ಹೇಳಿಕೆ/Claim: ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ನೆದರ್ಲ್ಯಾಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆಯವರು ತಮ್ಮ ಪಾನೀಯವನ್ನು ಚೆಲ್ಲಿಕೊಂಡ ನಂತರ ಅದನ್ನು ಸ್ವತಃ ಸ್ವಚ್ಛಗೊಳಿಸಿದರು.
ಕಡೆನುಡಿ/Conclusion: ವೀಡಿಯೊ 2018 ರದ್ದಾಗಿದೆ ಮತ್ತು ಡಚ್ ಸಂಸತ್ತಿನಲ್ಲಿ ಚೆಲ್ಲಿದ ಪಾನೀಯವನ್ನು ಮಾರ್ಕ್ ರುಟ್ಟೆ ಸ್ವಚ್ಛಗೊಳಿಸುತ್ತಿರುವುದನ್ನು ತೋರಿಸುತ್ತದೆ.
ರೇಟಿಂಗ್: ತಪ್ಪು ನಿರೂಪಣೆ –
ಸತ್ಯ ಪರಿಶೀಲನೆ ವಿವರಗಳು:
ಜಿ20 ಶೃಂಗಸಭೆಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆಪ್ಟೆಂಬರ್ 09-10 ರಂದು ನಡೆಯಿತು. ಶೃಂಗಸಭೆಯಲ್ಲಿ ಎಂದು ಹೇಳಲಾಗುವ ಒಂದು ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನೆದರ್ಲೆಂಡ್ಸ್‌ನ ಪ್ರಧಾನಗಳು ತಮ್ಮ ಪಾನೀಯವನ್ನು ಚೆಲ್ಲಿಕೊಂಡ ನಂತರ ಅದನ್ನು ಸ್ವತಃ ಸ್ವಚ್ಛಗೊಳಿಸುತ್ತಿರುವುದನ್ನು ವೈರಲ್ ವೀಡಿಯೊ ತೋರಿಸುತ್ತದೆ.
The PM of Netherlands- See and learn what he is doing after his mistake during G20 meeting.👍. pic.twitter.com/xFZeXzXumt
— Sudarshan Dhital (@drspdhital) September 14, 2023
ಈ ವೀಡಿಯೊ ವಾಟ್ಸಾಪ್‌ನಲ್ಲಿಯೂ ಹರಿದಾಡುತ್ತಿದೆ.
ವೀಡಿಯೊ ಹೀಗೆ ಹೇಳುತ್ತದೆ: “ಇದು ಜಿ-20 ಶೃಂಗಸಭೆ ನವದೆಹಲಿ 2023 ರಲ್ಲಿ ಸಂಭವಿಸಿದ ಘಟನೆ, ನೆದರ್ಲ್ಯಾಂಡ್ನ ಪ್ರಧಾನಗಳ ಕೈಯಲ್ಲಿದ್ದ ಚಹಾದ ಕಪ್ ತಪ್ಪಿ ಕೆಳಗೆ ಬಿತ್ತು. ಆತ ಅದನ್ನು ಸ್ವಚ್ಛಗೊಳಿಸಲು ಸ್ವಯಂಸೇವಕರನ್ನು ಕರೆದಿಲ್ಲ. ಮುಂದೆ ಏನಾಯಿತು ಎಂಬುದನ್ನು ದಯವಿಟ್ಟು ನೋಡಿ. ಇದು ನಮ್ಮ ದೇಶದ ರಾಜಕೀಯ ಜನರಿಗೆ ಒಂದು ಪಾಠವಾಗಿದೆ.”
ವೀಡಿಯೊವನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಅದೇ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಡಿಜಿಟೈ ಇಂಡಿಯಾ ತಂಡಕ್ಕೆ ಈ ವೈರಲ್ಚಿ ವೀಡಿಯೊ ಸತ್ಯ-ಪರಿಶೀಲನೆಗಾಗಿ ವಾಟ್ಸಾಪ್ ಮೂಲಕ ದೊರಕಿತು.
ಸತ್ಯ ಪರಿಶೀಲನೆ
ಡಿಜಿಟ್ಐ ಇಂಡಿಯಾ ತಂಡವು, ವೀಡಿಯೊವನ್ನು ಹಲವು ಕೀಫ್ರೇಮ್‌ಗಳಾಗಿ ವಿಭಜಿಸಲು ಇನ್ವಿಡ್ ಎಂಬ ವೀಡಿಯೊ ಪರಿಶೀಲನಾ ಸಾಧನವನ್ನು ಬಳಸಿತು. ನಾವು ಇದರಲ್ಲಿ ಒಂದು ಕೀಫ್ರೇಮ್ ಬಳಸಿಕೊಂಡು ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಅದರಲ್ಲಿ ಒಂದು ಫಲಿತಾಂಶವು 2018 ರ ಒಂದು ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು.
ನಾವು ಕೀವರ್ಡ್‌ಗಳನ್ನು ಬಳಸಿಕ್ಕೊಂಡು, ನಮ್ಮ ಹುಡುಕಾಟವನ್ನು 2018 ಕ್ಕೆ ಸಂಕುಚಿತಗೊಳಿಸಿ ಕಸ್ಟಮ್ ಗೂಗಲ್ ಹುಡುಕಾಟವನ್ನು ನಡೆಸಿದೆವು. ಇದರಲ್ಲಿ ಒಂದು ಫಲಿತಾಂಶವು ನಮ್ಮನ್ನು ಎಬಿಸಿ ನ್ಯೂಸ್‌ನ ಈ ಲೇಖನಕ್ಕೆ ಕರೆದೊಯ್ಯಿತು. ಆ ವರದಿಯು ಜೂನ್ 5, 2018 ರದ್ದಾಗಿತ್ತು ಮತ್ತು ನೆದರ್ಲ್ಯಾಂಡ್ಸ್ ನ ಪ್ರಧಾನಮಂತ್ರಿಗಳು ತಾವು ಚೆಲ್ಲಿದ ಚಹಾವನ್ನು ಸ್ವತಃ ಸ್ವಚ್ಛಗೊಳಿಸುವುದನ್ನು ತೋರಿಸಿತ್ತು. ಡಚ್ ಸಂಸತ್ ಕಟ್ಟಡದಲ್ಲಿ ಮಾರ್ಕ್ ರುಟ್ಟೆ ಆಕಸ್ಮಿಕವಾಗಿ ತಮ್ಮ ಕಪ್ ಅನ್ನು ಬೀಳಿಸಿಕೊಂಡರು ಎಂದು ಅದರಲ್ಲಿ ಹೇಳಲಾಗಿತ್ತು. ಅದನ್ನು ಹೌಸ್ ಕೀಪಿಂಗ್ ಸಿಬ್ಬಂದಿಗೆ ಬಿಡುವ ಬದಲು ಅವರೇ ತ್ವರಿತವಾಗಿ ಅದನ್ನು ಒರೆಸಿದ್ದರು. ಅವರು ಸ್ವಚ್ಛಗೊಳಿಸುತ್ತಿದ್ದಾಗ, ಸ್ವಚ್ಛತಾ ಸಿಬ್ಬಂದಿ ಅವರನ್ನು ಹುರಿದುಂಬಿಸಿದರು.
ಈ ವರದಿಯಲ್ಲಿ ವೀಡಿಯೊದಲ್ಲಿರುವ ಚಿತ್ರಗಳನ್ನು ಹೋಲುವ ಚಿತ್ರಗಳನ್ನು ಸೇರಿಸಲಾಗಿತ್ತು. ನಾವು ಯೂಟ್ಯೂಬ್ ನಲ್ಲಿ ಇದೇ ರೀತಿಯ ಹುಡುಕಾಟವನ್ನು ನಡೆಸಿದೆವು. ಫಲಿತಾಂಶಗಳಲ್ಲಿ ಒಂದು ಯುರೋನ್ಯೂಸ್‌ನ ಈ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು. ವೀಡಿಯೊದ ಶೀರ್ಷಿಕೆಯು ಹೀಗಿತ್ತು, ‘ವೀಕ್ಷಿಸಿ: ತಾವು ಚೆಲ್ಲಿದ ಕಾಫಿಯನ್ನು ತಾವೇ ಶುಚಿಗೊಳಿಸಿದ ನಂತರ ಡಚ್ ಪ್ರಧಾನಿ ರುಟ್ಟೆಗೆ ಚಪ್ಪಾಳೆ’. ವೈರಲ್ ಆದ ಹೇಳಿಕೆಯಲ್ಲಿ ಬಳಸಿದ ಅದೇ ವೀಡಿಯೊವನ್ನು ಇದರಲ್ಲಿ ಕಾಣಬಹುದು. ಆ ವೀಡಿಯೊ ಜೂನ್ 5, 2018ರದ್ದು.
ಹಾಗಾಗಿ, ಜಿ-20 ಸಭೆಯ ಸಂದರ್ಭದಲ್ಲಿ ಎಂಬ ಸುಳ್ಳು ಹೇಳಿಕೆಯೊಂದಿಗೆ ಹಳೆಯ ವೀಡಿಯೊವನ್ನು ಮರುಪ್ರಸಾರ ಮಾಡಲಾಗುತ್ತಿದೆ.
ಇದನ್ನೂ ಓದಿ: