ಹೇಳಿಕೆ/Claim: ಭಾರತದ ರಾಜಸ್ಥಾನದಲ್ಲಿನ ಒಂದೇ ಬಂಡೆಯಿಂದ ಕೆತ್ತಲಾದ 5,000 ವರ್ಷಗಳ ಹಳೆಯ ರಚನೆಯ ಭಾವಚಿತ್ರ.
ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಈ ಚಿತ್ರವು ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿರುವ ವೆಟ್ಟುವನ್ ಕೋಯಿಲ್ ಎಂಬ 8ನೇ ಶತಮಾನದ ಏಕಶಿಲಾ ದೇವಸ್ಥಾನವನ್ನು ತೋರಿಸುತ್ತದೆ ಮತ್ತು ಹೇಳಿಕೊಂಡಂತೆ ಅದು 5,000 ವರ್ಷಗಳಷ್ಟು ಹಳೆಯದಲ್ಲ.
ರೇಟಿಂಗ್:ದಾರಿತಪ್ಪಿಸುವ ಸುದ್ದಿ—
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆ ವಿವರಗಳನ್ನು ನೋಡಲು ಕೆಳಗಿನ ಚಿತ್ರವನ್ನು ಕ್ಲಿಕ್ ಮಾಡಿ.
ಅಥವಾ ಕೆಳಗಿನ ಸುದ್ದಿಯನ್ನು ಓದಿ.
**************************************************************************
ಒಂದೇ ಬಂಡೆಯಿಂದ ಕೆತ್ತಿದ ಹಿಂದೂ ರಚನೆಯನ್ನು ತೋರಿಸುವ ಭಾವಚಿತ್ರವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಇದು ರಾಜಸ್ಥಾನದಲ್ಲಿರುವ 5,000 ವರ್ಷಗಳಷ್ಟು ಹಳೆಯ ಬಂಡೆಕಲ್ಲಿನ ರಚನೆಯಾಗಿದೆ ಎಂದು ಹೇಳಿಕೊಳ್ಳಲಾಗಿದೆ.ಕೆಳಗಿನ ಹೇಳಿಕೆ ನೋಡಿ:
ನಾವು ಹುಡುಕಿದಾಗ, ಇದು ಒಂದೇ ಬಂಡೆಯಿಂದ ಕೆತ್ತಿದ ದೇವಸ್ಥಾನ ಎಂಬ ಹೇಳಿಕೆಯೊಂದಿಗೆ ಕೆಲವು ವರ್ಷಗಳ ಹಿಂದೆ X ನಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ ಎಂದು ನಮಗೆ ಕಂಡುಬಂತು, ಆದರೆ ಅದರಲ್ಲಿ ಸ್ಥಳದ ಹೆಸರನ್ನು ಒದಗಿಸಿರಲಿಲ್ಲ.
Found in India, 5000 years old, made from a single rock pic.twitter.com/gbMlfYhrJN
— Ancient History, Mystery (@MinhNguyen51050) October 7, 2023
ಇದೇ ರೀತಿಯ ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
FACT CHECK
ಮೊದಲಿಗೆ, ನಾವು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಚಿತ್ರವನ್ನು ಹುಡುಕಿದಾಗ, ಒಂದೇ ಬಂಡೆಯಿಂದ ಮಾಡಲಾದ ದೇವಸ್ಥಾನದ ಕುರಿತು ಹಲವಾರು ಸಂಶೋಧನಾ ಪತ್ರಿಕೆಗಳು ಮತ್ತು ಸುದ್ದಿ ವರದಿಗಳು ಕಂಡುಬಂದವು. ಆದರೆ, ದೇವಾಲಯವು ರಾಜಸ್ಥಾನದಲ್ಲಿಲ್ಲ, ಬದಲಿಗೆ ಅದು ತಮಿಳು ನಾಡಿನಲ್ಲಿದೆ ಮತ್ತು ಈ ದೇವಾಲಯವನ್ನು ವೆಟ್ಟುವನ್ ಕೋಯಿಲ್ ಎಂದು ಕರೆಯಲಾಗುತ್ತದೆ, ಇದು ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕಲುಗುಮಲೈಯಲ್ಲಿರುವ ಏಕೈಕ ಕಲ್ಲಿನಿಂದ ಕೆತ್ತಿರುವ ದೇವಾಲಯ. ಈ ಎಲ್ಲಾ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಹೇಳಿಕೊಂಡಂತೆ, ಇದು 5000 ವರ್ಷಗಳಷ್ಟು ಹಳೆಯದಾದ ದೇವಾಲಯವಲ್ಲ, ಆದರೆ ಇದನ್ನು 8ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಅಂದಾಜಿಸಲಾಗಿದೆ.
ವೆಟ್ಟುವನ್ ಕೋಯಿಲ್ ಅನ್ನು ಕ್ರಿ.ಶ 760-800ರ ಸುಮಾರಿಗೆ ಆಯತಾಕಾರದ ಬಂಡೆಯಿಂದ ಹೊರಹೊಮ್ಮುವ ದ್ರಾವಿಡ ವಿಮಾನವನ್ನು ತೋರುವ ಏಕಶಿಲೆಯ ದೇವಾಲಯವಾಗಿ ನಿರ್ಮಿಸಲಾಗಿತ್ತು. ಆದ್ದರಿಂದ, ಈ ವೈರಲ್ ಚಿತ್ರವು 8 ನೇ ಶತಮಾನದ ತಮಿಳುನಾಡಿನ ಏಕಶಿಲೆಯ ದೇವಾಲಯವಾಗಿದೆ, ಮತ್ತಿದು 5,000 ವರ್ಷಗಳಷ್ಟು ಹಳೆಯ ರಾಜಸ್ಥಾನದ ದೇವಾಲಯವಲ್ಲ.
ಇದನ್ನೂ ಓದಿ:
ಅನೇಕ ದೇಶಗಳಲ್ಲಿ ಭಾರತೀಯ ತರಕಾರಿಗಳನ್ನು ನಿಷೇಧಿಸಲಾಗಿದೆಯೇ? ಸತ್ಯ ಪರಿಶೀಲನೆ
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪಿತ್ರಾರ್ಜಿತ ತೆರಿಗೆಯನ್ನು ಪ್ರಸ್ತಾಪಿಸಲಾಗಿದೆಯೇ? ಸತ್ಯ ಪರಿಶೀಲನೆ