Don't Miss
Old video passed off as that of farmers' protest at border trying to enter Delhi despite barricades; Fact Check

ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಬ್ಯಾರಿಕೇಡ್‌ಗಳ ಹೊರತಾಗಿಯೂ ದೆಹಲಿಯೊಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹಳೆಯ ವೀಡಿಯೊವನ್ನು ಬಳಸಿ ತೋರಿಸಲಾಗಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ರೈತರು ತಮ್ಮ ಟ್ರ್ಯಾಕ್ಟರ್‌ಗಳಲ್ಲಿ ಚಲಿಸುತ್ತಿರುವ ವೀಡಿಯೊವನ್ನು ದೆಹಲಿಯ ಗಡಿಯ ವೀಡಿಯೊ ಎಂಬ ಹೇಳಿಕೆಯೊಂದಿಗೆ
ಹಂಚಿಕೊಳ್ಳಲಾಗಿದೆ.

ಕಡೆನುಡಿ/Conclusion: ಸುಳ್ಳು. ಒಂದು ವಾರ ಹಳೆಯ ಪಂಜಾಬ್‌ನ ವೀಡಿಯೊವನ್ನು, ರೈತರು ತಮ್ಮ ಟ್ರ್ಯಾಕ್ಟರ್‌ಗಳಲ್ಲಿ ದೆಹಲಿಯೊಳಗೆ
ಪ್ರವೇಶಿಸುತ್ತಿರುವುದು ಎನ್ನುವಂತೆ ತೋರಿಸಲಾಗಿದೆ.

ರೇಟಿಂಗ್: ತಪ್ಪು ನಿರೂಪಣೆ -- 
ಸತ್ಯ ಪರಿಶೀಲನೆ ವಿವರಗಳು

ಫೆಬ್ರವರಿ 13, 2024 ರ ಮಂಗಳವಾರದಂದು ಪ್ರತಿಭಟನೆ ನಡೆಸಲು ದೊಡ್ಡ ಪ್ರಮಾಣದಲ್ಲಿ ರೈತರು ದೆಹಲಿಯೊಳಗೆ ಪ್ರವೇಶಿಸಲು ಪ್ರಾರಂಭಿಸಿದಾಗಿನಿಂದ, ವಿಭಿನ್ನ ಹೇಳಿಕೆಗಳನ್ನು ಹೊಂದಿರುವ ಹಲವಾರು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿವೆ. ಅವುಗಳಲ್ಲಿ, ರೈತರನ್ನು ಹೊತ್ತಿರುವ ಒಂದು ಟ್ರ್ಯಾಕ್ಟರ್‌ ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸಲು ಪೊಲೀಸ್ಬ್ಯಾರಿಕೇಡ್‌ಗಳನ್ನು ಮುರಿದು ಹೋಗುವ ಒಂದು ವೀಡಿಯೊ ವೈರಲ್ ಆಗಿದೆ. ಗಮನಿಸಬೇಕಾದ ಅಂಶವೆಂದರೆ, ಪ್ರತಿಭಟನಾಕಾರರು ರಾಜಧಾನಿಯೊಳಗೆ ಪ್ರವೇಶಿಸುವುದನ್ನು ತಡೆಯಲು ದೆಹಲಿ ಪೊಲೀಸರು ಈಗಾಗಲೇ ದೆಹಲಿಯ ಗಡಿಯಲ್ಲಿ ಹಲವಾರು ಬ್ಯಾರಿಕೇಡ್‌ಗಳನ್ನು ನಿರ್ಮಿಸಿದ್ದಾರೆ.

ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಒದಗಿಸುವ ಕಾನೂನುಸಮ್ಮತ ಖಾತ್ರಿಗಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸೇರಿದಂತೆ ಹಲವಾರು ರೈತ ಸಂಘಗಳು ದೆಹಲಿ ಚಲೋ ಮೆರವಣಿಗೆಗೆ ಕರೆ ನೀಡಿದಾಗಿನಿಂದ, ಪ್ರತಿಭಟನೆಯೊಂದಿಗೆ ಬಹಳ ಕಾಕತಾಳೀಯವೆಂಬಂತೆ ಈ ಚಿತ್ರಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಬ್ಯಾರಿಕೇಡ್‌ ಹಾಕಿದ ದೆಹಲಿಯನ್ನು ಟ್ರ್ಯಾಕ್ಟರ್‌ಗಳಲ್ಲಿ ಪ್ರವೇಶಿಸಲು ರೈತ ಸಂಘಗಳು ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಈ ವಿಡಿಯೋ
ವೈರಲ್ ಆಗಿದೆ. “ರೈತರನ್ನು ತಡೆಯಲು ಪೊಲೀಸರು ನಿರ್ಮಿಸಿದ ಬ್ಯಾರಿಕೇಡ್‌ಗಳ ಪರಿಸ್ಥಿತಿ ಇದು”; ಎನ್ನುವ ಮತ್ತೊಂದು ಟ್ವೀಟ್
ಅನ್ನು ##FarmersProtest ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಹಂಚಿಕೊಳ್ಳಲಾಗಿದೆ.

FACT CHECK

ವೀಡಿಯೊದ ಸತ್ಯ-ಪರಿಶೀಲನೆಗಾಗಿ ಬಂದ ಕೋರಿಕೆಯ ಮೇರೆಗೆ, ಡಿಜಿಟೈ ಇಂಡಿಯಾ ತಂಡವು ವೀಡಿಯೊದ ಪ್ರಮುಖ ಫ್ರೇಮ್‌ಗಳನ್ನು
ತೆಗೆದುಕೊಂಡು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟದಲ್ಲಿ ಮೂಲ ವೀಡಿಯೊವನ್ನು ಹುಡುಕಿತು. ಆಗ, ಈ ವೀಡಿಯೊ ಫೆಬ್ರವರಿ
12, 2024ರದ್ದಲ್ಲ, ಅದು ಒಂದು ವಾರ ಹಳೆಯದ್ದು, ಅದೂ ಪಂಜಾಬ್‌ನದ್ದು ಎಂದು ತಿಳಿದುಬಂತು. @pb31 ಎಂಬ ಬಳಕೆದಾರರು ಇನ್ಸ್ಟಾಗ್ರಾಮ್ ನಲ್ಲಿ ಫೆಬ್ರವರಿ 4, 2024 ರಂದು ಅಪ್‌ಲೋಡ್ ಮಾಡಿದ ಮೂಲ ವೀಡಿಯೊ ತುಣುಕನ್ನು ಇಲ್ಲಿ ನೋಡಿ:

ಈ ಪೋಸ್ಟ್ ನಲ್ಲಿ ವೈರಲ್ ವೀಡಿಯೊದ ಹಲವಾರು ಕ್ಲಿಪ್‌ಗಳನ್ನು ತೋರಿಸಲಾಗಿದೆ, ಆದರೆ ಅವೆಲ್ಲವೂ ಸುಮಾರು ಒಂದು ವಾರ
ಹಳೆಯವು. ಎರಡನೆಯದಾಗಿ, ಈ ಕ್ಲಿಪ್ ಗಳು ಪಂಜಾಬ್‌ನಲ್ಲಿ ಫೆಬ್ರವರಿ 3, 2024 ರಂದು ಭಾನು ಸಿಧುರವರನ್ನು ಬೆಂಬಲಿಸಿ ನಡೆಸಿದ
ಧರಣಿ ಸತ್ಯಾಗ್ರಹವನ್ನು ತಲುಪಲು ಜನರು ಟ್ರ್ಯಾಕ್ಟರ್‌ಗಳಲ್ಲಿ ಪ್ರಯತ್ನಿಸಿದ ವಿಭಿನ್ನ ಘಟನೆಗೆ ಸಂಬಂಧಿಸಿವೆ. ಪಂಜಾಬಿ
ಭಾಷೆಯಲ್ಲಿರುವ ಶೀರ್ಷಿಕೆ ಹೀಗಿದೆ: “ಭಾನಾ ಸಿಧು ಪರವಾಗಿ ನಡೆಸಿದ ಧರಣಿಯನ್ನು ತಲುಪಲು ಯುವಕರು ಟ್ರ್ಯಾಕ್ಟರ್‌ಗಳೊಂದಿಗೆ
ಬಂದರು. ಬ್ಯಾರಿಕೇಡ್‌ಗಳನ್ನು ತೆಗೆದುಹಾಕಿ ಅವರು ಮುಂದೆ ಸಾಗಲಾರಂಭಿಸಿದರು; ರೈತರ ಚಳವಳಿಯಂತಹ ಪರಿಸ್ಥಿತಿಗಳನ್ನು ನೋಡಿ!
(ಪಂಜಾಬಿಯಿಂದ ಕನ್ನಡಕ್ಕೆ ಅನುವಾದ)”

ನಾವು ಸುದ್ದಿ ವರದಿಗಳನ್ನು ಪರಿಶೀಲಿಸಿದಾಗ, ಸಾಮಾಜಿಕ ಕಾರ್ಯಕರ್ತ ಮತ್ತು ವ್ಲಾಗರ್ ಭಗವಾನ್ ಸಿಂಗ್, ಉರುಫ್ ಭಾನಾ ಸಿಧು
ರವರನ್ನು ಆತನ ಸಹೋದರನೊಂದಿಗೆ ಒಬ್ಬ ಇಮಿಗ್ರೇಶನ್ ಏಜೆಂಟ್ ನೀಡಿದ ದೂರಿನ ಆಧಾರದ ಮೇಲೆ ಜನವರಿಯಲ್ಲಿ ಸುಲಿಗೆ
ಆರೋಪದ ಮೇಲೆ ಮೊಹಾಲಿಯಲ್ಲಿ ಪೊಲೀಸರು ಬಂಧಿಸಿದ್ದರು. ಟ್ರ್ಯಾಕ್ಟರ್‌ಗಳು ಪಂಜಾಬ್ ಸಿಎಂ ನಿವಾಸಕ್ಕೆ ನುಗ್ಗುತ್ತಿರುವ
ದೃಶ್ಯಗಳನ್ನು ಬಿಬಿಸಿ ಪಂಜಾಬಿ ತೋರಿಸಿತು ಮತ್ತು ಸಿಧುರವರ ಬಂಧನವಾದ ನಂತರ ರಾಜ್ಯದ ಮುಖ್ಯಮಂತ್ರಿಯ ನಿವಾಸದಿಂದ ಒಂದು
ಕಿಲೋಮೀಟರ್ ದೂರದಲ್ಲಿ ಧರಣಿ ಅಥವಾ ಪ್ರತಿಭಟನೆಗಳನ್ನು ನಡೆಸಲಾಯಿತು ಎಂದು ಇತರ ವರದಿಗಳು ಹೇಳಿದವು. ನಂತರ, ಫೆಬ್ರವರಿ
12 ರಂದು ಮೊಹಾಲಿ ನ್ಯಾಯಾಲಯವು ಸಿಂಧುಗೆ ಜಾಮೀನು ನೀಡಿತು.

ಇದನ್ನೂ ಓದಿ:

ಇಂಡಿಯಾ ಮೈತ್ರಿಕೂಟವು 50% ಮೀಸಲಾತಿಯನ್ನು ತೆಗೆದುಹಾಕುತ್ತದೆ ಎಂದು ರಾಹುಲ್ ಗಾಂಧಿಯವರು ಎಂದಿಗೂ ಹೇಳಿಲ್ಲ; ಸತ್ಯ ಪರಿಶೀಲನೆ ಇಲ್ಲ, ಹೇಳಲಾಗಿರುವಂತೆ ರಾಹುಲ್ ಗಾಂಧಿಯವರು ಕಾಂಗ್ರೆಸ್ ಕಾರ್ಯಕರ್ತರಿಗೆ ನಾಯಿ ಬಿಸ್ಕೆಟ್ ನೀಡಲಿಲ್ಲ; ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*