Don't Miss

ಇಸ್ರೇಲಿ ಈಜುಗಾರರ ‘ಬ್ರಿಂಗ್ ದೆಮ್ ಹೋಮ್ ನೌ’ ಎಂಬ ಹಳೆಯ ರಚನೆಯನ್ನು ಪ್ಯಾರಿಸ್ ಒಲಿಂಪಿಕ್ಸ್ ಸಾಧನೆಯಾಗಿ ಹಂಚಿಕೊಳ್ಳಲಾಗಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim::ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇಸ್ರೇಲಿ ಈಜುಗಾರರು “ಬ್ರಿಂಗ್ ದೆಮ್ ಹೋಮ್ ನೌ” ಎಂಬ ಆಕಾರವನ್ನು ರಚಿಸಿದರು.

ಕಡೆನುಡಿ/Conclusion : ತಪ್ಪು ನಿರೂಪಣೆ. ಇಸ್ರೇಲಿ ಈಜುಗಾರರ ಹಳೆಯ ಚಿತ್ರವನ್ನು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತ್ತೀಚಿನ ಸಾಧನೆ ಎಂದು ಹಂಚಿಕೊಳ್ಳಲಾಗಿದೆ.

ರೇಟಿಂಗ್: ತಪ್ಪು ನಿರೂಪಣೆ

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

************************************************************************

ಈಗ ನಡೆಯುತ್ತಿರುವ ಪ್ಯಾರಿಸ್ 2024ರ ಒಲಿಂಪಿಕ್ಸ್‌ನಲ್ಲಿ ಇಸ್ರೇಲಿ ತಂಡವು ವಿಶಿಷ್ಠ ರೀತಿಯಲ್ಲಿ ಪ್ರತಿಭಟಿಸುತ್ತಿದೆ ಎಂಬ ಹೇಳಿಕೆಯೊಂದಿಗೆ ಕಲಾತ್ಮಕ ವಿಭಾಗದಲ್ಲಿ ಮಹಿಳಾ ಈಜುಪಟುಗಳು “ಬ್ರಿಂಗ್ ದೆಮ್ ಹೋಮ್ ನೌ” ಎನ್ನುವ ರಚನೆಯನ್ನು ರೂಪಿಸುವ ಒಂದು ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ.

ಹೇಳಿಕೆ ಹೀಗಿದೆ: “ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಒತ್ತೆಯಾಳುಗಳಿಗಾಗಿ ಹಳದಿ ರಿಬ್ಬನ್ ಪಿನ್‌ಗಳನ್ನು ಧರಿಸಲು  ಇಸ್ರೇಲಿ ಒಲಿಂಪಿಕ್ ತಂಡಕ್ಕೆ ಅನುಮತಿ ನೀಡಲಾಗಿಲ್ಲ. ಅದರ ಬದಲಿಗೆ, ಅವರು ಮಾಡಿದ್ದು ಇದು, (sic)” “ಬ್ರಿಂಗ್ ಥೆಮ್ ಹೋಮ್ ನೌ” (“ಅವರನ್ನೀಗ ಮನೆಗೆ ಕರೆತನ್ನಿ”) ಎನ್ನುವ ರಚನೆಯು ಚಿತ್ರದಲ್ಲಿ ಗೋಚರಿಸುತ್ತದೆ.

ಇದರ ಹಿನ್ನೆಲೆಯೆಂದರೆ, 200ಕ್ಕೂ ಹೆಚ್ಚಿನ ಇಸ್ರೇಲಿ ಒತ್ತೆಯಾಳುಗಳು ಇನ್ನೂ ಹಮಾಸ್ ಸೆರೆಯಲ್ಲಿದ್ದಾರೆ ಮತ್ತು ಹಲವಾರು ರಾಷ್ಟ್ರಗಳು ಇಸ್ರೇಲಿಗಳು ಮತ್ತು ಪ್ಯಾಲೆಸ್ತೀನಿಗಳ ನಡುವೆ ಶಾಂತಿ ತರಲು ಪ್ರಯತ್ನಿಸುತ್ತಲಿವೆ. ಪ್ಯಾರಿಸ್ ಒಲಿಂಪಿಕ್ಸ್ 2024ರ ಸಮಯಕ್ಕೆ ಸರಿಯಾಗಿ ಈ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

FACT CHECK

ಮೊದಲಿಗೆ, ಡಿಜಿಟೈ ಇಂಡಿಯಾ ತಂಡವು ಗೂಗಲ್ ರಿವರ್ಸ್ ಇಮೇಜ್ ಸರ್ಚ್‌ನಲ್ಲಿ ಚಿತ್ರವನ್ನು ಪರಿಶೀಲಿಸಿತು ಮತ್ತು ಇದು ಇತ್ತೀಚಿನದೆಂದು ಹಂಚಿಕೊಳ್ಳಲಾಗುತ್ತಿರುವ ಹಳೆಯ ಚಿತ್ರವೆಂದು ಕಂಡುಹಿಡಿಯಿತು. ಇದರ ಕುರಿತಾಗಿ ಇನ್ನಷ್ಟು ಹುಡುಕಾಡಿದಾಗ ಈ ಚಿತ್ರವು ನವೆಂಬರ್ 2023ರದ್ದು ಎಂದು ಕಂಡುಬಂತು, ಇಸ್ರೇಲ್‌ನ ವಿನ್ಗೇಟ್ ಇನ್‌ಸ್ಟಿಟ್ಯೂಟ್‌ನ ಕಲಾತ್ಮಕ ಈಜುಗಾರರು ಇಸ್ರೇಲಿ ಒತ್ತೆಯಾಳುಗಳ ಹಿಂದಿರುವಿಕೆಗಾಗಿರುವ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಲು ಈ ರಚನೆಯನ್ನು ಮಾಡಿದ್ದರು.

ಒಂದು ಪ್ಯಾಲೇಸ್ತೀನಿ ಉಗ್ರಗಾಮಿ ಗುಂಪಾದ ಹಮಾಸ್‌ನ ಸೆರೆಯಲ್ಲಿರುವ 200ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಲು ಅವರು ‘ಬ್ರಿಂಗ್ ದೆಮ್ ಹೋಮ್ ನೌ’ ಎಂಬ ಘೋಷಣೆಯನ್ನೆತ್ತಿದರು. ಈಗ ಪ್ರಪಂಚದಾದ್ಯಂತ ಹಲವು ಇಸ್ರೇಲಿ ಗುಂಪುಗಳಿಗೆ ಇದೊಂದು ಘೋಷಣಾ ವಾಕ್ಯವಾಗಿ ಮೊಳಗಿದೆ.

ಇಸ್ರೇಲ್ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನವೆಂಬರ್ 19, 2023ರಂದು ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಮೂಲ ಚಿತ್ರವನ್ನು ಪೋಸ್ಟ್ ಮಾಡಿತ್ತು, ಅದರ ಶೀರ್ಷಿಕೆ ಹೀಗಿದೆ: “ಗಾಜಾ಼ದಲ್ಲಿ ಹಮಾಸ್ ಭಯೋತ್ಪಾದಕರು ಹಿಡಿದಿಟ್ಟಿರುವ 240 ಒತ್ತೆಯಾಳುಗಳಿಗೆ ಗೌರವಾರ್ಥವಾಗಿ ಇಸ್ರೇಲ್‌ನ ರಾಷ್ಟ್ರೀಯ ಕಲಾತ್ಮಕ ಈಜು ತಂಡದಿಂದ ಸುಂದರವಾದ ಕಾಣಿಕೆ. ಪ್ರತಿಯೊಬ್ಬರನ್ನೂ ಮನೆಗೆ ಕರೆತರುವವರೆಗೆ ನಾವು ನಿಲ್ಲುವುದಿಲ್ಲ. ಯೋವ್ ಬೊರೊವಿಟ್ಜ್”

ಈ ಚಿತ್ರವನ್ನು ಇಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿಯೂ ಹಂಚಿಕೊಳ್ಳಲಾಗಿದೆ. ಚಾಯಾಚಿತ್ರ ಕೃಪೆಯು ಕಳೆದ ವರ್ಷ ನವೆಂಬರ್‌ನಲ್ಲಿ ರಾಷ್ಟ್ರೀಯ ಪೂಲ್‌ನಲ್ಲಿ “ಬ್ರಿಂಗ್ ದೆಮ್ ಹೋಮ್ ನೌ” ಎನ್ನುವ ಸಂದೇಶವನ್ನು ಕ್ರೀಡಾಪಟುಗಳು ರಚಿಸಿರುವ ಬಗ್ಗೆ ವಿವರಗಳೊಂದಿಗೆ ಇಸ್ರೇಲ್‌ನ ವಿನ್ಗೇಟ್ ಇನ್‌ಸ್ಟಿಟ್ಯೂಟ್‌ನ ಆಡಮ್ ಸ್ಪೀಗೆಲ್ ರವರನ್ನು ತೋರಿಸುತ್ತದೆ. ಅದರ ಪಕ್ಕದಲ್ಲಿ ಇಸ್ರೇಲ್ ಧ್ವಜವನ್ನು ಪ್ರತಿನಿಧಿಸುವಂತೆ ಡೇವಿಡ್ ನಕ್ಷತ್ರದಲ್ಲಿ ಮತ್ತೊಂದು ರಚನೆಯನ್ನು ಕಾಣಬಹುದು.

ಆದ್ದರಿಂದ, ಒಂದು ಹಳೆಯ ಚಿತ್ರವನ್ನು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿನ ಇತ್ತೀಚಿನ ಚಿತ್ರ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ:

ಈ ಚಿತ್ರವು ರಾಜಸ್ಥಾನದ 5000 ವರ್ಷ ಹಳೆಯ ದೇವಾಲಯವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಎನ್‌ಡಿಎ ಸರ್ಕಾರ ರಚನೆಯ ಮುನ್ನ ನಿತೀಶ್ ಕುಮಾರ್ ಇಂಡಿಯಾ ಬ್ಲಾಕ್ ನಾಯಕರನ್ನು ಭೇಟಿ ಮಾಡಿದರೇ? ಸತ್ಯ ಪರಿಶೀಲನೆ

 


					
					
									

Leave a Reply

Your email address will not be published. Required fields are marked *

*