Don't Miss

ಟೈಲರ್ ಸ್ವಿಫ್ಟ್ ಹ್ಯಾರಿಸ್ ರವರನ್ನು ಅನುಮೋದಿಸಿದ ನಂತರ ಕಂಟ್ರಿ ಮ್ಯೂಸಿಕ್ ಆಕೆಯನ್ನು ನಿಷೇಧಿಸಿತೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಕಮಲಾ ಹ್ಯಾರಿಸ್ ರವರನ್ನು ಅನುಮೋದಿಸಿದ ನಂತರ ಟೈಲರ್ ಸ್ವಿಫ್ಟ್ ರವರನ್ನು ಕಂಟ್ರಿ ಮ್ಯೂಸಿಕ್ ನಿಂದ ನಿಷೇಧಿಸಲಾಗಿದೆ.

ಕಡೆನುಡಿ/Conclusion: ದಾರಿತಪ್ಪಿಸುವ ಹೇಳಿಕೆ. ಅಂತಹ ಯಾವುದೇ ನಿಷೇಧವಿಲ್ಲ ಮತ್ತು ಹೇಳಿಕೆಯನ್ನು ವಿಡಂಬನೆ ವೆಬ್‌ಸೈಟ್‌ ಮಾಡಿದ್ದು.

ರೇಟಿಂಗ್/Rating: ದಾರಿತಪ್ಪಿಸುವ ಹೇಳಿಕೆ —

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

************************************************************************

ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಅವರನ್ನು ಅನುಮೋದಿಸಿದ ನಂತರ ಟೈಲರ್ ಸ್ವಿಫ್ಟ್ ಅವರನ್ನು ಕಂಟ್ರಿ ಮ್ಯೂಸಿಕ್‌ನಿಂದ ನಿಷೇಧಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ.

X ನಲ್ಲಿ ಪೋಸ್ಟ್ ಮಾಡಲಾದ ವೈರಲ್ ಮೀಮ್ ಒಂದು ಹೀಗಿದೆ: “ದೊಡ್ಡ ಅನುಮೋದನೆಯ ನಂತರ ಟೈಲರ್ ಸ್ವಿಫ್ಟ್ ಗೆ ಕಂಟ್ರಿ ಮ್ಯೂಸಿಕ್ ನಿಂದ ನಿಷೇಧ: “ಆಕೆ ಹಾಡುಗಾರಿಕೆಯನ್ನೇ ಮುಂದುವರಿಸಬೇಕು, ರಾಜಕೀಯದಲ್ಲಲ್ಲ”: ತಮ್ಮದೇ ಆದ ಬ್ರೇಕಪ್ ಹಾಡುಗಳಲ್ಲಿ ಬರೆಯಬಹುದಾದಂತಹ ಟ್ವಿಸ್ಟ್‌ನಲ್ಲಿ, ಕಂಟ್ರಿ ಮ್ಯೂಸಿಕ್ ಟೈಲರ್ ಸ್ವಿಫ್ಟ್ ರವರನ್ನು ಹೊರಹಾಕಿರುವಂತಿದೆ.”

ಈ ಹಿಂದೆ ಪ್ರಬಲ ರಿಪಬ್ಲಿಕನ್ ಮತ್ತು ಟ್ರಂಪ್ ಬೆಂಬಲಿಗರಾಗಿದ್ದ ಪಾಪ್ ಮ್ಯೂಸಿಕ್ ಐಕಾನ್ ಟೈಲರ್ ಸ್ವಿಫ್ಟ್ ರವರು ಈ ತಿಂಗಳ ಆರಂಭದಲ್ಲಿ,  ಸೆಪ್ಟೆಂಬರ್ 10, 2024 ರಂದು ತಮ್ಮ ಬೆಂಬಲವನ್ನು ಹ್ಯಾರಿಸ್‌ಗೆ ವರ್ಗಾಯಿಸಿದ್ದಕ್ಕಾಗಿ  ಸುದ್ದಿಯಲ್ಲಿದ್ದರು. ಆಕೆಯ ಮುಕ್ತ ಅನುಮೋದನೆಯ ನಂತರ, ಇತ್ತೀಚಿನ ಪೋಸ್ಟ್ ಸೇರಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಮೀಮ್‌ಗಳು ಮತ್ತು ಸುಳ್ಳು ಆರೋಪಗಳನ್ನು ಹಂಚಿಕೊಳ್ಳಲಾಗಿದೆ.

ಈ ಪೋಸ್ಟ್ 2,400 ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಮತ್ತು 1,000 ಕ್ಕೂ ಹೆಚ್ಚಿನ ಕಾಮೆಂಟ್‌ಗಳನ್ನು ಪಡೆಯಿತು ಮತ್ತು ಸ್ವಿಫ್ಟ್‌ ರವರ ಅನುಮೋದನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಚರ್ಚೆಯನ್ನು ಹುಟ್ಟುಹಾಕಿತು.

FACT CHECK

ನಾವು ಇದರ ಬಗ್ಗೆ ಹುಡುಕಾಟ ನಡೆಸಿದಾಗ ಮೂಲ ಪೋಸ್ಟ್ ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡಿತು ಮತ್ತು ಅದರ ಶೀರ್ಷಿಕೆಯಲ್ಲಿ ಅದೊಂದು ವಿಡಂಬನೆ ಎಂದು ಉಲ್ಲೇಖಿಸಲಾಗಿತ್ತು. ಇದರಲ್ಲಿ ವಿಡಂಬನಾತ್ಮಕ ವೆಬ್‌ಸೈಟ್ ಆಗಿರುವ SpaceXMania.com ವೆಬ್‌ಸೈಟ್‌ಗೆ ಲಿಂಕ್ ಅನ್ನು ನೀಡಲಾಗಿದೆ. ಇದರ ಹೊರತು, ನ್ಯಾಶ್ವಿಲ್ಲೆಯ ಕಂಟ್ರಿ ಮ್ಯೂಸಿಕ್ ಗಣ್ಯರ ಪ್ರತಿಕ್ರಿಯೆಗಳು ಅಥವಾ ಹೇಳಿಕೆಗಳಿಗಾಗಿ ನಾವು ಹುಡುಕಾಟ ನಡೆಸಿದಾಗ, ಹುಡುಕಾದಲ್ಲಿ, ಈ ಪಾಪ್ ತಾರೆಯನ್ನು ಕಂಟ್ರಿ ಮ್ಯೂಸಿಕ್ ನಿಂದ ನಿಷೇಧಿಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳು ದೊರಕಿಲ್ಲ.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಮೀಮ್ ನಲ್ಲಿ SpaceXMania.com ನ ಲೇಖನವನ್ನು ಲಿಂಕ್ ಮಾಡಲಾಗಿದೆ. ನಾವು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ, ಅದೊಂದು ವಿಡಂಬನಾತ್ಮಕ ವೆಬ್‌ಸೈಟ್ ಎಂದು ಫಲಿತಾಂಶಗಳು ಸ್ಪಷ್ಟವಾಗಿ ತೋರಿಸುತ್ತವೆ, ಮತ್ತು ಕಥೆಗಳು ಕಾಲ್ಪನಿಕ ಮತ್ತು ನಿಜವಲ್ಲ ಎಂದೂ ಸಹ ನಿರಾಕರಣೆಗಳು ತಿಳಿಸುತ್ತವೆ. ಕಮಲಾ ಹ್ಯಾರಿಸ್ ರವರನ್ನು ಅನುಮೋದಿಸಿದ್ದಕ್ಕಾಗಿ ಟೈಲರ್ ಸ್ವಿಫ್ಟ್ ರವರನ್ನು ಟೀಕಿಸುತ್ತಿರುವುದು ಇದು ಮೊದಲ ಬಾರಿಯೇನಲ್ಲ. ಆದ್ದರಿಂದ, ಹೇಳಿಕೆ ಸುಳ್ಳು.

ಆಕೆ ಹ್ಯಾರಿಸ್ ರವರನ್ನು ಅನುಮೋದಿಸಿದ ನಂತರ ಸಾಮಾಜಿಕ ಜಾಲತಾಣಗಳ ಲಕ್ಷಾಂತರ ಅನುಯಾಯಿಗಳನ್ನು ಕಳೆದುಕೊಂಡಿದ್ದಾರೆ ಎಂದೋ ಅಥವಾ ಇದೇ ಕಾರಣಗಳಿಗಾಗಿ ಕೋಕಾ-ಕೋಲಾ ಆಕೆಯೊಂದಿಗಿನ ಪಾಲುದಾರಿಕೆಯನ್ನು ಕೊನೆಗೊಳಿಸಿದೆ ಎಂದೋ ಹಿಂದಿನ ವದಂತಿಗಳು ತಪ್ಪಾಗಿ ಹೇಳಿದ್ದವು, ಇವುಗಳ ನಿಜಸ್ವರೂಪವನ್ನು ಹೊರತರಲಾಗಿತ್ತು.

ಇದನ್ನೂ ಓದಿ:

ಹೈದರಾಬಾದ್‌ನಲ್ಲಿ ಈ ಅಪಾಯಕಾರಿ ರೀಲ್‌ಗಾಗಿ ಯುವಕ ಬಸ್‌ನ ಮುಂದೆ ಮಲಗಿರುವುದನ್ನು ಈ ವೀಡಿಯೊ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಈ ಚಿತ್ರವು ರಾಜಸ್ಥಾನದ 5000 ವರ್ಷ ಹಳೆಯ ದೇವಾಲಯವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

 

Leave a Reply

Your email address will not be published. Required fields are marked *

*