Don't Miss

ನಿಮ್ಮ ಲಿಪ್‌ಸ್ಟಿಕ್ ಅನ್ನು ಕೊಚಿನಿಯಲ್ ಹುಳುಗಳಿಂದ ದೊರಕುವ ಬಣ್ಣದಿಂದ ಮಾಡಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim:  ಕೊಚಿನಿಯಲ್ ಕೀಟಗಳಿಂದ ತಯಾರಿಸಿದ ಬಣ್ಣವನ್ನು ಬಳಸಿ ಲಿಪ್‌ಸ್ಟಿಕ್ ಉತ್ಪಾದಿಸುವ ಪ್ರಕ್ರಿಯೆಯನ್ನು ವೀಡಿಯೊ ತೋರಿಸುತ್ತದೆ.

ಕಡೆನುಡಿ/Conclusion: ಇದು ಸತ್ಯ. ಕೆಲವು ಲಿಪ್‌ಸ್ಟಿಕ್ ಬ್ರ್ಯಾಂಡ್‌ಗಳು ಕೊಚಿನಿಯಲ್ ಕೀಟಗಳಿಂದ ಮಾಡಿದ ಬಣ್ಣವನ್ನು ಬಳಸುತ್ತವೆ.

ರೇಟಿಂಗ್: ಸತ್ಯ —

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

************************************************************************

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿರುವ ಒಂದು ವೀಡಿಯೊದಲ್ಲಿ ಕೊಚಿನಿಯಲ್ ಕೀಟಗಳಿಂದ ತಯಾರಿಸಿದ ಬಣ್ಣವನ್ನು ಬಳಸಿ ‘ಲಿಪ್‌ಸ್ಟಿಕ್’ ನ  ಉತ್ಪಾದನೆ ಮಾಡುತ್ತಿರುವ ಪ್ರಕ್ರಿಯೆಯನ್ನು ತೋರಿಸಲಾಗುತ್ತಿದೆ. ವೀಡಿಯೊ ನಿಜವೋ ಸುಳ್ಳೋ ಎಂಬುದನ್ನು ಪರಿಶೀಲಿಸಲು ಡಿಜಿಟೈ ಇಂಡಿಯಾದ ವಾಟ್ಸಾಪ್ ಟಿಪ್‌ಲೈನ್‌ನಲ್ಲಿ ವೀಡಿಯೊ  ಬಂದಿತು.

ನಾವು ಯೂಟ್ಯೂಬ್ ನಲ್ಲಿ ಪರಿಶೀಲಿಸಿದಾಗ, ಲಿಪ್ಸ್ಟಿಕ್ ಅನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ತೋರಿಸುವ ಇದೇ ರೀತಿಯ ಹೇಳಿಕೆಗಳು ನಮಗೆ ದೊರಕಿದವು.

ಸತ್ಯ ಪರಿಶೀಲನೆ:

ಪ್ರಪಂಚದಾದ್ಯಂತ ಅನೇಕ ಮಹಿಳೆಯರು ಮತ್ತು ಹುಡುಗಿಯರು ದೈನಂದಿನ ಜೀವನದಲ್ಲಿ ಲಿಪ್‌ಸ್ಟಿಕ್ ಬಳಸುತ್ತಿರುವುದರಿಂದ ಈ ವಿಷಯವನ್ನು ಪರಿಶೀಲಿಸಲು ಬಂದಿದ್ದ ಮನವಿಯನ್ನು ಡಿಜಿಟೈ ಇಂಡಿಯಾ  ಕೈಗೆತ್ತಿಕೊಂಡಿತು. ವಾಸ್ತವವಾಗಿ, ಬಣ್ಣದ ಡೈಗಳನ್ನು ತಯಾರಿಸಲು ಪ್ರಾಣಿಗಳು ಅಥವಾ ಕೀಟಗಳನ್ನು ಹೊಂದಿರುವ ಉಪಉತ್ಪನ್ನಗಳನ್ನು ಹೊಂದಿರುವ ಉತ್ಪನ್ನಗಳನ್ನು ಬಳಸುವುದರ ಕುರಿತು ಪ್ರತಿಯೊಬ್ಬ ತಯಾರಕರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಕೊಚಿನಿಯಲ್ ಕೀಟವು, ಪ್ರಾಥಮಿಕವಾಗಿ, ದಕ್ಷಿಣ ಅಮೇರಿಕದಿಂದ ಉತ್ತರ ಅಮೇರಿಕಾವರೆಗಿನ ಉಷ್ಣವಲಯದ ಮತ್ತು ಉಪೋಷ್ಣವಲಯಗಳಿಗೆ (ಮೆಕ್ಸಿಕೋ ಮತ್ತು ನೈಋತ್ಯ ಯುನೈಟೆಡ್ ಸ್ಟೇಟ್ಸ್) ಸ್ಥಳೀಯವಾದ ಆಸನ್ನ ಸ್ಥಿರ ಪರೋಪಜೀವಿಯಾಗಿದೆ, ಈ ಕೀಟವು ಪಾಪಾಸುಕಳ್ಳಿಯ ಮೇಲೆ ವಾಸಿಸುತ್ತದೆ ಮತ್ತು ಸಸ್ಯದ ತೇವಾಂಶ ಮತ್ತು ಪೋಷಕಾಂಶಗಳನ್ನು ಸೇವಿಸುತ್ತದೆ. ಈ ಕೀಟಗಳು ಪ್ರಿಕ್ಲಿ ಪಿಯರ್ ಪಾಪಾಸುಕಳ್ಳಿಯ ಮೇಲ್ಪದರದಲ್ಲಿ ಕಂಡುಬರುತ್ತವೆ, ಇವುಗಳನ್ನು ಸಸ್ಯಗಳಿಂದ ಒರೆಸಿ ತೆಗೆಯುವ ಮೂಲಕ ಸಂಗ್ರಹಿಸಿ ಮತ್ತು ನಂತರ ಇದನ್ನು ಒಣಗಿಸಲಾಗುತ್ತದೆ.

ಹೆಣ್ಣು ಕೋಚಿನಿಯಲ್ ಕೀಟಗಳನ್ನು ಸಂಗ್ರಹಿಸಿ, ಬಿಸಿಲಿನಲ್ಲಿ ಒಣಗಿಸಿ, ಜಜ್ಜಿ, ನಂತರ ಆಮ್ಲೀಯ ಮದ್ಯದೊಂದಿಗೆ ಬೆರೆಸಿ ಕಡುಗೆಂಪು ಬಣ್ಣದಿಂದ ಹಿಡಿದು ಗುಲಾಬಿ, ಕೆಂಪು, ನೇರಳೆ ಅಥವಾ ಪೀಚ್‌ ನಂತಹ ರೋಮಾಂಚಕ ಬಣ್ಣಗಳನ್ನು ಪಡೆಯಲಾಗುತ್ತದೆ. ಈ ಕೀಟವು ಕಾರ್ಮಿನಿಕ್ ಆಮ್ಲವನ್ನು ಉತ್ಪಾದಿಸುತ್ತದೆ, ಅದರಿಂದಾಗಿ ಇತರ ಕೀಟಗಳಿಂದ ತಿನ್ನಲ್ಪಡುವುದನ್ನು ತಡೆಯುತ್ತದೆ.

ಒಣಗಿದ ಕೀಟಗಳ ಒಟ್ಟು ತೂಕದ 17-24 ಶೇಕಡದಷ್ಟು ತೂಕವಿರುವ ಕಾರ್ಮಿನಿಕ್ ಆಮ್ಲವನ್ನು ದೇಹ ಮತ್ತು ಮೊಟ್ಟೆಗಳಿಂದ ಹೊರತೆಗೆಯಬಹುದು, ನಂತರ ಇದನ್ನು ಅಲ್ಯೂಮಿನಿಯಂ ಅಥವಾ ಕ್ಯಾಲ್ಸಿಯಂ ಲವಣಗಳೊಂದಿಗೆ ಬೆರೆಸಿ ಕಾರ್ಮೈನ್ ಡೈ ತಯಾರಿಸಬಹುದು, ಇದನ್ನು ಕೊಚಿನಿಯಲ್ ಎಂದೂ ಕರೆಯುತ್ತಾರೆ. ಇಂದು, ಪ್ರಮುಖವಾಗಿ ಆಹಾರದಲ್ಲಿ ಮತ್ತು ಲಿಪ್‌ಸ್ಟಿಕ್ ಗಳಲ್ಲಿಯೂ ಕಾರ್ಮೈನ್ ಅನ್ನು ಬಣ್ಣಕಾರಕವಾಗಿ ಬಳಸಲಾಗುತ್ತದೆ (E120 ಅಥವಾ ನೈಸರ್ಗಿಕ ಕೆಂಪು 4).

ಮತ್ತು ಕಾರ್ಮಿನಿಕ್ ಆಸಿಡ್ (C22H20O13) ಕೆಂಪು ಗ್ಲುಕೋಸೈಡಲ್ ಹೈಡ್ರಾಕ್ಸಿಯಾಂತ್ರಪ್ಯೂರಿನ್ ಆಗಿದ್ದು ಇದು ಈ ಕೊಚಿನಿಯಲ್ ಕೀಟಗಳಲ್ಲಿ ನೈಸರ್ಗಿಕವಾಗಿ ಕಂಡುಬರುತ್ತದೆ. “ಮೇಕಪ್ ಉತ್ಸಾಹಿಗಳೇ: ನಿಮ್ಮ ಮುಖದ ಮೇಲೆ ಸತ್ತ ಕೀಟಗಳನ್ನು ಹಚ್ಚುವುದನ್ನು ನಿಲ್ಲಿಸಿ” ಎಂಬ ಶೀರ್ಷಿಕೆಯ ಸೌಂದರ್ಯವರ್ಧಕಗಳ ಕುರಿತಾದ ತನ್ನ ವರದಿಯಲ್ಲಿ PETA (ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್ಸ್) ಈ ಹೇಳಿಕೆಯನ್ನು ಬಲಪಡಿಸಿದೆ.

BBC ಸೈನ್ಸ್ ಫೋಕಸ್ ಕೂಡ ಲಿಪ್‌ಸ್ಟಿಕ್‌ಗಳಲ್ಲಿ ಕೊಚಿನಿಯಲ್ ಕೀಟಗಳ ಬಣ್ಣದ ಬಳಕೆಯನ್ನು ದೃಢೀಕರಿಸುತ್ತದೆ.

ಕೊಚಿನಿಯಲ್ ಕೀಟಗಳ ಬಣ್ಣವನ್ನು ಬಳಸಿ ಲಿಪ್‌ಸ್ಟಿಕ್‌ ತಯಾರಿಸುವ ಪ್ರಕ್ರಿಯೆಯನ್ನು ತೋರಿಸುವ ಅನೇಕ ವೀಡಿಯೊಗಳಿವೆ. ಅಂತಹ ಕೆಲವು ವೀಡಿಯೊಗಳನ್ನು ಕೆಳಗೆ ವೀಕ್ಷಿಸಬಹುದು:

ಕೆಂಪು ಬಣ್ಣವು ಸಂಶ್ಲೇಷಿತ (ಸಿಂಥೆಟಿಕ್) ಬಣ್ಣದಿಂದಲೂ (ಕಲ್ಲಿದ್ದಲು/ಟಾರ್/ಪೆಟ್ರೋಲಿಯಂ ಉಪಉತ್ಪನ್ನಗಳಿಂದ ತಯಾರಿಸಲ್ಪಟ್ಟದ್ದು) ಬರುತ್ತದೆ, ಆದರೆ ಗ್ರಾಹಕ ಉತ್ಪನ್ನಗಳಲ್ಲಿ ಕೃತಕ ಬಣ್ಣಗಳ ಬಳಕೆಯ ಮೇಲೆ ನಿರ್ಬಂಧ ಅಥವಾ ಮಿತಿ ಇರುವುದರಿಂದ, ತಯಾರಕರು/ ಹಲವು ಉನ್ನತ ಬ್ರ್ಯಾಂಡ್‌ಗಳು ತಮ್ಮ ಉತ್ಪನ್ನಗಳಲ್ಲಿ ಕೊಚಿನಿಯಲ್ ಬಣ್ಣವನ್ನು ಬಳಸಿ, ಲೇಬಲ್‌ಗಳಲ್ಲಿ ಇದನ್ನು ನೈಸರ್ಗಿಕ ಎಂದು ನಮೂದಿಸುತ್ತಾರೆ.

ಆಹಾರ ಉತ್ಪನ್ನಗಳು ಅಥವಾ ಲಿಪ್‌ಸ್ಟಿಕ್ ಮೇಲಿನ ಲೇಬಲ್ ನಲ್ಲಿ: “ಕಾರ್ಮೈನ್ (ಬಣ್ಣ ಸಂಯೋಜಕ ಅಥವಾ ಬಣ್ಣಕಾರಕ E120), CI 75470,” “ಕೊಚಿನಿಯಲ್ ಎಕ್ಸ್ಟ್ರಾಕ್ಟ್,” ” ಕ್ರಿಮ್ಸನ್ ಲೇಕ್,” “ನೈಸರ್ಗಿಕ ಕೆಂಪು 4,” ಅಥವಾ “ಕಾರ್ಮೈನ್” ಎಂದು ನಮೂದಾಗಿದ್ದರೆ, ಆ ಉತ್ಪನ್ನದಲ್ಲಿ ಒಣಗಿದ ಮತ್ತು ಬೇಯಿಸಿದ ಕೋಚಿನಿಯಲ್ ಕೀಟಗಳಿವೆ ಎಂದರ್ಥ. ಕೆಂಪು ಬಣ್ಣದ ಲಿಪ್‌ಸ್ಟಿಕ್ ನಲ್ಲಿ ಇದು ಅನಿವಾರ್ಯ. ಆದ್ದರಿಂದ, ಕೆಲವು ಲಿಪ್‌ಸ್ಟಿಕ್‌ಗಳು ಕೊಚಿನಿಯಲ್ ಕೀಟಗಳಿಂದ ತಯಾರಿಸಿದ ಬಣ್ಣವನ್ನು ಹೊಂದಿರುತ್ತವೆ ಎಂಬ ಹೇಳಿಕೆ ನಿಜವಾಗಿದೆ. ಅದನ್ನು ಖಚಿತಪಡಿಸಿಕೊಳ್ಳಲು ಗ್ರಾಹಕರು ಉತ್ಪನ್ನದ ಲೇಬಲ್‌ಗಳನ್ನು ಪರಿಶೀಲಿಸಬೇಕಾಗುತ್ತದೆ.

ಇದನ್ನೂ ಓದಿ

ಈ ಚಿತ್ರವು ರಾಜಸ್ಥಾನದ 5000 ವರ್ಷ ಹಳೆಯ ದೇವಾಲಯವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಎನ್‌ಡಿಎ ಸರ್ಕಾರ ರಚನೆಯ ಮುನ್ನ ನಿತೀಶ್ ಕುಮಾರ್ ಇಂಡಿಯಾ ಬ್ಲಾಕ್ ನಾಯಕರನ್ನು ಭೇಟಿ ಮಾಡಿದರೇ? ಸತ್ಯ ಪರಿಶೀಲನೆ

 

 

 

Leave a Reply

Your email address will not be published. Required fields are marked *

*