Don't Miss
Did Nitish Kumar meet INDIA bloc leaders before NDA Govt formation? Fact Check

ಎನ್‌ಡಿಎ ಸರ್ಕಾರ ರಚನೆಯ ಮುನ್ನ ನಿತೀಶ್ ಕುಮಾರ್ ಇಂಡಿಯಾ ಬ್ಲಾಕ್ ನಾಯಕರನ್ನು ಭೇಟಿ ಮಾಡಿದರೇ? ಸತ್ಯ ಪರಿಶೀಲನೆ

ಹೇಳಿಕೆ/Claim: ನಿತೀಶ್ ಕುಮಾರ್ ಅವರ ಫೋಟೋಗಳು ಆತ ಎನ್‌ಡಿಎ ಸರ್ಕಾರ ರಚನೆಯ ಮುನ್ನ ಪ್ರತಿಪಕ್ಷ ಇಂಡಿಯಾ ಬ್ಲಾಕ್ ನಾಯಕರನ್ನು ಭೇಟಿಯಾಗುತ್ತಿದ್ದಾರೆಂದು ತೋರಿಸುತ್ತವೆ.

ಕಡೆನುಡಿ/Conclusion: ಹೇಳಿಕೆ ಸುಳ್ಳು. ಎಲ್ಲಾ ಫೋಟೋಗಳನ್ನು ನಿತೀಶ್ ಕುಮಾರ್ ರವರು ಒಂದು ವರ್ಷದ ಹಿಂದೆ ಇಂಡಿಯಾ ಬ್ಲಾಕ್‌ನ ಭಾಗವಾಗಿದ್ದಾಗ ತೆಗೆಯಲಾಗಿತ್ತು ಮತ್ತು ಅವು ಇತ್ತೀಚಿನ ಚಿತ್ರಗಳಲ್ಲ.

ರೇಟಿಂಗ್: ತಪ್ಪು ನಿರೂಪಣೆ

***************************************************************************************
ಸತ್ಯ ಪರಿಶೀಲನೆ ವಿವರಗಳು

2024ರ ಲೋಕಸಭಾ ಚುನಾವಣೆಗಳ ನಂತರದ ಚುನಾವಣಾ ಫಲಿತಾಂಶಗಳ ನಡುವೆ, ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಮಿತ್ರಪಕ್ಷಗಳಾದ ಜನತಾ ದಳ (ಯುನೈಟೆಡ್) ಮತ್ತು ತೆಲುಗು ದೇಸಂ ಪಕ್ಷದ ಬೆಂಬಲವು ಸರ್ಕಾರವನ್ನು ರಚಿಸಲು ಅಗತ್ಯವಾಯಿತು. ಈ ಸಂಬಂಧದಲ್ಲಿ, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಹಲವು ನಾಯಕರು ತಪ್ಪು ಮಾಹಿತಿಗೆ ಗುರಿಯಾಗಿದ್ದಾರೆ.

ಜೆಡಿ(ಯು) ನಾಯಕ ನಿತೀಶ್ ಕುಮಾರ್ ಅವರನ್ನು ಒಳಗೊಂಡಿರುವ ಇಂತಹ ಒಂದು ಸುದ್ದಿ ಮೇಲೆದ್ದಿದೆ. ಮೇಲೆ ತೋರಿಸಿರುವಂತೆ ಆತ ಇಂಡಿಯಾ ಬ್ಲಾಕ್ ನಾಯಕರನ್ನು ಭೇಟಿಯಾಗುತ್ತಿದ್ದಾರೆ ಎಂಬ ಒಂದು ಹೇಳಿಕೆಯೊಂದಿಗೆ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಿಂದಿಯಲ್ಲಿರುವ ಹೇಳಿಕೆ ಹೀಗಿದೆ: “”नितीश कुमार बाबू दिल्ली पहुंचे और इन्डिया गठबंधन के सम्मानित हाई प्रोफाइल लीडर से मुलाक़ात की एवं चन्द्र बाबू नायडू जी से भी इंडिया गठबंधन के शीर्ष नेतृत्व से बात चल रही है जन नायक श्री राहुल गांधी जी ने कहा था लिख कर रख लो 2024 में मोदी प्रधानमंत्री नही बनेगा” [ಕನ್ನಡದಲ್ಲಿ ಭಾಷಾಂತರಿಸಲಾಗಿರುವ ಹೇಳಿಕೆ: “ನಿತೀಶ್ ಕುಮಾರ್ ಬಾಬು ದೆಹಲಿಗೆ ತಲುಪಿದರು ಮತ್ತು ಭಾರತ ಮೈತ್ರಿಕೂಟದ ಗೌರವಾನ್ವಿತ ಹೈ ಪ್ರೊಫೈಲ್ ನಾಯಕರೊಂದಿಗೆ ಭೇಟಿ ಮಾಡಿದರು ಹಾಗೂ

ಚಂದ್ರ ಬಾಬು ನಾಯ್ಡು ರವರೊಂದಿಗೂ ಭಾರತ ಮೈತ್ರಿಕೂಟದ ಉನ್ನತ ನಾಯಕತ್ವದ ಮಾತುಕತೆ ನಡೆಯುತ್ತಿದೆ. ಬರೆದಿಟ್ಟುಕೊಳ್ಳಿ 2024ರಲ್ಲಿ ಮೋದಿ ಪ್ರಧಾನಿಯಾಗುವುದಿಲ್ಲ ಎಂದು ಜನ ನಾಯಕ ಶ್ರೀ ರಾಹುಲ್ ಗಾಂಧಿಯವರು ಹೇಳಿದ್ದರು.”

ಈ ಹೇಳಿಕೆಯನ್ನು ಇಲ್ಲಿ ಮತ್ತು ಇಲ್ಲಿ ಹಂಚಿಕೊಳ್ಳಲಾಗಿದೆ.

FACT-CHECK

ಡಿಜಿಟೈ ಇಂಡಿಯಾ ಈ ಹಿಂದೆ ಎನ್‌ಡಿಎ ಮಿತ್ರ ಮತ್ತು ಟಿಡಿಪಿ ಮುಖ್ಯಸ್ಥ ನಾರಾ ಚಂದ್ರಬಾಬು ನಾಯ್ಡು ರವರನ್ನು ಒಳಗೊಂಡಿರುವ ಇಂತಹ ಫೋಟೋಗಳ ಸತ್ಯವನ್ನು ಈ ಹಿಂದೆಯೇ ಬಹಿರಂಗಪಡಿಸಿದ್ದರಿಂದ, ಡಿಜಿಟೈ ಇಂಡಿಯಾ ತಂಡವು ನಿತೀಶ್ ಕುಮಾರ್ ರವರ ಫೋಟೋಗಳನ್ನು ತೆಗೆದುಕೊಂಡು ಗೂಗಲ್ ರಿವರ್ಸ್ ಇಮೇಜ್ ಸರ್ಚ್‌ನಲ್ಲಿ ಪರಿಶೀಲಿಸಿತು. ಇವು ನಿತೀಶ್ ಕುಮಾರ್ ರವರು 2023ರಲ್ಲಿ ಇಂಡಿಯಾ ಬ್ಲಾಕ್‌ಗೆ ಸೇರಿದಾಗ ತೆಗೆದ ಒಂದು ವರ್ಷದ ಹಳೆಯ ದೃಶ್ಯಗಳು ಎಂದು ಫಲಿತಾಂಶಗಳು ತೋರಿಸಿದವು.

ಅದೇ ಚಿತ್ರವನ್ನು ಕೆಳಗೆ ತೋರಿಸಿರುವಂತೆ ಸುದ್ದಿ ವರದಿಗಳೂ ಸಹ ಬಳಸಿದ್ದವು:

ಹಾಗಾಗಿ, ಎನ್‌ಡಿಎ ಭಾಗವಾಗಿದ್ದರೂ ಆತ ಇಂಡಿಯಾ ಬ್ಲಾಕ್‌ ನೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ತೋರಿಸಲು ನಿತೀಶ್ ಕುಮಾರ್ ಇಂಡಿಯಾ ಬ್ಲಾಕ್‌ಗೆ ಸೇರಿದಾಗಿನ ಹಳೆಯ ಚಿತ್ರವನ್ನು ಈ ಪುನಃ ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ, ಆತ ಇಂಡಿಯಾ ಬ್ಲಾಕ್ ತೊರೆದು ಜನವರಿ 2024 ರಲ್ಲಿ ಎನ್‌ಡಿಎ ಗೆ ಸೇರಿದರು.

ಇದನ್ನೂ ಓದಿ:

ಸೈನಿಕರ (ಅಗ್ನಿವೀರರ) ನೇಮಕಾತಿಗಾಗಿರುವ ಅಗ್ನಿಪಥ್ ಯೋಜನೆಯನ್ನು ಪುನರಾರಂಭಿಸಲಾಗಿದೆಯೇ? ಸತ್ಯ ಪರಿಶೀಲನೆ

ನಾಳೆಯಿಂದ ಉಚಿತ ವಿದ್ಯುತ್ ಅನುದಾನ ನಿಲ್ಲುತ್ತದೆ ಎಂದು ದೆಹಲಿ ಸಚಿವೆ ಅತಿಶಿ ಹೇಳಿದ್ದಾರಾ? ಸತ್ಯ ಪರಿಶೀಲನೆ


					
					
									

Leave a Reply

Your email address will not be published. Required fields are marked *

*