ಹೇಳಿಕೆ/Claim: ಜುಲೈ 15 ರಂದು ಮಿಲ್ವಾಕಿಯಲ್ಲಿ ನಡೆದ ರಿಪಬ್ಲಿಕನ್ ಸಮಾವೇಶಕ್ಕೆ ಉಪ ರಾಷ್ಟ್ರಪತಿ ಹುದ್ದೆಗೆ ನಾಮನಿರ್ದೇಶಿತರಾದ ಜೆ.ಡಿ ವ್ಯಾನ್ಸ್ ತಮ್ಮ ಭಾರತೀಯ ಮೂಲದ ಪತ್ನಿಯನ್ನು ಕರೆತಂದಾಗ “ಇಂಡಿಯಾ-ಇಂಡಿಯಾ” ಎಂಬ ಘೋಷಣೆಗಳನ್ನು ಕೇಳಿಬಂದವು.
ಕಡೆನುಡಿ/Conclusion: ಹೇಳಿಕೆ ಸುಳ್ಳು. ಹೇಳಿಕೆಯಲ್ಲಿರುವಂತೆ ಮೂಲ ವೀಡಿಯೊದಲ್ಲಿ “ಇಂಡಿಯಾ-ಇಂಡಿಯಾ” ಎಂಬ ಯಾವುದೇ ಘೋಷಣೆಗಳು ಕೇಳಿಬರುವುದಿಲ್ಲ.
ರೇಟಿಂಗ್: ದಾರಿತಪ್ಪಿಸುವ ಸುದ್ದಿ—
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
************************************************************************
ಜುಲೈ 15, 2024 ರಂದು ಮಿಲ್ವಾಕಿಯಲ್ಲಿ ನಡೆದ ರಿಪಬ್ಲಿಕನ್ ನ್ಯಾಷನಲ್ ಸಮಾವೇಶದಲ್ಲಿ ಜೆ.ಡಿ ವ್ಯಾನ್ಸ್ ರವರನ್ನು ಉಪ ರಾಷ್ಟ್ರಪತಿಗಳ ಅಭ್ಯರ್ಥಿ ಎಂದು ಘೋಷಿಸುತ್ತಿದ್ದಂತೆಯೇ, “ಇಂಡಿಯಾ-ಇಂಡಿಯಾ” ಎಂಬ ಘೋಷಣೆಗಳು ಕೇಳಿಬಂದವು ಎನ್ನುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ತಿರುಗಲಾರಂಭಿಸಿತು. ಸಮಾವೇಶದಲ್ಲಿದ್ದ ಪ್ರತಿನಿಧಿಗಳು ಜೆ ಡಿ ವ್ಯಾನ್ಸ್ ಮತ್ತು ಅವರ ಭಾರತೀಯ ಮೂಲದ ಪತ್ನಿ ಉಷಾ ಚಿಲುಕುರಿಯವರಿಬ್ಬರನ್ನೂ ಸ್ವಾಗತಿಸಿದರು.
“India India” chants as JD Vance brings soon to be second lady Usha Chilukuri into the RNC convention
The new Republican Party. It just keeps getting better 🤡 pic.twitter.com/Pdj8QhJlQQ
— White_Nation_United (@White_Tribe_) July 16, 2024
ಈ ಸಂದರ್ಭದಲ್ಲಿ, ವ್ಯಾನ್ಸ್ ತಮ್ಮ ಹೆಂಡತಿಯನ್ನು ಸಮಾವೇಶಕ್ಕೆ ಕರೆತಂದದ್ದರಿಂದ ಭಾರತದ ಹೆಸರಿನ ಪಠಣ ಪ್ರಾರಂಭವಾಯಿತು ಎಂದು ವೀಡಿಯೊದಲ್ಲಿ ಹೇಳಲಾಗಿದೆ. ಓರ್ವ X ಬಳಕೆದಾರರು ಬರೆದಿರುವಂತೆ, “ಜೆ.ಡಿ ಶೀಘ್ರದಲ್ಲೇ ಸೆಕೆಂಡ್ ಲೇಡಿ (ದ್ವಿತೀಯ ಮಹಿಳೆ) ಯಾಗಲಿರುವ ಉಷಾ ಚಿಲುಕುರಿಯವರನ್ನು ಅರ್.ಎನ್.ಸಿ ಸಮಾವೇಶಕ್ಕೆ ವ್ಯಾನ್ಸ್ ಕರೆತರುತ್ತಿದ್ದಂತೆಯೇ ‘ಇಂಡಿಯಾ ಇಂಡಿಯಾ’ ಎಂಬ ಪಠಣ. ಹೊಸ ರಿಪಬ್ಲಿಕನ್ ಪಕ್ಷ. ಮುಂದೆ ಸಾಗುತ್ತಲೇ ಇದೆ. ”
FACT-CHECK
ಜುಲೈ 15 ರಂದು ಫೋರ್ಬ್ಸ್ ಅಪ್‌ಲೋಡ್ ಮಾಡಿದ ರಿಪಬ್ಲಿಕನ್ ಸಮಾವೇಶದ ವೀಡಿಯೊವನ್ನು ಡಿಜಿಟೈ ಇಂಡಿಯಾ ತಂಡವು ಗಮನಿಸಿದಾಗ, ವೀಡಿಯೊದ 03:00 ಗಂಟೆಗಳ ಹೊತ್ತಿಗೆ, ವ್ಯಾನ್ಸ್‌ರವರ ನಾಮನಿರ್ದೇಶನವನ್ನು ಘೋಷಿಸಿದಾಗ ಯುಎಸ್ ನ ಸಿಕ್ಸ್‌ವೈರ್ ಎಂಬ ಬ್ಯಾಂಡ್ ಪ್ರದರ್ಶನ ನೀಡಿತು. ಕೆಳಗೆ ನೋಡಿ:
ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ನಲ್ಲಿ ಹೇಳಿಕೊಂಡಂತೆ ವೀಡಿಯೊದಲ್ಲಿ “ಇಂಡಿಯಾ-ಇಂಡಿಯಾ” ಎಂಬ ಯಾವುದೇ ಘೋಷಣೆಗಳನ್ನು ಕೇಳಿಬರುವುದಿಲ್ಲ. ಆದ್ದರಿಂದ, ಸಮಾವೇಶದಲ್ಲಿ ಪ್ರತಿನಿಧಿಗಳು ‘ಇಂಡಿಯಾ-ಇಂಡಿಯಾ’ ಎಂದು ಪಠಿಸುತ್ತಿದ್ದರು ಎಂದು ಹೇಳಲು ವೀಡಿಯೊದ ಧ್ವನಿ ಸುರುಳಿಯನ್ನು ತಿದ್ದಲಾಗಿದೆ.
ಇದನ್ನೂ ಓದಿ:
ಈ ಚಿತ್ರವು ರಾಜಸ್ಥಾನದ 5000 ವರ್ಷ ಹಳೆಯ ದೇವಾಲಯವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ