Don't Miss

ಕೆನಡಾದಲ್ಲಿ ಖಲಿಸ್ತಾನ ಬೆಂಬಲಿಗರು ಗುಜರಾತಿಗಳನ್ನು ಬೆದರಿಸುತ್ತಿದ್ದಾರೆಯೇ? ಸತ್ಯ ಪರಿಶೀಲನೆ

ಖಲಿಸ್ತಾನ ಪರ ಬೆಂಬಲಿಗನೊಬ್ಬ ಮತ್ತೊಬ್ಬ ವ್ಯಕ್ತಿಗೆ ಘೋರ ಪರಿಣಾಮದ ಬೆದರಿಕೆ ಹಾಕುತ್ತಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ಆ ಬೆಂಬಲಿಗ “ಗುಜರಾತಿಗಳೇ, ಸರಿಯಾಗಿ ಕೇಳಿಸಿಕೊಳ್ಳಿ. ನಾವು ನಿಮಗೆ ಎರಡೆರಡು ಬಾರಿಸಬಲ್ಲೆವು. ನಿಮಗೆ ಲಂಗರ್ ಬೇಕಿದ್ದರೆ, ಸುಮ್ಮನೆ ಲಂಗರ್ ಊಟ ಮಾಡಿ. ನಿಮ್ಮ ಸಮುದಾಯದವರು ಮೂತ್ರ ಕುಡಿದು ಸಾಕಷ್ಟು ನಾಟಕ ಮಾಡಿದ್ದಾರೆ. ನಾನು ಎಲ್ಲಾ ಗುಜರಾತಿಗಳಿಗೆ ಹೇಳುತ್ತಿದ್ದೇನೆ, ನೀವು ಜಗಳ ಪ್ರಾರಂಭಿಸಿದರೆ, ನಾವು ಗುಜರಾತಿನೊಳಗೆ, ನಿಮ್ಮ ಮನೆಯೊಳಗೆ ಹೋಗುತ್ತೇವೆ ಮತ್ತು ನಿಮ್ಮೊಂದಿಗೆ ಹೋರಾಡುತ್ತೇವೆ. ಹೋಗಿ, ಮೂತ್ರ ಕುಡಿಯಿರಿ. ಹೋಗಿ ಏನು ಬೇಕೋ ಮಾಡಿ.” ಎಂದು ಪಂಜಾಬಿ ಭಾಷೆಯಲ್ಲಿ ಹೇಳುತ್ತಿರುವುದು ಕೇಳಿಬರುತ್ತದೆ.

 

ಅದೇ ವೀಡಿಯೊವನ್ನು ಬಳಸಿದ ಮತ್ತೊಂದು ಪೋಸ್ಟ್ ಇಲ್ಲಿದೆ, ಇದರಲ್ಲಿ ಕೆನಡಾದ ಪ್ರಧಾನಿಗಳನ್ನು ಟ್ಯಾಗ್ ಮಾಡಲಾಗಿತ್ತು ಮತ್ತು ಇಂತಹುದೇ ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

 

FACT CHECK

ಗೂಗಲ್ ರಿವರ್ಸ್ ಇಮೇಜ್ ಸರ್ಚ್‌ನಲ್ಲಿ ನಾವು ಈ ವೀಡಿಯೊದ ಪ್ರಮುಖ ಫ್ರೇಮ್‌ಗಳನ್ನು ಹುಡುಕಿದಾಗ, ಈ ವರ್ಷದ ಮಾರ್ಚ್‌ ತಿಂಗಳಿನಲ್ಲಿ ವರದಿಯಾದ ಅಂತಹುದೇ ಘಟನೆಯೊಂದು ನಮಗೆ ಕಂಡುಬಂದಿತು, ಆದರೆ ಅದು ಲಂಡನ್ನಿನಲ್ಲಿ ಭಾರತೀಯ ಹೈ ಕಮಿಷನ್ ಮೇಲಿನ ದಾಳಿಯ ವಿವಾದವು ಸುದ್ದಿಯಲ್ಲಿದ್ದಾಗ ಯುನೈಟೆಡ್ ಕಿಂಗ್‌ಡಂನ ಸೌತ್‌ಹಾಲ್‌ನ ನಡೆದ ಸಂಗತಿಯಾಗಿತ್ತು.

ಈ ಘಟನೆಯು ವ್ಯಾಪಕವಾಗಿ ವರದಿಯಾಗಿದ್ದು ಒನ್‌ಇಂಡಿಯಾ ಸುದ್ದಿವಾಹಿನಿಯು- “ಖಾಲಿಸ್ತಾನಿ ಬೆಂಬಲಿಗರಿಂದ ಸೌತ್‌ಹಾಲ್‌ನಲ್ಲಿ ಗುಜರಾತಿ ವ್ಯಕ್ತಿಗೆ ಬೆದರಿಕೆ” ಎಂಬ ಶೀರ್ಷಿಕೆಯೊಂದಿಗೆ ಒಂದು ವೀಡಿಯೊವನ್ನು ಅಪ್‌ಲೋಡ್ ಮಾಡಿತ್ತು. ಈ ವೀಡಿಯೊದಲ್ಲಿ ಲಂಡನ್ನಿನಲ್ಲಿರುವ ಭಾರತೀಯ ಹೈ ಕಮಿಷನ್ ಮೇಲಿನ ದಾಳಿಯ ಶಂಕಿತರಲ್ಲಿ ಒಬ್ಬರಾದ ಖಲಿಸ್ತಾನ ಪರ ನಾಯಕ ಅವತಾರ್ ಸಿಂಗ್ ಖಾಂಡಾರನ್ನು ಕಾಣಬಹುದು.ಈ ಘಟನೆಯ ಸುದ್ದಿಯನ್ನು ಸುದ್ದಿಯಲ್ಲಿ ನೋಡಬಹುದು.

ಈ ವೀಡಿಯೊದಲ್ಲಿ, ಕೆಲವು ಪ್ರತಿಭಟನಾಕಾರರು ದಾರಿಹೋಕರಿಗೆ ತೊಂದರೆ ನೀಡುತ್ತಿರುವುದು ಕಂಡುಬಂದಿದೆ. ಒಂದು ಟ್ವಿಟರ್ ಪೋಸ್ಟ್‌ನಲ್ಲಿ, ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಕಾರ್ಯದರ್ಶಿ ಮಂಜಿಂದರ್ ಸಿಂಗ್ ಸಿರ್ಸಾ ಅವರೂ ಸಹ ಘಟನೆಯನ್ನು ಖಂಡಿಸಿದ್ದಾರೆ. ಆದ್ದರಿಂದ, ವೀಡಿಯೊ ಮತ್ತು ಹೇಳಿಕೆ ಸುಳ್ಳು ಮತ್ತು ಇದಕ್ಕೆ.

ನಮ್ಮ ಮುದ್ರೆ- ತಪ್ಪು ನಿರೂಪಣೆ.

ಇದನ್ನೂ ಓದಿ: 

ಇಲ್ಲ, ಈ ವೀಡಿಯೊ ಒಬ್ಬ ಬ್ರಾಹ್ಮಣ ಶಿಕ್ಷಕರು ದಲಿತ ಮಗುವನ್ನು ಥಳಿಸುವುದನ್ನು ತೋರಿಸುವುದಿಲ್ಲ; ಸತ್ಯ ಪರಿಶೀಲನೆ

ಈ ದೀಪಾವಳಿಗೆ ಚೀನಾದ ಪಟಾಕಿಗಳನ್ನು ಖರೀದಿಸುವುದನ್ನು ತಪ್ಪಿಸಬೇಕೆಂದು ಗೃಹ ಸಚಿವಾಲಯವು ಜನರಿಗೆ ಹೇಳಿದೆಯೇ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*