Don't Miss

ಇಲ್ಲ, ಹೇಳಿಕೊಂಡಂತೆ ಈ ‘ಪಿತ್ರ್’ ನದಿಯು ವರ್ಷದಲ್ಲೊಮ್ಮೆ ಕಾಣಿಸಿಕೊಳ್ಳುವುದಿಲ್ಲ; ಸತ್ಯ ಪರಿಶೀಲನೆ

ಹೇಳಿಕೆ/Claim: ದಕ್ಷಿಣ ಭಾರತದಲ್ಲಿ ‘ಪಿತ್ರಿ ನದಿ’ ಪ್ರತಿ ವರ್ಷ ಪಿತೃ ಪಕ್ಷದ ರಾತ್ರಿ ಕಾಣಿಸಿಕೊಂಡು ನಂತರ ದೀಪಾವಳಿಯಂದು ಕಣ್ಮರೆಯಾಗುತ್ತದೆ ಎಂದು ವೀಡಿಯೊ ಹೇಳುತ್ತದೆ.

ಕಡೆನುಡಿ/Conclusion: ಸುಳ್ಳು. ಇದು, ಕರ್ನಾಟಕದಿಂದ ತಮಿಳುನಾಡಿಗೆ ಬಿಡುಗಡೆ ಮಾಡಲಾದ ಕಾವೇರಿ ನೀರಿಗೆ ಸಂಬಂಧಿಸಿದ ವೀಡಿಯೊ ಕ್ಲಿಪ್.

ರೇಟಿಂಗ್: ಸಂಪೂರ್ಣವಾಗಿ ಸುಳ್ಳು .Five rating

Fact Check ವಿವರಗಳು:

ಬಂಜರು ಭೂಮಿಯಲ್ಲಿ ನದಿ ನೀರು ಹರಿಯುತ್ತಿರುವುದನ್ನು ತೋರಿಸುವ ವೀಡಿಯೊವನ್ನು ವಾಟ್ಸಾಪ್ನಲ್ಲಿ ಹಂಚಿಕೊಳ್ಳಲಾಗುತ್ತಿತ್ತು, ಅದು ದಕ್ಷಿಣ ಭಾರತದ ‘ಪಿತ್ರಿ ನದಿ’ಗೆ ಸೇರಿದ್ದು ಎಂಬುದು ವೀಡಿಯೊದಲ್ಲಿನ ಹೇಳಿಕೆ.


ಪ್ರತಿ ವರ್ಷ ಪಿತೃಪಕ್ಷದ ರಾತ್ರಿ ಈ ನದಿಯು ಕಾಣಿಸಿಕೊಳ್ಳುತ್ತದೆ ಮತ್ತು ದೀಪಾವಳಿಯ ಅಮಾವಾಸ್ಯೆಯಂದು ಕಣ್ಮರೆಯಾಗುತ್ತದೆ ಎಂದು ಹೇಳಿಕೆಯ ವಾದ. ಇದನ್ನು ಕೆಳಗೆ ತೋರಿಸಿರುವಂತೆ ಟ್ವಿಟರ್ನಲ್ಲಿಯೂ ಹಂಚಿಕೊಳ್ಳಲಾಗಿದೆ:


ಹಿಂದಿಯಲ್ಲಿರುವ ಹೇಳಿಕೆ ಹೀಗಿದೆ: “दक्षिण भारत की यह नदी पितृपक्ष की अमावस्या को प्रकट होती है और दीपावली के दिन, अमावस्या को विलीन हो जाती है ! सिर्फ एक महीना बहाव !! है न प्रकृति का अदभुत चमत्कार.” [ಆಂಗ್ಲ ಅನುವಾದ: ದಕ್ಷಿಣ ಭಾರತದ ಈ ನದಿಯು ಪಿತೃ ಪಕ್ಷದ ಅಮಾವಾಸ್ಯೆಯಂದು ಕಾಣಿಸಿಕೊಳ್ಳುತ್ತದೆ ಮತ್ತು ದೀಪಾವಳಿಯ ಅಮಾವಾಸ್ಯೆಯಂದು ಕಣ್ಮರೆಯಾಗುತ್ತದೆ… ಕೇವಲ ಒಂದು ತಿಂಗಳಷ್ಟೇ ಹರಿಯುತ್ತದೆ!! ಇದು ಪ್ರಕೃತಿಯ ಪವಾಡವಲ್ಲವೇ?]

ನಾವು ಟ್ವಿಟರ್ ನಲ್ಲಿ ಈ ವೀಡಿಯೊವನ್ನು ಹುಡುಕಿದಾಗ, ಒಂದೇ ವೀಡಿಯೊವನ್ನು 2020ರಲ್ಲಿ, ನಂತರ 2021ರಲ್ಲಿ ಮತ್ತು 2022ರಲ್ಲಿ ಬಳಸಲಾಗಿದೆ ಮತ್ತು ಇತ್ತೀಚಿನದನ್ನು ಅಕ್ಟೋಬರ್ 15, 2023ರಂದು ಹಂಚಿಕೊಳ್ಳಲಾಗಿದೆ ಎಂಬುದು ನಮ್ಮ ಗಮನಕ್ಕೆ ಬಂತು. ಆದ್ದರಿಂದ, ಇದು ಹಲವು ಬಾರಿ ಹೇಳಲಾದ ಪುನರಾವರ್ತಿತ ಹೇಳಿಕೆ.

FACT CHECK

ಪ್ರಮುಖ ಫ್ರೇಮ್ಗಳ ಸಹಾಯದಿಂದ ನಾವು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟದಲ್ಲಿ ವೀಡಿಯೊವನ್ನು ಹುಡುಕಿದಾಗ, ಸೆಪ್ಟೆಂಬರ್ 19, 2017 ರಂದು ಅಪ್ಲೋಡ್ ಮಾಡಲಾದ ಮೂಲ ಯೂಟ್ಯೂಬ್ ವೀಡಿಯೊ ನಮಗೆ ದೊರಕಿತು. ಇದು ತಮಿಳು ನಾಡು ಮತ್ತು ಕರ್ನಾಟಕದ ನಡುವಿನ ನೀರಿನ ಹಂಚಿಕೆಗೆ ಸಂಬಂಧಿಸಿದ ಒಂದು ವೈರಲ್ ಕ್ಲಿಪ್ಗೆ ಸಂಬಂಧಿಸಿದ್ದು. ಅದರ ಶೀರ್ಷಿಕೆ ಹೀಗಿದೆ: “ತಮಿಳುನಾಡಿನ ಮಾಯವರಂ ಜಿಲ್ಲೆಗೆ ತಲುಪಿತು ಕಾವೇರಿ ನೀರು”. ಮೂಲ ವೀಡಿಯೊವನ್ನು ಇಲ್ಲಿ ಯುಟ್ಯೂಬ್ನಲ್ಲಿ ನೋಡಿ.

ಆದ್ದರಿಂದ, ನಾವು ವೀಡಿಯೊ ಕ್ಲಿಪ್ನಲ್ಲಿ ಕಾಣುವ ನೀರು ತಮಿಳುನಾಡಿಗೆ ಪ್ರವೇಶಿಸುತ್ತಿರುವ ಕಾವೇರಿ ನದಿಯದ್ದು, ಅದು ದಕ್ಷಿಣ ಭಾರತದಲ್ಲಿ ಹರಿಯುತ್ತದೆ ಎನ್ನಲಾಗಿರುವ ‘ಪಿತ್ರಿ ನದಿ’ ಅಲ್ಲ. ಪ್ರತಿ ವರ್ಷ ಪಿತೃಪಕ್ಷದ ರಾತ್ರಿ ಇದು ಕಾಣಿಸಿಕೊಳ್ಳುತ್ತದೆ ಎಂಬ ಹೇಳಿಕೆಯಲ್ಲಿ ಯಾವುದೇ ಸತ್ಯವಿಲ್ಲ.

ವೀಡಿಯೊದಲ್ಲಿ ಹೇಳಲಾಗಿರುವಂತೆ ಸೆಪ್ಟೆಂಬರ್ 12ರಿಂದ ಸೆಪ್ಟೆಂಬರ್ 24, 2017 ರವರೆಗೆ ಕಾವೇರಿ ಮಹಾ ಪುಷ್ಕರಂ ಆಚರಿಸಲಾಯಿತು ಮತ್ತು ಈ ಅವಧಿಯಲ್ಲಿ ಕರ್ನಾಟಕ ಸರ್ಕಾರವು ಕಾವೇರಿ ನದಿ ನೀರನ್ನು ಸಹ ಬಿಡುಗಡೆ ಮಾಡಿತು ಎಂದು ಸುದ್ದಿ ವರದಿಗಳು ತಿಳಿಸಿವೆ. ಆದ್ದರಿಂದ, ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು.

ಇದನ್ನೂ ಓದಿ:

ಲಾಸ್ ಏಂಜಲೀಸ್ನಲ್ಲಿ ಬ್ಲ್ಯಾಕ್ ಫ್ರೈಡೆಯಂದು ನೈಕಿ ಅಂಗಡಿಯಲ್ಲಿ ದರೋಡೆಯಾಗಿದೆಯೇ? ಸತ್ಯ ಪರಿಶೀಲನೆ

ವಿಶ್ವಕಪ್ 2023ರ ಫೈನಲ್ನಲ್ಲಿ 1.5 ಲಕ್ಷ ಜನರು ಹನುಮಾನ್ ಚಾಲೀಸಾ ಪಠಿಸಿದರಾ? ಸತ್ಯ ಪರಿಶೀಲನೆ

 

One comment

Leave a Reply

Your email address will not be published. Required fields are marked *

*