Don't Miss

ಜಾತಿ ಗಣತಿ ಭಾಷಣ: ರಾಹುಲ್ ಗಾಂಧಿಯವರು 50+15=73 ಎಂದರಾ? ಸತ್ಯ ಪರಿಶೀಲನೆ

ಹೇಳಿಕೆ/Claim: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಜಾತಿ ಗಣತಿ ಕುರಿತಾದ ತಮ್ಮ ಭಾಷಣದಲ್ಲಿ 50+15 ಅನ್ನು 73 ಎಂದು
ತಪ್ಪಾಗಿ ಲೆಕ್ಕ ಮಾಡಿದರು ಎಂದು ವೀಡಿಯೊ ಹೇಳುತ್ತದೆ.

ಕಡೆನುಡಿ/Conclusion: ಸುಳ್ಳು. ರಾಹುಲ್ ಗಾಂಧಿಯವರ ಮೂಲ ಭಾಷಣದಿಂದ 8% ಆದಿವಾಸಿಗಳ ಉಲ್ಲೇಖವನ್ನು ಅಳಿಸಲು
ವೀಡಿಯೊವನ್ನು ಬದಲಾಯಿಸಲಾಗಿದೆ.

ರೇಟಿಂಗ್:ತಪ್ಪು ನಿರೂಪಣೆ 

ಸತ್ಯ ಪರಿಶೀಲನೆ ವಿವರಗಳು

ಜಾತಿ ಗಣತಿ ಮತ್ತು ಮೀಸಲಾತಿಯ ವಿಷಯದ ಬಗ್ಗೆ ರಾಹುಲ್ ಗಾಂಧಿಯವರು ಮಾತನಾಡುತ್ತಿರುವ ವೀಡಿಯೊ ವೈರಲ್ ಆಗಿದ್ದು,ಮೂಲಭೂತ ಲೆಕ್ಕಾಚಾರದಲ್ಲಿ ತಪ್ಪು ಮಾಡಿದ್ದಕ್ಕಾಗಿ ಈ ಕಾಂಗ್ರೆಸ್ ನಾಯಕರನ್ನು ಅಪಹಾಸ್ಯ ಮಾಡುವ ಉದ್ದೇಶದಿಂದ ಹಲವಾರು ಶೀರ್ಷಿಕೆಗಳನ್ನು ಈ ವೀಡಿಯೊದೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ವೀಡಿಯೊದಲ್ಲಿ ರಾಹುಲ್ ಗಾಂಧಿಯವರು, “ಎಷ್ಟು?… ಹೇಳಿ… 50.. 15.. ಎಷ್ಟು? 73″; ಎಂದು ಹೇಳುತ್ತಿರುವುದನ್ನು ಕೇಳಬಹುದು.

ಟ್ವಿಟ್ಟರ್‌ನಲ್ಲಿ ಈ ಪೋಸ್ಟ್ ಅನ್ನು ಈಗಾಗಲೇ ಸುಮಾರು 2 ಲಕ್ಷ ಜನರು ನೋಡಿದ್ದು ಅದನ್ನು ಬಹಳಷ್ಟು ಜನರು ರೀಟ್ವೀಟ್ ಮಾಡಿದ್ದಾರೆ.

FACT CHECK

ಡಿಜಿಟೈ ಇಂಡಿಯಾ ತಂಡವು ವೀಡಿಯೊವನ್ನು ನೋಡಿದಾಗ ಅದು ಅನುಮಾನಾಸ್ಪದವಾಗಿದೆ ಎಂದನಿಸಿತು ಏಕೆಂದರೆ ರಾಹುಲ್ ಗಾಂಧಿಯವರು ಜಾತಿ ಗಣತಿಯ ಅಂಕಿಗಳ ಬಗ್ಗೆ ಬಹಳ ಹಿಂದಿನಿಂದಲೂ ಮಾತನಾಡುತ್ತಾ ಬಂದಿದ್ದಾರೆ, ಆದರೆ ಆತ ಇಂತಹ ತಪ್ಪನ್ನು ಎಂದಿಗೂ ಮಾಡಿಲ್ಲ. ನಾವು ಮೂಲ ವೀಡಿಯೊವನ್ನು ಹುಡುಕಿದಾಗ, ಛತ್ತೀಸ್‌ಗಢದಲ್ಲಿ ರಾಹುಲ್ ಗಾಂಧಿಯವರು ನೀಡಿದ ಭಾಷಣದಲ್ಲಿ ನಾವು ಈ ವೀಡಿಯೊವನ್ನು ಕಂಡುಹಿಡಿದೆವು. ಪಸ್ತುತ ಚಾಲನೆಯಲ್ಲಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಭಾಗವಾಗಿ ಆತ ಮಾತನಾಡುತ್ತಿದ್ದರು ಮತ್ತು ವೀಡಿಯೊವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿಕೃತ X (ಈ ಹಿಂದೆ ಟ್ವಿಟರ್) ಹ್ಯಾಂಡಲ್‌ನಲ್ಲಿ ಇಲ್ಲಿ ಅಪ್‌ಲೋಡ್ ಮಾಡಲಾಗಿತ್ತು.

ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿರುವ ಈ ಕೆಳಗಿನ ವೀಡಿಯೊ ಮೂಲಕ ಬದಲಾವಣೆ ಮಾಡಲಾದ ವೀಡಿಯೊ ಮತ್ತು ಮೂಲ ವೀಡಿಯೊದ ನಡುವಿನ ವ್ಯತ್ಯಾಸವನ್ನು ನಾವು ಸ್ಪಷ್ಟವಾಗಿ ಕಾಣಬಹುದು:

ಎಚ್ಚರಿಕೆ! ನಕಲಿ ವೀಡಿಯೊ 📢


ಈ ನಿರ್ದಿಷ್ಟ ಕ್ಲಿಪ್‌ನಲ್ಲಿ ರಾಹುಲ್ ಗಾಂಧಿಯವರು ಮೀಸಲಾತಿಯ ಕುರಿತು ಪತ್ರಕರ್ತರೊಬ್ಬರ ಪ್ರಶ್ನೆಯನ್ನು ನೆನಪಿಸಿಕೊಂಡು ಜಾತಿ ಜನಗಣತಿಯು ಸಮಾಜದಲ್ಲಿ ಮತ್ತಷ್ಟು ವಿಭಜನೆಯನ್ನು ಉಂಟುಮಾಡುವುದಿಲ್ಲ ಎಂದು ವಿವರಿಸಲಾರಂಭಿಸಿದರು. ನಮ್ಮ ಸಮಾಜದಲ್ಲಿ ಇತರ ಹಿಂದುಳಿದ ಜಾತಿಗಳು (OBC), ಆದಿವಾಸಿಗಳು (ST) ಮತ್ತು ದಲಿತ(SC) ಸಮೂಹಗಳಲ್ಲಿರುವ ಜನರ ಶೇಕಡಾವಾರು ಉಲ್ಲೇಖಿಸಿದ ರಾಹುಲ್ ಗಾಂಧಿಯವರು ಈ ಮೂರು ಗುಂಪುಗಳು ದೇಶದ ಜನಸಂಖ್ಯೆಯಲ್ಲಿ ಕ್ರಮವಾಗಿ 50%, 8% ಮತ್ತು 15% ದಷ್ಟಿದ್ದಾರೆ ಎಂದು ಹೇಳಿದರು.

ಮುಂದೆ, ಅವರು ಹಿಂದಿಯಲ್ಲಿ ಹೇಳಿದರು, “50+15+8 ಎಂದರೆ 73. 73% ಜನರಿಗೆ ಏನೂ ದೊರಕದಿದ್ದರೆ, ಮಾಧ್ಯಮಗಳಲ್ಲಿ ಪ್ರತಿನಿಧಿತ್ವ ಸಿಗದಿದ್ದರೆ, ದೊಡ್ಡ 200 ಕಾರ್ಪೊರೇಟ್‌ ಕಂಪೆನಿಗಳಲ್ಲಿ ಕೆಲಸ ಸಿಗದಿದ್ದರೆ, PMO ದಲ್ಲಿಯೂ ಇಲ್ಲ, ಅಧಿಕಾರ ಪದದಲ್ಲೂ ಇಲ್ಲ, ಖಾಸಗಿ ಆಸ್ಪತ್ರೆಗಳಲ್ಲೂ ಇಲ್ಲವೆಂದಾರೆ. ಯಾವುದೇ ಶಾಲೆಗಳು ಅಥವಾ ವಿಶ್ವವಿದ್ಯಾಲಯಗಳು ಅವರಿಗೆ ಎಟಕುವಂತಿಲ್ಲವೆಂದಾದರೆ. ಭಾರತವನ್ನು ಏಕೀಕರಿಸುವುದು ಹೇಗೆ?

ಆದರೆ, ಟ್ವಿಟರ್‌ನಲ್ಲಿರುವ ವೈರಲ್ ವೀಡಿಯೊದಲ್ಲಿ ಆದಿವಾಸಿಗಳ 8% ಉಲ್ಲೇಖವನ್ನು ತೆಗೆದುಹಾಕಿ ಅದನ್ನು ಬದಲಾಯಿಸಿ, 50+15=73 ಎನ್ನುವಂತೆ ತೋರಿಸಲಾಗಿದೆ.

ಆದ್ದರಿಂದ, ಮೂಲಭೂತ ಲೆಕ್ಕಾಚಾರವನ್ನು ತಪ್ಪಾಗಿಸಿ ರಾಹುಲ್ ಗಾಂಧಿಯವರನ್ನು ಕೆಟ್ಟ ರೀತಿಯಲ್ಲಿ ತೋರಿಸಲು ಬದಲಾದ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ.

ಇದನ್ನೂ ಓದಿ:

ಇಂಡಿಯಾ ಮೈತ್ರಿಕೂಟವು 50% ಮೀಸಲಾತಿಯನ್ನು ತೆಗೆದುಹಾಕುತ್ತದೆ ಎಂದು ರಾಹುಲ್ ಗಾಂಧಿಯವರು ಎಂದಿಗೂ ಹೇಳಿಲ್ಲ; ಸತ್ಯ ಪರಿಶೀಲನೆ ಇಲ್ಲ, ಹೇಳಲಾಗಿರುವಂತೆ ರಾಹುಲ್ ಗಾಂಧಿಯವರು ಕಾಂಗ್ರೆಸ್ ಕಾರ್ಯಕರ್ತರಿಗೆ ನಾಯಿ ಬಿಸ್ಕೆಟ್ ನೀಡಲಿಲ್ಲ; ಸತ್ಯ ಪರಿಶೀಲನೆ

One comment

Leave a Reply

Your email address will not be published. Required fields are marked *

*