Don't Miss

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನರ್ಹರಾಗುವ ಮೊದಲು, ವಿನೇಶ್ ಫೋಗಟ್ 2.1 ಕೆಜಿ ಹೆಚ್ಚು ತೂಕ ಹೊಂದಿದ್ದರೇ? ಸತ್ಯ ಪರಿಶೀಲನೆs?

ಹೇಳಿಕೆ/Claim:  ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಮಿತಿಗಿಂತ 2.1 ಕೆಜಿ ಹೆಚ್ಚು ತೂಕ ಹೊಂದಿದ್ದರು, ಆದ್ದರಿಂದ ಒಲಿಂಪಿಕ್ಸ್ ಫೈನಲ್‌ನಲ್ಲಿ ಆಕೆಯನ್ನು ಅನರ್ಹಗೊಳಿಸಲಾಯಿತು.

ಕಡೆನುಡಿ/Conclusion: ದಾರಿತಪ್ಪಿಸುವ ಸುದ್ದಿ. ವಿನೇಶ್ ಫೋಗಟ್, ತಮ್ಮ ತೂಕ ವಿಭಾಗದಲ್ಲಿ 50 ಕೆಜಿ ಮಿತಿಗಿಂತ ಕೇವಲ 100 ಗ್ರಾಂ ಹೆಚ್ಚು ತೂಕ ಹೊಂದಿದ್ದರು, ಆದ್ದರಿಂದ ಅವರನ್ನು ಅನರ್ಹಗೊಳಿಸಲಾಯಿತು.

ರೇಟಿಂಗ್: ದಾರಿತಪ್ಪಿಸುವ ಸುದ್ದಿ.–

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ  ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

*************************************************************************

ಸತ್ಯ ಪರಿಶೀಲನೆ ವಿವರಗಳು

2024 ರ ಪ್ಯಾರಿಸ್ ಒಲಂಪಿಕ್ಸ್ ಉತ್ತುಂಗಗ್ಗೇರುತ್ತಿದ್ದಂತೆ, ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ರವರ ಯಶಸ್ವಿ ಪಂದ್ಯಗಳ ಕಾರಣ ಆಕೆ ಫೈನಲ್ಸ್ ತಲುಪುವುದರ ಮೇಲೆ ಅನೇಕ ಕಣ್ಣುಗಳು ಹಾಯ್ದು ಆಗಸ್ಟ್ 6, 2024 ರಂದು ಈ ವಿಷಯ ಮುಖ್ಯಾಂಶಗಳಿಗೇರಿತ್ತು. ಆದರೆ, ಹೆಚ್ಚಿನ ತೂಕದ ಕಾರಣ ಅಂತಿಮ ಸುತ್ತಿನಲ್ಲಿ ಭಾಗವಹಿಸಲು ಆಕೆ ಅನರ್ಹಗೊಂಡಿರುವ ಆಘಾತಕಾರಿ ಸುದ್ದಿ ಮರುದಿನ ಬೆಳಿಗ್ಗೆ ಬಂದಿತು.

ವಿನೇಶ್ ಫೋಗಟ್ 50 ಕೆಜಿ ತೂಕ ವಿಭಾಗದಲ್ಲಿದ್ದರು. ವಿನೇಶ್ ಫೋಗಟ್ ತಮ್ಮ 50 ಕೆಜಿ ತೂಕದ ವರ್ಗಕ್ಕಿಂತ  “ಸ್ವಲ್ಪ ಹೆಚ್ಚಿದ್ದಾರೆ” ಎಂದು ಹೆಚ್ಚಿನ ವಿವರಗಳನ್ನು ನೀಡದೆ,  ಐ.ಒ.ಎ ಅಧಿಕೃತವಾಗಿ ಹೇಳಿತು.

ಹೇಳಿಕೆ ಹೀಗಿದೆ, “ಆಕೆ 2.1 ಕೆಜಿ ಹೆಚ್ಚು ತೂಕವಿದ್ದರು. ಅನುಮತಿಸುವ ಮಿತಿ 2 ಕೆಜಿಯಾಗಿತ್ತು. ವಿನೇಶ್ 2 ಕೆಜಿ + 100 ಗ್ರಾಂಗಳಷ್ಟು ಅಧಿಕ ತೂಕ ಹೊಂದಿದ್ದರು.”

ವಿನೇಶ್ ಫೋಗಟ್ 50-ಕೆಜಿ ಮಿತಿಗಿಂತ 2.1 ಕೆಜಿ ಹೆಚ್ಚು ತೂಕ ಹೊಂದಿದ್ದು, ಆದ್ದರಿಂದ ಅನರ್ಹಗೊಂಡಿದ್ದರು, ಎಂದು ಮೊದಮೊದಲಿನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಹೇಳಲಾರಂಭಿಸಿದವು.

FACT-CHECK

ಈ ಕುಸ್ತಿಪಟು “50 ಕೆಜಿಗಿಂತ ಕೆಲವೇ ಗ್ರಾಂ ಹೆಚ್ಚು ತೂಕ ಹೊಂದಿದ್ದರು” ಮತ್ತಿದು ಆಕೆಯ ಅನರ್ಹತೆಗೆ ಕಾರಣವಾಯಿತು ಎಂದು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ (ಐ.ಇ.ಎ)ನ ಅಧಿಕೃತ ಹೇಳಿಕೆಯು ಉಲ್ಲೇಖಿಸುತ್ತದೆ. “ಮಹಿಳಾ ಕುಸ್ತಿ 50 ಕೆಜಿ ವಿಭಾಗದಿಂದ ವಿನೇಶ್ ಫೋಗಟ್ ಅವರ ಅನರ್ಹಗೊಳಿಸುವಿಕೆಯ ಸುದ್ದಿಯನ್ನು ಭಾರತೀಯ ತಂಡವು ವಿಷಾದಪೂರ್ವಕವಾಗಿ ಹಂಚಿಕೊಳ್ಳುತ್ತಿದೆ. ಇಡೀ ರಾತ್ರಿ ತಂಡದ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಆಕೆ ಇಂದು ಬೆಳಿಗ್ಗೆ 50 ಕೆಜಿಗಿಂತ ಕೆಲವು ಗ್ರಾಂಗಳಷ್ಟು ಹೆಚ್ಚು ತೂಕ ಹೊಂದಿದ್ದರು”, ಎಂದು ಐಒಎ Xನಲ್ಲಿನ ಪೋಸ್ಟ್‌ನಲ್ಲಿ ಹೇಳಿತು.

ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐ.ಒ.ಎ)ನ, ಮುಖ್ಯ ವೈದ್ಯಕೀಯ ಅಧಿಕಾರಿ, ಡಾ. ದಿನ್ಶಾ ಪರ್ದಿವಾಲಾ ರವರು ತಮ್ಮ ಹೇಳಿಕೆಯಲ್ಲಿ, ಭಾರತದ ಕುಸ್ತಿಪಟು ವಿನೇಶ್ ಫೋಗಟ್ ರವರ ಅನರ್ಹತೆಗೆ ಕಾರಣವಾದ ತೂಕದ ಸಮಸ್ಯೆಯನ್ನು ವಿವರಿಸಿದರು. ಈ ಹೇಳಿಕೆಯ ಪ್ಯಾರಾ 4 ಹೇಳುವಂತೆ, “ವಿನೇಶ್ ತಮ್ಮ 50 ಕೆಜಿ ತೂಕದ ವಿಭಾಗದಲ್ಲಿ 100 ಗ್ರಾಂ ತೂಕ ಹೆಚ್ಚಿರುವುದು ಕಂಡುಬಂತು, ಆದ್ದರಿಂದ, ಆಕೆಯನ್ನು ಅನರ್ಹಗೊಳಿಸಲಾಯಿತು. ಆಕೆಯ ಕೂದಲನ್ನು ಕತ್ತರಿಸುವುದು ಸೇರಿದಂತೆ ಎಲ್ಲಾ ಕಠಿಣ ಕೃತ್ಯಗಳನ್ನು ಮಾಡಲಾಗಿತ್ತು. ಆದರೆ, ಆಕೆ, ಅನುಮತಿಸಿರುವ 50 ಕೆಜಿ ತೂಕಕ್ಕಿಂತ ಕಡಿಮೆಯಾಗಲಿಲ್ಲ.”

ಇದಲ್ಲದೆ, ಕೇಂದ್ರ ಕ್ರೀಡಾ ಸಚಿವರು ಸಂಸತ್ತಿನಲ್ಲಿ ತಮ್ಮ ಹೇಳಿಕೆಯಲ್ಲಿಯೂ ಕೆಳಗಿನಂತೆ  ಹೇಳಿದ್ದಾರೆ:


ಆದ್ದರಿಂದ, ವಿನೇಶ್ ಫೋಗಟ್ ರವರು 50 ಕೆಜಿ ಮಿತಿಗಿಂತ 2.1 ಕೆಜಿ ಹೆಚ್ಚು ತೂಕ ಹೊಂದಿದ್ದರು ಎಂಬ ಹೇಳಿಕೆಯು ಆಧಾರರಹಿತ ಮತ್ತು ಸುಳ್ಳು.

ಇದನ್ನೂ ಓದಿ:

ಶ್ರೀಲಂಕಾದ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರು ‘ತೌಬಾ ತೌಬಾ’ ಹಾಡಿಗೆ ನೃತ್ಯ ಮಾಡುತ್ತಿದ್ದಾರೆಯೇ? ಸತ್ಯ ಪರಿಶೀಲನೆ

ಭಾರೀ ಮಳೆಯಿಂದಾಗಿ ಈಗ ಮುಂಬೈಯಲ್ಲಿ ಗೇಟ್‌ವೇ ಆಫ್ ಇಂಡಿಯಾದಲ್ಲಿ ಪ್ರವಾಹ? ಸತ್ಯ ಪರಿಶೀಲನೆ

 

Leave a Reply

Your email address will not be published. Required fields are marked *

*