Don't Miss

ಕೆನಡಾ ಸರ್ಕಾರವು  ಆರ್‌ಎಸ್‌ಎಸ್  ಅನ್ನು ನಿಷೇಧಿಸಿದೆಯೆಂದು ಹೇಳುವ ವೀಡಿಯೊ; ಸತ್ಯ ಪರಿಶೀಲನೆ

ಕೆನಡಾದಲ್ಲಿ ಖಲಿಸ್ತಾನ-ಪರ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಕೆನಡಾ ಮತ್ತು ಭಾರತದ ನಡುವಿನ ರಾಜತಾಂತ್ರಿಕ ವೈಮನಸ್ಯದ ನಡುವೆಯೇ ಕೆನಡಾ ಸರ್ಕಾರವು ಭಾರತದ ಒಂದು ಬಲಪಂಥೀಯ ಸಂಘಟನೆಯಾದ ಆರ್‌ಎಸ್‌ಎಸ್ ಅನ್ನು ನಿಷೇಧಿಸಿದೆ ಎನ್ನುವ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಭಾರತದಕ್ಕೆ ತಾವು ಕಳಿಸಿರುವ ರಾಯಭಾರಿಯನ್ನು ಹಿಂದಕ್ಕೆ ಕರೆಸಲು ಮತ್ತು ಕೆನಡಾದಲ್ಲಿರುವ ಭಾರತದ ರಾಯಭಾರಿಯನ್ನು ಹಿಂದೆ ಕಳುಹಿಸಲು ಕೋರುವುದರ ಜೊತೆಗೆ ಭಾರತದೊಂದಿಗಿನ ವ್ಯಾಪಾರದ ಮೇಲೆ ನಿಷೇಧವನ್ನು ಹೇರುವಂತೆ ಈ ವೀಡಿಯೊ ಕೆನಡಾ ಸರ್ಕಾರವನ್ನು ಒತ್ತಾಯಿಸುತ್ತದೆ. ಈ ಪೋಸ್ಟ್ ಅನ್ನು X (ಈ ಹಿಂದೆ ಟ್ವಿಟರ್) ನಲ್ಲಿ ಇಲ್ಲಿ ಮತ್ತು ಇಲ್ಲಿ ಹಂಚಿಕೊಳ್ಳಲಾಗುತ್ತಿದೆ.

RSS banned in Canada.

Waiting for Bakths to come with a storyline that George Soros & Congress are behind the ban of RSS in Canada. pic.twitter.com/SrTYWvxpM2

— Брат (@B5001001101) September 21, 2023

ಸತ್ಯ ಪರಿಶೀಲನೆ

ರಿವರ್ಸ್ ಇಮೇಜ್ ಹುಡುಕಾಟದ ಮೂಲಕ ಕಟ್-ಫ್ರೇಮ್ ಬಳಸಿಕೊಂಡು ನಾವು ಅಧಿಕೃತ ವೀಡಿಯೊ ಮೂಲವನ್ನು ಪರಿಶೀಲಿಸಿದಾಗ, ನಮಗೆ ಯೂಟ್ಯೂಬ್ ವಾಹಿನಿಯಲ್ಲಿ NCCMtv ಎಂಬ ಹೆಸರಿನ ಒಂದು ವೀಡಿಯೊ ದೊರಕಿತು. ಇದರಲ್ಲಿ ಸೆಪ್ಟೆಂಬರ್ 20 ರಂದು ಆ ವೀಡಿಯೋದ ದೀರ್ಘ, ಅಸಲು ಆವೃತ್ತಿಯನ್ನು ಪೋಸ್ಟ್ ಮಾಡಲಾಗಿತ್ತು. ಆ ವೀಡಿಯೋದ ಶೀರ್ಷಿಕೆಯು ಹೀಗಿದೆ: “ಕೆನಡಾದಲ್ಲಿ ಸಿಖ್ಖ ವ್ಯಕ್ತಿಯ ಆಪಾದಿತ ಹತ್ಯೆಗೆ ಪ್ರತಿಕ್ರಿಯೆಯಾಗಿ ಎನ್‌ಸಿಸಿಎಂ ಸಿಇಒ ಸ್ಟೀಫನ್ ಬ್ರೌನ್ ರಿಂದ ಕ್ರಮಕ್ಕಾಗಿ ಕರೆ”.
ವೀಡಿಯೊದಲ್ಲಿ ಮಾತನಾಡುತ್ತಿರುವ ವ್ಯಕ್ತಿಯನ್ನು ಕೆನಡಾದ ಮುಸ್ಲಿಮರ ರಾಷ್ಟ್ರೀಯ ಮಂಡಳಿಯ (ಎನ್‌ಸಿಸಿಎಂ) ಸಿಇಒ ಎಂದು ಗುರುತಿಸಲಾಗಿದ್ದು, ಭಾರತದಲ್ಲಿ ಈ ಸಂಸ್ಥೆಯ ಟ್ವಿಟರ್ ಖಾತೆಯನ್ನು ದ್ವೇಷದ ಪ್ರಚಾರಕ್ಕಾಗಿ ನಿಷೇಧಿಸಲಾಗಿದೆ. ಇದು ಯಾವುದೇ ಅಧಿಕೃತ ಸ್ಥಾನಮಾನವನ್ನು ಹೊಂದಿಲ್ಲ ಮತ್ತು ಕೆನಡಾ ಸರ್ಕಾರದ ಅಧಿಕೃತ ಪ್ರಕಟಣೆಗಳನ್ನು ಎಂದಿಗೂ ಪ್ರತಿನಿಧಿಸುವುದಿಲ್ಲ. ಇದಲ್ಲದೆ, ವೀಡಿಯೊದಲ್ಲಿ ಲಿಪ್ ಸಿಂಕ್ ಇಲ್ಲ.
ಅದಲ್ಲದೆ, “ಇಂದು, ಭಾರತ ಸರ್ಕಾರದ ಏಜೆಂಟ್‌ಗಳಿಂದ ಹರ್ದೀಪ್ ಸಿಂಗ್ ನಿಜ್ಜರ್ ರ ಆಪಾದಿತ ಹತ್ಯೆಗೆ ಪ್ರತಿಕ್ರಿಯೆಯಾಗಿ ನಮ್ಮ ಸರ್ಕಾರವು ಸ್ಪಷ್ಟ ಕ್ರಮಗಳನ್ನು ಕೈಗೊಳ್ಳುವಂತೆ ಕರೆ ನೀಡಲು ಎನ್‌ಸಿಸಿಎಂ ಸಿಇಒ ಸ್ಟೀಫನ್ ಬ್ರೌನ್ ಅವರು ಕೆನಡಾದ ವಿಶ್ವ ಸಿಖ್ಖ ಸಂಘಟನೆಯ ನಿರ್ದೇಶಕರ ಮಂಡಳಿಯ ಮುಖ್ಬೀರ್ ಸಿಂಗ್ ಅವರೊಂದಿಗೆ ಜೊತೆಗೂಡಿದರು.” ಎಂದು ವೀಡಿಯೊದ ವಿವರಣೆಯು ಸ್ಪಷ್ಟವಾಗಿ ಹೇಳುತ್ತದೆ. ಹಾಗಾಗಿ, ಇದು ಬೇಡಿಕೆ ಆಗಿತ್ತೇ ವಿನಃ ಸರ್ಕಾರದ ಹೇಳಿಕೆಯಾಗಿರಲಿಲ್ಲ.
ಕೆನಡಾದಲ್ಲಿ ಆರ್‌ಎಸ್‌ಎಸ್ ಅನ್ನು ನಿಷೇಧಿಸಲಾಗಿದೆ ಎಂಬುದರೆಡೆಗೆ ಕೆನಡಾ ಸರ್ಕಾರ ಯಾವುದೇ ಹೇಳಿಕೆ ನೀಡಿರುವುದು ಸರಳ ಗೂಗಲ್‌ ಹುಡುಕಾಟದಲ್ಲಿಯೂ ಕಂಡುಬಂದಿಲ್ಲ. ಹಾಗಾಗಿ, ಕೆನಡಾ ಸರ್ಕಾರ ಆರ್‌ಎಸ್‌ಎಸ್ ಅನ್ನು ನಿಷೇಧಿಸಿದೆ ಎಂಬ ಹೇಳಿಕೆ ಸುಳ್ಳು.

ಹೇಳಿಕೆ: ಕೆನಡಾ ಸರ್ಕಾರವು ಆರ್‌ಎಸ್‌ಎಸ್ ಅನ್ನು ನಿಷೇಧಿಸಿದೆ.

ತೀರ್ಮಾನ: ಸುಳ್ಳು,  ಕೆನಡಾ ಸರ್ಕಾರವು ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ.

ನಮ್ಮ ರೇಟಿಂಗ್: ಸುಳ್ಳು -- Five rating

[ಇದನ್ನೂ ಓದಿ: ಈ ದೀಪಾವಳಿಗೆ ಚೀನಾದ ಪಟಾಕಿಗಳನ್ನು ಖರೀದಿಸುವುದನ್ನು ತಪ್ಪಿಸಬೇಕೆಂದು ಗೃಹ ಸಚಿವಾಲಯವು ಜನರಿಗೆ ಹೇಳಿದೆಯೇ? ಸತ್ಯ ಪರಿಶೀಲನೆ ;

ಉತ್ತರ ಪ್ರದೇಶ, ಬಿಹಾರದ ಜನರನ್ನು ದೆಹಲಿಯಿಂದ ಓಡಿಸಬೇಕು ಎಂದು ಬಿಜೆಪಿ ಸಂಸದ ರಮೇಶ್ ಬಿಧುರಿ ಹೇಳಿದ್ದಾರೆಯೇ? ಸತ್ಯ ಪರಿಶೀಲನೆ]

One comment

Leave a Reply

Your email address will not be published. Required fields are marked *

*