Don't Miss

ಏಷ್ಯಾ ಕಪ್ 2025 ರಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಜಯಗಳಿಸಿದ ನಂತರ ದುಬೈಯಲ್ಲಿ ಪಟಾಕಿ ಸಿಡಿಸುವುದನ್ನು ಈ ಕ್ಲಿಪ್ ತೋರಿಸುತ್ತಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :  ಸೆಪ್ಟೆಂಬರ್ 28, 2025 ರಂದು ಏಷ್ಯಾ ಕಪ್ 2025ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಜಯಗಳಿಸಿದ್ದಕ್ಕಾಗಿ ದುಬೈಯಲ್ಲಿ ಪಟಾಕಿ ಸಿಡಿಸುವುದನ್ನು ದೃಶ್ಯಗಳು ತೋರಿಸುತ್ತವೆ.

ಕಡೆನುಡಿ/Conclusion : ಈ ಹೇಳಿಕೆ ತಪ್ಪು ನಿರೂಪಣೆ. ಸೆಪ್ಟೆಂಬರ್ 28, 2025 ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಪಂದ್ಯ ಗೆದ್ದಿತ್ತಾದರೂ, ಪಟಾಕಿ ಸಿಡಿಸುವಿಕೆಯ ದೃಶ್ಯಗಳು ಡಿಸೆಂಬರ್ 2024 ರಲ್ಲಿ ಕುವೈತ್‌ನಲ್ಲಿ ನಡೆದ 26 ನೇ ಗಲ್ಫ್ ಕಪ್ ನ ಉದ್ಘಾಟನಾ ಸಮಾರಂಭದ ದೃಶ್ಯಗಳಾರುವವು.

ರೇಟಿಂಗ್/Rating :ತಪ್ಪು ನಿರೂಪಣೆ

******************************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.
******************************************************

2025 ರ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಜಯಗಳಿಸಿದ ನಂತರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದ ಮೇಲಿನ ಆಕಾಶವನ್ನು ಪಟಾಕಿಗಳು ಬೆಳಗಿಸಿದವು ಎಂದು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಲವಾರು ಬಳಕೆದಾರರು ಹೇಳಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಬಳಕೆದಾರ ‘sanatani_tapash_2.0’ ದುಬೈಯಲ್ಲಿ ಭಾರತದ ಗೆಲುವನ್ನು ಅಭಿನಂದಿಸುವ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ ಅನ್ನು ಕೆಳಗೆ ನೋಡಿ-

 

View this post on Instagram

 

A post shared by Tʌpʌsʜ Ƴt (@sanatani_tapash_2.0)

 

ಇತರರು ಸಹ ಅದೇ ಕ್ಲಿಪ್ ಅನ್ನು ಹಂಚಿಕೊಂಡಿದ್ದು, ಸೆಪ್ಟೆಂಬರ್ 28, 2025 ರಂದು ಪಾಕಿಸ್ತಾನದ ವಿರುದ್ಧ ಭಾರತ ಜಯಗಳಿಸಿದ ನಂತರ ಪಟಾಕಿ ಸಿಡಿಸಿದ ನಂತರದ ಆಚರಣೆಗೆ ಸಂಬಂಧಿಸಿದ್ದು ಎಂದಿದ್ದಾರೆ. ಹೆಚ್ಚಿನ ಹೇಳಿಕೆಗಳನ್ನು ಇಲ್ಲಿಇಲ್ಲಿ ಮತ್ತು ಇಲ್ಲಿ ನೋಡಬಹುದು.

 ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ಕುರಿತು ತನಿಖೆ ಮಾಡಲು ನಿರ್ಧರಿಸಿತು ಮತ್ತು ದೃಶ್ಯಗಳು ಸುಳ್ಳು ಎಂದು ಕಂಡುಕೊಂಡಿತು. ವಾಸ್ತವವಾಗಿ ಈ ವೀಡಿಯೊ ಡಿಸೆಂಬರ್ 2024 ರಲ್ಲಿ ಕುವೈತ್‌ನಲ್ಲಿ ನಡೆದ 26ನೇ ಗಲ್ಫ್ ಕಪ್ ಉದ್ಘಾಟನಾ ಸಮಾರಂಭದ ಪಟಾಕಿಗಳಿಂದ ಹುಟ್ಟಿಕೊಂಡಿದೆ. ಸೆಪ್ಟೆಂಬರ್ 28 ರಂದು ಭಾರತವು ಪಾಕಿಸ್ತಾನವನ್ನು ಏಷ್ಯಾ ಕಪ್ 2025 ರಲ್ಲಿ ಸೋಲಿಸಿದ ನಂತರ ಪಟಾಕಿಗಳು ಇದ್ದವಾದರೂ, ಹಂಚಿಕೊಳ್ಳಲಾಗುತ್ತಿರುವ ದೃಶ್ಯಗಳು ವಿಭಿನ್ನವಾಗಿವೆ.

ಮೊದಲನೆಯದಾಗಿ, ವರದಿಗಳನ್ನು ಪಡೆಯಲು ನಾವು “ಭಾರತವು ಪಾಕಿಸ್ತಾನವನ್ನು ಏಷ್ಯಾ ಕಪ್ 2025 ಅನ್ನು ಸೋಲಿಸಿದ ನಂತರ ಪಟಾಕಿಗಳು” ಎಂಬ ಪದಗುಚ್ಛದೊಂದಿಗೆ ವೆಬ್ ಹುಡುಕಾಟವನ್ನು ನಡೆಸಿದೆವು.

ವೀಡಿಯೊದ ವಿವಿಧ ಕೀಫ್ರೇಮ್‌ಗಳಿಂದ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ ನಂತರ, ನಾವು ಮೂಲ ಚಿತ್ರಕ್ಕೆ ತಲುಪಿದೆವು. ಉದಾಹರಣೆಗೆ, ಕುವೈಟ್‌ನಲ್ಲಿರುವ US ರಾಯಭಾರ ಕಚೇರಿಯು ಪಟಾಕಿಗಳ ಚಿತ್ರವನ್ನು “ಕುವೈತ್ ದಾಖಲೆ ಸೃಷ್ಟಿಸುವ ಹತ್ತನೇ ಗಲ್ಫ್ ಕಪ್ ಗೆಲ್ಲಬಹುದೇ? ಫಿಂಗರ್ಸ್ ಕ್ರಾಸ್ಡ್!” ಎಂಬ ಶೀರ್ಷಿಕೆಯೊಂದಿಗೆ X ನಲ್ಲಿ ಹಂಚಿಕೊಂಡಿದೆ, ಅದನ್ನು ಇಲ್ಲಿ ನೋಡಬಹುದು.

 

ಡಿಸೆಂಬರ್ 22, 2024 ರಂದು ಟೈಮ್ಸ್ ಕುವೈತ್ ಪ್ರಕಟಿಸಿದ ವರದಿಯೂ ಸಹ ನಮ್ಮ ಕೈ ಸಿಕ್ಕಿತು, ಅಲ್ಲಿ ಅದೇ ಚಿತ್ರವನ್ನು ಬಳಸಲಾಗಿದೆ. ವರದಿಯ ಶೀರ್ಷಿಕೆ ಹೀಗಿದೆ: “ಖಲೀಜಿ ಜೈ಼ನ್ 26 (ಅರೇಬಿಯನ್ ಗಲ್ಫ್ ಕಪ್) ಅದ್ಭುತವಾಗಿ ಆರಂಭವಾಗಿದೆ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಇನ್ಸ್ಟಾಗ್ರಾಮ್ ನಲ್ಲಿ ‘jaberabdulkhaleg’ ಎಂಬ ಬಳಕೆದಾರರು ಡಿಸೆಂಬರ್ 21, 2024 ರಂದು ಅದೇ ಚಿತ್ರವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆ ಹೀಗಿದೆ: “ಜಬೇರ್ ಅಲ್-ಅಹ್ಮದ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಖಲೀಜಿ ಜೈ಼ನ್ 26 ಎಂದು ಕರೆಯಲ್ಪಡುವ 26 ನೇ ಅರೇಬಿಯನ್ ಗಲ್ಫ್ ಕಪ್ ಉದ್ಘಾಟನಾ ಸಮಯದಲ್ಲಿ ಪಟಾಕಿ, 21 – ಡಿಸೆಂಬರ್ -2024” ಪೋಸ್ಟ್ ಅನ್ನು ಇಲ್ಲಿ ನೋಡಿ

 

View this post on Instagram

 

A post shared by Jaberabdulkhaleq (@jaberabdulkhaleg)

ನಮಗೆ ಯಾವುದೇ ಅಧಿಕೃತ ಮೂಲಗಳಿಂದ ದೃಶ್ಯಗಳು ದೊರಕಿಲ್ಲ, ಆದರೆ ಅಧಿಕೃತ ಪಟಾಕಿ ಪ್ರದರ್ಶನವನ್ನು ANI ಹಂಚಿಕೊಂಡಿದೆ –

 

ಹೀಗಾಗಿ, ಏಷ್ಯಾ ಕಪ್ 2025 ರ ಫೈನಲ್‌ನಲ್ಲಿ ಭಾರತ ವಿರುದ್ಧ ಪಾಕಿಸ್ತಾನದ ಪಂದ್ಯದ ನಂತರ ಪಟಾಕಿ ಸಿಡಿಸಿರುವುದಾಗಿ ಹೇಳಲಾಗಿರುವ ದೃಶ್ಯಗಳು ಸುಳ್ಳು


ಇದನ್ನೂ ಓದಿ:

ಭಾರತದ ರಾಷ್ಟ್ರಗೀತೆಯನ್ನು ಕೇಳಿದ ನಂತರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡೆಯುವುದನ್ನು ನಿಲ್ಲಿಸಿದ್ದರೇ? ಸತ್ಯ ಪರಿಶೀಲನೆ

ಟ್ರಂಪ್ ರವರ ಆರೋಗ್ಯ ಗಂಭೀರವಾಗಿದೆಯೇ, ಮತ್ತು ಪ್ರಸ್ತುತ ಕೋಮಾದಲ್ಲಿದ್ದಾರೆಯೇ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*