Don't Miss
No, Rahul Gandhi didn't offer dog biscuit to Congress worker as claimed; Fact Check

ಇಲ್ಲ, ಹೇಳಲಾಗಿರುವಂತೆ ರಾಹುಲ್ ಗಾಂಧಿಯವರು ಕಾಂಗ್ರೆಸ್ ಕಾರ್ಯಕರ್ತರಿಗೆ ನಾಯಿ ಬಿಸ್ಕೆಟ್ ನೀಡಲಿಲ್ಲ; ಸತ್ಯ ಪರಿಶೀಲನೆ

ಹೇಳಿಕೆ/Claim: ಭಾರತ್ ಜೋಡೋ ನ್ಯಾಯ್ ಯಾತ್ರೆಯ ವೇಳೆ ರಾಹುಲ್ ಗಾಂಧಿಯವರು ನಾಯಿ ತಿರಸ್ಕರಿಸಿದ ಬಿಸ್ಕೆಟ್ಟನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಿದರು.

ಕಡೆನುಡಿ/Conclusion:  ಇಲ್ಲ, ರಾಹುಲ್ ಗಾಂಧಿಯವರು ಬಿಸ್ಕೆಟ್ಟನ್ನು ಆತಂಕಗೊಂಡಿದ್ದ ನಾಯಿಗೆ ನೀಡಲು ನಾಯಿಯ ಮಾಲೀಕರಿಗೆ ಕೊಟ್ಟರು.

ರೇಟಿಂಗ್:ಸಂಪೂರ್ಣವಾಗಿ ಸುಳ್ಳು — Five rating

ಸತ್ಯ ಪರಿಶೀಲನೆ ವಿವರಗಳು

ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆಯ ನಡುವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಪುನಃ ಟೀಕೆಗಳಿಗೆ ಗುರಿಯಾಗಿದ್ದಾರೆ, ಈ ಬಾರಿಯ ವಿಷಯ ನಾಯಿಗಳ ಮೇಲಿನ ಅವರ ಪ್ರೀತಿ. ಯಾತ್ರೆಯ ಸಮಯದಲ್ಲಿ ಅವರು ಒಂದು ನಾಯಿಯೊಂದಿಗೆ ಆಟವಾಡುತ್ತಾ ಅದಕ್ಕೆ ಬಿಸ್ಕೆಟ್ ತಿನ್ನಿಸಲು ಯತ್ನಿಸುತ್ತಿದ್ದ ದೃಶ್ಯ ಕಂಡುಬಂತು. ನಾಯಿಯು ಬಿಸ್ಕೆಟ್ ತೆಗೆದುಕೊಳ್ಳದಿದ್ದಾಗ ಪಕ್ಕದಲ್ಲಿದ್ದವರಿಗೆ ಬಿಸ್ಕೆಟ್ ನೀಡುತ್ತಿರುವುದು ಕಂಡುಬಂತು.

ಆದರೆ, ಈ ವೀಡಿಯೊವನ್ನು ಉಲ್ಲೇಖಿಸಿ ಹಲವಾರು ಜನರ ಹೇಳಿಕೆಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡವು, ಇದು ಭಾರತೀಯ ಜನತಾ ಪಕ್ಷದ ಕೆಲವು ನಾಯಕರನ್ನೊಳಗೊಂಡಂತೆ ಹಲವರ ಟೀಕೆಗೆ ಪಾತ್ರವಾಗಿದೆ. ನಾಯಿಯು ನಿರಾಕರಿಸಿದ ಬೆಸ್ಕೆಟ್ಟನ್ನು ರಾಹುಲ್ ಗಾಂಧಿಯವರು ನಾಯಿಯ ಪಕ್ಕದಲ್ಲಿ ನಿಂತಿದ್ದ ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಗೆ ನೀಡಿದರು ಎಂಬುದು ವೀಡಿಯೊದೊಂದಿಗಿನ ಹೇಳಿಕೆ. ಈ ಟ್ವೀಟ್‌ಗಳನ್ನು ಕೆಳಗೆ ಕಾಣಬಹುದು:

ವೀಡಿಯೊವನ್ನು ಈ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿತ್ತು: “ಸ್ವಾಭಿಮಾನಿಯಾದ ಯಾರೂ ಕಾಂಗ್ರೆಸ್‌ನಲ್ಲಿ ಉಳಿಯಲು ಸಾಧ್ಯವಿಲ್ಲದ್ದಕ್ಕೆ ಕಾರಣ ಇದುವೇ. ಇಂದು ಹಿಮಂತ ಶರ್ಮಾ ರವರ ಸತ್ಯದ ಸಮರ್ಥನೆಯಾಗಿದೆ. ರಾಹುಲ್ ಮೊದಲು ನಾಯಿಗೆ ಬಿಸ್ಕೆಟ್ ಕೊಡುತ್ತಾರೆ, ನಾಯಿ ನಿರಾಕರಿಸಿದಾಗ ಅದೇ ಬಿಸ್ಕೆಟ್ಟನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡುತ್ತಾರೆ.”

 

ಬಿಜೆಪಿ ವಕ್ತಾರರಾದ ಶೆಜಾದ್ ಪೂನಾವಾಲಾ, ಇದೇ ಟೀಕೆಯನ್ನು ಮತ್ತೊಂದು ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ: “ಕಾಂಗ್ರೆಸ್ ಕಾರ್ಯಕರ್ತರಿಗೆ “ನ್ಯಾಯ” ಇಲ್ಲವೇ? ತಿರಸ್ಕೃತ ನಾಯಿ ಬಿಸ್ಕೆಟ್‌ಗಳನ್ನು ರಾಹುಲ್ ಗಾಂಧಿ ಕಾರ್ಯಕರ್ತರಿಗೆ ತಿನ್ನಿಸುತ್ತಾರೆ! ಪ್ರಥಮ ಕುಟುಂಬದ ಎಲಿಟಿಸ್ಟ್ ಮನೋಭಾವ.”

FACT CHECK

ನಾವು ಸಂಪೂರ್ಣ ವೀಡಿಯೊವನ್ನು ಹುಡುಕಿದಾಗ ಇಲ್ಲಿ ಮೂಲ ವೀಡಿಯೊ ದೊರಕಿತು, ಅದರಲ್ಲಿ ರಾಹುಲ್ ಗಾಂಧಿಯವರು ಬಿಸ್ಕೆಟ್ ನೀಡಿದ್ದು ಕಾಂಗ್ರೆಸ್ ಕಾರ್ಯಕರ್ತರಿಗೆ ಅಲ್ಲ ನಾಯಿಯ ಮಾಲೀಕರಿಗೆ ಎಂದು ಕಾಣುತ್ತದೆ, ಅದೇ ವ್ಯಕ್ತಿಯು ಕೊನೆಗೆ ಆ ಬಿಸ್ಕೆಟ್ಟನ್ನು ತಮ್ಮ ಕೈಯಿಂದ ನಾಯಿಗೆ ತಿನ್ನಿಸುತ್ತಾರೆ. ಇದನ್ನು ವಿವರಿಸಿದ ರಾಹುಲ್ ಗಾಂಧಿಯವರು,  ನಾಯಿಯ ಸಂಕಟವನ್ನು ಗಮನಿಸಿ ಅದಕ್ಕೆ ತಿನ್ನಿಸಲು ಅದರ ಮಾಲೀಕರಿಗೆ ಬಿಸ್ಕೆಟ್ ನೀಡಲು ನಿರ್ಧರಿಸಿದ್ದಾಗಿ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳಿಗೆ ತಿಳಿಸಿದರು.

“ನಾನು ನಾಯಿ ಮತ್ತು ಅದರ ಮಾಲೀಕರನ್ನು ಕರೆದೆ. ನಾಯಿ ನರಳುತ್ತಿತ್ತು, ನಡುಗುತ್ತಿತ್ತು. ನಾನು ಅದಕ್ಕೆ ಆಹಾರ ತಿನ್ನಿಸಲು ಪ್ರಯತ್ನಿಸಿದಾಗ, ನಾಯಿ ಹೆದರಿಹೋಯಿತು. ಹಾಗಾಗಿ ನಾನು ನಾಯಿಯ ಮಾಲೀಕರಿಗೆ ಬಿಸ್ಕೆಟ್ ಗಳನ್ನು ಕೊಟ್ಟೆ. ನಾಯಿಯು ಅವರ ಕೈಯಿಂದ ಅವುಗಳನ್ನು ತಿಂದಿತು.” ಎಂದು ರಾಹುಲ್ ಗಾಂಧಿ ಹೇಳಿದರು.

ರಾಹುಲ್ ಗಾಂಧಿಯವರು ಸ್ವತಃ ನಾಯಿಯನ್ನು ಸಾಕಿದ್ದಾರೆ ಮತ್ತು ನಾಯಿಗಳ ಮಾನಸಿಕತೆಯನ್ನು ತಿಳಿದಿದ್ದಾರೆ ಎಂಬುದನ್ನು ಗಮನಾರ್ಹ. ನಂತರ, ಸ್ವತಃ ನಾಯಿ ಮಾಲೀಕರು ರಾಹುಲ್ ಗಾಂಧಿಯವರ ಹೇಳಿಕೆಯನ್ನು ಬೆಂಬಲಿಸಲು ಮುಂದಾದರು ಮತ್ತು ತಾವು ಕಾಂಗ್ರೆಸ್ ಕಾರ್ಯಕರ್ತರೂ ಅಲ್ಲ, ಯಾವುದೇ ರಾಜಕೀಯ ಪಕ್ಷದ ಬೆಂಬಲಿಗರೂ ಅಲ್ಲ ಎಂದು ಸ್ಪಷ್ಟಪಡಿಸಿದರು.

ನಾಯಿ ಮಾಲೀಕರಾದ ಜಿತೇಂದ್ರ ಕುಮಾರ್ ಎಂಬ ಹೆಸರಿನ ಧನ್‌ಬಾದ್‌ನ ನಿವಾಸಿಯು ನಂತರ ಮಾಧ್ಯಮಗಳಿಗೆ ತಿಳಿಸಿದ್ದೇನೆಂದರೆ ರಾಹುಲ್ ಗಾಂಧಿಯವರು ಅವರ ನಾಯಿಯ ಮೈದಡವಲು ಮುಂದಾದರು ಮತ್ತು ಅದಕ್ಕೆ ಬಿಸ್ಕೆಟ್ ನೀಡಿದರು. “ನನ್ನ ನಾಯಿ, ಲೂಸಿ, ಒಂದು ಹೆಣ್ಣು ಕಲ್ಚರ್ ಪೊಮೆರೇನಿಯನ್, ಕಾರಿನ ಮೇಲೆ ಅದು ಆತಂಕ ಮತ್ತು ಭಯಗೊಂಡಿತ್ತು ಮತ್ತು ತಿನ್ನಲು ನಿರಾಕರಿಸುತ್ತಿತ್ತು.” ನಾಯಿಯ ಹೆದರಿಕೆಯನ್ನು ಅರ್ಥಮಾಡಿಕೊಂಡ ರಾಹುಲ್ ಗಾಂಧಿ, ಆಹಾರ ನೀಡುವಂತೆ ಮಾಲೀಕರಿಗೆ ಹೇಳಿ ನಾಯಿಯು ಆಹಾರ ತಿನ್ನುವಂತೆ ಖಚಿತಪಡಿಸಿಕೊಂಡರು, ಅದು ಫಲಿಸಿತು ಕೂಡ, ಎಂದು ಕುಮಾರ್ ವಿವರಿಸಿದರು.

ಆತ ಕಾಂಗ್ರೆಸ್ ಕಾರ್ಯಕರ್ತರು ಎಂಬ ಬಿಜೆಪಿ ನಾಯಕರ ಹೇಳಿಕೆಯನ್ನು ಕೂಡ ನಾಯಿಯ ಮಾಲೀಕರು ತಳ್ಳಿಹಾಕಿದ್ದಾರೆ. ಆದ್ದರಿಂದ, ರಾಹುಲ್ ಗಾಂಧಿಯವರನ್ನು ಕೆಟ್ಟ ರೀತಿಯಲ್ಲಿ ತೋರಿಸಲು ಅವರ ಬಗೆಗಿನ ವೈರಲ್ ವೀಡಿಯೊದ ಜೊತೆಗಿನ ಹೇಳಿಕೆಯನ್ನು ತಪ್ಪಾಗಿ ಬಳಸಲಾಗಿದೆ.

ಇದನ್ನೂ ಓದಿ:

ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡುತ್ತಿದೆಯೇ? ಹಳೆಯ ಹೇಳಿಕೆಯ ಮರುಕಳಿಕೆ; ಸತ್ಯ ಪರಿಶೀಲನೆ
ಬಿಜೆಪಿ ಚಿಹ್ನೆಯನ್ನು ಹೊಂದಿರುವ ಟೀ ಶರ್ಟ್ ಧರಿಸಿರುವಂತೆ ರಾಹುಲ್ ಗಾಂಧಿಯವರ ಸುಳ್ಳು ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ; ಸತ್ಯ ಪರಿಶೀಲನೆ