Don't Miss

ಆನಿಮೇಟರ್‌ಗಳ ಪೋಸ್ಟ್ ನಿಂದಾಗಿ X ನಲ್ಲಿ ಹ್ಯಾಶ್‌ಟ್ಯಾಗ್ #RIPCartoonNetwork ಟ್ರೆಂಡ್ ಗೆ ಪ್ರಚೋದನೆ; ಸತ್ಯ ಪರಿಶೀಲನೆ

ಹೇಳಿಕೆ/Claim:ಕಾರ್ಟೂನ್ ನೆಟ್‌ವರ್ಕ್ ವಾಹಿನಿಯನ್ನು ಮುಚ್ಚಲಾಗುತ್ತಿದೆ.

ಕಡೆನುಡಿ/Conclusion: ಹೇಳಿಕೆ ಸುಳ್ಳು. ಕಾರ್ಟೂನ್ ನೆಟ್‌ವರ್ಕ್ ವಾಹಿನಿಯು ಸುದ್ದಿವಾಹಿನಿಗಳಿಗೆ ನೀಡಿರುವ ಸ್ಪಷ್ಟೀಕರಣದಲ್ಲಿ ಇದನ್ನು ನಿರಾಕರಿಸಿದೆ.

ರೇಟಿಂಗ್:ದಾರಿತಪ್ಪಿಸುವ ಸುದ್ದಿ 

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

************************************************************************

“ಕಾರ್ಟೂನ್ ನೆಟ್‌ವರ್ಕ್ ಅನ್ನು ಅಧಿಕೃತವಾಗಿ ಮುಚ್ಚಲಾಗಿದೆ. ಇದು ಕಾರ್ಟೂನ್ ನೆಟ್‌ವರ್ಕ್‌ನಲ್ಲಿನ ಅದ್ವಿತೀಯ ಬಾಲ್ಯದ ನೆನಪುಗಳ ಯುಗದ ಅಂತ್ಯ.” ಎಂಬ ಹೇಳಿಕೆಯೊಂದಿಗೆ ಪಾಪಾಯ್, ಬ್ಯಾಟ್‌ಮ್ಯಾನ್, ಮಿಕ್ಕಿ ಮೌಸ್, ಟಾಮ್ ಎಂಡ್ ಜೆರ್ರಿ ಮತ್ತಿತರ ಜನಪ್ರಿಯ ಕಾರ್ಯಕ್ರಮಗಳನ್ನು ತೋರಿಸುವ ಪೋಸ್ಟರ್ ಅನ್ನು ಹಂಚಿಕೊಳ್ಳಲಾಗುತ್ತಿದೆ.

ನಾವು ಪರಿಶೀಲಿಸಿದಾಗ, ಈ ಹೇಳಿಕೆ ಎರಡು ವರ್ಷ ಹಿಂದಿನದು ಮತ್ತಿದನ್ನು ಆಗಾಗ ಹಂಚಿಕೊಳ್ಳಲಾಗುತ್ತಿದೆ ಎಂಬುದು ಕಂಡುಬಂತು. ಅದರ ಪ್ರಸ್ತುತ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

 

FACT-CHECK

ನಾವು ಮೊದಲಿಗೆ ಗೂಗಲ್ ನಲ್ಲಿ ‘ಕಾರ್ಟೂನ್ ನೆಟ್‌ವರ್ಕ್ ಮುಚ್ಚುವಿಕೆ’ಗೆ ಸಂಬಂಧಿಸಿದ ಯಾವುದೇ ಸುದ್ದಿಗಾಗಿ ಹುಡುಕಾಡಿದಾಗ ಹಲವಾರು ವಿರೋಧಾತ್ಮಕ ಹೇಳಿಕೆಗಳು ಬಹಿರಂಗವಾದವು, ಕೆಲವು ಹೇಳಿಕೆಗಳು ಇದು ಕಾರ್ಟೂನ್ ನೆಟ್‌ವರ್ಕ್‌ನ ಕೊನೆ ಎಂದು ಹೇಳಿದರೆ, ಇನ್ನೂ ಕೆಲವು ಈ ಕ್ರಮವು ಸಂಪೂರ್ಣ ಎನಿಮೇಷನ್ ಉದ್ಯಮದ ಮೇಲೆ ಪರಿಣಾಮ ಬೀರಲಿದೆ ಎಂಬ ಅಂಶವನ್ನು ಮುಂದಿಡುತ್ತವೆ.

ಹೆಚ್ಚಿನ ಹುಡುಕಾಟ ನಡೆಸಿದಾಗ ಸ್ಟುಡಿಯೋ ಕುರಿತಾದ ಸುದ್ದಿಯ ಪ್ರಕಾರ ನಮಗೆ ತಿಳಿದುಬಂದದ್ದೇನೆಂದರೆ, ಕಳೆದ ವರ್ಷ ಸ್ಟುಡಿಯೋವನ್ನು ಅದರ ಪ್ರಧಾನ ಕಛೇರಿಯಿಂದ ವಾರ್ನರ್ ಬ್ರದರ್ಸ್ ಸ್ಟುಡಿಯೋಗೆ ಸ್ಥಳಾಂತರಿಸಲಾಗಿತ್ತು, ನಿಖರವಾಗಿ ಹೇಳುವುದಾದರೆ ಆಗಸ್ಟ್ 1, 2023ರಂದು. ಆದರೆ, ಕಾರ್ಟೂನ್ ನೆಟ್‌ವರ್ಕ್‌ ಸ್ಥಗಿತಗೊಳ್ಳುತ್ತಿರುವುದಾಗಿ ಅದು ಅಧಿಕೃತವಾಗಿ ಯಾವುದೇ ಪತ್ರಿಕಾ ಪ್ರಕಟಣೆ ನೀಡಿಲ್ಲ.

ಮನಿ ಕಂಟ್ರೋಲ್ ಮತ್ತು ಹಿಂದೂಸ್ತಾನ್ ಟೈಮ್ಸ್‌ನ ಸುದ್ದಿ ವರದಿಗಳಿಂದ ಪೂರ್ಣ ಸ್ಪಷ್ಟತೆ ದೊರಕಿತು, ಈ ಸುದ್ದಿ ವರದಿಗಳಲ್ಲಿ ಕಾರ್ಟೂನ್ ನೆಟ್‌ವರ್ಕ್ ವಾಹಿನಿಯ ಈ ಮುಂದಿನ ಹೇಳಿಕೆಯನ್ನು ತಿಳಿಸಲಾಗಿದೆ: “ನೆಟ್‌ವರ್ಕ್ ಅಥವಾ ಸ್ಟುಡಿಯೋ ಮುಚ್ಚುತ್ತಿದೆ ಎಂಬ ಊಹಾಪೋಹದಲ್ಲಿ ಯಾವುದೇ ಸತ್ಯವಿಲ್ಲ ಎಂದು ಕಾರ್ಟೂನ್ ನೆಟ್‌ವರ್ಕ್ ಸ್ಪಷ್ಟಪಡಿಸಲು ಬಯಸುತ್ತದೆ. ಇತ್ತೀಚೆಗೆ ಘೋಷಿಸಲಾದ ಹಲವು ಹಸಿರು ದೀಪಗಳೊಂದಿಗೆ, ಪ್ರಪಂಚದಾದ್ಯಂತದ ನಮ್ಮ ವೀಕ್ಷಕರನ್ನು ಮನರಂಜಿಸುವ ಮತ್ತು ಪ್ರೇರೇಪಿಸುವ ನವೀನ ವಿಷಯಗಳಲ್ಲಿ ನಿರಂತರ ಹೂಡಿಕೆ ಮಾಡಲು ನಾವು ಬದ್ಧರಾಗಿದ್ದೇವೆ.”

ಇಂತಹ ವದಂತಿಗಳಿಗೆ ಪ್ರಚೋದನೆಯು Xನಲ್ಲಿನ ಎನಿಮೇಟರ್‌ಗಳ ಒಕ್ಕೂಟವನ್ನು ಪ್ರತಿಪಾದಿಸುವ ಒಂದು ಅಕೌಂಟ್ ಆಗಿರುವ ಎನಿಮೇಷನ್ ವರ್ಕರ್ಸ್ ಇಗ್ನೈಟೆಡ್ ನಿಂದ ಆರಂಭವಾದ #RIPCartoonNetwork ಎಂಬ ಹ್ಯಾಶ್‌ಟ್ಯಾಗ್‌ನಿಂದ ಈ ಹೇಳಿಕೆ ಹುಟ್ಟಿಕೊಂಡಿತು ಎಂದು ವರದಿಗಳು ಹೇಳುತ್ತವೆ. ಆದ್ದರಿಂದ, ಈ ಹೇಳಿಕೆ ಸುಳ್ಳು.

ಇದನ್ನೂ ಓದಿ

ಈ ಚಿತ್ರವು ರಾಜಸ್ಥಾನದ 5000 ವರ್ಷ ಹಳೆಯ ದೇವಾಲಯವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಎನ್‌ಡಿಎ ಸರ್ಕಾರ ರಚನೆಯ ಮುನ್ನ ನಿತೀಶ್ ಕುಮಾರ್ ಇಂಡಿಯಾ ಬ್ಲಾಕ್ ನಾಯಕರನ್ನು ಭೇಟಿ ಮಾಡಿದರೇ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*