Don't Miss
Is this video about Olympic torch lit from Paris church? Fact Check

ಪ್ಯಾರಿಸ್ ನ ಚರ್ಚ್‌ನಿಂದ ಒಲಂಪಿಕ್ ಜ್ಯೋತಿ ಬೆಳಗಿದ್ದನ್ನು ಈ ವೀಡಿಯೊ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಈ ವರ್ಷದ ಒಲಿಂಪಿಕ್ ಜ್ಯೋತಿಯನ್ನು ಪ್ಯಾರಿಸ್ ನ ಒಂದು ಚರ್ಚ್‌ನಿಂದ ಅದ್ಭುತವಾದ ಪಟಾಕಿಗಳೊಂದಿಗೆ ಬೆಳಗಿಸಲಾಯಿತು ಎಂದು ತೋರಿಸುವ ಚರ್ಚ್‌ನಲ್ಲಿ ಪಾದ್ರಿಯೊಬ್ಬರು ಜ್ಯೋತಿ ಬೆಳಗುತ್ತಿರುವ ವೀಡಿಯೊ.

ಕಡೆನುಡಿ/Conclusion:  ಹೇಳಿಕೆ ಸುಳ್ಳು. ಇಟಲಿಯ ಫ್ಲಾರೆನ್ಸ್ ಚರ್ಚ್‌ನ ಆರ್ಚ್‌ಬಿಷಪ್ ಕೊಲೊಂಬಿನಾದ ಫ್ಯೂಸ್ ಬೆಳಗುತ್ತಿರುವ ಈಸ್ಟರ್ ಭಾನುವಾರದ ಆಚರಣೆಗಳನ್ನು ಪ್ಯಾರಿಸ್ ಚರ್ಚ್‌ನಿಂದ ಒಲಂಪಿಕ್ ಜ್ಯೋತಿ ಬೆಳಗಿಸುತ್ತಿರುವುದೆಂದು ಹೇಳಿ ಹಂಚಿಕೊಳ್ಳಲಾಯಿತು.

ರೇಟಿಂಗ್: ಸಂಪೂರ್ಣವಾಗಿ ತಪ್ಪು —

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆ ವಿವರಗಳನ್ನು ನೋಡಲು ಕೆಳಗಿನ ಚಿತ್ರವನ್ನು ಕ್ಲಿಕ್ ಮಾಡಿ.

ಅಥವಾ ಕೆಳಗಿನ ಸುದ್ದಿಯನ್ನು ಓದಿ.

*************************************************************************

ಚರ್ಚ್‌ನಲ್ಲಿ ಪಾದ್ರಿಯೊಬ್ಬರು ಪಟಾಕಿ ಹಚ್ಚುತ್ತಿರುವ ವೀಡಿಯೊವನ್ನು ಒಲಿಂಪಿಕ್ಸ್ 2024 ಜ್ಯೋತಿ ಬೆಳಗಿಸುತ್ತಿರುವಾಗ ಅದ್ಭುತ ದೃಶ್ಯವೆಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹೇಳಿಕೆ ಹೀಗಿದೆ: “ಪ್ಯಾರಿಸ್ ಚರ್ಚ್‌ನಿಂದ ಒಲಿಂಪಿಕ್ ಟಾರ್ಚ್ ಬೆಳಗುತ್ತಿರುವುದು. ಅದ್ಭುತ !!!! . ದಯವಿಟ್ಟು ದೀಪಾವಳಿಯಂದು ನಿಮ್ಮ ಮನೆಯಲ್ಲಿ ಈ ಸಾಹಸವನ್ನು ಪ್ರಯತ್ನಿಸಬೇಡಿ. (sic)”

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಹೇಳಿಕೆಗಳನ್ನು ಕೆಳಗೆ ಕಾಣಬಹುದು:

—–“ಪ್ಯಾರಿಸ್ ಚರ್ಚ್‌ನಿಂದ ಒಲಿಂಪಿಕ್ ಜ್ಯೋತಿಯನ್ನು ಬೆಳಗಿಸಲಾಗುತ್ತಿದೆ. ಯಾರಿಗಾದರೂ ಇದು ಕೋಮುವಾದಿ ಎನಿಸುತ್ತಿದೆಯೇ? ಭಾರತದ ದೇವಸ್ಥಾನದಿಂದ ಇದು ಆಗಿದ್ದರೆ ಎಡಪಂಥೀಯರು ಹೇಗೆ ಪ್ರತಿಕ್ರಿಯಿಸುತ್ತಿದ್ದರು ಎಂದು ಊಹಿಸಿದ್ದೀರಾ?”

——“ಪ್ಯಾರಿಸ್ ಚರ್ಚ್‌ನಿಂದ ಒಲಿಂಪಿಕ್ ಟಾರ್ಚ್‌ನ ಬೆಳಗಿಸುವಿಕೆ. ಅದ್ಭುತ !!!! ದಯವಿಟ್ಟು ದೀಪಾವಳಿಯ ಸಮಯದಲ್ಲಿ ನಿಮ್ಮ ಮನೆಯಲ್ಲಿ ಈ ಸಾಹಸವನ್ನು ಪ್ರಯತ್ನಿಸಬೇಡಿ.”

——“ತಂತ್ರಜ್ಞಾನದ ದುರುಪಯೋಗ 😁😁😁😁

ಒಲಿಂಪಿಕ್ ಟಾರ್ಚ್‌ನ ಬೆಳಗಿಸುವಿಕೆ ಪ್ಯಾರಿಸ್ ನ ಒಂದು ಚರ್ಚ್‌ನಿಂದ, ಅದ್ಭುತ !!!!😁😁😁”

FACT-CHECK

ಹೇಳಿಕೆಯ ವೀಡಿಯೊವನ್ನು ಏಪ್ರಿಲ್ 14, 2023 ರಂದು ಅಪ್‌ಲೋಡ್ ಮಾಡಲಾದ ಯೂಟ್ಯೂಬ್ ಶಾರ್ಟ್ಸ್ ನಿಂದ ತೆಗೆದುಕೊಂಡು ಪ್ಯಾರಿಸ್ ಚರ್ಚ್‌ನಿಂದ ಒಲಂಪಿಕ್ ಜ್ಯೋತಿಯನ್ನು ಬೆಳಗಿಸಲಾಗುತ್ತಿರುವುದು ಎಂದು ಹಂಚಿಕೊಳ್ಳಲಾಗಿದೆ. ಆದರೆ ಪ್ರಮುಖ ಚಿತ್ರಗಳ ಆಧಾರದ ಮೇಲೆ ಗೂಗಲ್ ರಿವರ್ಸ್ ಇಮೇಜ್ ಹುಡುಕಾಟವು ತೋರಿಸುವುದೇನೆಂದರೆ ವೈರಲ್ ವೀಡಿಯೊದಲ್ಲಿ ತೋರಿಸಿರುವ ಚರ್ಚ್ ಪ್ಯಾರಿಸ್‌ನದ್ದಲ್ಲ, ಇಟಲಿಯಲ್ಲಿರುವ ಫ್ಲಾರೆನ್ಸ್ ಮೂಲದ ಕ್ಯಾಥೆಡ್ರಲ್ ಎಂದು. ಸುದ್ದಿ ವರದಿಗಳ ಪ್ರಕಾರ, ಫ್ಲಾರೆನ್ಸ್ ಪ್ರತಿ ಈಸ್ಟರ್ ಭಾನುವಾರ ಬೆಳಿಗ್ಗೆ ಸ್ಕೋಪ್ಪಿಯೊ ಡೆಲ್ ಕ್ಯಾರೊ ಅಥವಾ ಗಾಡಿಯ ಸ್ಫೋಟ ಎಂಬ ಶತಮಾನಗಳ ಹಿಂದಿನ ಸಂಪ್ರದಾಯವನ್ನು ಆಚರಿಸುತ್ತದೆ, ಇದು ದೊಡ್ಡ ಜನಸಮೂಹವನ್ನು ಆಕರ್ಷಿಸುತ್ತದೆ.

ಸ್ಕೋಪ್ಪಿಯೊ ಡೆಲ್ ಕ್ಯಾರೊ (“ಗಾಡಿಯ ಸ್ಫೋಟ”) ಇಟಲಿಯ ಫ್ಲಾರೆನ್ಸ್‌ನ ಜಾನಪದ ಸಂಪ್ರದಾಯ. ಈಸ್ಟರ್ ಭಾನುವಾರದಂದು, ಪಟಾಕಿಗಳು ಮತ್ತು ಇತರ ಪೈರೋಟೆಕ್ನಿಕ್‌ಗಳಿಂದ ತುಂಬಿದ ಗಾಡಿಯನ್ನು ಬೆಳಗಿಸಲಾಗುತ್ತದೆ ಮತ್ತಿದು ನಗರದ ಪ್ರೇಕ್ಷಕರ ನಾಗರಿಕ ಜೀವನದಲ್ಲಿ ಐತಿಹಾಸಿಕ ದೃಶ್ಯವಾಗೊ ಮೂಡುತ್ತದೆ.

ಮಧ್ಯಕಾಲೀನ ವೇಷಭೂಷಣಗಳಲ್ಲಿ ಸೈನಿಕರು, ಡ್ರಮ್ ವಾದಕರು ಮತ್ತು ಧ್ವಜ ಎಸೆಯುವವರ ಬೆಂಗಾವಲಿನಲ್ಲಿರುವ ಈ ಗಾಡಿಯನ್ನು ಪಟಾಕಿಗಳಿಂದ ತುಂಬಲಾಗುತ್ತದೆ ಮತ್ತು “ಕೊಲೊಂಬಿನಾ” ಎಂಬ ಯಾಂತ್ರಿಕ ಪಾರಿವಾಳವನ್ನು ಕ್ಯಾಥೆಡ್ರಲ್‌ನೊಳಗಿನ ಎತ್ತರದ ಪೀಠಕ್ಕೆ ತಂತಿಯಿಂದ ಜೋಡಿಸಲಾಗುತ್ತದೆ.

ಈಸ್ಟರ್ ಭಾನುವಾರದ ಮಾಸ್ ಸಮಯದಲ್ಲಿ ಗ್ಲೋರಿಯಾ ಇನ್ ಎಕ್ಸೆಲ್ಸಿಸ್ ಡಿಯೊ ಹಾಡುವುದರೊಂದಿಗೆ, ಫ್ಲಾರೆನ್ಸ್‌ನ ಆರ್ಚ್‌ಬಿಷಪ್ ಕೊಲಂಬಿನಾದಲ್ಲಿ ಫ್ಯೂಸ್ ಬೆಳಗುತ್ತಾರೆ, ಅದು ವೇಗ ತಾಳಿ ಚರ್ಚ್‌ ಮೂಲಕ ಹಾದುಹೋಗಿ ಹೊರಗಿರುವ ಬಂಡಿಯನ್ನು ಹೊತ್ತಿಸುತ್ತದೆ, ಇದು ಅದ್ಭುತ ದೃಶ್ಯ ಮತ್ತು ಗದ್ದಲದ ಪೈರೋಟೆಕ್ನಿಕ್ ನೊಂದಿಗೆ ಪ್ರೇಕ್ಷಕರನ್ನು ಸಂತೋಷಪಡಿಸುತ್ತದೆ. ಅದೇ ಸಮಯಲ್ಲೆ ಗಿಯೊಟ್ಟೊ ಕ್ಯಾಂಪನೈಲ್‌ನಲ್ಲಿ ಗಂಟೆಗಳು ಮೊಳಗುತ್ತವೆ.

ಈ ವರ್ಷ 2024ರ ಮಾರ್ಚ್ 31ರ ಈಸ್ಟರ್ ಭಾನುವಾರದಂದು ಬೆಳಿಗ್ಗೆ 11.00 ಗಂಟೆಗೆ ಈ ಅದ್ಭುತ ನಡೆಯಿತು. ಈ ಅದ್ಭುತವನ್ನು ಸೆರೆಹಿಡಿಯುವ ಕೆಲವು ದೃಶ್ಯಗಳು ಮತ್ತು ವೀಡಿಯೊಗಳನ್ನು ಕೆಳಗೆ ನೋಡಿ:

 

ಫೇಸ್‌ಬುಕ್ ಬಳಕೆದಾರರ ಮತ್ತೊಂದು ವೀಡಿಯೊ ಇಲ್ಲಿದೆ.

ಹಿಂದಿನ ವರ್ಷಗಳ ಆಚರಣೆಗಳ ಕುರಿತಾದ ಇದೇ ರೀತಿಯ ವೀಡಿಯೊಗಳನ್ನು ಇಲ್ಲಿಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಆದರೆ, ಇದಕ್ಕೂ ಪ್ಯಾರಿಸ್‌ನಲ್ಲಿ ಜುಲೈ 26, 2024 ರಿಂದ ಆಗಸ್ಟ್ 11, 2024 ರವರೆಗೆ ನಡೆಯುವ ಈ ವರ್ಷದ ಒಲಿಂಪಿಕ್ಸ್‌ಗೂ ಯಾವುದೇ ಸಂಬಂಧವಿಲ್ಲ. ವಾಸ್ತವಾಂಶವೆಂದರೆ, ಒಲಿಂಪಿಕ್ ಟಾರ್ಚ್ ರಿಲೇಯು ಆಟಗಳ ಆರಂಭದ 100 ದಿನಗಳ ಮುನ್ನ ಗ್ರೀಸ್‌ನ ಒಲಿಂಪಿಯಾದಲ್ಲಿ ಒಲಿಂಪಿಕ್ ಜ್ಯೋತಿಯನ್ನು ಬೆಳಗುವುದರೊಂದಿಗೆ ಪ್ರಾರಂಭವಾಗುತ್ತದೆ. ಈ ವರ್ಷದ ಜ್ಯೋತಿಯನ್ನು ಏಪ್ರಿಲ್ 16, 2024 ರಂದು ಬೆಳಗಿಸಲಾಗಿತ್ತು.

ಆದ್ದರಿಂದ ಒಲಿಂಪಿಕ್ ಜ್ಯೋತಿಯನ್ನು ಪ್ಯಾರಿಸ್ ನ ಒಂದು ಚರ್ಚ್‌ನಿಂದ ಬೆಳಗಿಸಲಾಯಿತು ಎಂಬ ಹೇಳಿಕೆ ಸುಳ್ಳು

ಇದನ್ನೂ ಓದಿ:
ನಾಳೆಯಿಂದ ಉಚಿತ ವಿದ್ಯುತ್ ಅನುದಾನ ನಿಲ್ಲುತ್ತದೆ ಎಂದು ದೆಹಲಿ ಸಚಿವೆ ಅತಿಶಿ ಹೇಳಿದ್ದಾರಾ? ಸತ್ಯ ಪರಿಶೀಲನೆ
ಅನೇಕ ದೇಶಗಳಲ್ಲಿ ಭಾರತೀಯ ತರಕಾರಿಗಳನ್ನು ನಿಷೇಧಿಸಲಾಗಿದೆಯೇ? ಸತ್ಯ ಪರಿಶೀಲನೆ

 


					
					
									

Leave a Reply

Your email address will not be published. Required fields are marked *

*