Don't Miss

IRCTC ಯಲ್ಲಿ ಸ್ನೇಹಿತರು ಅಥವಾ ಸಂಬಂಧಿಕರಿಗಾಗಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡಿದರೆ ದಂಡ ಹೇರಲಾಗುವುದೇ? ಸತ್ಯ ಪರಿಶೀಲನೆ

ಹೇಳಿಕೆ/Claim: IRCTCಯಲ್ಲಿ ಸ್ನೇಹಿತರು ಅಥವಾ ಸಂಬಂಧಿಕರಿಗಾಗಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡಿದರೆ ದಂಡ ಅಥವಾ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು ಎಂಬ ಸರ್ಕಾರದ ಹೊಸ ನಿಯಮ.

ಕಡೆನುಡಿ/Conclusion: ಹೇಳಿಕೆ ಸುಳ್ಳು. ರೈಲ್ವೆ ಸಚಿವಾಲಯವು ಅಂತಹ ಯಾವುದೇ ಹೊಸ ನಿಯಮವನ್ನು ಮಾಡಿಲ್ಲ. “ವಿಭಿನ್ನ ಉಪನಾಮಗಳ ಕಾರಣದಿಂದಾಗಿ ಇ-ಟಿಕೆಟ್‌ಗಳ ಬುಕಿಂಗ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚಲಾವಣೆಯಲ್ಲಿರುವ ಸುದ್ದಿ” ಸುಳ್ಳು ಮತ್ತು ತಪ್ಪುದಾರಿಗೆಳೆಯುವಂಥದ್ದು ಎಂದು IRCTC ಕೂಡ ಸ್ಪಷ್ಟಪಡಿಸಿದೆ.

ರೇಟಿಂಗ್: ಸಂಪೂರ್ಣವಾಗಿ ತಪ್ಪು -- Five rating

*******************************************************************************************************
ವಿವರಗಳು:

ಒಬ್ಬ ವ್ಯಕ್ತಿ ತನ್ನ ವೈಯಕ್ತಿಕ ಐಡಿಯನ್ನು ಬಳಸಿ IRCTC ವೆಬ್‌ಸೈಟ್‌ನಲ್ಲಿ ಸ್ನೇಹಿತರಿಗಾಗಿ ಅಥವಾ ಸಂಬಂಧಿಕರಿಗಾಗಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡುವಂತಿಲ್ಲ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಯಾರಾದರೂ ಹಾಗೆ ಮಾಡಿದರೆ, ಜೈಲುವಾಸ ಅಥವಾ 10,000 ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ ಎಂಬುದು ಹೇಳಿಕೆ.

ಕೆಳಗಿನ ಪೋಸ್ಟ್ ಅನ್ನು ನೋಡಿ:

ಮತ್ತೊಂದು ಹೇಳಿಕೆಯ ಅನುಸಾರ ಇತರರಿಗಾಗಿ ಬುಕಿಂಗ್ ಮಾಡಿದಲ್ಲಿ ಜೈಲು ಶಿಕ್ಷೆ ಮತ್ತು 10,000 ರೂಪಾಯಿಗಳವರೆಗಿನ ದಂಡ. ಕೆಳಗಿನ ಪೋಸ್ಟ್ ಅನ್ನು ನೋಡಿ:

ಸತ್ಯ ಪರಿಶೀಲನೆ

ಭಾರತದಲ್ಲಿ ಎಲ್ಲಾ ವರ್ಗದ ಜನರು ಹೆಚ್ಚು ಬಳಸುವ ಸಾರಿಗೆ ವ್ಯವಸ್ಥೆಯಾಗಿರುವ ಭಾರತೀಯ ರೈಲ್ವೆಗೆ ಈ ಹೇಳಿಕೆಗಳು ಸಂಬಂಧಿಸಿದ್ದರಿಂದ ಡಿಜಿಟೈ ಇಂಡಿಯಾ ಈ ಹೇಳಿಕೆಗಳನ್ನು ಸತ್ಯ-ಪರಿಶೀಲನೆಗಾಗಿ ಕೈಗೆತ್ತಿಕೊಂಡಿತು. ನಾವು ಮೊದಲು X ನಲ್ಲಿ ಭಾರತೀಯ ರೈಲ್ವೇಸ್ ಅಧಿಕೃತ ಹ್ಯಾಂಡಲ್ ಅನ್ನು ಹುಡುಕಿದೆವು, ಈ ಹೇಳಿಕೆ ಸುಳ್ಳೆಂದು IRCTC ಈಗಾಗಲೇ ಸ್ಪಷ್ಟಪಡಿಸಿದೆ ಮತ್ತು ಸರಿಯಾದ ಮಾಹಿತಿ ಮತ್ತು ಮಾರ್ಗಸೂಚಿಗಳನ್ನು ನೀಡಿದೆ ಎಂದು ಕಂಡುಬಂತು. IRCTC ಅಧಿಕೃತ ಹ್ಯಾಂಡಲ್‌ನ ಪೋಸ್ಟ್ ನೋಡಿ:

ರೈಲ್ವೆ ಸಚಿವಾಲಯ ಕೂಡ ಇದನ್ನು ಸ್ಪಷ್ಟಪಡಿಸಿದೆ:

Ministry of Railways

ಆದ್ದರಿಂದ ಹೇಳಿಕೆ ಸುಳ್ಳು.

 


ಇದನ್ನೂ ಓದಿ:

ಸೈನಿಕರ (ಅಗ್ನಿವೀರರ) ನೇಮಕಾತಿಗಾಗಿರುವ ಅಗ್ನಿಪಥ್ ಯೋಜನೆಯನ್ನು ಪುನರಾರಂಭಿಸಲಾಗಿದೆಯೇ? ಸತ್ಯ ಪರಿಶೀಲನೆ

ಅನೇಕ ದೇಶಗಳಲ್ಲಿ ಭಾರತೀಯ ತರಕಾರಿಗಳನ್ನು ನಿಷೇಧಿಸಲಾಗಿದೆಯೇ? ಸತ್ಯ ಪರಿಶೀಲನೆ

 

Leave a Reply

Your email address will not be published. Required fields are marked *

*