Don't Miss
ದಕ್ಷಿಣ ಭಾರತದ ಶಾಲೆಯು ಮಧ್ಯಾಹ್ನದ ಊಟಕ್ಕೆ ಅನ್ನ ಮತ್ತು ಅರಿಶಿನ ನೀರನ್ನು ಕೊಡುತ್ತಿರುವುದಾಗಿ ವೀಡಿಯೊ ಹೇಳುತ್ತದೆ; ಸತ್ಯ ಪರಿಶೀಲನೆ

ದಕ್ಷಿಣ ಭಾರತದ ಶಾಲೆಯು ಮಧ್ಯಾಹ್ನದ ಊಟಕ್ಕೆ ಅನ್ನ ಮತ್ತು ಅರಿಶಿನ ನೀರನ್ನು ಕೊಡುತ್ತಿರುವುದಾಗಿ ವೀಡಿಯೊ ಹೇಳುತ್ತದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ದಕ್ಷಿಣ ಭಾರತದ ಶಾಲೆಗಳಲ್ಲಿ ಕೇವಲ ಅನ್ನ ಮತ್ತು ಅರಿಶಿನ ನೀರನ್ನು ಮಾತ್ರ ನೀಡುತ್ತಿರುವ ಮಧ್ಯಾಹ್ನದ ಊಟದ ಯೋಜನೆಯ ಕುರಿತು ವೀಡಿಯೊ ತೋರಿಸುತ್ತದೆ.

ಕಡೆನುಡಿ/Conclusion: ಮಧ್ಯಾಹ್ನದ ಊಟದ ವೈರಲ್ ವೀಡಿಯೋ ಒಡಿಶಾದ ಸರ್ಕಾರಿ ಶಾಲೆಯಿಂದ ಬಂದಿದೆಯೇ ಹೊರತು ಹೇಳಿಕೆಯಲ್ಲಿ ತಿಳಿಸಲಾಗಿರುವಂತೆ ದಕ್ಷಿಣ ಭಾರತದಿಂದಲ್ಲ.

ರೇಟಿಂಗ್:ತಪ್ಪು ನಿರೂಪಣೆ -- 

ಸತ್ಯ ಪರಿಶೀಲನೆ ವಿವರಗಳು

ದಕ್ಷಿಣ ಭಾರತದಲ್ಲಿ ಜಾರಿಯಲ್ಲಿರುವ ಮಧ್ಯಾಹ್ನದೂಟದ ಯೋಜನೆಯಲ್ಲಿ ಕೇವಲ ಅನ್ನ ಮತ್ತು ಅರಿಶಿನ ನೀರು ಮಾತ್ರವಿದೆ ಎನ್ನುವ ಸಣ್ಣ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹಿಂದಿಯಲ್ಲಿರುವ ಇದರ ಶೀರ್ಷಿಕೆ ಹೀಗಿದೆ:” देखें कि दक्षिण भारत के सरकारी स्कूलों में मध्याह्न भोजन कैसे उपलब्ध कराया जा रहा है। केवल चावल और हल्दी वाला पानी।”[ಕನ್ನಡದಲ್ಲಿ ಇದರ ಅನುವಾದ: ” ದಕ್ಷಿಣ ಭಾರತದ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಊಟವನ್ನು ಹೇಗೆ ನೀಡಲಾಗುತ್ತಿದೆ ಎಂಬುದನ್ನು ನೋಡೋಣ. ಕೇವಲ ಅನ್ನ ಮತ್ತು ಅರಿಶಿನ ನೀರು.”

ಇದನ್ನು ಇಲ್ಲಿ ಮತ್ತು ಇಲ್ಲಿ ಹಂಚಿಕೊಳ್ಳಲಾಗಿದೆ.

Fact Check

ವೀಡಿಯೊದ ಪ್ರಮುಖ ಫ್ರೇಮ್‌ಗಳನ್ನು ತೆಗೆದುಕೊಂಡು, ಡಿಜಿಟೈ ಇಂಡಿಯಾ ತಂಡವು ಗೂಗಲ್ ರಿವರ್ಸ್ ಇಮೇಜ್ ಸರ್ಚ್‌ನಲ್ಲಿ ಪರಿಶೀಲಿಸಿದಾಗ, ಮೂಲ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಫೆಬ್ರವರಿ 1, 2024 ರಂದು ಬಿಗುಲ್ ಟಿವಿ (ಒಡಿಶಾ)  ಪೋಸ್ಟ್ ಮಾಡಿತ್ತು ಎಂದು ಫಲಿತಾಂಶಗಳ ಮೂಲಕ ನಮಗೆ ತಿಳಿಯಿತು: “ಮಧ್ಯಾಹ್ನದೂಟ ಎಂದರೆ ಯಾರೂ ತಮ್ಮ ಇಡೀ ಜೀವನದಲ್ಲಿ ಇಂತಹ ಬೇಳೆಕಾಳುಗಳನ್ನು ತಿಂದಿರುವುದಿಲ್ಲ; ನಮ್ಮ ಪೂರ್ವಜರು ಸಹ ಅದನ್ನು ತಿಂದಿಲ್ಲ. ಈ ಸರ್ಕಾರದಡಿಯಲ್ಲಿ ಇದು ಹೇಗೆ ಸಾಧ್ಯ?

ಮೂಲ ವೀಡಿಯೋದಲ್ಲಿ, ವ್ಯಕ್ತಿಯು ಒಡಿಯಾ ಭಾಷೆಯಲ್ಲಿ ಕೆಲಸಗಾರರೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದು, ತಾನು ದೂರುತ್ತಿಲ್ಲ, ಆದರೆ ಯಾವ ರೀತಿಯ ಬೇಳೆಕಾಳುಗಳನ್ನು ನೀಡಲಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತೇನೆ ಎಂದು ಆತ ಹೇಳುತ್ತಾರೆ. “ಇವು ಬೇಳೆಕಾಳುಗಳಲ್ಲ, ಇದು ನೀವು ಬಡಿಸುವ ನೀರು. ನಿಮಗೆ ಇಲ್ಲಿ ಕಡಿಮೆ ಆಹಾರ ಪದಾರ್ಥಗಳು ಸಿಗುತ್ತಿರುವುದರಿಂದ ನೀವು ಸೀಮಿತ ಸಂಪನ್ಮೂಲಗಳೊಂದಿಗೆ ಕೆಲಸ ಮಾಡುತ್ತಿದ್ದೀರಿ ಎಂದು ನನಗೆ ತಿಳಿದಿದೆ, ಆದರೂ ನಾನು ಹೋಗಿ ಈ ಬಗ್ಗೆ ಬಿ.ಡಿ.ಒ (ಬ್ಲಾಕ್ ಡೆವಲಪ್ಮೆಂಟ್ ಆಫೀಸರ್) ಗೆ ದೂರು ನೀಡುತ್ತೇನೆ.

ಆದ್ದರಿಂದ, ಈ ವೀಡಿಯೊ ಒಡಿಶಾದ ಸರ್ಕಾರಿ ಶಾಲೆಗೆ ಸಂಬಂಧಿಸಿದ್ದು, ಹೇಳಿಕೆಯಂತೆ ದಕ್ಷಿಣ ಭಾರತದ ಸರ್ಕಾರಿ ಶಾಲೆಯದ್ದಲ್ಲ.

ಇದನ್ನೂ ಓದಿ:
ನ್ಯೂಜಿಲೆಂಡ್‌ನ ಗೃಹ ಸಚಿವರು ಸಹ ಸನಾತನ ಧರ್ಮವನ್ನು ಅಳವಡಿಸಿಕೊಂಡಿದ್ದಾರೆ ಎಂದು ವೀಡಿಯೊ ಹೇಳುತ್ತದೆ; ಸತ್ಯ ಪರಿಶೀಲನೆ
ಜೋ ಬಿಡೆನ್, ರಿಷಿ ಸುನಕ್, ಜಸ್ಟಿನ್ ಟ್ರುಡೊ ರವರು ರಾಮಮಂದಿರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ವೀಡಿಯೊ ಹೇಳಿಕೊಂಡಿದೆ; ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*