Don't Miss

ಭಾರತವು ಮಾಲ್ಡೀವ್ಸ್‌ನಿಂದ 28 ದ್ವೀಪಗಳನ್ನು “ಖರೀದಿಸಿದೆಯೇ”? ಸತ್ಯ ಪರಿಶೀಲನೆ

ಹೇಳಿಕೆ/Claim:ಭಾರತವು ಮಾಲ್ಡೀವ್ಸ್‌ನಿಂದ 28 ದ್ವೀಪಗಳನ್ನು ಖರೀದಿಸಿತು ಮತ್ತು ಅಧ್ಯಕ್ಷ ಮುಯಿಝು ರವರು ಅವುಗಳನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್‌ ರವರಿಗೆ ಹಸ್ತಾಂತರಿಸಿದರು.

ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಸುದ್ದಿ. ಭಾರತ 28 ದ್ವೀಪಗಳನ್ನು ಖರೀದಿಸಿಲ್ಲ, ಆದರೆ ನೀರು ಮತ್ತು ಒಳಚರಂಡಿ ಯೋಜನೆಗಳ ಅನುಷ್ಠಾನಕ್ಕಾಗಿ ಮಾಲ್ಡೀವ್ಸ್ ಅವುಗಳನ್ನು ಭಾರತಕ್ಕೆ ಹಸ್ತಾಂತರಿಸಿದೆ.

ರೇಟಿಂಗ್: ತಪ್ಪುದಾರಿಗೆಳೆಯುವ ಸುದ್ದಿ

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

************************************************************************

ಮಾಲ್ಡೀವ್ಸ್‌ನಲ್ಲಿ ಸರ್ಕಾರ ಬದಲಾದಾಗಿನಿಂದ ದ್ವಿಪಕ್ಷೀಯ ಸಂಬಂಧಗಳು ಕ್ಷೀಣಿಸಿವೆ. ಆದರೆ, ಇತ್ತೀಚೆಗೆ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಈ ದ್ವೀಪ ರಾಷ್ಟ್ರಕ್ಕೆ ಭೇಟಿ ನೀಡಿ, ಚೀನಾ-ಪರ ನಾಯಕರಾಗಿ ಕಂಡುಬರುವ ಅಧ್ಯಕ್ಷ ಮೊಹಮ್ಮದ್ ಮುಯಿಝು ರವರ ನೇತೃತ್ವದಲ್ಲಿ ಮಾಲ್ಡೀವ್ಸ್‌ನ ಹೊಸ ಸರ್ಕಾರದೊಂದಿಗೆ ಹಲವಾರು ಒಪ್ಪಂದಗಳನ್ನು ಮಾಡಿಕೊಂಡರು

ಜೈಶಂಕರ್ ರವರ ಭೇಟಿಯ ನಂತರ, ಭಾರತವು ಈ ದ್ವೀಪಸಮೂಹ ರಾಜ್ಯದಿಂದ 28 ದ್ವೀಪಗಳನ್ನು “ಖರೀದಿಸಿದೆ” ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಹೊರಹೊಮ್ಮಿವೆ.

ಇತರ X ಬಳಕೆದಾರರು “ಭಾರತವು ಮಾಲ್ಡೀವ್ಸ್‌ನಿಂದ 28 ದ್ವೀಪಗಳನ್ನು ಖರೀದಿಸಿದೆ. ಮಾಲ್ಡೀವ್ಸ್ 28 ದ್ವೀಪಗಳನ್ನು ಭಾರತಕ್ಕೆ ಹಸ್ತಾಂತರಿಸಿದೆ. ಅಧ್ಯಕ್ಷ ಮುಯಿಝು ಸ್ವತಃ ಒಪ್ಪಂದಕ್ಕೆ ಸಹಿ ಹಾಕಿದರು.” ಎಂದು ಹೇಳಿದ್ದಾರೆ.  ಮತ್ತೊಬ್ಬ ಬಳಕೆದಾರರು, ಈ ವರ್ಷದ ಆರಂಭದಲ್ಲಿ ಪ್ರಧಾನಿ ಮೋದಿಯವರು ಲಕ್ಷದ್ವೀಪದ ದ್ವೀಪಗಳಿಗೆ ಭೇಟಿ ನೀಡಿದ್ದನ್ನು ಉಲ್ಲೇಖಿಸಿ,: “ಲಕ್ಷದ್ವೀಪ ಸಮುದ್ರ ತೀರದಲ್ಲಿ 50 ಮೀಟರ್ ನಡಿಗೆ ಮತ್ತು ಒಂದು ಟ್ವೀಟ್ ನ ಜಾದು”, ಎಂದು ಬರೆದಿದ್ದಾರೆ.

 

 

ಅದೇ ಹೇಳಿಕೆಯನ್ನು ಇಲ್ಲಿಯೂ ಹಂಚಿಕೊಳ್ಳಲಾಗುತ್ತಿದೆ:

FACT CHECK:

ಭಾರತವು ದ್ವೀಪಗಳನ್ನು ಖರೀದಿಸಿರುವುದು ಹಿಂದೆಂದೂ ಕೇಳಿರದ ವಿಷಯವಾದ ಕಾರಣ, ಡಿಜಿಟೈ ಇಂಡಿಯಾ ತಂಡವು  ಸಂಬಂಧಿತ ಮಾಹಿತಿಗಾಗಿ, ತ್ವರಿತ ಗೂಗಲ್ ಹುಡುಕಾಟವನ್ನು ನಡೆಸಿತು ಮತ್ತು ಈ ಹೇಳಿಕೆಯು ತಪ್ಪುದಾರಿಗೆಳೆಯುವಂಥದ್ದು ಎಂದು ಕಂಡುಕೊಂಡಿತು. ಮಾಲ್ಡೀವ್ಸ್ ಚೀನಾಕ್ಕೆ ಹತ್ತಿರವಾಗುತ್ತಿರುವುದು ಕಂಡುಬಂದಾಗ, ಮೂರು ದಿನಗಳ ಭೇಟಿ ನಿರ್ಣಾಯಕ ಘಟ್ಟಕ್ಕಿಳಿಯಿತು ಎಂದು ಜೈಶಂಕರ್ ಅವರ ಭೇಟಿಯ ಸುದ್ದಿ ವರದಿಗಳು ಬಹಿರಂಗಪಡಿಸುತ್ತವೆ.

ವಾಸ್ತವಿಕವಾಗಿ, ಭಾರತವು ಈ ಹಿಂದೆ ಮಾಲ್ಡೀವ್ಸ್ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದು, ಈ 28 ದ್ವೀಪಗಳಲ್ಲಿ ಹಲವಾರು ನೀರು ಮತ್ತು ಒಳಚರಂಡಿ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿತ್ತು. ಭಾರತದ ವಿದೇಶಾಂಗ ಸಚಿವರ ಭೇಟಿಯು ಈ ಯೋಜನೆಗಳನ್ನು ಖಚಿತಗೊಳಿಸಿತು ಮತ್ತು ಅದರನುಸಾರ, ಆತಿಥೇಯ ಸರ್ಕಾರವು ದ್ವೀಪ ರಾಷ್ಟ್ರದ ತೀವ್ರ ಅಗತ್ಯಗಳನ್ನು ಪೂರೈಸಲು ನೀರಿನ ಯೋಜನೆಗಳ ಅನುಷ್ಠಾನಕ್ಕಾಗಿ ದ್ವೀಪಗಳನ್ನು ಹಸ್ತಾಂತರಿಸಿದೆ.

ಜೈಶಂಕರ್ ರವರು ತಮ್ಮ ಟ್ವೀಟ್‌ಗಳಲ್ಲಿಯೂ ಈ ಯೋಜನೆಯನ್ನು ಘೋಷಿಸುವ ಮೂಲಕ, ಸುದ್ದಿ ವರದಿಗಳನ್ನು ದೃಢೀಕರಿಸಿದ್ದಾರೆ:

ಮಾಲ್ಡೀವ್ಸ್‌ನಲ್ಲಿ ಅಧ್ಯಕ್ಷ ಮುಯಿಝು ರವರೊಂದಿಗೆ ಜೈ ಶಂಕರ್ ರವರು ನೀರು ಮತ್ತು ಒಳಚರಂಡಿ ಜಾಲವನ್ನು ಉದ್ಘಾಟಿಸಿದರು ಎಂದು ಸುದ್ದಿ ವರದಿ ಹೇಳುತ್ತದೆ. ಈ ಯೋಜನೆಯು ಮಾಲ್ಡೀವ್ಸ್‌ನ 28 ದ್ವೀಪಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ ಮತ್ತು ಅವುಗಳನ್ನು ಇಂಡಿಯನ್ ಎಕ್ಸಿಮ್ ಬ್ಯಾಂಕ್‌ನಿಂದ ಸಾಲ ಪಡೆದು ನಿರ್ಮಿಸಲಾಗಿದೆ. ಇದರ ಜೊತೆಗೆ,  ಮಾನಸಿಕ ಆರೋಗ್ಯ ಮತ್ತು ಬೀದಿ ದೀಪಗಳಂತಹ ಇತರ ಸಮುದಾಯ-ಕೇಂದ್ರಿತ ಯೋಜನೆಗಳನ್ನು ಭಾರತವು ಕೈಗೊಂಡಿದೆ.

ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ರವರು ಕೂಡ ಈ ಕಾರ್ಯಕ್ರಮದ ಬಗ್ಗೆ ಟ್ವೀಟ್ ಮಾಡಿದ್ದು, ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಿದ್ದಕ್ಕಾಗಿ ಭಾರತ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

 

ಹೀಗಾಗಿ, ನೀರು ಮತ್ತು ಒಳಚರಂಡಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಈ ದ್ವೀಪಗಳನ್ನು ಹಸ್ತಾಂತರಿಸಲಾಗಿರುವುದರಿಂದ, ಈ 28 ದ್ವೀಪಗಳನ್ನು ಭಾರತವು ಖರೀದಿಸಿದೆ ಎಂಬ ಹೇಳಿಕೆ ಸುಳ್ಳಾಗಿದೆ. 

ಇದನ್ನೂ ಓದಿ:

ಈ ಚಿತ್ರವು ರಾಜಸ್ಥಾನದ 5000 ವರ್ಷ ಹಳೆಯ ದೇವಾಲಯವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಎನ್‌ಡಿಎ ಸರ್ಕಾರ ರಚನೆಯ ಮುನ್ನ ನಿತೀಶ್ ಕುಮಾರ್ ಇಂಡಿಯಾ ಬ್ಲಾಕ್ ನಾಯಕರನ್ನು ಭೇಟಿ ಮಾಡಿದರೇ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*