Don't Miss

ಜೋ ಬಿಡೆನ್, ರಿಷಿ ಸುನಕ್, ಜಸ್ಟಿನ್ ಟ್ರುಡೊ ರವರು ರಾಮಮಂದಿರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ವೀಡಿಯೊ ಹೇಳಿಕೊಂಡಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಅಯೋಧ್ಯೆಯ ರಾಮಮಂದಿರ ಶಂಕುಸ್ಥಾಪನೆ ಸಮಾರಂಭದಲ್ಲಿ ಹಲವಾರು ವಿಶ್ವ ನಾಯಕರು ಭಾಗವಹಿಸಿದ್ದರು.

ಕಡೆನುಡಿ/Conclusion: ರಾಷ್ಟ್ರಗಳ ಮುಖ್ಯಸ್ಥರು ಸೆಪ್ಟೆಂಬರ್ 2023ರಲ್ಲಿ G20 ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದ ವೀಡಿಯೊವನ್ನು ಜನವರಿ 2024 ರಲ್ಲಿ ನಡೆದ ರಾಮಮಂದಿರ ಕಾರ್ಯಕ್ರಮದ್ದು ಎನ್ನುವಂತೆ ಹಂಚಿಕೊಳ್ಳಲಾಗಿದೆ.

ರೇಟಿಂಗ್: ಸಂಪೂರ್ಣವಾಗಿ ಸುಳ್ಳುFive rating

ಸತ್ಯ ಪರಿಶೀಲನೆ ವಿವರಗಳು

ಅಮೇರಿಕಾದ ರಾಷ್ಟ್ರಪತಿ  ಜೋ ಬಿಡೆನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತಿತರ ವಿಶ್ವ ನಾಯಕರು  ಸೇರಿದಂತೆ ವಿದೇಶಿ ಗಣ್ಯರು ಜನವರಿ 22, 2024 ರಂದು ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂಬ ಹೇಳಿಕೆಯೊಂದಿಗೆ  ರಾಮಮಂದಿರದ ಶಂಕುಸ್ಥಾಪನೆ ಅಥವಾ ಪ್ರಾಣ ಪ್ರತಿಷ್ಠೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಮುಖ್ಯ ಅತಿಥಿಗಳನ್ನು ವೀಡಿಯೊ ಸೆರೆಹಿಡಿದಿದೆ ಎಂಬುದು ಹೇಳಿಕೆ.

“22 ಜನವರಿ 2024 ರಂದು ಅಯೋಧ್ಯೆಯ ರಾಮಮಂದಿರಕ್ಕೆ ಆಗಮಿಸುತ್ತಿರುವ ಅತಿಥಿಗಳು” ಎಂಬ ಶೀರ್ಷಿಕೆಯೊಂದಿಗೆ ಅದನ್ನು ಇಲ್ಲಿ ಮತ್ತು ಇಲ್ಲಿ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ.

FACT CHECK

ಸಂಬಂಧಿತ ಮಾಹಿತಿಗಾಗಿ ನಾವು ಗೂಗಲ್ ಹುಡುಕಾಟ ನಡೆಸಿದೆವು, ಆದರೆ ಸಮಾರಂಭದಲ್ಲಿ ಮೇಲಿನ ವಿಶ್ವ ನಾಯಕರು ಭಾಗವಹಿಸಿರುವರೆಂದು ಉಲ್ಲೇಖಿಸಿರುವ ಯಾವುದೇ ಸುದ್ದಿ ಕಂಡುಬಂದಿಲ್ಲ. ಇದಲ್ಲದೆ, ನಾವು ವೀಡಿಯೊದಿಂದ ಕೆಲವು ಪ್ರಮುಖ ಫ್ರೇಮ್‌ಗಳನ್ನು ತೆಗೆದುಕೊಂಡಾಗ ನಮಗೆ ತಿಳಿದುಬಂದದ್ದೇನೆಂದರೆ ಇದು ಸೆಪ್ಟೆಂಬರ್ 2023ರಲ್ಲಿ ಭಾರತದಲ್ಲಿ ನಡೆದ G20 ಶೃಂಗಸಭೆಯಲ್ಲಿ ವಿಶ್ವ ನಾಯಕರು ಭಾಗವಹಿಸಿದಾಗ ಸೆರೆಹಿಡಿಯಲಾದ ವೀಡಿಯೊಗಳಿಗೆ ಸಂಬಂಧಿಸಿದ ಒಂದು ಹಳೆಯ ವೀಡಿಯೊ.

ಈ ನಾಯಕರು ರಾಮಮಂದಿರದ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂಬ ಹೇಳಿಕೆಯೊಂದಿಗೆ ಈ ಕ್ಲಿಪ್ ಗಳಿಂದ ಪಡೆಯಲಾದ ವೀಡಿಯೊ ತುಣುಕನ್ನು ಪ್ರಸ್ತುತಪಡಿಸಲಾಗಿದೆ. ಆದ್ದರಿಂದ, ವೀಡಿಯೊ ಮತ್ತು ಹೇಳಿಕೆ ಸಂಪೂರ್ಣವಾಗಿ ಸುಳ್ಳು. ವೀಡಿಯೊದಲ್ಲಿ ತೋರಿಸಿರುವ ಯಾವುದೇ ವಿಶ್ವ ನಾಯಕರು ಜನವರಿ 22, 2024ರಂದು ನಡೆದ ರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸಿಲ್ಲ.

ಇದನ್ನೂ ಓದಿ:
ಅಮೇರಿಕಾದಲ್ಲಿ ವಿಶ್ವದ ಅತಿದೊಡ್ಡ ಒಂದು ಗ್ರಂಥಾಲಯವನ್ನು ತೆರೆಯಲಾಗಿದ್ದು, ಅದಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ರವರ ಹೆಸರಿಸಲಾಗಿದೆ? ಸತ್ಯ ಪರಿಶೀಲನೆ
ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ನೆದರ್ಲೆಂಡ್ಸ್ ಪ್ರಧಾನಿ ತಮ್ಮ ಪಾನೀಯವನ್ನು ಚೆಲ್ಲಿಕೊಂಡ ನಂತರ ತಾವೇ ಸ್ವಚ್ಛಗೊಳಿಸಿದರೇ? ಸತ್ಯ ಪರಿಶೀಲನೆ

 

One comment

Leave a Reply

Your email address will not be published. Required fields are marked *

*