Don't Miss

ಟ್ರಂಪ್ ರವರ 2024ರ ವಿಜಯೋತ್ಸವ ಭಾಷಣದಲ್ಲಿ ಜನಸಮೂಹವು ‘ಮೋದಿ, ಮೋದಿ’ ಎಂಬ ಘೋಷಣೆ ಕೂಗಿತೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಟ್ರಂಪ್‌ ರವರ ವಿಜಯೋತ್ಸವ ಭಾಷಣದಲ್ಲಿ ನೆರೆದಿದ್ದ ಜನಸಮೂಹವು ‘ಮೋದಿ, ಮೋದಿ’ ಎಂದು ಘೋಷಣೆ ಕೂಗುತ್ತಿರುವುದು ಕೇಳಿಸುತ್ತದೆ.

ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಸುದ್ದಿ. ‘ಬಾಬಿ’ ಎಂಬ ಅಡ್ಡಹೆಸರಿನ ಕೆನಡಿ ಜೂನಿಯರ್ ರವರ ನೇತೃತ್ವದಲ್ಲಿ ಆರೋಗ್ಯ ಖಾತೆಯನ್ನು ನಡೆಸಬೇಕೆಂದು ಟ್ರಂಪ್ ಅವರ ವಿಜಯೋತ್ಸವ ಭಾಷಣದಲ್ಲಿ ಉಲ್ಲೇಖಿಸಿದಾಗ, ಜನಸಮೂಹವು “ಬಾಬಿ, ಬಾಬಿ” ಎಂದು ಕೂಗುತ್ತಿತ್ತು.

ರೇಟಿಂಗ್: ತಪ್ಪುದಾರಿಗೆಳೆಯುವ ಸುದ್ದಿ —

**************************************************

ಸತ್ಯ ಪರಿಶೀಲನೆ ವಿವರಗಳು

ಅಧ್ಯಕ್ಷರಾಗಿ ಚುನಾಯಿತರಾದ ಡೊನಾಲ್ಡ್ ಟ್ರಂಪ್ ಅವರ ವಿಜಯೋತ್ಸವ ಭಾಷಣದಲ್ಲಿ ಜನಸಮೂಹವು “ಮೋದಿ, ಮೋದಿ” ಎಂದು ಘೋಷಣೆ ಕೂಗುತ್ತಿರುವುದು ಕಂಡುಬಂದಿದೆ ಎಂಬ ಹೇಳಿಕೆಯನ್ನು ಹೊಂದಿರುವ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ. ಟ್ರಂಪ್, “ಅಮೇರಿಕಾವನ್ನು ಮತ್ತೆ ಆರೋಗ್ಯಕರವಾಗಿಸಿ” ಎನ್ನುವಾಗ  ಜನಸಮೂಹವು ಘೋಷಣೆ ಕೂಗಲು ಪ್ರಾರಂಭಿಸುತ್ತದೆ.

ಹೇಳಿಕೆ ಹೀಗಿದೆ, “$ಟ್ರಂಪ್ ವಿಜಯೋತ್ಸವ ಭಾಷಣದ ಸಮಯದಲ್ಲಿ ಮೋದಿ ಮೋದಿ ಎಂಬ ಕೂಗು! ನಿಮಗೂ ಇದು ಕೇಳಿಸುತ್ತಿದೆಯೇ?”

ಇಲ್ಲಿ ಕಾಣುವಂತೆ, ಇದೇ ರೀತಿಯ ವೀಡಿಯೊ ತುಣುಕನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ:

ಪೋಸ್ಟ್‌ನ ಶೀರ್ಷಿಕೆಯು ಹೀಗಿದೆ, “ಟ್ರಂಪ್ ವಿಜಯೋತ್ಸವ ಭಾಷಣದ ಸಮಯದಲ್ಲಿ ಮೋದಿ ಮೋದಿ ಎಂಬ  ಕೂಗು”.

ಪೋಸ್ಟ್ ಅನ್ನು ಇಲ್ಲಿ ಮತ್ತು ಇಲ್ಲಿ ಹಂಚಿಕೊಳ್ಳಲಾಗಿದೆ.

FACT-CHECK

ಡಿಜಿಟೈ ಇಂಡಿಯಾ ತಂಡವು ಪರಿಶೀಲಿಸಿದ ಮೂಲ ವೀಡಿಯೊವನ್ನು ಇದೋ ಇಲ್ಲಿದೆ:

ಚುನಾವಣಾ ಫಲಿತಾಂಶಗಳು ಸಮೀಕ್ಷೆಯಲ್ಲಿ ಸ್ಪಷ್ಟ ಮುನ್ನಡೆ ನೀಡಿದ ನಂತರ, ನವೆಂಬರ್ 6 ರಂದು ರಾಯಿಟರ್ಸ್ ಬಿಡುಗಡೆ ಮಾಡಿದ ವೀಡಿಯೊದಲ್ಲಿ, ವಿಜಯೋತ್ಸವ ಭಾಷಣದಲ್ಲಿ “ಬಾಬಿ” ಎಂಬ ಅಡ್ಡಹೆಸರುಳ್ಳ ಮಾಜಿ ಅಧ್ಯಕ್ಷೀಯ ಅಭ್ಯರ್ಥಿ ರಾಬರ್ಟ್ ಎಫ್. ಕೆನಡಿ ಜೂನಿಯರ್ ಅವರ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಸ್ಪಷ್ಟವಾಗಿ ಕೇಳಿಸುತ್ತದೆ. ವೀಡಿಯೊದ 19:42 ನಿಮಿಷಗಳಲ್ಲಿ ಟ್ರಂಪ್ ರವರು ಕೆನಡಿ ಜೂನಿಯರ್ ಹೆಸರನ್ನು ತೆಗೆದುಕೊಂಡಾಗ ಪ್ರೇಕ್ಷಕರು ” ಬಾಬಿ” ಎಂಬ ಘೋಷಣೆಗಳೊಂದಿಗೆ ಟ್ರಂಪ್‌ ರವರ ಭಾಷಣಕ್ಕೆ ಪ್ರತಿಕ್ರಿಯಿಸುತ್ತಾರೆ.

ಆದರೆ, ಹೇಳಿಕೆಯಲ್ಲಿ ಹಂಚಿಕೊಳ್ಳಲಾದ 20-ಸೆಕೆಂಡ್ ತುಣುಕಿನಲ್ಲಿ ಸಂದರ್ಭೋಚಿತ ಭಾಗವನ್ನು ಅಳಿಸಿದೆ. ಬಹುಶಃ, ಈ ತುಣುಕು ಪ್ರೇಕ್ಷಕರು ‘ಬಾಬಿ ‘ ಗೆ ಜೈಕಾರ ಹಾಕುತ್ತಿರುವ ನಿಜವಾದ ವೀಡಿಯೊದ, ಬದಲಾದ ಅಥವಾ ಮಾರ್ಪಡಿಸಿದ ಆವೃತ್ತಿಯಾಗಿದೆ, ತತ್ಸಸಂಬಂಧಿ ಸಂದರ್ಭವು ಇದಕ್ಕೆ ಹೊಂದುತ್ತದೆ ಏಕೆಂದರೆ, ಟ್ರಂಪ್ ಆಡಳಿತದಲ್ಲಿ ಆತ ಆರೋಗ್ಯ ಖಾತೆಯನ್ನು ಪಡೆಯಬಹುದು ಎಂದು ವರದಿಗಳು ಸೂಚಿಸುತ್ತವೆ.

ಕೆನಡಿ ಜೂನಿಯರ್ ರವರ ಹೆಸರನ್ನು ಹೇಳಿ, ಟ್ರಂಪ್ ಹೇಳಿದ್ದು ಹೀಗೆ: “ಇವರೆಲ್ಲ ಅದ್ಭುತ ವ್ಯಕ್ತಿಗಳು ಮತ್ತು ನಾವು ರಾಬರ್ಟ್ ಎಫ್ ಕೆನಡಿ ಜೂನಿಯರ್ ರಂತಹ ಕೆಲವು ಹೆಸರುಗಳನ್ನು ಸೇರಿಸಬಹುದು… ಆತ ಗೆದ್ದು ಬಂದು ಅಮೇರಿಕವನ್ನು ಪುನಃ ಆರೋಗ್ಯಕರವಾಗಿಸಲು ಸಹಾಯ ಮಾಡಲಿದ್ದಾರೆ.”

ಇದನ್ನೂ ಓದಿ:

ಈ ಚಿತ್ರವು ರಾಜಸ್ಥಾನದ 5000 ವರ್ಷ ಹಳೆಯ ದೇವಾಲಯವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಎನ್‌ಡಿಎ ಸರ್ಕಾರ ರಚನೆಯ ಮುನ್ನ ನಿತೀಶ್ ಕುಮಾರ್ ಇಂಡಿಯಾ ಬ್ಲಾಕ್ ನಾಯಕರನ್ನು ಭೇಟಿ ಮಾಡಿದರೇ? ಸತ್ಯ ಪರಿಶೀಲನೆ

 

Leave a Reply

Your email address will not be published. Required fields are marked *

*