Don't Miss

ಭಾರೀ ಮಳೆಯಿಂದಾಗಿ ಈಗ ಮುಂಬೈಯಲ್ಲಿ ಗೇಟ್‌ವೇ ಆಫ್ ಇಂಡಿಯಾದಲ್ಲಿ ಪ್ರವಾಹ? ಸತ್ಯ ಪರಿಶೀಲನೆ

ಹೇಳಿಕೆ/Claim:  ಗೇಟ್‌ವೇ ಆಫ್ ಇಂಡಿಯಾದಲ್ಲಿ ಈಗ ಭಾರೀ ಮಳೆಯಾಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ..

ಕಡೆನುಡಿ/Conclusion:  ತಪ್ಪು ನಿರೂಪಣೆ. ಮೇ 2021ರಲ್ಲಿ ಮುಂಬೈಯ ಗೇಟ್‌ವೇ ಆಫ್ ಇಂಡಿಯಾದಲ್ಲಿ ಟೌಕ್ಟೇ ಚಂಡಮಾರುತವು ಅಪ್ಪಳಿಸಿದಾಗಿನ ಹಳೆಯ ವೀಡಿಯೊವನ್ನು ಮುಂಬೈಯ ಇತ್ತೀಚಿನ ಪ್ರವಾಹದ ವೀಡಿಯೊ ಎಂದು ಹಂಚಿಕೊಳ್ಳಲಾಗಿದೆ.

ರೇಟಿಂಗ್:ತಪ್ಪು ನಿರೂಪಣೆ. —

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

************************************************************************

ಪ್ರತಿ ವರ್ಷ, ಭಾರೀ ಮಳೆಗಳ ನಂತರ ಮುಂಬೈ ನಗರದಲ್ಲಿ ಪ್ರವಾಹ ಉಂಟಾಗುತ್ತದೆ, ಆಗ ಹಲವಾರು ರಸ್ತೆಗಳು ಮತ್ತು ವಸತಿ ಪ್ರದೇಶಗಳು ನೀರಿನಲ್ಲಿ ಮುಳುಗಿರುವುದನ್ನು ಚಿತ್ರಗಳು ಮತ್ತು ವೀಡಿಯೊಗಳು ತೋರಿಸುತ್ತವೆ. ಈ ವರ್ಷದ ಮಳೆಗಳ ನಡುವೆ, ಪ್ರಸಿದ್ಧ ಗೇಟ್‌ವೇ ಆಫ್ ಇಂಡಿಯಾದ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದ್ದು ಈ ಅಪ್ರತಿಮ ಸ್ಮಾರಕವು ಪ್ರವಾಹಕ್ಕೆ ಒಳಗಾಗಿದ್ದು ಅದಕ್ಕೆ ಸಮುದ್ರದ ಅಲೆಗಳು ಅಪ್ಪಳಿಸುತ್ತಿರುವುದನ್ನು ತೋರಿಸಲಾಗಿದೆ. X ನಲ್ಲಿ ಹಂಚಿಕೊಳ್ಳಲಾಗುತ್ತಿರುವ ವೀಡಿಯೊವನ್ನು ಕೆಳಗೆ ನೋಡಿ:

“ಗೇಟ್‌ವೇ ಆಫ್ ಇಂಡಿಯಾದಲ್ಲಿ ಭಾರೀ ಮಳೆ” ಎಂಬುದು ವೀಡಿಯೊದೊಂದಿಗಿನ ಹೇಳಿಕೆ, ಇದರ ದಿನಾಂಕ ಜುಲೈ 22, 2024 ಎಂದು ತೋರಿಸಲಾಗಿದೆ. ಅದೇ ವೀಡಿಯೊವನ್ನು X ನಲ್ಲಿ ಜುಲೈ 27, 2024ರಂದು “ಸಮುದ್ರ ಮತ್ತು ಭೂಮಿಯ ಮಟ್ಟ ಒಂದೇ. ಈ ವೀಡಿಯೊ ತಾಜ್ ಮಹಲ್ ಹೋಟೆಲ್, ಗೇಟ್‌ವೇ ಆಫ್ ಇಂಡಿಯಾ, ಮುಂಬೈಯದ್ದು.” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

FACT-CHECK

ಡಿಜಿಟೈ ಇಂಡಿಯಾ ತಂಡವು ಹೇಳಿಕೆಯ ಸತ್ಯ-ಪರಿಶೀಲನೆಗಾಗಿ ವಿನಂತಿಯನ್ನು ಸ್ವೀಕರಿಸಿದಾಗ, ನಾವು ಆ ಕಾರ್ಯವನ್ನು ಕೈಗೆತ್ತಿಕೊಂಡೆವು. ಗೇಟ್‌ವೇ ಆಫ್ ಇಂಡಿಯಾವನ್ನು ಅಪ್ಪಳಿಸುತ್ತಿರುವ ಅಲೆಗಳನ್ನು ತೋರಿಸುವ ಕೀ ಫ್ರೇಮ್‌ ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್‌ನಲ್ಲಿ ಒಂದು ಸರಳ ಹುಡುಕಾಟ ನಡೆಸಿದಾಗ, ಇದು ಮೇ 2021ರಲ್ಲಿ  ಟೌಕ್ಟೇ ಚಂಡಮಾರುತದಿಂದಾಗಿ ಮುಂಬೈಯಲ್ಲಿ ಭಾರೀ ಮಳೆಯುಂಟಾದಾಗ ಹಂಚಿಕೊಳ್ಳಲಾದ ಹಳೆಯ ವೀಡಿಯೊ ಎಂದು ಕಂಡುಬಂತು. ಇದನ್ನು ಮೇ 18, 2021ರಂದು ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿತ್ತು.

ಈ ವೀಡಿಯೊ ಮೇ 2021ರಲ್ಲಿ ಚಂಡಮಾರುತ ಪೀಡಿತವಾಗಿದ್ದ ಮುಂಬೈಗೆ ಸಂಬಂಧಿಸಿದ್ದು ಎಂದು ಸುದ್ದಿ ವರದಿಗಳು ಕೂಡ ದೃಢಪಡಿಸುತ್ತವೆ. ಆದ್ದರಿಂದ, ಕಳೆದ ವಾರ 2024ರ ಜುಲೈ 21ರಿಂದ 27ರವರೆಗೆ ನಗರದಲ್ಲಿ ಭಾರೀ ಮಳೆ ಸುರಿದ ನಂತರ ಗೇಟ್‌ವೇ ಆಫ್ ಇಂಡಿಯಾ ಪ್ರವಾಹಕ್ಕೆ ಸಿಲುಕಿದೆ ಎಂದು ತೋರಿಸುವ ವೀಡಿಯೊ ಸುಳ್ಳು.

ಇದನ್ನೂ ಓದಿ:

ಹೇಳಿಕೆಯಂತೆ, ಈ ವಿಚಿತ್ರ ಸಮುದ್ರ ಪ್ರಾಣಿಯು ಸಮುದ್ರ ಹಸುವನ್ನು ಪ್ರತಿನಿಧಿಸುತ್ತದೆಯೇ? ಸತ್ಯ ಪರಿಶೀಲನೆ

ಆನಿಮೇಟರ್‌ಗಳ ಪೋಸ್ಟ್ ನಿಂದಾಗಿ X ನಲ್ಲಿ ಹ್ಯಾಶ್‌ಟ್ಯಾಗ್ #RIPCartoonNetwork ಟ್ರೆಂಡ್ ಗೆ ಪ್ರಚೋದನೆ; ಸತ್ಯ ಪರಿಶೀಲನೆ

 

Leave a Reply

Your email address will not be published. Required fields are marked *

*