Don't Miss
Did DMK MLA Mansoor Mohammed beat up police inspector? Video goes viral; Fact Check

ಡಿಎಂಕೆ ಶಾಸಕ ಮನ್ಸೂರ್ ಮೊಹಮ್ಮದ್ ಪೊಲೀಸ್ ಇನ್ಸ್‌ಪೆಕ್ಟರ್ ಗೆ ಹೊಡೆದರಾ? ವೀಡಿಯೊ ವೈರಲ್; ಸತ್ಯ ಪರಿಶೀಲನೆ

ಹೇಳಿಕೆ/Claim: ಡಿಎಂಕೆ ನಾಯಕರೊಬ್ಬರು ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿಯನ್ನು ಥಳಿಸುತ್ತಿರುವುದನ್ನು ತೋರಿಸುವ ವೀಡಿಯೊ, ತಮಿಳುನಾಡಿನ ಹತಾಶ ಪರಿಸ್ಥಿತಿಯನ್ನು ಸೂಚಿಸುತ್ತದೆ.

ಕಡೆನುಡಿ/Conclusion: ಸುಳ್ಳು. ಮೀರಟ್ ಬಿಜೆಪಿ ಕೌನ್ಸಿಲರ್ ಮುನೀಶ್ ಕುಮಾರ್ ಅವರ ಹಳೆಯ 2018 ರ ವೀಡಿಯೊವನ್ನು ತಮಿಳುನಾಡಿನ ಡಿಎಂಕೆ ನಾಯಕ ಎಂದು ತಪ್ಪಾಗಿ ತೋರಿಸಲಾಗಿದೆ.

ರೇಟಿಂಗ್: ಸಂಪೂರ್ಣವಾಗಿ ಸುಳ್ಳುFive rating

ಸತ್ಯ ಪರಿಶೀಲನೆ ವಿವರಗಳು

ವ್ಯಕ್ತಿಯೊಬ್ಬ ಸಮವಸ್ತ್ರದಲ್ಲಿದ್ದ ಪೊಲೀಸ್ ಅಧಿಕಾರಿಯನ್ನು ಥಳಿಸುತ್ತಿರುವ ವೀಡಿಯೊ ಎಲ್ಲಾ ಸುದ್ದಿವಾಹಿನಿಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಆ ವ್ಯಕ್ತಿಯು ಡಿಎಂಕೆ ನಾಯಕ ಎಂದು ಹೇಳಲಾಗುತ್ತಿದೆ. ಶೀರ್ಷಿಕೆಯು ಹೀಗಿದೆ: “ಡಿಎಂಕೆ ಶಾಸಕ ಮನ್ಸೂರ್ ಮೊಹಮ್ಮದ್ ತಮಿಳುನಾಡಿನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಹೊಡೆಯುತ್ತಿರುವುದು. ನೀವು ಜಾತಿ, ಧರ್ಮ ಮತ್ತು ಭಾಷೆಯ ಆಧಾರದ ಮೇಲೆ ಸರ್ಕಾರವನ್ನು ಆರಿಸಿದಾಗ ಹೀಗೇ ಆಗುವುದು. ತಮಿಳುನಾಡು ಈಗ ಪಶ್ಚಿಮ ಬಂಗಾಳದ ಹಾದಿಯಲ್ಲಿ ಸಾಗುತ್ತಿದೆ.

ತೆಲುಗು ಸೇರಿದಂತೆ ಎಲ್ಲಾ ಭಾಷೆಗಳ ಪ್ರಮುಖ ಟಿವಿ ಸುದ್ದಿವಾಹಿನಿಗಳಲ್ಲಿ ಇದನ್ನು ತೋರಿಸಲಾಯಿತು.

Fact Check

ಮನ್ಸೂರ್ ಮೊಹಮ್ಮದ್ ಎಂಬ ಹೆಸರಿನೊಂದಿಗೆ ತಮಿಳುನಾಡು ಶಾಸಕರನ್ನು (ಡಿಎಂಕೆ) ನಾವು ಹುಡುಕಿದಾಗ, ಆ ಹೆಸರಿನ ಯಾರೊಬ್ಬರೂ ನಮಗೆ ಸಿಗಲಿಲ್ಲ. ನಂತರ, ನಾವು ವೀಡಿಯೊದಿಂದ ಪ್ರಮುಖ ಫ್ರೇಮ್‌ಗಳನ್ನು ತೆಗೆದುಕೊಂಡು ಮೂಲ ವೀಡಿಯೊವನ್ನು ಹುಡುಕಲು ಅವುಗಳನ್ನು Google ರಿವರ್ಸ್ ಇಮೇಜ್ ಹುಡುಕಾಟದಲ್ಲಿ ಪರಿಶೀಲಿಸಿದೆವು. ಕೊನೆಗೂ, ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದ್ದ ANIಯ ಹಳೆಯ ಸುದ್ದಿ ವೀಡಿಯೊ ನಮಗೆ ದೊರಕಿತು:

 

ನಂತರ, ತಿದ್ದುಪಡಿಯ ನಂತರದ ವರದಿಯಲ್ಲಿ, ಬಿಜೆಪಿ ಕೌನ್ಸಿಲರ್ ಹೆಸರನ್ನು ಮುನೀಶ್ ಕುಮಾರ್ ಎಂದು ಸರಿಪಡಿಸಲಾಗಿದೆ ಮತ್ತು ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಲಾಗಿದೆ:

ನಾವು ಹೆಚ್ಚಿನ ಹುಡುಕಾಟದ ಮೂಲಕ, ಕೆಳಗಿನ ಗೂಗಲ್ ಹುಡುಕಾಟ ಫಲಿತಾಂಶಗಳಲ್ಲಿ ಕಾಣುವಂತೆ, ಈ ಘಟನೆಯು ವ್ಯಾಪಕವಾಗಿ ವರದಿಯಾಗಿದೆ ಎಂಬುದನ್ನು ಕಂಡುಕೊಂಡೆವು:

ಅಕ್ಟೋಬರ್ 20, 2018 ರ ಡೆಕ್ಕನ್ ಕ್ರಾನಿಕಲ್‌ನಲ್ಲಿನ ವರದಿಯ ಅನುಸಾರ, “ಆಹಾರ ಬಡಿಸುವಲ್ಲಿ ತಡವಾದ ಬಗ್ಗೆ ನಡೆದ ವಾಗ್ವಾದದ ಹಿನ್ನೆಲೆಯಲ್ಲಿ  ಒಬ್ಬ ವಕೀಲ ಸ್ನೇಹಿತೆಯ ಜೊತೆಯಲ್ಲಿ ರೆಸ್ಟೋರೆಂಟ್‌ಗೆ ಹೋಗಿದ್ದ ಸಬ್ ಇನ್ಸ್‌ಪೆಕ್ಟರ್ ಅನ್ನು ಅದರ ಮಾಲೀಕರಾದ ಮುನೀಶ್ ಕುಮಾರ್ ಥಳಿಸಿದ್ದಾರೆ, ಆತ ಮೀರಟ್ ನ ವಾರ್ಡ್ ಸಂ. 40 ರ ಬಿಜೆಪಿ ಕೌನ್ಸಿಲರ್ ಕೂಡ ಆಗಿದ್ದಾರೆ.

ಆದ್ದರಿಂದ, ಈ ಘಟನೆಯು ಅಕ್ಟೋಬರ್ 20, 2018 ರಂದು ಉತ್ತರ ಪ್ರದೇಶದ ಮೀರಟ್ ಜಿಲ್ಲೆಯ ಕಂಕರ್ಖೇಡಾದಲ್ಲಿ ಸಂಭವಿಸಿದೆ ಮತ್ತು ತಮಿಳುನಾಡಿನಲ್ಲಲ್ಲ, ಹಾಗೂ ಹೇಳಿಕೊಂಡಂತೆ ಆ ವೀಡಿಯೊ ಡಿಎಂಕೆ ಪಕ್ಷದ ಶಾಸಕರಿಗೂ ಸಂಬಂಧಿಸಿಲ್ಲ.

 

ಇದನ್ನೂ ಓದಿ:

ಇಲ್ಲ, “ಡಿಎಂಕೆ ಹಿಂದೂಗಳನ್ನು ಮತಕ್ಕಾಗಿ ಬೇಡುವುದಿಲ್ಲ ” ಎಂದು ಸ್ಟಾಲಿನ್ ಎಂದಿಗೂ ಹೇಳಿಲ್ಲ; ಸತ್ಯ ಪರಿಶೀಲನೆ

ನೇಪಾಳಿ ಹಿಂದೂಗಳು ಉಡುಗೊರೆಗಳೊಂದಿಗೆ ಅಯೋಧ್ಯೆಗೆ ತಲುಪಿದರೆಂದು ತಪ್ಪಾಗಿ ಹೇಳಿ ಹಳೆಯ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ; ಸತ್ಯ ಪರಿಶೀಲನೆ

 

 

One comment

Leave a Reply

Your email address will not be published. Required fields are marked *

*