Don't Miss
Did Ladakh's environmentalist Sonam Wangchuk demand a plebiscite for Kashmir? Fact Check

ಲದಾಖ್‌ನ ಪರಿಸರವಾದಿ ಸೋನಮ್ ವಾಂಗ್‌ಚುಕ್ ಕಾಶ್ಮೀರಕ್ಕಾಗಿ ಜನಾಭಿಪ್ರಾಯ ಸಂಗ್ರಹಕ್ಕೆ ಬೇಡಿಕೆ ಇಟ್ಟಿದ್ದಾರಾ? ಸತ್ಯ ಪರಿಶೀಲನೆ

ಹೇಳಿಕೆ/Claim:ಲದಾಖ್‌ನ ಪರಿಸರವಾದಿ ಸೋನಮ್ ವಾಂಗ್‌ಚುಕ್ ರವರು ಕಾಶ್ಮೀರಕ್ಕಾಗಿ ಜನಾಭಿಪ್ರಾಯ ಸಂಗ್ರಹಣೆ ಒತ್ತಾಯಿಸುತ್ತಿರುವುದನ್ನು ವೀಡಿಯೊ ಕ್ಲಿಪ್ ತೋರಿಸುತ್ತದೆ.

ಕಡೆನುಡಿ/Conclusion: ಹೇಳಿಕೆ ಸುಳ್ಳು. ಕಾರ್ಗಿಲ್ ಕುರಿತು ಪರಿಸರವಾದಿ ಸೋನಮ್ ವಾಂಗ್ಚುಕ್ ರವರ ಹೇಳಿಕೆಯನ್ನು ತಿರುಚಿ ಸಂದರ್ಭಕ್ಕೆ ವಿಪರೀತವಾಗಿ ಹಂಚಿಕೊಳ್ಳಲಾಗಿದೆ.

ರೇಟಿಂಗ್: ತಪ್ಪು ನಿರೂಪಣೆ

ಸತ್ಯ ಪರಿಶೀಲನೆ ವಿವರಗಳು:

ಲಡಾಖ್ ಪರಿಸರವಾದಿ ಸೋನಮ್ ವಾಂಗ್‌ಚುಕ್ ಅವರು ಕಾಶ್ಮೀರಕ್ಕಾಗಿ ಜನಾಭಿಪ್ರಾಯ ಸಂಗ್ರಹಿಸಲು ಒತ್ತಾಯಿಸುತ್ತಿದ್ದಾರೆ ಎನ್ನುವ ಒಂದು ವೀಡಿಯೊ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸೋನಮ್ ವಾಂಗ್‌ಚುಕ್, “ಜನಮತಗಣನೆಗಳು ಮತ್ತು ಜನಾಭಿಪ್ರಾಯ ಸಂಗ್ರಹಣೆಗಳು ನಡೆಯಬೇಕು ಎಂಬ ಮಾತುಗಳನ್ನು ನೀವು ಕೇಳಿರಬಹುದು, ಎಲ್ಲರೂ ಹಾಗೆ ಯೋಚಿಸುವುದಾದರೆ ಏಕೆ ಮಾಡಬಾರದು?” ಎಂದು ಹೇಳುತ್ತಿರುವುದನ್ನು ವೀಡಿಯೊ ಕ್ಲಿಪ್ ತೋರಿಸುತ್ತದೆ.

ಶೀರ್ಷಿಕೆಯು ಹೀಗಿದೆ: “ಲೇಹ್‌ನಲ್ಲಿ ಪರಿಸರವಾದಿ ಸೋನಮ್ ವಾಂಗ್‌ಚುಕ್ ಅವರು ಕಾಶ್ಮೀರಕ್ಕಾಗಿ ಜನಾಭಿಪ್ರಾಯ ಸಂಗ್ರಹಣೆಗೆ ಒತ್ತಾಯಿಸುತ್ತಿರುವುದು ದುಃಖಕರ. ವಾಂಗ್‌ಚುಕ್ ರವರೇ, ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಯಾವಾಗಲೂ ಹಾಗೆಯೇ ಉಳಿಯುತ್ತದೆ. 370 ನೇ ವಿಧಿಯ ಕೊನೆಯ ಅಡಚಣೆಯನ್ನು ಸಂಸತ್ತು ಮತ್ತು ಸರ್ವೋಚ್ಚ ನ್ಯಾಯಾಲಯಗಳೆರಡೂ ರದ್ದುಗೊಳಿಸಿವೆ. ಪ್ರತ್ಯೇಕತಾವಾದವನ್ನು ಮುಂದು ಮಾಡಬೇಡಿ.”

ಈ ಪೋಸ್ಟ್ ಅನ್ನು ಇಲ್ಲಿ ಮತ್ತು ಇಲ್ಲಿ X ನಲ್ಲಿ ಹಂಚಿಕೊಳ್ಳಲಾಗಿದೆ.

FACT CHECK

ವಿಷಯದ ಸೂಕ್ಷ್ಮತೆಯ ಕಾರಣದಿಂದಾಗಿ ನಾವು ಅದನ್ನು ಕೈಗೆತ್ತಿಕೊಂಡು ಮೂಲ ವೀಡಿಯೊವನ್ನು ಪರಿಶೀಲಿಸಿದೆವು. ಕೆಲವು ಪ್ರಮುಖ ಫ್ರೇಮ್‌ಗಳನ್ನು ತೆಗೆದುಕೊಂಡು, ನಾವು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟದ ಮೂಲಕ ಹುಡುಕಿದೆವು, ಆಗ ಮೂಲ ಸಂದರ್ಶನವನ್ನು ಮೇ 13, 2024 ರಂದು ದ ಫೋರ್ತ್ ಎಸ್ಟೇಟ್ ಯುಟ್ಯೂಬ್ ವಾಹಿನಿಯು ಅಪ್‌ಲೋಡ್ ಮಾಡಿರುವುದು ಕಂಡುಬಂದಿತು. ವೀಡಿಯೊವನ್ನು ಇಲ್ಲಿ ನೋಡಿ:

14:23 ನಿಮಿಷಗಳ ಸಮಯಕ್ಕೆ ನೋಡಿದರೆ, ದ ಫೋರ್ತ್ ಎಸ್ಟೇಟ್ ವರದಿಗಾರ ರವೀಂದ್ರ ಸಿಂಗ್ ರವರು ಕಾರ್ಗಿಲ್ ನಿವಾಸಿಗಳು ಇನ್ನೂ ಜಮ್ಮು ಮತ್ತು ಕಾಶ್ಮೀರದೊಂದಿಗೆ ಒಡನಾಟ ಹೊಂದಲು ಬಯಸುತ್ತಿರುವ ಬಗ್ಗೆ ಸೋನಮ್ ವಾಂಗ್ಚುಕ್ ಅವರ ಅಭಿಪ್ರಾಯಗಳನ್ನು ಕೇಳಿದರು, ಅದಕ್ಕೆ ವಾಂಗ್ಚುಕ್ ಉತ್ತರಿಸಿದ್ದು ಹೀಗೆ, “ಅಲ್ಲ, ನಾನು ಒಂದು ಪ್ರಶ್ನೆ ಕೇಳಬಯಸುತ್ತೇನೆ. ಇದು ಕೆಲವರ ವೈಯಕ್ತಿಕ ಅಭಿಪ್ರಾಯವೋ (ಅಥವಾ) ಇದು ಇಡೀ ಪ್ರದೇಶ ಅಥವಾ ಜನಸಮೂಹದ್ದೋ. ಆಮೇಲೆ ನಾವು ಆ ದಿಕ್ಕಿನಲ್ಲಿ ಪ್ರಾರ್ಥಿಸೋಣ, ಕೆಲಸ ಮಾಡೋಣ. ಜಗತ್ತಿನಲ್ಲಿ ಎಲ್ಲೇ ಆಗಲಿ, ಜನರು ಸಂತೋಷವಾಗಿರಬೇಕು, ಜನರು ಬಯಸಿದ ಸ್ಥಳಕ್ಕೆ ಹೋಗಲು ಮುಕ್ತರಾಗಿರಬೇಕು. ಅದಕ್ಕಾಗಿಯೇ ಜನಮತಗಣನೆಗಳು ಮತ್ತು ಜನಾಭಿಪ್ರಾಯ ಸಂಗ್ರಹಗಳು ಇರುವುದು. ಹಾಗಾದರೆ, ಎಲ್ಲರೂ ಇದೇ ರೀತಿ ಯೋಚಿಸುವುದಾದರೆ, ಕಾಶ್ಮೀರದಲ್ಲಿ ಯಾಕಾಗಬಾರದು?

ಆದರೆ ಸೋನಮ್ ವಾಂಗ್‌ಚುಕ್ ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹದ ಬೇಡಿಕೆಯನ್ನು ಉಲ್ಲೇಖಿಸುತ್ತಿದ್ದಾರೆ ಎಂಬ ವಿಷಯ ಭುಗಿಲೆದ್ದ ನಂತರ, ಸಂದರ್ಶಕ ರವೀಂದ್ರ ಸಿಂಗ್ ಶೆರಾನ್ ರವರು ಮೇ 20, 2024ರಂದು ಮತ್ತೊಂದು ವೀಡಿಯೊದಲ್ಲಿ ಈ ಕೆಳಗಿನಂತೆ ಸ್ಪಷ್ಟೀಕರಣವನ್ನು ನೀಡಿದ್ದಾರೆ:

ಈ ವೀಡಿಯೋದಲ್ಲಿ ಶೇರೋನ್ ರವರು ಹೇಳಿರುವುದೇನೆಂದರೆ, “ನಾನು ಸೋನಮ್ ವಾಂಗ್ಚುಕ್ ಅವರೊಂದಿಗೆ ಸಂದರ್ಶನವನ್ನು ನಡೆಸಿ ಕಾರ್ಗಿಲ್ ನಾಯಕ ಸಜ್ಜದ್ ಕಾರ್ಗಿಲಿಯವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರಶ್ನೆಯನ್ನು ಕೇಳಿದೆ. ಕೇಂದ್ರಾಡಳಿತ ಪ್ರದೇಶವಾದ ನಂತರ ಕಾರ್ಗಿಲ್ ಮತ್ತು ಲದಾಖ್ ಕೆಟ್ಟ ಸ್ಥಿತಿಯಲ್ಲಿವೆ, ಮತ್ತು ನಾವು ಕೆಟ್ಟ ಸ್ಥಿತಿಯಲ್ಲಿದ್ದಾಗ ನಾವು ಕೇಂದ್ರಾಡಳಿತ ಪ್ರದೇಶವಾಗಿರಬೇಕೆಂದು ಅವರು ಏಕೆ ಬಯಸುತ್ತಾರೆ? ನಮ್ಮನ್ನು ಮತ್ತೆ ಒಂದುಗೂಡಿಸುವುದು ಉತ್ತಮ ಎಂದು ಸಜ್ಜದ್ ಕಾರ್ಗಿಲಿ ಹೇಳಿದರು. ಈ ಪ್ರಶ್ನೆಗೆ, ಇದು ಸಜ್ಜದ್ ಕಾರ್ಗಿಲಿಯವರ ವೈಯಕ್ತಿಕ ದೃಷ್ಟಿಕೋನವೋ ಅಥವಾ ಕಾರ್ಗಿಲ್ ನ ವೈಯಕ್ತಿಕ ಆಯ್ಕೆಯೋ ಎಂದು ಸೋನಮ್ ವಾಂಗ್ಚುಕ್ ಉತ್ತರಿಸುತ್ತಾರೆ. ಇದು ಎಲ್ಲಾ ಕಾರ್ಗಿಲ್ ಜನರ ಆಯ್ಕೆ ಮತ್ತು ಪ್ರತಿಯೊಬ್ಬರು ಹಾಗೆ ಯೋಚಿಸುತ್ತಿರುವುದಾದರೆ, ಕಾಶ್ಮೀರದಲ್ಲಿ ಜನರು ಮತ್ತೆ ಒಂದಾಗುವುದರಲ್ಲಿ ಜನರು ಖುಷಿಪಟ್ಟರೆ ಯಾವುದೇ ತಪ್ಪಿಲ್ಲ. ಕಾಶ್ಮೀರದಲ್ಲಿ ಜನಮತಗಣನೆಗಳು ಮತ್ತು ಜನಾಭಿಪ್ರಾಯ ಸಂಗ್ರಹಣೆಗಳು ನಡೆಯಲು ಇದೇ ಕಾರಣ ಎಂದು ವಾಂಗ್ಚುಕ್ ಹೇಳಿದರು.”

ಸೋನಮ್ ವಾಂಗ್‌ಚುಕ್ ಅವರ ಹೇಳಿಕೆಯನ್ನು ಎಡಿಟ್ ಮಾಡಲಾಗಿದೆ ಮತ್ತದನ್ನು ತಿರುಚಿ ಕಾಶ್ಮೀರದಲ್ಲಿ ಜನಾಭಿಪ್ರಾಯ ಬೇಕು ಎಂದು ಸೋನಮ್ ರವರು ಹೇಳುತ್ತಿರುವಂತೆ ತೋರಿಸಲಾಗಿದೆ, ಇದು ನಿಜವಲ್ಲ ಎಂದು ಶೆರಾನ್ ವೀಡಿಯೊದಲ್ಲಿ 2:10 ನಿಮಿಷಗಳ ಸಮಯಲ್ಲಿ ಹೇಳಿದರು.

ಮುಂದುವರಿದು, ಸೋನಮ್ ವಾಂಗ್‌ಚುಕ್ ರವರು ಮೇ 20, 2024 ರಂದು ತಮ್ಮ ಮತವನ್ನು ವಿವರಿಸುತ್ತಾ ಟ್ವೀಟ್ ಮಾಡಿರುವುದನ್ನು ನಾವು ಗಮನಿಸಿದೆವು: “ನನ್ನ ಹೇಳಿಕೆಯನ್ನು ಗುರುತಿಸಲಾಗದಷ್ಟು ತಿರುಚಿರುವುದನ್ನು ನೋಡಿ ಬೇಸರವಾಗಿದೆ. ಆದರೆ ನನ್ನ ವೀಡಿಯೊದ ಕತ್ತರಿಸಿದ ಆವೃತ್ತಿಯನ್ನು ಸಂದರ್ಭಕ್ಕೆ ವಿಪರೀತವಾಗಿ ಬಳಸಿದಾಗ ಹೇಗೆ ಅಪಾರ್ಥಕ್ಕೊಳಗಾಗಬಹುದು ಎಂಬುದನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲೆ. ದಯವಿಟ್ಟು ಸತ್ಯವನ್ನು ಹರಡಿ, ಸುಳ್ಳನ್ನಲ್ಲ. ಸತ್ಯಮೇವ ಜಯತೇ” ಎಂದು ಬರೆದಿದ್ದಾರೆ.

ಜನಮತಗಣನೆ ಅಥವಾ ಜನಾಭಿಪ್ರಾಯ ಸಂಗ್ರಹಣೆಯ ಕುರಿತು ವಾಂಗ್ಚುಕ್ ರವರ ಸಾಮಾನ್ಯ ಉಲ್ಲೇಖವನ್ನು, ಅವರು ಕಾಶ್ಮೀರದ ಜನಮತಗಣನೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳುವಂತೆ ತಿರುಚಲಾಗಿದೆ, ಆದರೆ ಅದು ಹಾಗಾಗಿರಲಿಲ್ಲ. ಆದ್ದರಿಂದ, ಹೇಳಿಕೆ ಸುಳ್ಳು.

ಇದನ್ನೂ ಓದಿ:

ಬಿಜೆಪಿ ಲೋ ಕಸಭಾ ಚುನಾವಣೆಯಲ್ಲಿ 272ಕ್ಕೂ ಹೆಚ್ಚು ಸ್ಥಾನಗಳಿಗಾಗಿ ಸ್ಪರ್ಧಿ ಸಿದ ಏಕೈ ಕ ಪಕ್ಷವೇ ಮಾತ್ರವೇ ? ಸತ್ಯ ಪರಿಶೀ ಲನೆ

ಅನೇಕ ದೇಶಗಳಲ್ಲಿ ಭಾರತೀಯ ತರಕಾರಿಗಳನ್ನು ನಿಷೇಧಿಸಲಾಗಿದೆಯೇ? ಸತ್ಯ ಪರಿಶೀಲನೆ

 


					
					
									

Leave a Reply

Your email address will not be published. Required fields are marked *

*