Don't Miss

ಧರ್ಮದ ಹೆಸರಿನಲ್ಲಿ ಮತಗಳನ್ನು ಕೇಳಿದ್ದಕ್ಕಾಗಿ ಮಧ್ಯ ಪ್ರದೇಶದಲ್ಲಿ ಬಿಜೆಪಿ ಶಾಸಕರ ಮೇಲೆ ಹಲ್ಲೆ? ಸತ್ಯ ಪರಿಶೀಲನೆ

ಒಬ್ಬ ವ್ಯಕ್ತಿ ಮತ್ತು ಆತನ ಕಾರಿನ ಮೇಲೆ ಜನರ ಗುಂಪೊಂದು ಹಲ್ಲೆ ನಡೆಸುತ್ತಿರುವ ಒಂದು ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವ್ಯಕ್ತಿಯು ಮಧ್ಯಪ್ರದೇಶದ ಬಿಜೆಪಿ ನಾಯಕ ಎಂದು ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಹೇಳುತ್ತವೆ. ಆತ ಧರ್ಮದ ಹೆಸರಿನಲ್ಲಿ ಮತ ಕೇಳುತ್ತಿದ್ದು, ಆ ಕಾರಣಕ್ಕೆ ಜನರು ಆತನ ಮೇಲೆ ಹಲ್ಲೆ ನಡೆಸಿದರೆಂದು ವೀಡಿಯೊದಲ್ಲಿ ಹೇಳಲಾಗಿದೆ.

ವೀಡಿಯೊದೊಂದಿಗಿನ ಟ್ವೀಟ್‌ ಹೀಗಿತ್ತು, “ಮಧ್ಯಪ್ರದೇಶದಲ್ಲಿ ಬಿಜೆಪಿಯ ಪತನವನ್ನು ವೀಕ್ಷಿಸಿ. ಧರ್ಮದ ಹೆಸರಿನಲ್ಲಿ ಮತ ಕೇಳಿದ್ದಕ್ಕಾಗಿ ಜನಸಮೂಹದಿಂದ ವಿಧಾನಸಭಾ ಸದಸ್ಯರಿಗೆ ಥಳಿತ.”

ಈ ವೀಡಿಯೊವನ್ನು X (ಈ ಹಿಂದೆ Twitter)ನಲ್ಲಿ 92,500 ಬಾರಿ ವೀಕ್ಷಿಸಲಾಗಿದೆ, 2,000ಕ್ಕೂ ಹೆಚ್ಚು ಬಾರಿ ಲೈಕ್ ಮಾಡಲಾಗಿದೆ ಮತ್ತು 1,000ಕ್ಕೂ ಹೆಚ್ಚು ಬಾರಿ ರೀಟ್ವೀಟ್‌ ಮಡಲಾಗಿದೆ. ಈ ವೀಡಿಯೊವನ್ನು ಇದೇ ರೀತಿಯ ಹೇಳಿಕೆಗಳೊಂದಿಗೆ ಇಲ್ಲಿ ಮತ್ತು ಇಲ್ಲಿ ಹಂಚಿಕೊಳ್ಳಲಾಗಿದೆ.

ಕೋಲುಗಳನ್ನು ಹಿಡಿದಿದ್ದ ಗುಂಪೊಂದು, ಒಂದು ಕಾರಿನ ಮೇಲೆ ದಾಳಿ ಮಾಡುವುದನ್ನು ಈ ವೀಡಿಯೊ ತೋರಿಸುತ್ತದೆ. ನಂತರ, ನೆಲದ ಮೇಲೆ ಬಿದ್ದಿರುವ ಹರಿದ ಅಂಗಿಯಲ್ಲಿರುವ ವ್ಯಕ್ತಿಯ ಕಡೆಗೆ ವೀಡಿಯೊ ತಿರುಗುತ್ತದೆ ಮತ್ತು ಆತನನ್ನು ಜನರು ಹೊಡೆಯುತ್ತಿರುವುದನ್ನು ತೋರಿಸುತ್ತದೆ. ವೀಡಿಯೊದಾದ್ಯಂತ ಜನರು ಬಿಜೆಪಿ ಧ್ವಜವನ್ನು ಹಿಡಿದುಕೊಂಡಿರುವುದನ್ನು ಕಾಣಬಹುದು.

ಈ ವೈರಲ್ ವೀಡಿಯೊವನ್ನು ಹಲವು ಕೀಫ್ರೇಮ್‌ಗಳಾಗಿ ವಿಭಜಿಸುವ ಸಲುವಾಗಿ ಡಿಜಿಟೈ ಇಂಡಿಯಾ ತಂಡವು ವೀಡಿಯೊ ಪರಿಶೀಲನೆ ಟೂಲ್ ಆಗಿರುವ ಇನ್‌ವಿಡ್ ಅನ್ನು ಬಳಸಿತು. ನಾವು ಈ ಕೀಫ್ರೇಮ್‌ಗಳನ್ನು ಬಳಸಿ ಗೂಗಲ್ ನಲ್ಲಿ ಹಲವು ರಿವರ್ಸ್ ಇಮೇಜ್ ಹುಡುಕಾಟಗಳನ್ನು ನಡೆಸಿದೆವು. ಒಂದು ಫಲಿತಾಂಶದಲ್ಲಿ ಕಳಿಂಗ ಟಿವಿಯು ಪೋಸ್ಟ್ ಮಾಡಿರುವ ಈ ವೀಡಿಯೊ ನಮಗೆ ದೊರಕಿತು. ಈ ವೀಡಿಯೊವನ್ನು ಮಾರ್ಚ್ 12, 2022 ರಂದು ಅಪ್‌ಲೋಡ್ ಮಾಡಲಾಗಿತ್ತು. ಶಾಸಕ ಪ್ರಶಾಂತ್ ಜಗದೇವ್ ಜನರ ಮೇಲೆ ಕಾರು ಓಡಿಸಿದ ನಂತರ ಜನರ ಗುಂಪು ಅವರ ಮೇಲೆ ಹಲ್ಲೆ ಮಾಡುವುದನ್ನು 5:03 ನಿಮಿಷಗಳ ಈ ವೀಡಿಯೊದಲ್ಲಿ ಕಾಣಬಹುದು.

ನಂಬರ್ ಪ್ಲೇಟ್ ಮೇಲ್ಭಾಗದಲ್ಲಿ ‘ಡಿಸ್ಕವರಿ’ ಎಂದು ಬರೆದಿರುವ ಬಿಳಿ ಬಣ್ಣದ SUVಯನ್ನು ಕಳಿಂಗ ಟಿವಿಯ ವೀಡಿಯೊ ತೋರಿಸುತ್ತದೆ. ಹರಿದ ಅಂಗಿಯಲ್ಲಿದ್ದ ವ್ಯಕ್ತಿಯೊಬ್ಬನ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಅಸ್ಪಷ್ಟ ಚಿತ್ರವನ್ನೂ ಸಹ ವೀಡಿಯೊ ತೋರಿಸುತ್ತದೆ. ಈ ಎರಡೂ ದೃಶ್ಯಗಳು ಮತ್ತಿನ್ನೂ ಕೆಲವು ತುಣುಕುಗಳನ್ನು ಈ ವರದಿಯಲ್ಲಿ ಬಳಸಲಾಗಿತ್ತು.

ನಾವು ಗೂಗಲ್ ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದಾಗ, ಮಾರ್ಚ್ 12, 2022 ರ NDTVಯ ಒಂದು ಲೇಖನವು ನಮಗೆ ದೊರಕಿತು. ಈ ಲೇಖನದಲ್ಲಿರುವ ಹೇಳಿಕೆ ಹೀಗೆದೆ- “ಅಮಾನತುಗೊಂಡಿರುವ ಬಿಜೆಡಿ (ಬಿಜು ಜನತಾ ದಳ) ಶಾಸಕ ಪ್ರಶಾಂತ್ ಜಗದೇವ್ ಅವರ ವಾಹನವು ಖುರ್ದಾ ಜಿಲ್ಲೆಯ ಬಾನಾಪುರದಲ್ಲಿ ಜನರ ನಡುವೆ ನುಗ್ಗಿಹೋಯಿತೆಂದು ಆರೋಪಿಸಲಾದ ಘಟನೆಯಲ್ಲಿ 10 ಮಂದಿ ಪೊಲೀಸ್ ಸಿಬ್ಬಂದಿ ಮತ್ತು ಇಬ್ಬರು ಪತ್ರಕರ್ತರೂ ಸೇರಿದಂತೆ ಕನಿಷ್ಠ 22 ಮಂದಿ ಶನಿವಾರ ಗಾಯಗೊಂಡಿದ್ದಾರೆ.”

ಸ್ಥಳೀಯ ನಿವಾಸಿಗಳು ಪ್ರಶಾಂತ್ ಜಗದೇವ್ ಅವರನ್ನು ಕಾರಿನಿಂದ ಹೊರಗೆಳೆದು ಥಳಿಸಿದರೆಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ಮತ್ತೊಂದು ವರದಿಯು ತಿಳಿಸಿತು. ಆದ್ದರಿಂದ, ವೈರಲ್ ವೀಡಿಯೊ ಮಾಡಿರುವ ಹೇಳಿಕೆಗಳು ಸುಳ್ಳು ಮತ್ತು ಇದಕ್ಕೆ

ನಮ್ಮ ಮುದ್ರೆ- ತಪ್ಪು ನಿರೂಪಣೆ.

[ಇದನ್ನೂ ಓದಿ: ಹಮಾಸ್ ಇಸ್ರೇಲ್‌ ನೊಳಗೆ ಪ್ಯಾರಾಗ್ಲೈಡ್ ಮಾಡಿ ಆಟದ ಮೈದಾನವನ್ನು ಪ್ರವೇಶಿಸಿತು ಎಂದು ವೈರಲ್ ವೀಡಿಯೊ ಆರೋಪಿಸಿದೆ; ಸತ್ಯ ಪರಿಶೀಲನೆ

ಈ ದೀಪಾವಳಿಗೆ ಚೀನಾದ ಪಟಾಕಿಗಳನ್ನು ಖರೀದಿಸುವುದನ್ನು ತಪ್ಪಿಸಬೇಕೆಂದು ಗೃಹ ಸಚಿವಾಲಯವು ಜನರಿಗೆ ಹೇಳಿದೆಯೇ? ಸತ್ಯ ಪರಿಶೀಲನೆ]

 

 

Leave a Reply

Your email address will not be published. Required fields are marked *

*