ಹೇಳಿಕೆ/Claim: ಭಾರತದ ವಿದೇಶಾಂಗ ಸಚಿವರಾದ ಎಸ್. ಜೈಶಂಕರ್ ಅವರಿಗೆ ಟ್ರಂಪ್ ಅವರ ಉದ್ಘಾಟನಾ ಸಮಾರಂಭದಿಂದ ಹೊರಹೋಗುವಂತೆ ಹೇಳಲಾಯಿತು ಎಂದು ವೈರಲ್ ವೀಡಿಯೊ ಹೇಳುತ್ತದೆ.
ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಹೇಳಿಕೆ. ಮಾಧ್ಯಮದ ಒಬ್ಬ ಪ್ರತಿನಿಧಿಯೊಂದಿಗೆ ಮಾತನಾಡುತ್ತಿದ್ದ ಸಮಾರಂಭದ ಅಧಿಕಾರಿಯ ಕೃತ್ಯಗಳನ್ನು ವಿಷಯವಸ್ತುವಾದ ವೀಡಿಯೊದಲ್ಲಿ ತಪ್ಪಾಗಿ ಪ್ರತಿನಿಧಿಸಲಾಗಿದೆ ಮತ್ತು ಆ ಅಧಿಕಾರಿ ಜೈಶಂಕರ್ ಅವರೊಂದಿಗೆ ಮಾತನಾಡಲೇ ಇಲ್ಲ.
ರೇಟಿಂಗ್/Rating: ತಪ್ಪುದಾರಿಗೆಳೆಯುವ ಹೇಳಿಕೆ. —
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
************************************************************************
2025ರ ಜನವರಿ 20 ರಂದು 47 ನೇ ಯುಎಸ್ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ರವರು ಅಧಿಕಾರ ವಹಿಸಿಕೊಂಡ ಕಾರ್ಯಕ್ರಮವನ್ನು ಜಾಗತಿಕವಾಗಿ ಪ್ರಸಾರ ಮಾಡಲಾಗಿತ್ತು. ಈ ಸಮಾರಂಭದಿಂದ ಹೊರಟುಹೋಗುವಂತೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾದ ಎಸ್. ಜೈಶಂಕರ್ ರವರಿಗೆ ಹೇಳಲಾಯಿತು ಎನ್ನುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಪ್ರಮಾಣ ವಚನ ಸ್ವೀಕಾರದ ವೇಳೆ ಮುಂದಿನ ಸಾಲಿನಲ್ಲಿ ನಿಂತಿದ್ದ, ಜೈಶಂಕರ್ ಬಳಿಗಿದ್ದ ವ್ಯಕ್ತಿಯೊಬ್ಬರೊಂದಿಗೆ ಅಧಿಕಾರಿಯೊಬ್ಬರು ಮಾತನಾಡುತ್ತಿರುವುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ.
यह वाकई शर्मनाक है कि अधिकारियों ने विदेश मंत्री एस. जयशंकर को शो से हटाने की मांग की। एक भारतीय होने के नाते, मैं बहुत दुखी हूं और इस कृत्य की कड़ी निंदा करता हूं। भारत सरकार को इस पर ध्यान देना चाहिए और उचित कार्रवाई करनी चाहिए। pic.twitter.com/8eCd6MvUjp
— Er Manish Rajak (@ManishCEO2) January 21, 2025
ಹಿಂದಿಯಲ್ಲಿನ ಶೀರ್ಷಿಕೆಯು ಹೀಗಿದೆ: “यह वाकई शर्मनाक है कि अधिकारियों ने विदेश मंत्री एस. जयशंकर को शो से हटाने की मांग की। एक भारतीय होने के नाते, मैं बहुत दुखी हूं और इस कृत्य की कड़ी निंदा करता हूं। भारत सरकार को इस पर ध्यान देना चाहिए और उचित कार्रवाई करनी चाहिए। {ಅದರ ಅನುವಾದ ಹೀಗಿದೆ: “ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಕಾರ್ಯಕ್ರಮದಿಂದ ತೆಗೆದುಹಾಕುವಂತೆ ಅಧಿಕಾರಿಗಳು ಕೇಳಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಒಬ್ಬ ಭಾರತೀಯನಾಗಿ, ನಾನು ತೀವ್ರವಾಗಿ ದುಃಖಿತನಾಗಿದ್ದೇನೆ ಮತ್ತು ಈ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ. ಭಾರತ ಸರ್ಕಾರವು ಇದನ್ನು ಗಮನಕ್ಕೆ ತೆಗೆದುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು.”}
ಈ ವೀಡಿಯೊವನ್ನು ಇಲ್ಲಿ ಮತ್ತು ಇಲ್ಲಿ ಹಂಚಿಕೊಳ್ಳಲಾಗಿದೆ. ಈ ಎಲ್ಲಾ ಹೇಳಿಕೆಗಳು ಈ ಘಟನೆಯನ್ನು ಕೆಳಗಿನಂತೆ ವಿವರಿಸಿವೆ: “ಎಂತಹ ಅವಮಾನ! ಎಸ್. ಜೈಶಂಕರ್ ಅವರನ್ನು ಶೋದಿಂದ ಹೋಗುವಂತೆ ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ, ”ಎಂದು ಒಬ್ಬ X ಬಳಕೆದಾರರು ಬರೆದಿದ್ದಾರೆ.
ಮತ್ತೊಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ: “ಯುಎಸ್ ಅಧಿಕಾರಿಗಳು ಮತ್ತು ಕ್ಯಾಬಿನೆಟ್ ಸದಸ್ಯರು EAM ಎಸ್ ಜೈಶಂಕರ್ ಅವರನ್ನು ಶ್ವೇತಭವನದಲ್ಲಿ ನಡೆದ ಉದ್ಘಾಟನಾ ಸಮಾರಂಭದಿಂದ ಹೊರಹಾಕುವಂತೆ ಒತ್ತಾಯಿಸಿದರು ಏಕೆಂದರೆ ಕೊನೆಯ ಸಾಲಿನಲ್ಲಿ ನಿಲ್ಲುವಂತೆ ಹೇಳಿದಾಗ ಆತ ನಾಚಿಕೆಯಿಲ್ಲದೆ ನಿರಾಕರಿಸಿದರು. ವಿಶ್ವದಾದ್ಯಂತ ಮೋದಿ ಮತ್ತು ಸಹೋದ್ಯೋಗಿಗಳಿಗೆ ಗೌರವವೇ ಉಳಿದಿಲ್ಲ.”
ಸತ್ಯ-ಪರಿಶೀಲನೆ
ಜಾಯಿಂಟ್ ಕಾಂಗ್ರೆಷನಲ್ ಕಮಿಟಿ ಆನ್ ಇನಾಗ್ಯುರಲ್ ಸೆರೆಮೊನೀಸ್ (JCCIC) ನ ವಾಟರ್ಮಾರ್ಕ್ ತೋರಿಸುವ ವೀಡಿಯೊ ಅದನ್ನು ಅಧಿಕೃತಗೊಳಿಸುತ್ತದೆ ಮತ್ತು ದೃಶ್ಯಾವಳಿಗಳು ಕಾರ್ಯಕ್ರಮದ ಮೂಲ ಲೈವ್ ಸ್ಟ್ರೀಮ್ಗೆ ಹೊಂದಿಕೆಯಾಗುತ್ತವೆ. ಮೂಲ ವೀಡಿಯೊ ಇಲ್ಲಿದೆ:
ಈ ನಿರ್ದಿಷ್ಟ ಘಟನೆಯು 3:08 ಸಮಯಮುದ್ರೆಯಲ್ಲಿ ನಡೆಯುತ್ತದೆ, ಇದರಲ್ಲಿ ಮಹಿಳಾ ಅಧಿಕಾರಿಯೊಬ್ಬರು ಜೈಶಂಕರ್ ಪಕ್ಕದಲ್ಲಿ ಕೂತಿರುವ ಕ್ಯಾಮರಾನಿರ್ವಹಕರ ಬಳಿ ಹೋಗುತ್ತಾರೆ. ಆ ಅಧಿಕಾರಿಯು ಕ್ಯಾಮರಾನಿರ್ವಹಕರಿಗೆ ಅಲ್ಲಿಂದ ಚಲಿಸುವಂತೆ ಸನ್ನೆ ಮಾಡುತ್ತಾರೆ, ಮತ್ತು ಕ್ಯಾಮರಾನಿರ್ವಹಕರು ತಕ್ಷಣವೇ ಸೂಚನೆಯನ್ನು ಅನುಸರಿಸಿ ಸ್ವಲ್ಪವೇ ಸಮಯದಲ್ಲಿ ಫ್ರೇಮ್ ನಿಂದ ಹೊರಹೋಗುತ್ತಾರೆ. ಹೇಳಿಕೆಯಲ್ಲಿ ತಿಳಿಸಿರುವಂತೆ, ಸಂವಾದದುದ್ದಕ್ಕೂ ಆ ಅಧಿಕಾರಿಯು ಜೈಶಂಕರ್ ಅವರೊಂದಿಗೆ ಮಾತನಾಡುವುದು ಕಾಣುವುದಿಲ್ಲ.
A great honour to represent India at the inauguration ceremony of @POTUS President Donald J Trump and @VP Vice President JD Vance in Washington DC today.
🇮🇳 🇺🇸 pic.twitter.com/tbmAUbvd1r
— Dr. S. Jaishankar (@DrSJaishankar) January 20, 2025
ಜೈಶಂಕರ್ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡ ಈವೆಂಟ್ ಫೋಟೋಗಳು, ಅವರ ಇತರ ಗಣ್ಯರೊಂದಿಗೆ ಮೊದಲ ಸಾಲಿನಲ್ಲಿ ಪ್ರಮುಖವಾಗಿ ಕುಳಿತಿರುವುದನ್ನು ತೋರಿಸುತ್ತವೆ, ಮತ್ತು ಕಾರ್ಯಕ್ರಮದ ಸಮಯದಲ್ಲಿ ಅವರ ಉಪಸ್ಥಿತಿಯನ್ನು ದೃಢೀಕರಿಸುತ್ತವೆ.
ಆದ್ದರಿಂದ, ಈ ಹೇಳಿಕೆ ತಪ್ಪುದಾರಿಗೆಳೆಯುವಂಥದ್ದಾಗಿದೆ.
ಇದನ್ನೂ ಓದಿ:
ಈ ಚಿತ್ರವು ರಾಜಸ್ಥಾನದ 5000 ವರ್ಷ ಹಳೆಯ ದೇವಾಲಯವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ