ಹೇಳಿಕೆ/Claim: ‘ಈ ದೇಶದಲ್ಲಿ ಇರಬೇಕಾದರೆ ಜೈ ಶ್ರೀರಾಮ್ ಎನ್ನುವುದು ಅಗತ್ಯ’ ಎಂದು ಒತ್ತಾಯಿಸಿದ ನವನೀತ್ ರಾಣಾ, 2024ರ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ಅಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
ಕಡೆನುಡಿ/Conclusion: ಹೇಳಿಕೆ ಸುಳ್ಳು. ಅಮರಾವತಿ ಲೋಕಸಭಾ ಕ್ಷೇತ್ರದಲ್ಲಿ ನವನೀತ್ ರಾಣಾ ಸೋತ ನಂತರ ಅಳುತ್ತಿರುವುದು ಎಂದು ಚಿತ್ರಿಸಲು ಏಪ್ರಿಲ್ 2022 ರ ಆಕೆಯ ಹಳೆಯ ವೀಡಿಯೊವನ್ನು ಬಳಸಲಾಗಿದೆ.
ರೇಟಿಂಗ್: ತಪ್ಪು ನಿರೂಪಣೆ —
*************************************************************************
ಸತ್ಯ ಪರಿಶೀಲನೆ ವಿವರಗಳು
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಮಹಾರಾಷ್ಟ್ರದ ಅಮರಾವತಿಯಿಂದ ಸ್ಪರ್ಧಿಸಿದ್ದ ನವನೀತ್ ರಾಣಾ ರವರು ಅಳುತ್ತಿರುವುದನ್ನು ತೋರಿಸುವ ಒಂದು ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ, ಇದು ಚುನಾವಣೆಯಲ್ಲಿ ಸೋಲಿನ ನಂತರದ ಘಟನೆ ಎಂಬುದು ಹೇಳಿಕೆ.
ಶೀರ್ಷಿಕೆಯಲ್ಲಿ: “ಅಭಿಯಾನದ ಸಮಯದಲ್ಲಿ ~ ನೀವು ಈ ದೇಶದಲ್ಲಿರಬೇಕೆಂದರೆ, ಜೈ ಶ್ರೀ ರಾಮ್ ಎಂದು ಹೇಳಬೇಕು… ಫಲಿತಾಂಶಗಳ ನಂತರ…” ಎಂದು ನಂತರ ಆಸ್ಪತ್ರೆಯ ಹಾಸಿಗೆಯ ಮೇಲೆ ಆಕೆ ಅಳುತ್ತಿರುವುದನ್ನು ತೋರಿಸುವ ವೀಡಿಯೊ ಕಂಡುಬರುತ್ತದೆ.
During Campaign ~ If you want to be in this country, you should say Jai Shri Ram
After Results ~
— Mannu (@mannu_meha) June 5, 2024
ಆ ಪೋಸ್ಟ್ ಅನ್ನು ಇಲ್ಲಿ ನೋಡಬಹುದು.
FACT-CHECK
ವೀಡಿಯೊದ ಸತ್ಯ ಪರಿಶೀಲನೆ ಮಾಡಲು ಡಿಜಿಟೈ ಇಂಡಿಯಾಗೆ ಕೋರಿಕೆ ಬಂತು ಮತ್ತು ಗೂಗಲ್ ನಲ್ಲಿ ಸರಳವಾದ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದೊಡನೆ ಈ ಕ್ಲಿಪ್ ನ್ಯೂಸ್ 18 ಟಿವಿ ವಾಹಿನಿಯ ದೈನಂದಿನ ಸುದ್ದಿ ಪ್ರಸಾರದ ಭಾಗವಾಗಿ ಮೇ 5, 2022 ರಂದು ಪೋಸ್ಟ್ ಮಾಡಿದ ಹಳೆಯ ವೀಡಿಯೊ ಎಂದು ತಿಳಿದುಬಂತು. ಅದನ್ನು ವಾಹಿನಿಯ ಲಾಂಛನವು ಸ್ಪಷ್ಟವಾಗಿ ತೋರಿಸುತ್ತದೆ.
#WATCH | #HanumanChalisaRow | #LoudspeakerRow | Independent MP Navneet Rana Admitted To Hospital In Mumbai. pic.twitter.com/sH2Enxd7QJ
— News18 (@CNNnews18) May 5, 2022
“ಬಂಧಿತ ಮಹಾರಾಷ್ಟ್ರದ ಸಂಸದೆ ನವನೀತ್ ರಾಣಾ ಮುಂಬೈಯಲ್ಲಿ ಆಸ್ಪತ್ರೆಗೆ ದಾಖಲು” ಎಂಬ ಶೀರ್ಷಿಕೆಯೊಂದಿಗೆ ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಯವರ ನಿವಾಸದ ಹೊರಗೆ ಹನುಮಾನ್ ಚಾಲೀಸಾ ಪಠಿಸಲು ಕರೆ ನೀಡಿದ ನಂತರ ಆಕೆಯನ್ನು ಪತಿಯೊಂದಿಗೆ ಬಂಧಿಸಲಾದ ಘಟನೆಯನ್ನು ವೀಡಿಯೊ ಒಳಗೊಂಡಿದೆ. ಇದು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರಗೊಂಡಿತ್ತು.
ಆದ್ದರಿಂದ, 2024ರ ಚುನಾವಣೆಯಲ್ಲಿ ಸೋತ ನಂತರ ನವನೀತ್ ರಾಣಾ ಅಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ ಎಂಬ ಹೇಳಿಕೆ ಸುಳ್ಳು.
ಇದನ್ನೂ ಓದಿ:
ನಾಳೆಯಿಂದ ಉಚಿತ ವಿದ್ಯುತ್ ಅನುದಾನ ನಿಲ್ಲುತ್ತದೆ ಎಂದು ದೆಹಲಿ ಸಚಿವೆ ಅತಿಶಿ ಹೇಳಿದ್ದಾರಾ? ಸತ್ಯ ಪರಿಶೀಲನೆ