ಹೇಳಿಕೆ/Claim: ಕೀಟನಾಶಕಗಳ ಬಳಕೆಯ ಕಾರಣದಿಂದ ಹಲವಾರು ದೇಶಗಳು ಭಾರತದಿಂದ ತರಕಾರಿಗಳನ್ನು ನಿಷೇಧಿಸಿವೆ ಎಂದು ಪತ್ರಿಕಾ ಕ್ಲಿಪ್ಪಿಂಗ್ ಹೇಳುತ್ತದೆ.
ಕಡೆನುಡಿ/Conclusion: ಹೇಳಿಕೆ ಸುಳ್ಳು. ಈ ಪತ್ರಿಕಾ ಕ್ಲಿಪ್ಪಿಂಗ್ 2015ರದ್ದು, ಇದು ದೆಹಲಿ ಉಚ್ಚ ನ್ಯಾಯಾಲಯವು ಕೀಟನಾಶಕಗಳ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಿದ್ದ ಸುದ್ದಿ, ಇದು ಇತ್ತೀಚಿನದ್ದಲ್ಲ.
ರೇಟಿಂಗ್: ದಾರಿತಪ್ಪಿಸುವ ಸುದ್ದಿ —
ಸತ್ಯ ಪರಿಶೀಲನೆ ವಿವರಗಳು:
ಕೀಟನಾಶಕಗಳ ಕಾರಣದಿಂದಾಗಿ ಹಲವಾರು ದೇಶಗಳು ಭಾರತದಿಂದ ಬರುವ ತರಕಾರಿಗಳನ್ನು ನಿಷೇಧಿಸಿವೆ ಎನ್ನುವ ಪತ್ರಿಕಾ ಸುದ್ದಿಯ ಕ್ಲಿಪ್ಪಿಂಗ್ ಅನ್ನು ಇತ್ತೀಚೆಗೆ ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆಹಾರಪದಾರ್ಥಗಳ ಕೃಷಿಯಲ್ಲಿ ಅತಿಯಾದ ಕೀಟನಾಶಕಗಳ ಬಳಕೆಯನ್ನು ಸರ್ಕಾರವು ನಿಲ್ಲಿಸಬೇಕು ಎಂದು ಮತ್ತು ಇದು ಜನರ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಎಂದು ಆಪಾದಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಗೆ ಪ್ರತಿಯಾಗಿ ಮೇ 17, 2024 ರಂದು ಸರ್ವೇಚ್ಚ ನ್ಯಾಯಾಲಯವು ಆರೋಗ್ಯ, ಕೃಷಿ ಸಚಿವಾಲಯಗಳು ಮತ್ತು ಭಾರತೀಯ ಆಹಾರ ಸುರಕ್ಷತಾ ಮಾನದಂಡಗಳ ಪ್ರಾಧಿಕಾರ (FSSAI) ದಿಂದ ಪ್ರತಿಕ್ರಿಯೆಗಳನ್ನು ಕೇಳಿರುವುದು ಇದರ ಹಿನ್ನೆಲೆ.
ಈ ಸುದ್ದಿ ತುಣುಕನ್ನು ಡಿಜಿಟೈ ಇಂಡಿಯಾ ತಂಡವು ಸತ್ಯ-ಪರಿಶೀಲನೆಗಾಗಿ ಸ್ವೀಕರಿಸಿತ್ತು ಮತ್ತು X ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚಿನ ಹುಡುಕಾಟ ನಡೆಸಿದಾಗ, ಕೆಳಗೆ ಕಾಣುವಂತೆ ಒಂದು ತಿಂಗಳ ಹಿಂದೆ ಇದನ್ನು X ನಲ್ಲಿ ಹಂಚಿಕೊಳ್ಳಲಾಗಿದೆ ಎಂದು ಕಂಡುಬಂತು:
ज्यादा कीटनाशक प्रयोग करने से हमारा देश बीमार पड़ा।
लेकिन विश्व के अन्य देश पैसे के लिए शरीर से खिलवाड़ नहीं करते।
उन्होंने एकमत होकर भारत की जहरीली सब्जियों पर ही रोक लगा दी। pic.twitter.com/OFb6gPNndv— भारत बचाओ आंदोलन (@bbarajivdixit) April 24, 2024
ಹಿಂದಿಯಲ್ಲಿನ ಹೇಳಿಕೆ ಹೇಳುವುದೇನೆಂದರೆ ” [:”ज्यादा कीटनाशक प्रयोग करने से हमारा देश बीमार पड़ा। लेकिन विश्व के अन्य देश पैसे के लिए शरीर से खिलवाड़ नहीं करते। उन्होंने एकमत होकर भारत की जहरीली सब्जियों पर ही रोक लगा दी।” [ಕನ್ನಡದ ಅನುವಾದವು ಹೀಗಿದೆ: “ನಮ್ಮ ದೇಶವು ಅತಿಯಾದ ಕೀಟನಾಶಕಗಳ ಬಳಕೆಯಿಂದ ಅನಾರೋಗ್ಯಕ್ಕೆ ಒಳಗಾಯಿತು. ಆದರೆ ಪ್ರಪಂಚದ ಇತರ ದೇಶಗಳು ಹಣಕ್ಕಾಗಿ ದೇಹದೊಂದಿಗೆ ಆಟವಾಡುವುದಿಲ್ಲ. ಅವುಗಳು ಸರ್ವಾನುಮತದಿಂದ ಭಾರತದ ವಿಷಯುಕ್ತ ತರಕಾರಿಗಳ ಮೇಲೆ ನಿಷೇಧ ಹೇರಿವೆ.”.”]
ಅದೇ ಕ್ಲಿಪ್ ಅನ್ನು ಫೇಸ್‌ಬುಕ್‌ನಲ್ಲಿಯೂ ಹಂಚಿಕೊಳ್ಳಲಾಗಿದೆ.
FACT-CHECK
ಡಿಜಿಟೈ ಇಂಡಿಯಾ ಇದನ್ನು ಸತ್ಯ ಪರಿಶೀಲನೆಗಾಗಿ ಕೈಗೆತ್ತಿಕೊಂಡಿತು. ಈ ಸುದ್ದಿ ಕ್ಲಿಪ್ ಹಣ್ಣುಗಳು ಮತ್ತು ತರಕಾರಿಗಳಲ್ಲಿನ ಕೀಟನಾಶಕಗಳ ಬಗ್ಗೆ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ನೀಡಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದ್ದು. ನ್ಯಾಯಮೂರ್ತಿಗಳ ಹೆಸರುಗಳಾದ — ನ್ಯಾಯಮೂರ್ತಿ ಜಿ. ರೋಹಿಣಿ ಮತ್ತು ನ್ಯಾಯಮೂರ್ತಿ ರಾಜೀವ್ ಸಹಾಯ್ ಎಂಡ್ಲಾ- ಈ ಹೆಸರುಗಳನ್ನು ನಾವು ಗೂಗಲ್ ನ್ಯೂಸ್ ನಲ್ಲಿ ಹುಡುಕಿದೆವು ಮತ್ತು ಫೆಬ್ರವರಿ 11, 2015 ರಂದು ಬಿಸ್ನೆಸ್ ಸ್ಟ್ಯಾಂಡರ್ಡ್‌ನಲ್ಲಿ ಪ್ರಕಟವಾದ ಮೂಲ PTI ಸುದ್ದಿ ವರದಿಯು ನಮಗೆ ದೊರಕಿತು.
ವರದಿಯ ಪ್ರಕಾರ, “ಅತಿಯಾದ ಕೀಟನಾಶಕಗಳ ಬಳಕೆಯಿಂದಾಗಿ ಅನೇಕ ದೇಶಗಳು ಭಾರತದಿಂದ ಬರುವ ತರಕಾರಿಗಳು ಮತ್ತು ಹಣ್ಣುಗಳ ಆಮದನ್ನು ನಿಷೇಧಿಸಿವೆ ಎಂದು ದೆಹಲಿ ಹೈಕೋರ್ಟ್ ಗೆ ಇಂದು ತಿಳಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ಜಿ ರೋಹಿಣಿ ಮತ್ತು ನ್ಯಾಯಮೂರ್ತಿ ರಾಜೀವ್ ಸಹಾಯ್ ಎಂಡ್ಲಾ ಅವರ ಪೀಠಕ್ಕೆ ನ್ಯಾಯಾಲಯವು ನೇಮಿಸಿದ ಅಮಿಕಸ್ ಕ್ಯೂರಿ ಒಂದು ವರದಿಯನ್ನು ಸಹ ಸಲ್ಲಿಸಿದೆ. ಹಲವಾರು ತರಕಾರಿಗಳು ಮತ್ತು ಖಾದ್ಯ ವಸ್ತುಗಳಲ್ಲಿ, ಕೀಟನಾಶಕಗಳ ಅವಶೇಷವು ಅನುಮತಿಸಿರುವ ಮಿತಿಗಳಿಗಿಂತ ಹೆಚ್ಚಾಗಿ ಕಂಡುಬಂದಿದೆ ಎಂದು ವರದಿಯು ಹೇಳುತ್ತದೆ, ದೆಹಲಿಯಾದ್ಯಂತ ಮಾರಾಟವಾಗುವ ಖಾದ್ಯ ಪದಾರ್ಥಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕಗಳ ಬಳಕೆಯ ಹೊರತಾಗಿಯೂ, ಈ ಸಮಸ್ಯೆಯನ್ನು ನಿಗ್ರಹಿಸುವತ್ತ ಹೆಚ್ಚಿನ ಪ್ರಯತ್ನವೇನೂ ಆಗಿಲ್ಲ. ಈ ಸಮಸ್ಯೆಯು ದೆಹಲಿಗೆ ಮಾತ್ರ ಸೀಮಿತವಾಗಿರದೆ ಇದು “ಪ್ಯಾನ್-ಇಂಡಿಯಾ” ಸಮಸ್ಯೆ ಎಂದೂ ಸಹ ವರದಿ ತಿಳಿಸಿದೆ.
ಆದ್ದರಿಂದ, ಈ ಸುದ್ದಿ ಕ್ಲಿಪ್ 2014 ರಲ್ಲಿ ಮುಖ್ಯಾಂಶಗಳಲ್ಲಿದ್ದ ಕೀಟನಾಶಕಗಳ ವಿಷಯಕ್ಕೆ ಸಂಬಂಧಿಸಿದ್ದು, ಆಗ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕೀಟನಾಶಕಗಳ ಬಳಕೆಯ ಬಗ್ಗೆ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ನ್ಯಾಯಾಧೀಶರು ಹಲವಾರು ದೇಶಗಳು ಹೇರಿದ ಆಮದು ನಿಷೇಧದ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದರು. 2017 ರಲ್ಲಿ ಮತ್ತು 2021 ರಲ್ಲಿಯೂ ಇಲ್ಲಿ ಮತ್ತು ಇಲ್ಲಿ ಅನೇಕ Facebook ಪುಟಗಳು ಇದೇ ಸುದ್ದಿ ಕ್ಲಿಪ್ ಅನ್ನು ಬಳಸಿವೆ ಎಂಬುದನ್ನು ಇತರ ಹುಡುಕಾಟದ ಫಲಿತಾಂಶಗಳು ತೋರಿಸಿವೆ.
ಆದ್ದರಿಂದ, ಕೆಲವು ದೇಶಗಳು ಭಾರತದಿಂದ ಹಣ್ಣುಗಳು ಮತ್ತು ತರಕಾರಿಗಳ ಆಮದನ್ನು ನಿಷೇಧಿಸಿವೆ ಎಂಬ ಹೇಳಿಕೆಯು ಹಳೆಯದು, ಇತ್ತೀಚಿನದಲ್ಲ.
ಇದನ್ನೂ ಓದಿ:
ಕರೋನವೈರಸ್ ಅನ್ನು ಪತ್ತೆಹಚ್ಚುವುದು ಹೇಗೆ ಎಂಬುದರ ಕುರಿತು AIIMS ಹೇಳಿಕೆ ನೀಡಿದೆಯೇ? ಸತ್ಯ ಪರಿಶೀಲನೆ
ತಮಿಳುನಾಡಿನಲ್ಲಿ BHEL ತಿರುಚ್ಚಿ ಘಟಕವು ರಾಮ ಮಂದಿರಕ್ಕಾಗಿ ಈ ಬೃಹತ್ ಗಂಟೆಗಳನ್ನು ತಯಾರಿಸಿದೆಯೇ? ಸತ್ಯ ಪರಿಶೀಲನೆ