ಹೇಳಿಕೆ/Claim: ಖರ್ಗೆಯವರನ್ನು ರಾಹುಲ್ ಗಾಂಧಿಯವರು ಅವಮಾನಿಸಿದರೆಂದು ವೀಡಿಯೊ ತೋರಿಸುತ್ತದೆ.
ಕಡೆನುಡಿ/Conclusion: ತಪ್ಪುದಾರಿಗೆಳೆಯುವ ವೀಡಿಯೊ. ಖರ್ಗೆಯವರು ಕುರ್ಚಿಯಿಂದ ಎದ್ದು ಮೈಕ್ ಬಳಿ ಹೋಗಲು ರಾಹುಲ್ ಗಾಂಧಿಯವರು ಸಹಾಯ ಮಾಡುವುದು ಕಂಡುಬರುತ್ತದೆ.
ರೇಟಿಂಗ್/Rating: ತಪ್ಪುದಾರಿಗೆಳೆಯುವ ವೀಡಿಯೊ–
************************************************************************
ಸತ್ಯ ಪರಿಶೀಲನೆ ವಿವರಗಳು
ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಏಳುತ್ತಿರುವಾಗ ರಾಹುಲ್ ಗಾಂಧಿಯವರು ಕುರ್ಚಿಯನ್ನು ಸರಿಮಾಡಿಕೊಳ್ಳುತ್ತಿರುವುದನ್ನು ತೋರಿಸುವ ವೀಡಿಯೊ “ರಾಹುಲ್ ಗಾಂಧಿ ಖರ್ಗೆಯವರನ್ನು ಅವಮಾನಿಸಿದರು” ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
கார்கே அவமதிப்பு
நாடு முழுவதும் அதிர்வலை
டெல்லி தேர்தல் காங்கிரஸ்
சுவாஹா😂 pic.twitter.com/ErzjTWJPoc— K.Ashok adv (@ashok777_kalam) January 17, 2025
ಹೇಳಿಕೆಯನ್ನು ತಮಿಳಿನಲ್ಲಿ X ನಲ್ಲಿ ಪೋಸ್ಟ್ ಮಾಡಲಾಗಿದ್ದು, ಅದರ ಆಂಗ್ಲ ಭಾಷಾನುವಾದ ಹೀಗಿದೆ: “ಖರ್ಗೆ ಅವಮಾನವು ದೇಶದಾದ್ಯಂತ ನಡುಕ ಹುಟ್ಟಿಸಿದೆ ದೆಹಲಿ ಚುನಾವಣೆ ಕಾಂಗ್ರೆಸ್ ಸುವಾಹಾ”. ಅದೇ ಹೇಳಿಕೆಯನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಹಂಚಿಕೊಳ್ಳಲಾಗಿದ್ದು, ವಿವಿಧ ಕಾಮೆಂಟ್ಗಳು ಕೆಳಗಿನಂತಿವೆ:
ಒಬ್ಬ ಬಳಕೆದಾರರು: “”ಅವಮಾನ..!! ದೇಶದಾದ್ಯಂತ ನಡುಕ” ಎಂದು ಬರೆದರೆ, ಮತ್ತೊಬ್ಬರು: “ಖರ್ಗೆ ಅವಮಾನ… ದೇಶದಾದ್ಯಂತ ನಡುಕ… ದೆಹಲಿ ಚುನಾವಣಾ ಕಾಂಗ್ರೆಸ್ ಸಭೆಯಲ್ಲಿ ಅವಮಾನ… ಡಿಎಂಕೆಯ ಪತ್ರ ಆರ್ ಏಸ್’ಎಸ್ ಹೇಳಿಕೆಯಂತೆ… ಕಾಂಗ್ರೆಸ್ ಪೇಪರ್ ಸಾರ್!!!? ಪಟ್ಟಿಯ ಜನರನ್ನು ನಾಯಕತ್ವದ ಸ್ಥಾನಗಳಲ್ಲಿ ಇರಿಸಿದರೆ ಸಾಲದು; ಅವರಿಗೆ ಗೌರವವನ್ನೂ ನೀಡಬೇಕು.” ಎಂದರು.
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಇದರ ಸತ್ಯ-ಪರಿಶೀಲನೆಗಾಗಿ ವಿನಂತಿಯನ್ನು ಸ್ವೀಕರಿಸಿದಾಗ, ತಂಡವು ಮೂಲ ವೀಡಿಯೊ ಮತ್ತು ಸಂದರ್ಭವನ್ನು ಅನ್ವೇಷಿಸಿತು. ಕೆಳಗೆ ಕಾಣುವಂತೆ ಕಾಂಗ್ರೆಸ್ ಪಕ್ಷದ ಯೂಟ್ಯೂಬ್ ವಾಹಿನಿಯಲ್ಲಿ ಮೂಲ ವೀಡಿಯೊ ಲಭ್ಯವಿದೆ:
ಇದು ಜನವರಿ 15, 2025 ರಂದು ಕಾಂಗ್ರೆಸ್ ನಾಯಕರ ಮೂಲಕ ದೆಹಲಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಹೊಸ ಕಟ್ಟಡವಾದ ಇಂದಿರಾ ಭವನದ ಉದ್ಘಾಟನೆಯ ಸಂದರ್ಭ.
ರಾಹುಲ್ ಗಾಂಧಿಯವರ ಭಾಷಣದ ನಂತರ, ದೆಹಲಿ ಕಾಂಗ್ರೆಸ್ ನಾಯಕರಾದ ಅಜಯ್ ಮಕೆನ್ ರವರು ಕಾಂಗ್ರೆಸ್ ಅಧ್ಯಕ್ಷರಾಗಿರುವ ಖರ್ಗೆಯವರನ್ನು ಮಾತನಾಡುವಂತೆ ಒತ್ತಾಯಿಸಿದರು, ಆಗಷ್ಟೇ ಭಾಷಣ ಮುಗಿಸಿದ್ದ ರಾಹುಲ್ ಗಾಂಧಿಯವರು, ಖರ್ಗೆಯವರು ಎದ್ದೇಳಲು ಸಹಾಯ ಮಾಡುವ ಸಲುವಾಗಿ ತಮ್ಮ ಕುರ್ಚಿಯನ್ನು ಹಿಂದಕ್ಕೆ ಎಳೆದುಕೊಂಡು (46:45 ನಿಮಿಷಗಳ ಸಮಯಮುದ್ರೆ) ಖರ್ಗೆಯವರು ಸಭೆಯನ್ನು ಉದ್ದೇಶಿಸಿ ಮಾತನಾಡಲು ಸುಲಭವಾಗಿ ಮೈಕ್ ಕಡೆಗೆ ಚಲಿಸಲು ಅನುವು ಮಾಡಿಕೊಟ್ಟರು. ಹಾಗಾಗಿ ಆತ ಖರ್ಗೆಯವರನ್ನು ಅವಮಾನಿಸಿದರು ಎಂಬ ಮಾತು ಸುಳ್ಳು.
ಇದನ್ನೂ ಓದಿ:
ಈ ಚಿತ್ರವು ರಾಜಸ್ಥಾನದ 5000 ವರ್ಷ ಹಳೆಯ ದೇವಾಲಯವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ
ಎನ್ಡಿಎ ಸರ್ಕಾರ ರಚನೆಯ ಮುನ್ನ ನಿತೀಶ್ ಕುಮಾರ್ ಇಂಡಿಯಾ ಬ್ಲಾಕ್ ನಾಯಕರನ್ನು ಭೇಟಿ ಮಾಡಿದರೇ? ಸತ್ಯ ಪರಿಶೀಲನೆ