Don't Miss

ನ್ಯೂಜಿಲೆಂಡ್‌ನ ಗೃಹ ಸಚಿವರು ಸಹ ಸನಾತನ ಧರ್ಮವನ್ನು ಅಳವಡಿಸಿಕೊಂಡಿದ್ದಾರೆ ಎಂದು ವೀಡಿಯೊ ಹೇಳುತ್ತದೆ; ಸತ್ಯ ಪರಿಶೀಲನೆ

ಹೇಳಿಕೆ/Claim:ನ್ಯೂಜಿಲೆಂಡ್‌ನ ಗೃಹ ಸಚಿವರು ಸನಾತನ ಧರ್ಮವನ್ನು ಅಳವಡಿಸಿಕೊಳ್ಳುತ್ತಿದ್ದಾರೆಂದು ತೋರಿಸುವ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

ಕಡೆನುಡಿ/Conclusion: ಸುಳ್ಳು. ನ್ಯೂಜಿಲೆಂಡ್‌ನ ಗೃಹ ಸಚಿವರು ಸನಾತನ ಧರ್ಮವನ್ನು ಅಳವಡಿಸಿಕೊಳ್ಳುತ್ತಿರುವುದನ್ನು ವೀಡಿಯೊ ತೋರಿಸುವುದಿಲ್ಲ, ಅದು ಬ್ರೆಂಟ್ ಗೋಬಲ್ ಎಂಬ ಅಮೇರಿಕದ ಯೋಗ ಶಿಕ್ಷಕರು ದೈನಂದಿನ ಪ್ರಾರ್ಥನೆಯಲ್ಲಿ ತೊಡಗಿರುವುದನ್ನು ತೋರಿಸುತ್ತದೆ.

ರೇಟಿಂಗ್:ತಪ್ಪು ನಿರೂಪಣೆ —

ಸತ್ಯ ಪರಿಶೀಲನೆ ವಿವರಗಳು

ವಿದೇಶಿ ವ್ಯಕ್ತಿಯೊಬ್ಬರು ಕೈಮುಗಿದು ಹಿಂದೂ ಆಚರಣೆಗಳನ್ನು ಪರಿಪಾಲಿಸುತ್ತಿರುವ ವೀಡಿಯೊವೊಂದು ಅದು ನ್ಯೂಜಿಲೆಂಡ್‌ನ ಗೃಹ ಸಚಿವರು ಸನಾತನ ಧರ್ಮವನ್ನು ಅಳವಡಿಸಿಕೊಳ್ಳುತ್ತಿರುವುದು ಎಂಬ ಹೇಳಿಕೆಯೊಂದಿಗೆ Xನಲ್ಲಿ (ಈ ಹಿಂದೆ  ಟ್ವಿಟರ್) ವೈರಲ್ ಆಗುತ್ತಿದೆ. ಶೀರ್ಷಿಕೆಯು ಹೀಗಿದೆ: “ಸನಾತನದ ಶಕ್ತಿಯನ್ನು ನೋಡಿ… ನ್ಯೂಜಿಲೆಂಡ್‌ನ ಗೃಹ ಸಚಿವರೂ ಸಹ ಸನಾತನ ಧರ್ಮವನ್ನು ಅಳವಡಿಸಿಕೊಂಡರು…!!”

ಈ ವೀಡಿಯೊವನ್ನು ಈಗಾಗಲೇ ಎರಡು ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ, ಅದನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

FACT CHECK

ಡಿಜಿಟೈ ಇಂಡಿಯಾ ತಂಡವು ನ್ಯೂಜಿಲೆಂಡ್‌ನ ಗೃಹ ಸಚಿವರ ವಿವರಗಳನ್ನು ಪರಿಶೀಲಿಸಿದಾಗ, ಅಂತಹದ್ದೊಂದು ಸಚಿವಾಲಯ ಅಥವಾ ಅದರ ಮುಂದಾಳುತ್ವ ವಹಿಸಿರುವ ವ್ಯಕ್ತಿ ಕಂಡುಬಂದಿಲ್ಲ. ಆದರೆ, ಆಂತರಿಕ ವ್ಯವಹಾರಗಳು ಮತ್ತು ಕಾರ್ಯಸ್ಥಳದ ಸಂಬಂಧಗಳು ಮತ್ತು ಸುರಕ್ಷತೆಯ ಸಚಿವರಾಗಿ ಬ್ರೂಕ್ ವ್ಯಾನ್ ವೆಲ್ಡೆನ್ ಸೇವೆ ಸಲ್ಲಿಸುತ್ತಾರೆ ಮತ್ತು ಆತನೂ ವೀಡಿಯೊದಲ್ಲಿರುವ ವ್ಯಕ್ತಿಯೂ ಬೇರೆಬೇರೆ. ನಂತರ, ನಾವು ವೀಡಿಯೊದಿಂದ ಕೆಲವು ಪ್ರಮುಖ ಫ್ರೇಮ್‌ಗಳನ್ನು ತೆಗೆದು ಅವುಗಳನ್ನು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟದಲ್ಲಿ ಪರಿಶೀಲಿಸಿದೆವು. ವೀಡಿಯೊದಲ್ಲಿರುವ ವ್ಯಕ್ತಿಯು ಬ್ರೆಂಟ್ ಗೋಬಲ್ ಎಂಬ ಅಮೇರಿಕದ ಯೋಗ ಶಿಕ್ಷಕ ಎಂದು ಫಲಿತಾಂಶಗಳಿಂದ ನಮಗೆ ತಿಳಿದುಬಂತು.

ಸಾಮಾಜಿಕ ಜಾಲತಾಣದ ಹ್ಯಾಂಡಲ್ ಪ್ರಕಾರ, ಬ್ರೆಂಟ್ ಗೋಬಲ್ ಈಗ ಗೋವಾದ ಅಂಜುನಾದಲ್ಲಿ ನೆಲೆಸಿದ್ದಾರೆ ಮತ್ತು ಆತ ಎಲ್ಲಾ ವಯಸ್ಸಿನವರಿಗೆ ಯೋಗ ಕಲಿಸುತ್ತಾರೆ. ನಾವು ಆತನ ಇನ್ಸ್ಟಾಗ್ರಾಮ್ ಖಾತೆಯನ್ನು ಹುಡುಕಿದಾಗ, ನವೆಂಬರ್ 2, 2023ರಂದು ಆತ ಪೋಸ್ಟ್ ಮಾಡಿದ್ದ ಮೂಲ ವೀಡಿಯೊ ನಮಗೆ ದೊರಕಿತು. ಅದರ ಶೀರ್ಷಿಕೆ ಹೀಗಿದೆ, “ನಿನ್ನೆ ರಾತ್ರಿ ಆಲೆಕ್ಸ್ ನ ನಾಮಕರಣ ಸಮಾರಂಭ. ನಾನು ಬೆಳೆಯುವಾಗ ಹಿಂದೂ ಧರ್ಮ ನನ್ನ ಜೀವನದ ಭಾಗವಾಗಿರಲಿಲ್ಲ, ಆದರೆ ನನ್ನ ಹೆಂಡತಿ ಮತ್ತು ಅತ್ತೆ-ಮಾವನವರಿಗೆ ಮುಖ್ಯವಾದ ಆಚರಣೆಗಳಲ್ಲಿ ಭಾಗವಹಿಸಲು ನಾನು ಇಷ್ಟಪಡುತ್ತೇನೆ. ನನ್ನ ಮಗ ಜೀವನದ ಪ್ರತಿ ಹಂತದಲ್ಲೂ ಸುಂದರವಾಗಿ ಬೆಳೆಯಲಿ, ಅಗತ್ಯ ಸವಾಲುಗಳನ್ನು ಎದುರಿಸಲಿ, ತುಂಬು ಉತ್ಸಾಹದಿಂದ ಹೋರಾಡಲಿ ಮತ್ತು ಮುಕ್ತ ಮನಸ್ಸಿನಿಂದ ಪ್ರೀತಿಸಲಿ ನಾನು ಪ್ರಾರ್ಥಿಸುತ್ತೇನೆ.”

 

View this post on Instagram

 

A post shared by Brent Goble (@ibrentgoble)

ಹಾಗಾಗಿ, ನ್ಯೂಜಿಲೆಂಡ್‌ನ ಗೃಹ ಸಚಿವರು ಸನಾತನ ಧರ್ಮವನ್ನು ಅಳವಡಿಸಿಕೊಂಡರೆಂದು ಯೋಗ ಶಿಕ್ಷಕರ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ:

ಇಲ್ಲ, “ಡಿಎಂಕೆ ಹಿಂದೂಗಳನ್ನು ಮತಕ್ಕಾಗಿ ಬೇಡುವುದಿಲ್ಲ ” ಎಂದು ಸ್ಟಾಲಿನ್ ಎಂದಿಗೂ ಹೇಳಿಲ್ಲ; ಸತ್ಯ ಪರಿಶೀಲನೆ

ಜೋ ಬಿಡೆನ್, ರಿಷಿ ಸುನಕ್, ಜಸ್ಟಿನ್ ಟ್ರುಡೊ ರವರು ರಾಮಮಂದಿರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ವೀಡಿಯೊ ಹೇಳಿಕೊಂಡಿದೆ; ಸತ್ಯ ಪರಿಶೀಲನೆ