Don't Miss

ಸೆಪ್ಟೆಂಬರ್ 10 ರಂದು ಟ್ರಂಪ್ ಜೊತೆಗಿನ ಅಧ್ಯಕ್ಷೀಯ ಚರ್ಚೆಯ ಸಮಯದಲ್ಲಿ ಕಮಲಾ ಹ್ಯಾರಿಸ್ ತಮ್ಮ ಕಿವಿಯೋಲೆಗಳಲ್ಲಿ ‘ಇಯರ್‌ಪೀಸ್’ ಇಟ್ಟಿದ್ದರೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಡೆಮಾಕ್ರಟಿಕ್-ನಾಮನಿರ್ದೇಶಿತ ಅಭ್ಯರ್ಥಿ ಕಮಲಾ ಹ್ಯಾರಿಸ್ ಸೆಪ್ಟೆಂಬರ್ 10 ರ ಅಧ್ಯಕ್ಷೀಯ ಚರ್ಚೆಯ ಸಮಯದಲ್ಲಿ NOVA H1 ವೈರ್‌ಲೆಸ್ ಇಯರ್‌ಪೀಸ್ ಧರಿಸಿದ್ದರು.

ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಹೇಳಿಕೆ. ಸೆಪ್ಟೆಂಬರ್ 10 ರ ಚರ್ಚೆಗಾಗಿ ಕಮಲಾ ಹ್ಯಾರಿಸ್ ರವರು ಧರಿಸಿದ್ದ ಕಿವಿಯೋಲೆಗಳು ಆಕೆಯ ಹಳೆಯ ಆಭರಣಗಳ ಸಂಗ್ರಹದ ಭಾಗ ಮತ್ತು ಅವು ಹೇಳಿಕೆಯಲ್ಲಿರುವಂತೆ NOVA H1 ಇಯರ್‌ಪೀಸ್‌ಗಳಲ್ಲ.

ರೇಟಿಂಗ್/Rating: ತಪ್ಪುದಾರಿಗೆಳೆಯುವ ಹೇಳಿಕೆ. —

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

************************************************************************

ಸೆಪ್ಟೆಂಬರ್ 10, 2024 ರಂದು ಡೆಮೋಕ್ರಾಟ್ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಡೊನಾಲ್ಡ್ ಟ್ರಂಪ್ ನಡುವೆ ನಡೆದ ಯುಎಸ್ ಅಧ್ಯಕ್ಷೀಯ ಚರ್ಚೆಯು ಜಗತ್ತಿನಾದ್ಯಂತ ಮುಖ್ಯಾಂಶಗಳಲ್ಲಿತ್ತು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಒಂದು ಹೇಳಿಕೆಯು ಕುತೂಹಲವನ್ನೆಬ್ಬಿಸಿದೆ. ಕಮಲಾ ಹ್ಯಾರಿಸ್ ಅವರ ಕಿವಿಯೋಲೆಯಲ್ಲಿ ವೈರ್‌ಲೆಸ್ ಇಯರ್‌ಫೋನ್ ಅನ್ನು ಅಳವಡಿಸಲಾಗಿತ್ತು ಎಂಬುದು ಇದರಲ್ಲಿದ್ದ ಹೇಳಿಕೆ.

ಚರ್ಚೆಯ ನಿಯಮಗಳ ಅನುಸಾರ, ಎಬಿಸಿ ನ್ಯೂಸ್ ಆಯೋಜಿಸಿದ ಚರ್ಚೆಯ ಸಮಯದಲ್ಲಿ ಅಭ್ಯರ್ಥಿಗಳು ಸಹಾಯಕ ಪರಿಕರಗಳು, ಪೂರ್ವ-ಲಿಖಿತ ಟಿಪ್ಪಣಿಗಳನ್ನು ಹೊಂದಿರುವಂತಿರಲಿಲ್ಲ ಅಥವಾ ವಿರಾಮದ ಸಮಯದಲ್ಲಿ ಅವರು ತಮ್ಮ ಪ್ರಚಾರ ಸಿಬ್ಬಂದಿಯೊಂದಿಗೆ ಮಾತನಾಡುವಂತಿರಲಿಲ್ಲ.

ಒಂದು ಹೇಳಿಕೆಯ ಅನುಸಾರ, “ಆಕೆ ಇಯರ್‌ಪೀಸ್ ಹೊಂದಿದ್ದರೆಂದು ನಾನು ಹೇಳಿದ್ದೆ.” ಮತ್ತೊಬ್ಬರು “ಸ್ಮಾರ್ಟ್ ಇಯರ್‌ರಿಂಗ್ಸ್” ಕುರಿತು ಲೇಖನವನ್ನು ಹಂಚಿಕೊಂಡು, ಆಕೆ ಆ ಕಂಪನಿಯ ಇಯರ್‌ಪೀಸ್ ಅನ್ನು ಬಳಸಿದ್ದಾರೆ ಎಂಬುದರತ್ತ ಸನ್ನೆ ಮಾಡಿದ್ದರು.

ಇದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಇಲ್ಲಿ ಮತ್ತು ಇಲ್ಲಿ ಅದನ್ನು ನೋಡಬಹುದು.

FACT CHECK

ಡಿಜಿಟೈ ಇಂಡಿಯಾದ ವಾಟ್ಸಾಪ್ ನಲ್ಲಿ ಇದರ ಕುರಿತಾದ ವಿನಂತಿ ಬಂದಾಗ, ನಾವು ಕಮಲಾ ಹ್ಯಾರಿಸ್ ರವರ ಕಿವಿಯೋಲೆಗಳನ್ನು ಹುಡುಕಿದೆವು. X ನಲ್ಲಿ ಹೆಚ್ಚಿನ ಹುಡುಕಾಟ ನಡೆಸಿದಾಗ, ಆ ಕಿವಿಯೋಲೆಗಳು ಹಳೆಯದ್ದಾಗಿದ್ದು, ಕಮಲಾ ಹ್ಯಾರಿಸ್ ರವರು ಈ ಹಿಂದೆ ಹಲವಾರು ಬಾರಿ ಅವುಗಳನ್ನು ಧರಿಸಿದ್ದರೆಂದು ತಿಳಿದುಬಂತು. ಈ ಕಿವಿಯಂತ್ರ ಮ್ಯೂನಿಚ್ ಮೂಲದ ಐಸ್‌ಬಾಕ್ ಸೌಂಡ್ ಸೊಲ್ಯೂಷನ್ಸ್ ಮಾರಾಟ ಮಾಡುವ NOVA H1 ಎಂಬುದು ಹೇಳಿಕೆಯಾಗಿದ್ದರಿಂದ, ನಾವು ಕಿವಿಯೋಲೆಗಳ ವಿವರಗಳನ್ನು ಹುಡುಕಿದೆವು ಮತ್ತು ವೈರ್‌ಲೆಸ್ ಇಯರ್‌ಫೋನ್‌ಗಳು ಒಂದು ಜೋಡಿ ಮುತ್ತಿನ ಕಿವಿಯೋಲೆಗಳಲ್ಲಿ ಹುದುಗಿಸಿರುವುದಾಗಿ ಕಂಡುಬಂತು.

ಆದರೆ, ಸೆಪ್ಟೆಂಬರ್ 13 ರಂದು ನಡೆಸಿದ ಪತ್ರಿಕಾ ಪ್ರಕಟಣೆಯಲ್ಲಿ, ಚರ್ಚೆಯ ಫೋಟೋಗಳ ವಿಶ್ಲೇಷಣೆಯ ಆಧಾರದ ಮೇಲೆ, “ಇವು ನಮ್ಮ H1 ಆಡಿಯೊ ಇಯರ್ ರಿಂಗ್‌ಗಳಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇವೆ” ಎಂದು ಐಸ್‌ಬಾಕ್ ಸೌಂಡ್ ಸೊಲ್ಯೂಷನ್ಸ್ ಕಂಪನಿಯು ಹೇಳಿದೆ.

X ನಲ್ಲಿನ ಒಬ್ಬ ಬಳಕೆದಾರರು ಕಮಲಾ ಹ್ಯಾರಿಸ್‌ ರವರ ಓಲೆಗಳನ್ನು ಹೋಲುವ ಟಿಫನಿ ಕಿವಿಯೋಲೆಗಳ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ, ಇದರ ಮಾರಾಟ ಬೆಲೆ $3,300 ಕ್ಕಿಂತ ಹೆಚ್ಚು, ಆದರೆ ಇವು ಈಗ ಟಿಫನಿಯ ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ.

ಚರ್ಚೆಗೆ ಮುಂಚೆಯೂ ಹ್ಯಾರಿಸ್ ಈ ಕಿವಿಯೋಲೆಗಳನ್ನು ಧರಿಸಿರುವುದನ್ನು ನಾವು ಗಮನಿಸಿದೆವು. ಫಿಲಡೆಲ್ಫಿಯಾದಲ್ಲಿ ಮೇ ಪ್ರಚಾರದ ಕಾರ್ಯಕ್ರಮವಾದ ವೈಟ್ ಹೌಸ್ ನಲ್ಲಿನ ಏಪ್ರಿಲ್ ನಲ್ಲಿ ನಡೆದ ಒಂದು ಕಾರ್ಯಕ್ರಮ, ಫಿಲೆಡೆಲ್ಫಿಯಾದಲ್ಲಿ ಮೇ ತಿಂಗಳಲ್ಲಿ ನಡೆದ ಒಂದು ಪ್ರಚಾರ ಕಾರ್ಯಕ್ರಮ, ಮತ್ತು ಜೂನ್ 2024ರಲ್ಲಿ ನಡೆದ ಒಂದು ಸಂಗೀತ ಕಾರ್ಯಕ್ರಮದ ರಾಯಿಟರ್ಸ್ ಫೋಟೋಗಳು. ಚರ್ಚೆಯ ನಂತರವೂ, 9/11 ದಾಳಿಗಳ 23 ನೇ ವಾರ್ಷಿಕೋತ್ಸವವನ್ನು ಗುರುತಿಸುವ ಸಮಾರಂಭದಲ್ಲಿ ಭಾಗವಹಿಸಿದಾಗಲೂ ಆಕೆ ಈ ಓಲೆಗಳನ್ನು ಧರಿಸಿರುವುದು ಕಂಡುಬಂದಿದೆ. ಆದ್ದರಿಂದ, ಈ ಹೇಳಿಕೆ ಸುಳ್ಳು.

ಇದಲ್ಲದೆ, ಅಧ್ಯಕ್ಷೀಯ ಚರ್ಚೆಯ ಸಮಯದಲ್ಲಿ ಅಭ್ಯರ್ಥಿಗಳು ಇಯರ್‌ಪೀಸ್‌ಗಳನ್ನು ಬಳಸುತ್ತಿದ್ದಾರೆ ಎಂಬಂತಹ ಆರೋಪಗಳು ಹೊಸದೇನಲ್ಲ. 2020ರಲ್ಲಿ ಆಗಿನ ಡೆಮಾಕ್ರಟಿಕ್-ಅಭ್ಯರ್ಥಿ ಬಿಡೆನ್ ವಿರುದ್ಧವೂ ಇದೇ ರೀತಿಯ ಆರೋಪಗಳನ್ನು ಮಾಡಲಾಗಿತ್ತು. 2016ರಲ್ಲಿ, ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರೂ ಸಹ ಇದೇ ರೀತಿಯ ಆರೋಪಗಳಿಗೆ ಗುರಿಯಾಗಿದ್ದರು.

ಇದನ್ನೂ ಓದಿ:

‘X ಅನ್ನು ಮುಚ್ಚಿಬಿಡಬೇಕು’? ಎಂದು ಈ ವೀಡಿಯೊದಲ್ಲಿ ಕಮಲಾ ಹ್ಯಾರಿಸ್ ಹೇಳಿದರೇ? ಸತ್ಯ ಪರಿಶೀಲನೆ

ಕಮಲಾ ಹ್ಯಾರಿಸ್ ‘ಸಹಜ ಪ್ರಜೆ’ ಅಲ್ಲವೇ? ಯು.ಎಸ್ ಅಧ್ಯಕ್ಷೀಯ ಅಭ್ಯರ್ಥಿಯ ಅರ್ಹತೆಯ ಕುರಿತಾದ ವಿವಾದ ಪುನರುದ್ಭವ; ಸತ್ಯ ಪರಿಶೀಲನೆ

 

Leave a Reply

Your email address will not be published. Required fields are marked *

*