Don't Miss

ಹೈದರಾಬಾದ್‌ನಲ್ಲಿ ಈ ಅಪಾಯಕಾರಿ ರೀಲ್‌ಗಾಗಿ ಯುವಕ ಬಸ್‌ನ ಮುಂದೆ ಮಲಗಿರುವುದನ್ನು ಈ ವೀಡಿಯೊ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim:ಹೈದರಾಬಾದ್‌ನಲ್ಲಿ ಯುವಕನೊಬ್ಬ ಅಪಾಯಕಾರಿ ರೀಲ್ ಮಾಡಲು ಬಸ್‌ನ ಮುಂದೆ ಮಲಗುವುದನ್ನು ವೀಡಿಯೊ ತೋರಿಸುತ್ತದೆ.

ಕಡೆನುಡಿ/Conclusion: ಹೇಳಿಕೆ ಸುಳ್ಳು. ಯುವಕ ರಸ್ತೆಯಲ್ಲಿ ಈ ಕೃತ್ಯ ಎಸಗುತ್ತಿರುವುದನ್ನು ತೋರಿಸುವಂತೆ ಈ ವೀಡಿಯೊವನ್ನು ಎಡಿಟ್ ಮಾಡಿ ಮಾರ್ಪಡಿಸಲಾಗಿದೆ.

ರೇಟಿಂಗ್: ದಾರಿತಪ್ಪಿಸುವ ಸುದ್ದಿ–

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆ ವಿವರಗಳನ್ನು ನೋಡಲು ಕೆಳಗಿನ ಚಿತ್ರವನ್ನು ಕ್ಲಿಕ್ ಮಾಡಿ.

ಅಥವಾ ಕೆಳಗಿನ ಸುದ್ದಿಯನ್ನು ಓದಿ.

**************************************************************************

ಹೈದರಾಬಾದ್‌ನಲ್ಲಿ ಯುವಕನೊಬ್ಬ ರೀಲ್ ಮಾಡಲು ಹಠಾತ್ತನೆ ಬಸ್‌ನ ಮುಂದೆ ಮಲಗುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಸ್ಟಂಟ್ ವೀಡಿಯೊವನ್ನು ಹಲವಾರು ಜನರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಾಹನ ಚಲಾವಣೆ ಹೆಚ್ಚಿರುವ ರಸ್ತೆಯಲ್ಲಿ ಈ ಯುವಕನು ಅಪಾಯಕಾರಿ ಸಾಹಸ ಮಾಡುತ್ತಿದ್ದಾನೆ ಎಂಬುದು ವೀಡಿಯೊ ಜೊತೆಗಿನ ಹೇಳಿಕೆ.

ಹೇಳಿಕೆ ಹೀಗಿದೆ: “ರೀಲ್ ಮಾಡುವ ಪ್ರಯತ್ನದಲ್ಲಿ, ಹೈದರಾಬಾದ್‌ನಲ್ಲಿ ಯುವಕನೊಬ್ಬ ರಸ್ತೆಯ ಮೇಲೆ ಚಲಿಸುತ್ತಿರುವ ಬಸ್ಸಿನ ಮುಂದೆ ಹಠಾತ್ತನೆ ಮಲಗುವ ಅಪಾಯಕಾರಿ ಸಾಹಸ ಮಾಡಿ ತನ್ನ ಪ್ರಾಣವನ್ನು ಪಣಕ್ಕಿಟ್ಟಿದ್ದಾನೆ. ಈ ಸ್ಟಂಟ್ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರ  ಆಕ್ರೋಶವನ್ನೆಬ್ಬಿಸಿದೆ.(sic)”

ಕೆಳಗಿನ ಹೇಳಿಕೆಗಳನ್ನು ನೋಡಿ:

FACT-CHECK

ಡಿಜಿಟೈ ಇಂಡಿಯಾ ವೈರಲ್ ವೀಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದು ತಿದ್ದಿದ ವೀಡಿಯೊ ಎಂದು ತಿಳಿದುಬಂತು, ಇದರಲ್ಲಿ ಕೇವಲ ರಸ್ತೆಯನ್ನು ದಾಟುತ್ತಿರುವುದನ್ನು ವ್ಯಕ್ತಿಯೊಬ್ಬರನ್ನು ತೋರಿಸುವ ವೀಡಿಯೊದಲ್ಲಿ ಚಿತ್ರವನ್ನು ಮಾರ್ಫ್ ಮಾಡಲಾಗಿದೆ. ಇಲ್ಲಿ, ಈ ವೀಡಿಯೊ ತುಣುಕಿನಲ್ಲಿ, ಯುವಕ ರಸ್ತೆಯಲ್ಲಿ ನಡೆದುಕೊಂಡು ಹೋಗುವುದನ್ನು ನೋಡಬಹುದು ಮತ್ತು ಬಸ್ ಹತ್ತಿರ ಬಂದಾಗ, ಆತ ಬಸ್‌ನ ಕಡೆಗೆ ತಿರುಗಿ ರಸ್ತೆಯ ಮೇಲೆ ಮಲಗುತ್ತಾನೆ. ಯಾವುದೇ ಬಸ್ ಚಾಲಕರು  ರಸ್ತೆಯ ಮಧ್ಯದಲ್ಲಿ ಒಬ್ಬ ವ್ಯಕ್ತಿಯನ್ನು ಕಂಡ ತಕ್ಷಣ ಬಸ್ ಅನ್ನು ನಿಧಾನಗೊಳಿಸುವರು ಅಥವಾ ಬ್ರೇಕ್ ಹಾಕುವರು, ಆದರೆ ಈ ಚಾಲಕ ಸಾಮಾನ್ಯವೆಂಬಂತೆ ಮುಂದುವರಿಯುತ್ತಾರೆ. ಇದರ ಚಿತ್ರಗಳನ್ನು ನೋಡಿ:

ತೆಲಂಗಾಣ ಪೊಲೀಸ್ ಅಥವಾ ಸಾರಿಗೆ ಇಲಾಖೆಯಿಂದ ಈ ಘಟನೆಯ ಕುರಿತು ಯಾವುದೇ ಪೋಸ್ಟ್ ಇದೆಯೇ ಎಂದು ನಾವು ಪರಿಶೀಲಿಸಿದಾಗ, ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ವಿಸಿ ಸಜ್ಜನರ್ ರವರು ತಮ್ಮ X ಅಧಿಕೃತ ಹ್ಯಾಂಡಲ್‌ನಲ್ಲಿ ಇದು ನಕಲಿ ವೀಡಿಯೊ ಎಂದು ಸ್ಪಷ್ಟಪಡಿಸಿರುವುದು ಕಂಡುಬಂತು.

Following is the clarification from him in Telugu:

ಅನುವಾದಿತ ಶೀರ್ಷಿಕೆ ಹೀಗಿದೆ: “ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನಕಲಿ. ಇದು ಸಂಪೂರ್ಣವಾಗಿ ಎಡಿಟ್ ಮಾಡಿರುವಂಥದ್ದು. ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಲು ಕೆಲವರು ಈ ರೀತಿಯ ವೀಡಿಯೊಗಳನ್ನು ಎಡಿಟ್ ಮಾಡಿ ಪೋಸ್ಟ್ ಮಾಡುತ್ತಾರೆ. ಈ ರೀತಿಯ ಹುಚ್ಚುತನದ ಮೂರ್ಖ ಸಾಹಸಗಳನ್ನು ಮಾಡಿ ಆರ್‌ಟಿಸಿ ಹೆಸರನ್ನು ಕೆಡಿಸುವುದು ಒಳ್ಳೆಯದಲ್ಲ. ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಕಾಮೆಂಟ್‌ಗಳು, ಲೈಕ್ ಗಳನ್ನು ಪಡೆಯಲು ಈ ಮೂರ್ಖ ಸಾಹಸಗಳನ್ನು ಮಾಡುತ್ತಾರೆ, ಆದರೆ ಈ ಸಾಹಸಗಳನ್ನು ಇತರರು ಅನುಕರಿಸುವ ಅಪಾಯವಿದೆ #TGSRTC ಆಡಳಿತವು ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ. ಇಂತಹ ಸಾಹಸಗಳಿಗೆ ಕಾರಣರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.”

ಇಂತಹ ಸಂಪಾದಕ ತಂತ್ರಗಳನ್ನು ಅನುಮತಿಸುವ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ, ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಿದ್ದಿದ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ. ಆದರೆ, ಅವುಗಳು ಎಡಿಟ್ ಮಾಡಿದ ವೀಡಿಯೊಗಳು ಎಂದು ಅನೇಕರಿಗೆ ತಿಳಿದಿರುವುದಿಲ್ಲ, ಅಂಥವರು ಸಾಮಾಜಿಕ ಮಾಧ್ಯಮದಲ್ಲಿ ತಕ್ಷಣವೇ ಜನಪ್ರಿಯರಾಗಲು ಇಂತಹ ಸಾಹಸಗಳನ್ನು ಪುನರಾವರ್ತಿಸಲು ಅಥವಾ ಅನುಕರಿಸಲು ಪ್ರಯತ್ನಿಸಬಹುದು ಮತ್ತು ಈ ಮೂಲಕ ತಮ್ಮ ಜೀವವನ್ನು ಅಪಾಯದಲ್ಲಿ ಸಿಲುಕಿಸಿಕೊಳ್ಳಬಹುದು.

ಹೀಗಾಗಿ ವ್ಯಕ್ತಿಯೊಬ್ಬ ಬಸ್‌ನ ಕೆಳಗೆ ಮಲಗುವ ಸಾಹಸಕ್ಕೆ ಕೈ ಹಾಕಿರುವ ಬಗೆಗಿನ ಹೇಳಿಕೆ ಸುಳ್ಳು.

ಇದನ್ನೂ ಓದಿ:

ಪ್ಯಾರಿಸ್ ನ ಚರ್ಚ್‌ನಿಂದ ಒಲಂಪಿಕ್ ಜ್ಯೋತಿ ಬೆಳಗಿದ್ದನ್ನು ಈ ವೀಡಿಯೊ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಈ ಚಿತ್ರವು ರಾಜಸ್ಥಾನದ 5000 ವರ್ಷ ಹಳೆಯ ದೇವಾಲಯವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*