Don't Miss

ಕೇಂದ್ರ ಸರ್ಕಾರವು ನಿವೃತ್ತಿ ವಯಸ್ಸನ್ನು 62 ವರ್ಷಕ್ಕೆ ಹೆಚ್ಚಿಸಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ವರ್ಷದಿಂದ 62ಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.

ಕಡೆನುಡಿ/Conclusion:  ದಾರಿತಪ್ಪಿಸುವ ಸುದ್ದಿ. ಅಂತಹ ಯಾವುದೇ ಪ್ರಸ್ತಾವನೆ ಇಲ್ಲವೆಂದು ಮತ್ತು ಆ ಹೇಳಿಕೆಯು ಸುಳ್ಳು ಎಂದು ಭಾರತ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋ ಸ್ಪಷ್ಟಪಡಿಸಿದೆ .

ರೇಟಿಂಗ್/Rating: ದಾರಿತಪ್ಪಿಸುವ ಸುದ್ದಿ. —

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

************************************************************************

 

ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ವರ್ಷದಿಂದ 62 ಕ್ಕೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂಬ ಹೇಳಿಕೆಯನ್ನು ಹೊಂದಿರುವ ವೈರಲ್ ಪೋಸ್ಟ್ ಅನ್ನು ಎಲ್ಲಾ ಭಾರತೀಯ ಭಾಷೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸಚಿವ ಸಂಪುಟ ಅನುಮೋದಿಸಿದಂತೆ ನಿವೃತ್ತಿ ವಯಸ್ಸನ್ನು 2 ವರ್ಷ ಹೆಚ್ಚಿಸಲಾಗಿದೆ ಎಂಬುದು ಆ ಹೇಳಿಕೆ.

ದೇಶದ ಯುವ ಉದ್ಯೋಗ ಆಶಾರ್ಥಿಗಳ ಮೇಲೆ ಪರಿಣಾಮ ಬೀರುವಂತೆ ಅದನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಹಿಂದಿಯಿಂದ ಅನುವಾದಿಸಲಾಗಿರುವ ಈ ಸಂದೇಶ ಹೀಗಿದೆ: “ನಿವೃತ್ತಿ ವಯಸ್ಸನ್ನು ಎರಡು ವರ್ಷಗಳವರೆಗೆ ಹೆಚ್ಚಿಸುವುದರಿಂದ ಲಕ್ಷಾಂತರ ಉದ್ಯೋಗಿಗಳಿಗೆ ಪ್ರಯೋಜನವಾಗುತ್ತದೆ ಎಂದು ನಂಬಲಾಗಿದೆ. ಆದರೆ ಈಗಾಗಲೇ ನಿರುದ್ಯೋಗಿಗಳಾಗಿರುವ ಯುವಕರಾದ ನಮ್ಮ ಪಾಡೇನು? ಇದು ಅವರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈಗಾಗಲೇ ನೇಮಕಾತಿಗಳು ನಗಣ್ಯವಾಗಿವೆ. ಈ ಕಾರಣದಿಂದಾಗಿ, ಹೊಸ ನೇಮಕಾತಿಗಳು ಎರಡು ವರ್ಷಗಳವರೆಗೆ ಕಡಿಮೆಯಾಗುತ್ತವೆ. ಉಳಿದಿರುವ ಇತರ ಪ್ರಸ್ತುತ ಉದ್ಯೋಗಿಗಳಿಗೆ ಬಡ್ತಿಗಳಲ್ಲಿಯೂ ವಿಳಂಬವಾಗಲಿದೆ.”
ಇದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

FACT-CHECK

ಇತ್ತೀಚೆಗೆ ಭಾರತದ ಸರ್ಕಾರದಿಂದ ಬಿಡುಗಡೆಯಾಗಿರುವ ಯಾವುದೇ ಘೋಷಣೆಗಾಗಿ ಹುಡುಕಾಟ ನಡೆಸಿದಾಗ ಯಾವುದೇ ಫಲಿತಾಂಶಗಳು ಕಂಡುಬರಲಿಲ್ಲ, ಏಕೆಂದರೆ, ಈ ನಿಟ್ಟಿನಲ್ಲಿ ಭಾರತ ಸರ್ಕಾರವು ಯಾವುದೇ ಹೇಳಿಕೆ ಅಥವಾ ಪ್ರಕಟಣೆಯನ್ನು ನೀಡಿಲ್ಲ. ಉದ್ಯೋಗದಲ್ಲಿ ಹೆಚ್ಚಿದ ಅವಧಿ ಅಥವಾ ಬಡ್ತಿಯ ಅವಕಾಶಗಳ ಕುಸಿತಕ್ಕೆ ಸಂಬಂಧಿಸಿದಂತೆ ಈ ವಿಷಯವು ಕೇಂದ್ರ ಸರ್ಕಾರದ ಲಕ್ಷಾಂತರ ಉದ್ಯೋಗಿಗಳ ಮೇಲೆ ಪ್ರಭಾವ ಬೀರಲಿರುವುದರಿಂದ, ಈ ವಿಷಯವು ಸುದ್ದಿವಾಹಿನಿಗಳಲ್ಲಿ ಮುಖ್ಯಾಂಶಗಳಲ್ಲಿರಬೇಕಿತ್ತು. ಆದರೆ ಅಂತಹ ಯಾವುದೇ ಘೋಷಣೆ ಮಾಡಲಾಗಿಲ್ಲ.
ಹೆಚ್ಚಿನ ಹುಡುಕಾಟ ನಡೆಸಿದಾಗ ಸರ್ಕಾರವು, ಕೇಂದ್ರ ಸರ್ಕಾರಿ ಉದ್ಯೋಗಿಗಳ ನಿವೃತ್ತಿ ವಯೋಮಿತಿಯನ್ನು ಹೆಚ್ಚಿಸುವ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಭಾರತ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋ (PIB) ಸ್ಪಷ್ಟಪಡಿಸಿದೆ ಎಂದು ತಿಳಿದುಬಂತು.

 

ಪ್ರಕರಣದ ಆಧಾರದ ಮೇಲೆ ನಿರ್ಧರಿಸಲಾಗುವ ಕೆಲವು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ, ಕೇಂದ್ರ ಸರ್ಕಾರಿ ಉದ್ಯೋಗಿಗಳ ನಿವೃತ್ತಿ ವಯೋಮಿತಿಯನ್ನು ಹೆಚ್ಚಿಸುವ ಬಗ್ಗೆ ಅದರ ಪರಿಗಣನೆಯಲ್ಲಿ ಯಾವುದೇ ಪ್ರಸ್ತಾವನೆ ಇರಲಿಲ್ಲ ಎಂದು ಸರ್ಕಾರವು ಆಗಸ್ಟ್ 2023 ರಲ್ಲಿ, ಲೋಕಸಭೆಯಲ್ಲಿ ದೃಢಪಡಿಸಿತು ಎಂದು ಮತ್ತಷ್ಟು ಹುಡುಕಾಟದಿಂದ ತಿಳಿದುಬಂದಿದೆ.
ಆದ್ದರಿಂದ, ಹೇಳಿಕೆಯು ಸುಳ್ಳು ಮತ್ತು ತಪ್ಪುದಾರಿಗೆಳೆಯುವಂತಹದ್ದಾಗಿದೆ.

ಇದನ್ನೂ ಓದಿ:

ಹೈದರಾಬಾದ್‌ನಲ್ಲಿ ಈ ಅಪಾಯಕಾರಿ ರೀಲ್‌ಗಾಗಿ ಯುವಕ ಬಸ್‌ನ ಮುಂದೆ ಮಲಗಿರುವುದನ್ನು ಈ ವೀಡಿಯೊ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಈ ಚಿತ್ರವು ರಾಜಸ್ಥಾನದ 5000 ವರ್ಷ ಹಳೆಯ ದೇವಾಲಯವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

 

 

Leave a Reply

Your email address will not be published. Required fields are marked *

*