ಹೇಳಿಕೆ/Claim: ವಿಶ್ವದ ಬಹುಪಾಲು ಜನರು ಲಿಯೋನೆಲ್ ಮೆಸ್ಸಿಗಿಂತ ಕ್ರಿಸ್ಟಿಯಾನೊ ರೊನಾಲ್ಡೊ ರವರನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ಗೂಗಲ್ ದೃಢಪಡಿಸಿದೆ.
ಕಡೆನುಡಿ/Conclusion:: ದಾರಿತಪ್ಪಿಸುವಂತಹ ಹೇಳಿಕೆ. ಗೂಗಲ್ ನಿಂದ ಯಾವುದೇ ಅಧಿಕೃತ “ಸಮೀಕ್ಷೆ” ನಡೆಸಲಾಗಿಲ್ಲ. ಉಲ್ಲೇಖಿಸಲಾದ ಮಾಹಿತಿಯು ಗೂಗಲ್ ಟ್ರೆಂಡ್ಸ್ ನಿಂದ ಲಭಿಸಿದ್ದು, ಇದು ಹೆಚ್ಚಿನ ಸರ್ಚ್ ಪ್ರಮಾಣ/ಆಸಕ್ತಿಯನ್ನು ತೋರಿಸುತ್ತದೆಯಷ್ಟೇ, ಇದು ಜನರ ಆದ್ಯತೆಯಾಗಬೇಕೆಂದಿಲ್ಲ.
ರೇಟಿಂಗ್/Rating: ದಾರಿತಪ್ಪಿಸುವಂತಹ ಹೇಳಿಕೆ —
**********************************************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
****************************************************************
ಜುಲೈ 22, 2025ರಂದು ‘CristianoXtra’ ಎಂಬ X ಬಳಕೆದಾರರು ಮಾಡಿದ ಇತ್ತೀಚಿನ X ಪೋಸ್ಟ್‌ನಲ್ಲಿ “ವಿಶ್ವದ ಬಹುಪಾಲು ಜನರು ಲಿಯೋನೆಲ್ ಮೆಸ್ಸಿಗಿಂತ ಕ್ರಿಸ್ಟಿಯಾನೊ ರೊನಾಲ್ಡೊ ರನ್ನು ಇಷ್ಟಪಡುತ್ತಾರೆ ಎಂದು ಗೂಗಲ್ ದೃಢಪಡಿಸುತ್ತದೆ” ಎಂದು ಪ್ರತಿಪಾದಿಸಿದ್ದಾರೆ. ಈ ಪೋಸ್ಟ್ ಎಲ್ಲಾ ಫುಟ್‌ಬಾಲ್ ಅಭಿಮಾನಿಗಳನ್ನು ಸೆಳೆಯುತ್ತಾ 2.7 ಮಿಲಿಯಕ್ಕಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
ಈ ಹೇಳಿಕೆಯನ್ನು ಬೆಂಬಲಿಸುವಂತೆ ವಿಶ್ವ ನಕ್ಷೆಯಲ್ಲಿ ದೇಶಗಳನ್ನು ನೀಲಿ (ರೊನಾಲ್ಡೊ) ಮತ್ತು ಕೆಂಪು (ಮೆಸ್ಸಿ) ಬಣ್ಣಗಳಲ್ಲಿ ಬಣ್ಣಿಸಲಾಗಿತ್ತು. ಈ ನಕ್ಷೆಯಲ್ಲಿ ನೀಲಿ ಬಣ್ಣವು ಹೆಚ್ಚಿನ ಪ್ರದೇಶಗಳಲ್ಲಿ ಪ್ರಾಬಲ್ಯತೆ ಹೊಂದಿದ್ದು ರೊನಾಲ್ಡೊಗೆ ಜಾಗತಿಕ ಆದ್ಯತೆ ದೊರಕಿರುವುದೆಂದು ಸೂಚಿಸುತ್ತದೆ, ಆದರೆ ಕೆಂಪು (ಮೆಸ್ಸಿ) ದಕ್ಷಿಣ ಅಮೆರಿಕಾ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಕೇಂದ್ರೀಕೃತವಾಗಿದೆ.
ಪೋಸ್ಟ್‌ಗೆ ಲಿಂಕ್ ಇಲ್ಲಿದೆ.
🚨BREAKING:
Google confirms that the majority of people in the world prefer Cristiano Ronaldo over Lionel Messi. pic.twitter.com/i5iVR7oCJM
— CristianoXtra (@CristianoXtra_) July 22, 2025
ಸತ್ಯ ಪರಿಶೀಲನೆ:
ಈ ಪೋಸ್ಟ್ ರೊನಾಲ್ಡೊ ಮತ್ತು ಮೆಸ್ಸಿ ಅಭಿಮಾನಿಗಳಲ್ಲಿ ಬೆಂಬಲ ಮತ್ತು ನಿರಾಶೆ ಎರಡನ್ನೂ ಸೃಷ್ಟಿಸಿದ್ದರೂ, ಅದು ನಿಖರವಾಗಿಲ್ಲ. 2025ರಲ್ಲಿ ಸರ್ಚ್ ಇಂಜಿನ್ ನಡೆಸಿದ ಯಾವುದೇ ಜಾಗತಿಕ ಆದ್ಯತೆಯ ಸಮೀಕ್ಷೆಯನ್ನು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ಪುರಾವೆಗಳು ಅಥವಾ ಗೂಗಲ್ ಮಾಹಿತಿ ಡಿಜಿಟೈ ಇಂಡಿಯಾಗೆ ದೊರೆತಿಲ್ಲ.
ನಂತರ ನಾವು ಲಿಯೋನೆಲ್ ಮೆಸ್ಸಿಯನ್ನು ಕ್ರಿಸ್ಟಿಯಾನೊ ರೊನಾಲ್ಡೊಗೆ ಹೋಲಿಸುವ ಒಂದು ಗೂಗಲ್ ಟ್ರೆಂಡ್ಸ್ ಹುಡುಕಾಟವನ್ನು ಸ್ವಯಂ ನಡೆಸಲು ನಿರ್ಧರಿಸಿದೆವು. ಗೂಗಲ್ ಟ್ರೆಂಡ್ಸ್ ನಲ್ಲಿ ಆಯ್ಕೆ ಮಾಡಿದ ವರ್ಗ- ‘ವಿಶ್ವ’ ಮತ್ತು ದಿನಾಂಕ ಜುಲೈ 23, 2025 ಆಗಿತ್ತು. ಫಲಿತಾಂಶ ಇಲ್ಲಿದೆ:
ಮೇಲಿನ ಚಿತ್ರದಲ್ಲಿ ತೋರಿಸಿರುವಂತೆ, ಲಿಯೋನೆಲ್ ಮೆಸ್ಸಿಗಿಂತ ಕ್ರಿಸ್ಟಿಯಾನೊ ರೊನಾಲ್ಡೊ ಸಂಬಂಧಿಸಿದಂತೆ ಹೆಚ್ಚಿನ ಹುಡುಕಾಟಗಳು ನಡೆದಿವೆ. ಆದರೆ, ಕೆಂಪು ಬಣ್ಣದಲ್ಲಿ ಗುರುತಿಸಲಾದ ಎಲ್ಲಾ ದೇಶಗಳು ರೊನಾಲ್ಡೊ ಬೆಂಬಲಿಗರು ಎಂದರ್ಥವಲ್ಲ. ಹುಡುಕಾಟದ ಪ್ರಮಾಣವು ನಿಜವಾದ ಅಭಿಮಾನಿಗಳ ಬೆಂಬಲಕ್ಕಿಂತ ಹೆಚ್ಚಾಗಿ ಕುತೂಹಲ ಅಥವಾ ಯಾದೃಚ್ಛಿಕ ಹುಡುಕಾಟಗಳನ್ನು ಸೂಚಿಸುತ್ತದೆಯಷ್ಟೇ.
ಇದನ್ನು ಸಾಬೀತುಪಡಿಸಲು, ನಾವು 1 ಡಿಸೆಂಬರ್ 2022 ರಿಂದ 31 ಡಿಸೆಂಬರ್ 2022 ರವರೆಗಿನ ಗೂಗಲ್ ಟ್ರೆಂಡ್ಸ್ ಫಲಿತಾಂಶಗಳನ್ನು ನೋಡಿದೆವು. ಲಿಯೋನೆಲ್ ಮೆಸ್ಸಿ 2022 ರ ವಿಶ್ವಕಪ್‌ನಲ್ಲಿ ಅರ್ಜೆಂಟೀನಾವನ್ನು ಗೆಲುವಿನತ್ತ ಮುನ್ನಡೆಸಿ 18 ಡಿಸೆಂಬರ್ 2022 ರಂದು ಟ್ರೋಫಿಯನ್ನು ಗೆದ್ದದ್ದನ್ನು ಪರಿಗಣಿಸಿ, ಈ ನಿರ್ದಿಷ್ಟ ದಿನಾಂಕಗಳನ್ನು ಆಯ್ಕೆ ಮಾಡಲಾಗಿತ್ತು. ಫಲಿತಾಂಶಗಳು ಇಲ್ಲಿವೆ. ಇದರಲ್ಲಿ ನಕ್ಷೆಯಲ್ಲಿ ಮೆಸ್ಸಿ ನೀಲಿ ಬಣ್ಣ ಪ್ರದೇಶಗಳೊಂದಿಗೆ ಪ್ರಾಬಲ್ಯ ಸಾಧಿಸಿದ್ದರೆ, ರೊನಾಲ್ಡೊ ಬೆಂಬಲಿಗರನ್ನು ಕೆಂಪು ಬಣ್ಣದಲ್ಲಿ ತೋರಿಸಲಾಗಿದೆ:
ಹೀಗಾಗಿ, ಗೂಗಲ್ ಟ್ರೆಂಡ್ಸ್ ನಿರ್ದಿಷ್ಟ ಆಟಗಾರರ ಅಭಿಮಾನಿಗಳ ಆದ್ಯತೆಯನ್ನು ಪ್ರತಿಬಿಂಬಿಸುವುದಿಲ್ಲ ಎಂದು ನಿರ್ಧರಿಸಬಹುದು. ಈ ಅಂಶವು ರೊನಾಲ್ಡೊಗೆ “ಬಹುಮತ” ಆದ್ಯತೆಯನ್ನು ಸೂಚಿಸುವ ಮೂಲ X ಪೋಸ್ಟ್‌ನ ಹೇಳಿಕೆಯನ್ನು ಅಮಾನ್ಯಗೊಳಿಸುತ್ತದೆ.
ಮುಂದೆ, ಒಬ್ಬ ವಿಜೇತರನ್ನು ಕಂಡುಹಿಡಿಯಲು ನಾವು 2025ರಲ್ಲಿ ಲಿಯೋನೆಲ್ ಮೆಸ್ಸಿ ವಿರುದ್ಧ ಕ್ರಿಸ್ಟಿಯಾನೊ ರೊನಾಲ್ಡೊ ಜನಪ್ರಿಯತೆಯನ್ನು ಹುಡುಕಿದೆವು. ಅದಾಗ್ಯೂ, ಒಬ್ಬ ವಿಜೇತರನ್ನು ನೀಡುವ ಅಥವಾ ಪ್ರಪಂಚದ ಬಹುಪಾಲು ಜನರು ಒಬ್ಬರಿಗಿಂತ ಮತ್ತೊಬ್ಬರಿಗೆ ಹೆಚ್ಚು ಆದ್ಯತೆ ನೀಡುತ್ತಾರೆಂದು ಹೇಳುವ ಯಾವುದೇ ಪೂರ್ವಾಗ್ರರಹಿತ ಅಥವಾ ನಿಷ್ಪಕ್ಷಪಾತ ಲೇಖನ ನಮಗೆ ಕಂಡುಬಂದಿಲ್ಲ.
“2025ರಲ್ಲಿ GOAT ಚರ್ಚೆಯನ್ನು ಗೆಲ್ಲುವವರು ಯಾರು? ಕ್ರಿಸ್ಟಿಯಾನೊ ರೊನಾಲ್ಡೊ, ಲಿಯೋನೆಲ್ ಮೆಸ್ಸಿ, ಜಾನ್ ಸೆನಾ ಅಥವಾ ಲೆಬ್ರಾನ್ ಜೇಮ್ಸ್” ಎಂಬ ಶೀರ್ಷಿಕೆಯ ಟೈಮ್ಸ್ ಆಫ್ ಇಂಡಿಯಾದ ವರದಿಯ ತುಣುಕು ಇಲ್ಲಿದೆ.
ಮತ್ತೊಮ್ಮೆ, ನಿಲುವು ಏಕಸಮವಾಗಿದೆ ಮತ್ತು ವಿಶ್ವಾಸಾರ್ಹ ಪುರಾವೆಗಳೊಂದಿಗೆ ಬಹುಮತದ ಆದ್ಯತೆಯ ಬಗ್ಗೆ ಯಾವುದೇ ಹೇಳಿಕೆಗಳನ್ನು ಮಾಡಲಾಗಿಲ್ಲ. ಆದ್ದರಿಂದ, ಹೇಳಿಕೆ ದಾರಿತಪ್ಪಿಸುವಂಥದ್ದು.