ಅಂಚೆ ಚೀಟಿಯು ಒಬ್ಬ ಮುಸ್ಲಿಂ ಕುಸ್ತಿಪಟು ಹಿಂದೂ ಕುಸ್ತಿಪಟುವನ್ನು ಹೊಡೆಯುತ್ತಿರುವುದನ್ನು ತೋರ

  6. Pingback: ಕೆನಡಾ ಸರ್ಕಾರವು ಆರ್‌ಎಸ್‌ಎಸ್ ಅನ್ನು ನಿಷೇಧಿಸಿದೆಯೆಂದು ಹೇಳುವ ವೀಡಿಯೊ; ಸತ್ಯ ಪರಿಶೀಲನೆ - Digiteye Kannada

  7. Pingback: ಹಳೆ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ವೀಡಿಯೊವನ್ನು ಮಧ್ಯ ಪ್ರದೇಶದ ಚುನಾವಣೆಯದ್ದೆಂದು ಹಂಚಿಕೊಳ್ಳಲಾಗಿದ

  8. Pingback: ಈ ವೈರಲ್ ವೀಡಿಯೊ ಪ್ಲಾಸ್ಟಿಕ್ನಿಂದ ಗೋಧಿಯ ಉತ್ಪಾದನೆಯನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ - Digiteye Kannada

Leave a Reply

Your email address will not be published. Required fields are marked *

*