Don't Miss

ಈ ವೀಡಿಯೊ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಯುವತಿಯೊಂದಿಗೆ ವಿದೇಶಕ್ಕೆ ಹೋಗುವುದನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಯುವತಿಯೊಂದಿಗೆ ವಿದೇಶದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವೈರಲ್ ವೀಡಿಯೊ ಹೇಳುತ್ತದೆ.

ಕಡೆನುಡಿ/Conclusion: ಈ ಹೇಳಿಕೆ ತಪ್ಪು ನಿರೂಪಣೆಯಾಗಿದೆ. ವೀಡಿಯೊ ವಾಸ್ತವವಾಗಿ ರಾಹುಲ್ ಗಾಂಧಿ ತಮ್ಮ ಸೋದರಿ ಪ್ರಿಯಾಂಕಾ ಗಾಂಧಿ ವಾದ್ರಾರವರ ಮಗಳು ಮಿರಾಯಾ ವಾದ್ರಾ ಅವರೊಂದಿಗೆ ಪ್ರಯಾಣಿಸುತ್ತಿರುವುದನ್ನು ಚಿತ್ರಿಸುತ್ತದೆ.

ರೇಟಿಂಗ್/Rating: ತಪ್ಪು ನಿರೂಪಣೆ —

******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.
******************************************************

ರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ವಿದೇಶಿ ಹುಡುಗಿಯೊಂದಿಗೆ ವಿದೇಶದಲ್ಲಿದ್ದಾರೆ ಎಂದು ಹೇಳಿಕೊಳ್ಳುವ ವೀಡಿಯೊವನ್ನು ಹಲವಾರು ಬಳಕೆದಾರರು ಹಂಚಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘ArunKoslii’ ಇಂತಹ ಒಂದು ಪೋಸ್ಟ್ ಅನ್ನು ಈ ಮುಂದಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: कांग्रेस के 56 साल के झंडनायक किसी 9 जवान महिला के साथ देखे गये है विदेश में. ಕನ್ನಡದಲ್ಲಿ ಇದು ಹೀಗಿದೆ: “ಕಾಂಗ್ರೆಸ್‌ನ 56 ವರ್ಷದ ದಂಡ-ನಾಯಕ ವಿದೇಶದಲ್ಲಿ ಯಾವುದೋ ನವಯುವತಿಯೊಂದಿಗೆ ಕಾಣಿಸಿಕೊಂಡಿದ್ದಾರೆ.” ಪೋಸ್ಟ್ ಸುಮಾರು 1.2 ಮಿಲಿಯ ವೀಕ್ಷಣೆಗಳನ್ನು ಗಳಿಸಿದೆ ಮತ್ತು ಅದನ್ನು ಇಲ್ಲಿ ವೀಕ್ಷಿಸಬಹುದು:

ಇತರ ಬಳಕೆದಾರರು ಸಹ ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅದನ್ನು ಇಲ್ಲಿ ನೋಡಬಹುದು.

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ಈ ಹೇಳಿಕೆಯ ಕುರಿತು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ದಾರಿತಪ್ಪಿಸುವಂತಿದೆ ಎಂದು ಕಂಡುಕೊಂಡಿತು. ವೀಡಿಯೊದಲ್ಲಿರುವ ಮಹಿಳೆ ಪ್ರಿಯಾಂಕಾ ಗಾಂಧಿ ವಾದ್ರಾ ರವರ ಮಗಳು ಮಿರಾಯಾ ವಾದ್ರಾ. ಆಕೆ ರಾಹುಲ್ ಗಾಂಧಿಯವರ ಸೋದರ ಸೊಸೆ ಮತ್ತು ಹೇಳಿಕೆಯಲ್ಲಿ ತಿಳಿಸಿರುವಂತೆ ಯಾವುದೇ ಯುವತಿಯಲ್ಲ.

ವೀಡಿಯೊದಲ್ಲಿರುವ ಮಹಿಳೆಯ ಗುರುತನ್ನು ಖಚಿತಪಡಿಸಲು, ನಾವು ವಿವಿಧ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದೆವು. ಫಲಿತಾಂಶಗಳಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ರವರ ಪುತ್ರಿ ಮಿರಾಯಾ ವಾದ್ರಾ ರವರ ಅಂತರ್ಜಾಲದಲ್ಲಿ ಲಭ್ಯವಿರುವ ಹಲವಾರು ಚಿತ್ರಗಳು ನಮಗೆ ದೊರಕಿದವು. ವೀಡಿಯೊದಲ್ಲಿರುವ ಮಹಿಳೆ ನಿಜವಾಗಿಯೂ ಮಿರಾಯಾ ವಾದ್ರಾ ಎಂದು ದೃಶ್ಯಗಳು ದೃಢಪಡಿಸಿದವು, ಅದನ್ನು ಕೆಳಗೆ ವೀಕ್ಷಿಸಿ:

ಇದಲ್ಲದೆ, ಈ ವಿಷಯದ ಬಗ್ಗೆ ಕಾಂಗ್ರೆಸ್ ಪಕ್ಷದಿಂದ ಯಾವುದೇ ಅಧಿಕೃತ ಸ್ಪಷ್ಟೀಕರ ನೀಡಲಾಗಿದೆಯೇ ಎಂದು ನಾವು ಹುಡುಕಿದೆವು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯೆ ಸುಪ್ರಿಯಾ ಭಾರದ್ವಾಜ್ Xನ ತಮ್ಮ ಒಂದು ಪೋಸ್ಟ್‌ನಲ್ಲಿ ಹೀಗೆಂದು ಸ್ಪಷ್ಟಪಡಿಸಿದ್ದಾರೆ: नेता विपक्ष  @RahulGandhi जी का अपनी भांजी के साथ का सितंबर 2025 का वीडियो चला कर सार्वजनिक तौर पर अपशब्द कहना, बहुत घटिया सोच को दिखाता है. संस्कारों का ढोल पीटने वालों, कहाँ हैं तुम्हारे अपने संस्कार ??? ಕನ್ನಡದ ಅನುವಾದ ಹೀಗಿದೆ: “ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರು ತಮ್ಮ ಸೊಸೆಯೊಂದಿಗಿನ ಸೆಪ್ಟೆಂಬರ್ 2025 ರ ವೀಡಿಯೊವನ್ನು ನಡೆಸಿ ಸಾರ್ವಜನಿಕವಾಗಿ ಅದರ ಬಗ್ಗೆ ಅಸಭ್ಯ ಭಾಷೆ ಬಳಸುವುದು, ಅತ್ಯಂತ ಕೆಳಮಟ್ಟದ ಮನಸ್ಥಿತಿಯನ್ನು ತೋರಿಸುತ್ತದೆ. ಮೌಲ್ಯಗಳ ಡಂಗೂರ ಹೊಡೆಯುವವರು, ನಿಮ್ಮ ಸ್ವಂತ ಮೌಲ್ಯಗಳು ಎಲ್ಲಿವೆ?” ಪೋಸ್ಟ್ ಅನ್ನು ಇಲ್ಲಿ ವೀಕ್ಷಿಸಿ:

AICC – ಸಂವಹನದ ರಾಷ್ಟ್ರೀಯ ಕಾರ್ಯದರ್ಶಿ ರುಚಿರಾ ಚತುರ್ವೇದಿಯವರು ಕೂಡ ತಮ್ಮ X ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ, ಅದರ ಕನ್ನಡ ಅನುವಾದ ಹೀಗಿದೆ: “ಪ್ರೀತಿ, ವಾತ್ಸಲ್ಯ, ಸಂಬಂಧಗಳು ಮತ್ತು ಸಂಪರ್ಕಗಳು – ಸಂಘಿಗಳು ಇವುಗಳನ್ನೆಲ್ಲಿ ಅರ್ಥಮಾಡಿಕೊಳ್ಳುತ್ತಾರೆ? ಅದಕ್ಕಾಗಿಯೇ ಈ ರಾಹುಲ್‌ಗಾಂಧಿ ಮತ್ತು ಅವರ ಸೋದರ ಸೊಸೆ ಮಿರಾಯಾ ಅವರ ಸೆಪ್ಟೆಂಬರ್ 2025 ರ ವೀಡಿಯೊವನ್ನು ನಕಲಿ ಸುದ್ದಿ ಮತ್ತು ದ್ವೇಷವನ್ನು ಹರಡಲು ಪ್ರಸಾರ ಮಾಡಲಾಗುತ್ತಿದೆ. ಅವರ ಮನಸ್ಥಿತಿ ಹೊಲಸಷ್ಟೇ. ಪೋಸ್ಟ್ ಅನ್ನು ಕೆಳಗೆ ನೋಡಿ:

ಜೂನ್ 2024 ರಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ ಈ ಬಗ್ಗೆ ಸ್ಪಷ್ಟೀಕರಣ ನೀಡುವ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದರು, “ರಾಹುಲ್ ಗಾಂಧಿ ತಮ್ಮ ಸೋದರ ಸೊಸೆಯ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಲಂಡನ್‌ಗೆ ಹೋಗಿದ್ದಾರೆ ಮತ್ತು ಶೀಘ್ರದಲ್ಲೇ ಹಿಂತಿರುಗುತ್ತಾರೆ” ಎಂದು ಅದರಲ್ಲಿ ಹೇಳಿದ್ದರು. ಪೋಸ್ಟ್ ಅನ್ನು ಇಲ್ಲಿ ವೀಕ್ಷಿಸಿ:

ಆದ್ದರಿಂದ, ಈ ಪೋಸ್ಟ್ ತಪ್ಪು ನಿರೂಪಣೆಯಾಗಿದೆ. 

******************************************************
ಇದನ್ನೂ ಓದಿ:

ಈ ಕ್ಲಿಪ್ ನಲ್ಲಿ ನಿಜವಾಗಿಯೂ ಕೆಳಜಾತಿಯ ಹಿಂದೂಗಳಿಗೆ ನೆಲದ ಮೇಲೆ ಊಟ ಬಡಿಸುವುದನ್ನು ತೋರಿಸಲಗಿದೆಯೇ? ಸತ್ಯ ಪರಿಶೀಲನೆ

ನಿವೃತ್ತ ಸರ್ಕಾರಿ ನೌಕರರಿಗೆ DA (ಡಿಯರ್ನೆಸ್ ಅಲೌವೆನ್ಸ್/ ತುಟ್ಟಿ ಭತ್ಯೆ) ಹೆಚ್ಚಳವನ್ನು ಸರ್ಕಾರ ನಿಲ್ಲಿಸಿದೆಯೇ? ಸತ್ಯ ಪರಿಶೀಲನೆ

 

Leave a Reply

Your email address will not be published. Required fields are marked *

*