Don't Miss

ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವಾಗ ಮಮತಾ ಬ್ಯಾನರ್ಜಿ ಯವರು ‘ನೀವು ಬಡವರಾಗಿಯೇ ಇರಬೇಕೆಂದು ನಾನು ಬಯಸುತ್ತೇನೆ’ ಎಂದು ಹೇಳಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim:  ಮಮತಾ ಬ್ಯಾನರ್ಜಿ “ನೀವು ಬಡವರಾಗಿಯೇ ಇರಬೇಕೆಂದು ನಾನು ಬಯಸುತ್ತೇನೆ. ನಿಮ್ಮ ಮನೆಯಲ್ಲಿ ಇರುವ ಆಹಾರವನ್ನೇ ತಿಂದು ಬದುಕಿ” ಎಂದು ಹೇಳುತ್ತಿರುವುದನ್ನು ಒಂದು ವೀಡಿಯೊ ಕ್ಲಿಪ್ ತೋರಿಸುತ್ತದೆ.”

ಕಡೆನುಡಿ/Conclusion: ದಾರಿತಪ್ಪಿಸುವ ಹೇಳಿಕೆ. ವಿಷಯವನ್ನು ಸಂದರ್ಭಬಾಹಿರವಾಗಿ ತೋರಿಸಲಾಗಿದೆ. ಶೋಷಣಾತ್ಮಕ ಅಭ್ಯಾಸಗಳಿಗೆ ಬಲಿಯಾಗಬೇಡಿ ಎಂದು TMC ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಇದನ್ನು ಮಮತಾ ಬ್ಯಾನರ್ಜಿಯವರು ಹೇಳಿದ್ದರು..

ರೇಟಿಂಗ್/Rating: ದಾರಿತಪ್ಪಿಸುವ ಹೇಳಿಕೆ —

************************************************************

ಜುಲೈ 23, 2025 ರಂದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ವೀಡಿಯೊ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು, ವಿಶೇಷವಾಗಿ X ನಲ್ಲಿ(ಈ ಹಿಂದೆ ಟ್ವಿಟರ್)  ಕೇಯಾ ಘೋಷ್ ಎಂಬ ದೃಢೀಕೃತ ಬಳಕೆದಾರರು ಹಂಚಿಕೊಂಡ ಪೋಸ್ಟ್ ಅನ್ನು ಬಳಸಲಾಗಿತ್ತು. ಆರು ಕ್ಷಣಗಳ ಈ ವೀಡಿಯೊದಲ್ಲಿ ಮಮತಾ ಬ್ಯಾನರ್ಜಿಯವರು ರಾಜಕೀಯ ರ‍್ಯಾಲಿಯಲ್ಲಿ ಭಾವೋದ್ರಿಕ್ತವಾಗಿ ಮಾತನಾಡುತ್ತಿರುವುದನ್ನು ತೋರಿಸಲಾಗಿದೆ, ಅದೇ ಸನ್ನಿವೇಶದಲ್ಲಿ ಈ ಮುಂದಿನ ಹೇಳಿಕೆ ನೀಡಿದ್ದಾರೆಂದು ಪೋಸ್ಟ್‌ನಲ್ಲಿ ಹೇಳಲಾಗಿದೆ: “ನೀವು ಬಡವರಾಗಿಯೇ ಇರಬೇಕೆಂದು ನಾನು ಬಯಸುತ್ತೇನೆ. ನಿಮ್ಮ ಮನೆಯಲ್ಲಿ ಇರುವ ಆಹಾರವನ್ನೇ ತಿಂದು ಬದುಕಿ.”

ಮಮತಾ ಸಾರ್ವಜನಿಕವಾಗಿ ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ಟ್ವೀಟ್ ಸೂಚಿಸುತ್ತದೆ, ಇದು ಆರ್ಥಿಕವಾಗಿ ದುರ್ಬಲ ವರ್ಗಗಳನ್ನು ಗುರಿಯಾಗಿರಿಸಿಕೊಂಡ ಸಂವೇದನರಹಿತ ಹೇಳಿಕೆಯೆಂದು ಕಂಡುಬರುತ್ತದೆ. ತ್ವರಿತವಾಗಿ ಜನಪ್ರಿಯತೆಯನ್ನು ಗಳಿಸಿದ ಈ ಪೋಸ್ಟ್ 15,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆಯಿತು, ಹೇಳಿಕೆಯೊಂದಿಗೆ ವೇದಿಕೆಯ ಮೇಲೆ ಮಮತಾರವರು ಮೈಕ್ ಹಿಡಿದು ಭಾಷಣ ಮಾಡುತ್ತಾ ಸನ್ನೆ ಮಾಡುತ್ತಿರುವ ವೀಡಿಯೊವನ್ನೂ ಸಹ ಸೇರಿಸಲಾಗಿದೆ.

ವೇದಿಕೆಯ ಮೇಲೆ ತೃಣಮೂಲ ಕಾಂಗ್ರೆಸ್ (TMC) ಚಿಹ್ನೆಯು ಗೋಚರಿಸುತ್ತದೆ ಮತ್ತು ಹಿನ್ನೆಲೆಯಲ್ಲಿ ರಾಷ್ಟ್ರಧ್ವಜವನ್ನೂ ಕಾಣಬಹುದು. ಈ ಹೇಳಿಕೆಯು ಆನ್‌ಲೈನ್‌ ವೇದಿಕೆಗಳಲ್ಲಿ ವಿವಾದವನ್ನು ಹುಟ್ಟುಹಾಕಿತು ಮತ್ತು ಬಡವರನ್ನು ಕೀಳಾಗಿ ಕಂಡದ್ದಕ್ಕೆ ಬಳಕೆದಾರರು ಮುಖ್ಯಮಂತ್ರಿಯವರನ್ನು ಟೀಕಿಸಿದರು ಮತ್ತು ಆಕ್ರೋಶ ವ್ಯಕ್ತಪಡಿಸಿದರು. ಪೋಸ್ಟ್‌ಗೆ ಬಂದ ಹಲವಾರು ಪ್ರತಿಕ್ರಿಯೆಗಳಲ್ಲಿ ಮಮತಾರವರಿಗೆ ಜನರ ವಸ್ತುಸ್ಥಿಯ ತಿಳುವಳಿಕೆ ಇಲ್ಲವೆಂದು ಆರೋಪಿಸಲಾಗಿತ್ತು, ಮತ್ತಿನ್ನಿತರರು ಉಲ್ಲೇಖದ ಸಂದರ್ಭ ಮತ್ತು ಸತ್ಯಾಸತ್ಯತೆಯನ್ನು ಪ್ರಶ್ನಿಸಿದರು. ಬಿಜೆಪಿ ಪಶ್ಚಿಮ ಬಂಗಾಳದ ಹ್ಯಾಂಡಲ್‌ನಲ್ಲಿಯೂ ಇದೇ ವಿಷಯವನ್ನು ಹಂಚಿಕೊಳ್ಳಲಾಗಿದೆ, ಕೆಳಗೆ ನೋಡಿ:

ಸತ್ಯ ಪರಿಶೀಲನೆ

ರಿವರ್ಸ್ ಇಮೇಜ್ ಮತ್ತು ಕೀವರ್ಡ್ ಹುಡುಕಾಟವನ್ನು ಬಳಸಿಕೊಂಡು ಕ್ಲಿಪ್ ಅನ್ನು ಪರಿಶೀಲಿಸಿದಾಗ, ವೈರಲ್ ತುಣುಕನ್ನು ಎಚ್ಚರಿಕೆಯಿಂದ ಸಂಪಾದಿಸಲಾಗಿದೆ ಮತ್ತಿದು ಮೂಲ ಭಾಷಣವನ್ನು ತಪ್ಪಾಗಿ ಪ್ರತಿನಿಧಿಸುತ್ತದೆ ಎಂದು ನಮಗೆ ತಿಳಿದುಬಂತು. ಹಲವು ವಿಶ್ವಾಸಾರ್ಹ ಮಾಧ್ಯಮಗಳು ವರದಿ ಮಾಡಿರುವಂತೆ, ಸುದ್ದಿ ವೇದಿಕೆಗಳಲ್ಲಿ ವೀಕ್ಷಣೆಗೆ ಲಭ್ಯವಿರುವ ಪೂರ್ಣ ವೀಡಿಯೊದಲ್ಲಿ ಮಮತಾ ಬ್ಯಾನರ್ಜಿಯವರು ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿರುವುದು ಕಂಡುಬರುತ್ತದೆ, ಅವರು ಮಾತನಾಡುತ್ತಿರುವುದು ಸಾರ್ವಜನಿಕರಲ್ಲಲ್ಲ. ಎರಡನೆಯದಾಗಿ, ಇದನ್ನು 2025 ರಲ್ಲಿ ಅಲ್ಲ, 2024 ರಲ್ಲಿ ಪೋಸ್ಟ್ ಮಾಡಲಾಗಿತ್ತು.

ಶಹೀದ್ ದಿವಸ್ ರ‍್ಯಾಲಿಯಲ್ಲಿ NDTV ಪೋಸ್ಟ್ ಮಾಡಿದ 2024 ರ ಮೂಲ ವೀಡಿಯೊ ಇಲ್ಲಿದೆ. ಅವರು ಬಂಗಾಳಿ ಭಾಷೆಯಲ್ಲಿ “ಭಯಪಡುವವರು, ಸಾಯುವರು, ಹೋರಾಡುವವರು ಯಶಸ್ವಿಯಾಗುವರು. ನಾವು ಹೇಡಿಗಳಲ್ಲ, ನಾವು ದೇಶದ್ರೋಹಿಗಳಲ್ಲ, ನಮಗೆ ಹೇಗೆ ಹೋರಾಡಬೇಕೆಂದು ತಿಳಿದಿದೆ. ಮತ್ತು ನಮ್ಮೊಂದಿಗೆ ಹೋರಾಡುವವರಿಗೆ, ಈ ಭಾರೀ ಮಳೆಯಲ್ಲಿ ತೃಣಮೂಲವನ್ನು ಹೊರತುಪಡಿಸಿ ಯಾವುದೇ ಪಕ್ಷವು ಸಭೆ ಅಥವಾ ರ‍್ಯಾಲಿಯನ್ನು ನಡೆಸುವುದಿಲ್ಲ ಎಂದು ನಾವು ತೋರಿಸುತ್ತೇವೆ.” ಎಂದರು.

ತಮ್ಮ ಭಾಷಣದುದ್ದಕ್ಕೂ, ಬ್ಯಾನರ್ಜಿಯವರು ಸರಕುಗಳ ಏರುತ್ತಿರುವ ಬೆಲೆಗಳ ನಡುವೆ ರಾಜಕೀಯ ಸ್ಥಿತಿಸ್ಥಾಪಕತ್ವ ಮತ್ತು ಸ್ವಾವಲಂಬನೆಯ ಬಗ್ಗೆ ಮಾತನಾಡುತ್ತಿದ್ದರು. ಅವರ ಮಾತುಗಳು ಪಕ್ಷದ ಕಾರ್ಯಕರ್ತರಿಗೆ ರಾಜಕೀಯ ಪ್ರೇರಿತ ಆಮಿಷಗಳಿಗೆ ಬಲಿಯಾಗುವ ಬದಲು ದೃಢವಾಗಿರಲು ಮತ್ತು ಬಾಹ್ಯ ಒತ್ತಡವನ್ನು ವಿರೋಧಿಸಲು ಪ್ರೋತ್ಸಾಹಿಸ ನೀಡಿದವು.

ಜುಲೈ 23, 2025ರಂದೂ ಸಹ ಶಹೀದ್ ದಿವಸ್ ಸಂದರ್ಭದಂದು, ಹಣದುಬ್ಬರದ ಒತ್ತಡವನ್ನು ಎದುರಿಸಲು ಸಹಿಷ್ಣುತೆಯಗೆ ಒತ್ತು ನೀಡುತ್ತಾ ಅವರು ಜನರನ್ನು ಪ್ರೋತ್ಸಾಹಿಸಿದರು.

ಜನರು ಬಡವರಾಗಬೇಕೆಂಬ “ಬಯಕೆ” ಇರುವುದಾಗಿ ಮಮತಾ ಬ್ಯಾನರ್ಜಿಯವರು ನೇರವಾಗಿ ಹೇಳಿದ ಯಾವುದೇ ದಾಖಲೆಗಳಿಲ್ಲ. ವಾಸ್ತವವಾಗಿ, ವೈರಲ್ ಕ್ಲಿಪ್ ನಲ್ಲಿ ಅವರ 2024ರ ಭಾಷಣವನ್ನು ಕೇವಲ ಆರು ಕ್ಷಣಗಳಿಗೆ ಕಡಿತಗೊಳಿಸಲಾಗಿದೆ, ಈ ಮೂಲಕ ಅವರ ಸಂದೇಶದ ಸಂದರ್ಭ ಮತ್ತು ಉದ್ದೇಶವನ್ನು ಬಿಟ್ಟುಹಾಕಲಾಗಿದೆ. ಆದ್ದರಿಂದ, ವೈರಲ್ ಆದ 6-ಕ್ಷಣಗಳ ಕ್ಲಿಪ್ ಅನ್ನು ಜನರ ದಾರಿ ತಪ್ಪಿಸಲು ಮತ್ತು ಪ್ರಮುಖ ಸಂದರ್ಭವನ್ನು ತೆಗೆದುಹಾಕುವ ಮೂಲಕ ಆಕ್ರೋಶವನ್ನು ಹುಟ್ಟುಹಾಕಲು ಸಂಪಾದನೆ ಮಾಡಲಾಗಿದೆ ಎಂದು ಕಂಡುಬರುತ್ತದೆ.

ಮಮತಾ ಬ್ಯಾನರ್ಜಿಯವರ ಗಮನವು ಬೆಲೆ ಏರಿಕೆಯ ಮೇಲೆ ಇತ್ತು, ಮತ್ತು ಜನರು ನಿರ್ದಿಷ್ಟ ಶೋಷಣಾತ್ಮಕ ರೂಢಿಗಳನ್ನು ಅವಲಂಬಿಸಬಾರದೆಂದು ಪ್ರೋತ್ಸಾಹಿಸುವಂತಿತ್ತು. ಆದರೆ, ಈ ಪದಗಳನ್ನು ತಿರುಚಿ ಅಪಾರ್ಥವನ್ನು ಸೃಷ್ಟಿಸುವ ತಪ್ಪಾಗಿ ದಾರಿತಪ್ಪಿಸಲು ಪ್ರಯತ್ನಿಸಲಾಗಿದೆ. ಇದಲ್ಲದೆ, ಅವರು ಪ್ರಸ್ತುತ ಈ ವಿಷಯಗಳ ಕುರಿತು ಸಾರ್ವಜನಿಕರೊಂದಿಗೆ ಮಾತನಾಡುತ್ತಿದ್ದಾರೆ ಎಂಬುದನ್ನು ಸೂಚಿಸುವಂತೆ ಬಿಜೆಪಿ ಹ್ಯಾಂಡಲ್ ಈ 2024 ರ ವೀಡಿಯೊ ಹೇಳಿಕೆಯನ್ನು ಜುಲೈ 23, 2025 ರಂದು ಪೋಸ್ಟ್ ಮಾಡಿದೆ.

ಆದ್ದರಿಂದ, ಹೇಳಿಕೆ ಸುಳ್ಳು.

ಇದನ್ನೂ ಓದಿ:

ತಾರಕೇಶ್ವರ ಗಂಗೆಗೆ ಭೇಟಿ ನೀಡುವ ಹಿಂದೂ ತೀರ್ಥಯಾತ್ರಿಕರಿಂದ ಪಶ್ಚಿಮ ಬಂಗಾಳ ಸರ್ಕಾರವು ಜಿಜ್ಯಾ ತೆರಿಗೆಯನ್ನು ಸಂಗ್ರಹಿಸುತ್ತಿದೆಯೇ? ಸತ್ಯ ಪರಿಶೀಲನೆ

ಭಾರತದ ಆರ್ಥಿಕ ವ್ಯವಸ್ಥೆಯನ್ನು ಶ್ವೇತಭವನದಿಂದ ನಡೆಸಲಾಗುವುದಿಲ್ಲ ಎಂದು ಎಸ್ ಜೈಶಂಕರ್ ಹೇಳಿದ್ದಾರೆಯೇ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*