Don't Miss

ಕೈಕೋಳ ಹಾಕಿದ ಭಾರತೀಯ ವಲಸಿಗರನ್ನು ಗ್ವಾಟೆಮಾಲಾಗೆ ಗಡೀಪಾರು ಮಾಡಲಾಗುತ್ತಿರುವುದನ್ನು ಚಿತ್ರ ತೋರಿಸುತ್ತದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಚಿತ್ರವು ಭಾರತೀಯರನ್ನು ಯುಎಸ್‌ನಿಂದ ಗ್ವಾಟೆಮಾಲಾಗೆ ಹೇಗೆ ಗಡೀಪಾರು ಮಾಡಲಾಗುತ್ತದೆ ಎಂಬುದನ್ನು ತೋರಿಸುತ್ತದೆ.

ಕಡೆನುಡಿ/Conclusion: ತಪ್ಪು ನಿರೂಪಣೆ. ಚಿತ್ರದಲ್ಲಿ ಭಾರತೀಯರನ್ನು ತೋರಿಸಲಾಗಿಲ್ಲ, ಅದರಲ್ಲಿ ಯುಎಸ್‌ಎ ಇಂದ ಗಡೀಪಾರು ಮಾಡಲಾಗುತ್ತಿರುವ ಇತರ ಅಕ್ರಮ ವಲಸಿಗರನ್ನು ತೋರಿಸುತ್ತದೆ.

ರೇಟಿಂಗ್/Rating: : ತಪ್ಪು ನಿರೂಪಣೆ —

*********************************************************

ಕೈಕೋಳ ಹಾಕಿ ಸರಪಳಿಯಿಂದ ಬಂಧಿಸಿರುವ ಹಲವಾರು ಜನರನ್ನು ಯುದ್ಧ ವಿಮಾನದೊಳಗೆ ಕುಳ್ಳಿರಿಸಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ, ಇದರೊಂದಿಗೆ ಭಾರತೀಯರನ್ನು ಅಮೆರಿಕದ ಅಧಿಕಾರಿಗಳು ಗ್ವಾಟೆಮಾಲಾಗೆ ಗಡೀಪಾರು ಮಾಡುತ್ತಿರುವ ದ್ರಶ್ಯ ಎಂಬ ಹೇಳಿಕೆಯನ್ನು ಸೇರಿಸಲಾಗಿದೆ.

 

ಫೆಬ್ರವರಿ 4, 2025 ರಂದು ಮಂಗಳವಾರ ಟೆಕ್ಸಸ್‌ನ ಸ್ಯಾನ್ ಆಂಟೋನಿಯೊದಿಂದ ಹೊರಟು ಅಮೃತಸರದಲ್ಲಿ ಬಂದಿಳಿದ ಭಾರತೀಯ ಪ್ರಜೆಗಳನ್ನು ಯುಎಸ್ ಮಿಲಿಟರಿ ಜೆಟ್ ಸಿ -17 ಹೊತ್ತುತಂದ ಸನ್ನಿವೇಶದಿಂದಾಗಿ ಈ ಸಂದರ್ಭವು ಸಾಕಷ್ಟು ಪರಿಚಿತವಾಗಿದೆ.

FACT-CHECK

ಇತ್ತೀಚೆಗೆ ಅಮೆರಿಕವು ಮಿಲಿಟರಿ ವಿಮಾನದಲ್ಲಿ ಕೈಕೋಳ ಮತ್ತು ಸರಪಳಿಗಳೊಂದಿಗೆ 205 ಭಾರತೀಯರನ್ನು ಗಡೀಪಾರು ಮಾಡಿದೆ ಎಂಬುದು ನಿಜವಾದರೂ, ಹಂಚಿಕೊಳ್ಳಲಾಗುತ್ತಿರುವ ಚಿತ್ರವು ಮೂಲ ಚಿತ್ರವಲ್ಲ, ಬದಲಾಗಿ ಇದು ಅಕ್ರಮ ವಲಸಿಗರನ್ನು ಮೆಕ್ಸಿಕೋದಲ್ಲಿರುವ ಗ್ವಾಟೆಮಾಲಾಗೆ ಗಡೀಪಾರು ಮಾಡಲಾಗುತ್ತಿರುವ ಚಿತ್ರಕ್ಕೆ ಸಂಬಂಧಿಸಿದೆ.

ಅಸೋಸಿಯೇಟೆಡ್ ಪ್ರೆಸ್ (AP)ಯದ್ದೆಂದು ಹೇಳಲಾಗಿರುವ ಈ ಚಿತ್ರವನ್ನು ಈ ಸುದ್ದಿ ಸಂಸ್ಥೆಯು ಜನವರಿ 31, 2025 ರಂದು ಪೋಸ್ಟ್ ಮಾಡಿದೆ ಮತ್ತದರ ಶೀರ್ಷಿಕೆ ಹೀಗಿದೆ: “ಮುಖವಾಡಗಳು ಮತ್ತು ಕೈ-ಕಾಲುಗಳಿಗೆ ಸಂಕೋಲೆಗಳನ್ನು ಧರಿಸಿದ ವಲಸಿಗರು ಗುರುವಾರ, ಜನವರಿ 30, 2025 ರಂದು ಟೆಕ್ಸಸ್‌ನ ಎಲ್ ಪಾಸೊದಲ್ಲಿರುವ ಫೋರ್ಟ್ ಬ್ಲಿಸ್‌ನಲ್ಲಿ ಮಿಲಿಟರಿ ವಿಮಾನದಲ್ಲಿ ಕುಳಿತು ಗ್ವಾಟೆಮಾಲಾಗೆ ಗಡೀಪಾರಾಗುವುದನ್ನು ಕಾಯುತ್ತಿರುವುದು. (AP ಫೋಟೋ/ಕ್ರಿಶ್ಚಿಯನ್ ಚವೇಜ್)”.

ಇದರಲ್ಲಿ ಭಾರತೀಯರ ಬಗ್ಗೆ ಏನನ್ನೂ ಉಲ್ಲೇಖಿಸಲಾಗಿಲ್ಲ. ಆದ್ದರಿಂದ, ಭಾರತೀಯರನ್ನು ಗ್ವಾಟೆಮಾಲಾಕ್ಕೆ ಗಡೀಪಾರು ಮಾಡಲಾಗುತ್ತಿದೆ ಎಂದು ತಪ್ಪು ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ.

ವಾಸ್ತವವಾಗಿ, ಅಮೆರಿಕದ ಗಡಿ ಗಸ್ತು ಪಡೆಯು ಹಂಚಿಕೊಂಡಿರುವ ಭಾರತದ ಅಮೃತಸರ ನಗರಕ್ಕೆ ಗಡೀಪಾರು ಮಾಡಲ್ಪಟ್ಟ ಭಾರತೀಯರ ಕೆಲವು ಮೂಲ ಚಿತ್ರಗಳನ್ನು ಇಲ್ಲಿ ನೋಡಬಹುದು.

ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ರವರು ಫೆಬ್ರವರಿ 6, 2025 ರಂದು ಸಂಸತ್ತಿನಲ್ಲಿ ಇದನ್ನು ದೃಢೀಕರಿಸಿದ್ದು, ಇದು 2012 ರಿಂದ ಅನುಸರಿಸುತ್ತಿರುವ ಪ್ರಮಾಣಿತ ಕಾರ್ಯವಿಧಾನದ ಭಾಗವಾಗಿದೆ ಎಂದು ವಿವರಿಸಿದರು. “ಸರ್, ಅಮೆರಿಕದಿಂದ ಗಡೀಪಾರು ಪ್ರಕ್ರಿಯೆಯನ್ನು ಇಮಿಗ್ರೇಶನ್ಸ್ ಏಂಡ್ ಕಸ್ಟಮ್ಸ್ ಎನ್ಫೋರ್ಸ್ಮೆಂಟ್ (ICE) ಅಧಿಕಾರಿಗಳು ಆಯೋಜಿಸುತ್ತಾರೆ ಮತ್ತು ಕಾರ್ಯಗತಗೊಳಿಸುತ್ತಾರೆ. ICE ಬಳಸುವ ವಿಮಾನಗಳ ಮೂಲಕ ಗಡೀಪಾರು ಮಾಡುವ ಪ್ರಮಾಣಿತ ಕಾರ್ಯಾಚರಣಾ ವಿಧಾನವು 2012 ರಿಂದ ಜಾರಿಯಲ್ಲಿದ್ದು… ನಿರ್ಬಂಧಕ ಸಾಮಗ್ರಿಗಳ ಬಳಕೆಯನ್ನು ಸಮ್ಮತಿಸುತ್ತದೆ. ಆದರೆ, ಮಹಿಳೆಯರು ಮತ್ತು ಮಕ್ಕಳನ್ನು ನಿರ್ಬಂಧಿಸಲಾಗಿಲ್ಲ ಎಂದು ICE ನಮಗೆ ತಿಳಿಸಿದೆ.”

ಇದನ್ನೂ ಓದಿ:

EAM ಜೈಶಂಕರ್ ಅವರನ್ನು ಟ್ರಂಪ್ ರವರ ಉದ್ಘಾಟನಾ ಸಮಾರಂಭದಿಂದ ಹೋಗಲು ಹೇಳಲಾಯಿತೇ? ಸತ್ಯ-ಪರಿಶೀಲನೆ

ಯುಎಸ್, ಕೆನಡಾ 1.2 ಮಿಲಿಯ ಅಕ್ರಮ ಭಾರತೀಯ ವಲಸಿಗರನ್ನು ಗಡೀಪಾರು ಮಾಡಲಾರಂಭಿಸಿವೆಯೇ? ಸತ್ಯ-ಪರಿಶೀಲನೆ

 

Leave a Reply

Your email address will not be published. Required fields are marked *

*