ಹೇಳಿಕೆ/Claim: ಮುಂಬೈಯ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ಮೈದಾನದಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ರ‍್ಯಾಲಿಯನ್ನು ಸೆರೆಹಿಡಿದಿರುವ ವೀಡಿಯೊ.
ಕಡೆನುಡಿ/Conclusion: ತಪ್ಪು ನಿರೂಪಣೆ. ವೈರಲ್ ವೀಡಿಯೊ ಮುಂಬೈಯಲ್ಲಿ ಎಂವಿಎ ರ‍್ಯಾಲಿಯನ್ನು ತೋರಿಸುತ್ತಿಲ್ಲ, ಅದು ಮೂಲತಃ ಬಿಹಾರದ ಪಾಟ್ನಾದಲ್ಲಿ ಮುಂಬರುವ ಚಿತ್ರ ‘ಪುಷ್ಪ 2: ದಿ ರೂಲ್’ ನ ಟ್ರೇಲರ್ ಬಿಡುಗಡೆ ಕಾರ್ಯಕ್ರಮವಾಗಿದೆ.
ರೇಟಿಂಗ್/Rating: ತಪ್ಪು ನಿರೂಪಣೆ. —
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
************************************************************************
ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣಾ ಪ್ರಚಾರದ ನಡುವೆ ಮುಂಬೈಯ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ಮೈದಾನದಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ರ‍್ಯಾಲಿಯನ್ನು ಸೆರೆಹಿಡಿಯಲಾಗಿದೆ ಎನ್ನುವ ಹೇಳಿಕೆಯೊಂದಿಗೆ ಭಾರೀ ಜನಸಂದಣಿಯನ್ನು ತೋರಿಸುವ ವೀಡಿಯೊ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
BKC वर महाविकास आघाडीच्या सभेला जमलेली गर्दी.
🔥🔥🔥🔥 pic.twitter.com/bSYImVH0rA— Ashish (@error040290) November 17, 2024
“ಮುಂಬೈಯ ಬಿಕೆಸಿಯಲ್ಲಿ ಎಂವಿಎ ರ‍್ಯಾಲಿಯಲ್ಲಿ ಜನಸಮೂಹ ನೆರೆದಿರುವುದು | ಡ್ರೋನ್ ಮೂಲಕ ರೆಕಾರ್ಡ್ ಆಗಿರುವ ಸಭೆಯ ಅವಲೋಕನ.” ಎಂಬ ಶೀರ್ಷಿಕೆಗಳೊಂದಿಗೆ ಅಗಾಧವಾದ ಸಭೆ ಮತ್ತು ಗೋಪುರದಂತಹ ರಚನೆಯನ್ನು ಜನರು ಹತ್ತುತ್ತಿರುವುದನ್ನು ತೋರಿಸುವ ಏರಿಯಲ್ ದೃಶ್ಯವನ್ನು ಹಂಚಿಕೊಳ್ಳಲಾಗಿದೆ.
ಅದನ್ನು ಇಲ್ಲಿ ಮತ್ತು ಇಲ್ಲಿ ಹಂಚಿಕೊಳ್ಳಲಾಗಿದೆ.
ಸತ್ಯ ಪರಿಶೀಲನೆ
ಅಂತಹ ರ‍್ಯಾಲಿಗಳು ಸಾಮಾನ್ಯವಾಗಿ ಅಸಂಭವವಾದ ಬೃಹತ್ ಜನಸಮೂಹವನ್ನು ತೋರಿಸುತ್ತಾ ದಾರಿತಪ್ಪಿಸುತ್ತವೆ, ಆದ್ದರಿಂದ ಡಿಜಿಟೈ ಇಂಡಿಯಾ ಇದನ್ನು ಕೈಗೆತ್ತಿಕೊಂಡಿತು. ನಾವು ಕೆಲವು ಪ್ರಮುಖ ಫ್ರೇಮ್ ಗಳನ್ನು ತೆಗೆದುಕೊಂಡು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದೆವು, ಆಗ ತಿಳಿದುಬಂದದ್ದೇನೆಂದರೆ, ಇದು ಪಾಟ್ನಾದಲ್ಲಿ ನಟ ಅಲ್ಲು ಅರ್ಜುನ್ ರವರ ಮುಂಬರುವ ಚಲನಚಿತ್ರ “ಪುಷ್ಪ 2: ದ ರೂಲ್” ನ ಟ್ರೇಲರ್ ಬಿಡುಗಡೆ ಸಮಾರಂಭದ ವೀಡಿಯೊ ಕ್ಲಿಪ್.
ಪುಷ್ಪ ಚಿತ್ರದ ಮೊದಲ ಭಾಗವು ಜನಪ್ರಿಯವಾಗಿದ್ದ ಕಾರಣ, ನವೆಂಬರ್ 17, 2024 ರಂದು, ಪಾಟ್ನಾದಲ್ಲಿ ನಡೆದ ಸೀಕ್ವೆಲ್ ಟ್ರೈಲರ್ ಬಿಡುಗಡೆಯಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ರವರನ್ನು ನೋಡಲು ಜನರು ಭಾರಿ ಪ್ರಮಾಣದಲ್ಲಿ ಆಗಮಿಸಿದ್ದರು. ಪ್ರಚಾರ ಕಾರ್ಯಕ್ರಮವನ್ನು ತೋರಿಸುವ ಸಂದರ್ಭವನ್ನು ಇಲ್ಲಿ X ನಲ್ಲಿ ಹಂಚಿಕೊಳ್ಳಲಾಗಿದೆ.
बिहार वालों ने तो एकदम गर्दा उड़ा दिया, अल्लू अर्जुन और रश्मिका मंदाना को देखने के लिए गांधी मैदान हाउस फुल हो गया 😍❤️@alluarjun @iamRashmika #Pushpa2 pic.twitter.com/tFQb8n7G4E
— छपरा जिला 🇮🇳 (@ChapraZila) November 17, 2024
ಕಾರ್ಯಕ್ರಮದ ಮೂಲ ವೀಡಿಯೊವನ್ನು ಈವೆಂಟ್ ಸಂಘಟಕರಾದ ಯೂವೀ ಮೀಡಿಯಾದವರು ಇಲ್ಲಿ ಅಪ್ಲೋಡ್ ಮಾಡಿದ್ದಾರೆ.
ಮೂಲ ವೀಡಿಯೊದಲ್ಲಿ, 6:50 ನಿಮಿಷಗಳ ಸಮಯದಲ್ಲಿ ವೇದಿಕೆಯನ್ನು ನೋಡಬಹುದು ಮತ್ತು 9:15 ನಿಮಿಷಗಳ ಸಮಯದಲ್ಲಿ ಜನರು ಗೋಪುರಾಕಾರದ ಮೇಲಿರುವುದನ್ನು ತೋರಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾರೀ ಸಂಖ್ಯೆಯ ಜನರ ಭಾಗವಹಿಸುವಿಕೆಯಾಗಿದೆ ಎಂದು ಸುದ್ದಿ ವರದಿಗಳು ಸಹ ಖಚಿತಪಡಿಸುತ್ತವೆ. ಹಾಗಾಗಿ, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಎಂವಿಎ ರ‍್ಯಾಲಿಗಾಗಿ ಬೃಹತ್ ಸಭೆ ಸೇರಿತ್ತು ಎಂಬ ಹೇಳಿಕೆ ಸುಳ್ಳು.
ಇದನ್ನೂ ಓದಿ:
ಹೇಳಿಕೆಯಂತೆ, ಈ ವಿಚಿತ್ರ ಸಮುದ್ರ ಪ್ರಾಣಿಯು ಸಮುದ್ರ ಹಸುವನ್ನು ಪ್ರತಿನಿಧಿಸುತ್ತದೆಯೇ? ಸತ್ಯ ಪರಿಶೀಲನೆ