Don't Miss

‘ಪ್ರೀಮಿಯಂ’ ಉಪ್ಪಿನಲ್ಲಿ ಸೈನೈಡ್ ಇದೆಯೆಂಬ ಸುಳ್ಳು ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ; ಸತ್ಯ ಪರಿಶೀಲನೆ

ಹೇಳಿಕೆ/Claim:  ಭಾರತೀಯ ಪ್ರೀಮಿಯಂ ಉಪ್ಪುಗಳು ಸೈನೈಡ್ ಅನ್ನು ಹೊಂದಿವೆ ಎಂದು ವೈರಲ್ ಸುದ್ದಿ ವರದಿ ಹೇಳುತ್ತದೆ.

ಕಡೆನುಡಿ/Conclusion: ಎಫ್.ಎಸ್.ಎಸ್.ಎ.ಐ ಸಂಸ್ಥೆಯು 1 ಕೆಜಿಗೆ 10 ಮಿಗ್ರಾಂ ವರೆಗಿನ ಪೊಟ್ಯಾಸಿಯಮ್ ಫೆರೋಸೈನೈಡ್ ಬಳಕೆಯನ್ನು ಅನುಮತಿಸುತ್ತದೆ. ಟಾಟಾ ಉಪ್ಪಿನಂತಹ ಉಪ್ಪಿನ ಬ್ರ್ಯಾಂಡ್‌ಗಳು ಪಿ.ಎಫ್‌.ಸಿ ಮಟ್ಟವನ್ನು ಪ್ರತಿ ಕಿಲೋಗೆ 3 ಮಿಗ್ರಾಂನಷ್ಟಕ್ಕೆ ಇರಿಸುತ್ತವೆ, ಇದು ಅನುಮತಿಸಲಾದ ಮಿತಿಯೊಳಗಿದ್ದು ಉಪ್ಪನ್ನು ಬಳಕೆಗೆ ಸುರಕ್ಷಿತವಾಗಿಸುತ್ತದೆ. ಪಿ.ಎಫ್.ಸಿ ಎಂಬುದು ಉಪ್ಪಿನ ಕಣಗಳಲ್ಲಿ ತೇವಾಂಶ ಉಳಿಯದಂತೆ ಕಾಪಾಡುವ ಒಂದು ಆಂಟಿ-ಕೇಕಿಂಗ್ ಏಜೆಂಟ್. ಟಾಟಾ ಕೆಮಿಕಲ್ಸ್ ಸಹ ಈ ಹೇಳಿಕೆಯನ್ನು ನಿರಾಕರಿಸಿದೆ ಮತ್ತು ತಾವು ಅನುಮೋದಿತ ಮಟ್ಟಗಳ ಪ್ರಕಾರ ಪಿ.ಎಫ್.ಸಿ.ಯನ್ನು ಬಳಸುವುದಾಗಿ ಹೇಳಿದೆ.

ರೇಟಿಂಗ್: ತಪ್ಪು ವ್ಯಾಖ್ಯಾನ

Fact Check ವಿವರಗಳು:

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ದಿನಾಂಕವಿಲ್ಲದ ಸುದ್ದಿ ವರದಿಯೊಂದು ಭಾರತದಲ್ಲಿ ಚಾಲ್ತಿಯಲ್ಲಿರುವ ಪ್ರೀಮಿಯಂ ಉಪ್ಪಿನಲ್ಲಿ ಸೈನೈಡ್ ಇದೆ ಎಂದು ಹೇಳುತ್ತದೆ. ಈ ಸುದ್ದಿ ವರದಿಯನ್ನು ಟ್ವಿಟರ್‌ನಲ್ಲಿ ಚಿತ್ರ ರೂಪದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಚಿತ್ರದೊಂದಿಗೆ ವೈರಲ್ ಆಗುತ್ತಿರುವ ಹೇಳಿಕೆಯು ಹೀಗಿದೆ,

ಯೂ.ಎಸ್. ವರದಿಯಿಂದ ಒಂದು ಸಂಶೋಧನೆ- ಭಾರತದಲ್ಲಿನ ಪ್ರೀಮಿಯಂ ಉಪ್ಪು ಮಾರಣಾಂತಿಕ ಸೈನೈಡ್ ಅನ್ನು ಹೊಂದಿದೆ.

ಹುಷಾರ್.

ಈ ಪೋಸ್ಟ್ 2019 ರಿಂದ ಚಲಾವಣೆಯಲ್ಲಿದೆ.

ಈ ವೈರಲ್ ಹೇಳಿಕೆಯನ್ನು ಪರಿಶೀಲಿಸುವಂತೆ ಡಿಜಿಟೈ ಇಂಡಿಯಾಗೆ ವಾಟ್ಸಾಪ್‌ನಲ್ಲಿ ಒಂದು ವಿನಂತಿ ಬಂತು.

ಸತ್ಯ ಪರಿಶೀಲನೆ:

“ಗೋಧಮ್ ಗ್ರೈನ್ಸ್ & ಫಾರ್ಮ್ ಪ್ರೊಡಟ್ಕ್ಸ್ ಅಧ್ಯಕ್ಷರಾದ ಶಿವ ಶಂಕರ್ ಗುಪ್ತಾ ರವರ ಪ್ರಕಾರ, ಅಮೇರಿಕನ್ ವೆಸ್ಟ್ ಅನ್ಯಾಲಿಟಿಕಲ್ ಲ್ಯಾಬೋರೇಟರೀಸ್ ನಡೆಸಿದ ಪರೀಕ್ಷೆಯು ಸಾಂಭರ್ ರಿಫೈನ್ಡ್ ಉಪ್ಪಿನಲ್ಲಿ 4.71 ಮಿಲಿಗ್ರಾಂ/ ಕೆಜಿ, ಟಾಟಾ ಉಪ್ಪಿನಲ್ಲಿ 1.85 ಮಿಲಿಗ್ರಾಂ/ ಕೆಜಿ ಮತ್ತು ಟಾಟಾ ಲೈಟ್‌ ಉಪ್ಪಿನಲ್ಲಿ 1.90 ಮಿಲಿಗ್ರಾಂ/ ಕೆಜಿಯಂತೆ ಪೊಟ್ಯಾಸಿಯಮ್ ಫೆರೋಸೈನೈಡ್ ಮಟ್ಟವು ಅಪಾಯಕಾರಿ ಪ್ರಮಾಣದಲ್ಲಿದೆ ಎಂದು ಬಹಿರಂಗಪಡಿಸಿದೆ.” ಎಂದು ಸುದ್ದಿಯ ಕ್ಲಿಪ್ ಆರೋಪಿಸಿದೆ. ಈ ಸುದ್ದಿ ಲೇಖನವು ಶಿವ ಶಂಕರ್ ಗುಪ್ತಾರವರು ಹೇಳಿದ ಅಮೇರಿಕನ್ ಅಧ್ಯಯನವನ್ನು ಉಲ್ಲೇಖಿಸುತ್ತದೆ.

ಪೊಟ್ಯಾಸಿಯಮ್ ಫೆರೋಸೈನೈಡ್ ಉಪ್ಪಿನ ಅನೇಕ ಬ್ರಾಂಡ್‌ಗಳಲ್ಲಿದೆ ಎಂದು ಮತ್ತು ಅದು ಜನರನ್ನು ಮಾರಣಾಂತಿಕ ಕಾಯಿಲೆಗಳೆಡೆಗೆ ಸಾಗಿಸುತ್ತದೆ ಎಂದು ವರದಿ ಹೇಳಿದೆ. ಅಧ್ಯಯನದ ಕುರಿತು ಹೆಚ್ಚಿನ ವಿವರಗಳನ್ನು ತಿಳಿಯಲು ನಾವು ಗೂಗಲ್ ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದೆವು.

ಒಂದು ಫಲಿತಾಂಶದಲ್ಲಿ ನಮಗೆ ಸೆಪ್ಟೆಂಬರ್ 5, 2019 ರ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಈ ವರದಿಯು ದೊರಕಿತು. ಅದರ ವರದಿಯಲ್ಲಿ, ರಾಷ್ಟ್ರೀಯ ಆಹಾರ ಸಂಸ್ಥೆಯು, “ಎಫ್.ಎಸ್.ಎಸ್.ಎ.ಐ ಪ್ರಕಾರ, ಸಾಮಾನ್ಯ ಉಪ್ಪು 1 ಕೆಜಿಗೆ 10 ಮಿಲಿಗ್ರಾಂ ವರೆಗಿನ ಪಿ.ಎಫ್.ಸಿ ಹೊಂದಿರುತ್ತದೆ. ಟಾಟಾ ಸಾಲ್ಟ್‌ನಂತಹ ಉಪ್ಪಿನ ಬ್ರ್ಯಾಂಡ್‌ಗಳು ಪಿ.ಎಫ್.ಸಿ.ಯನ್ನು ಪ್ರತಿ ಕಿಲೋಗೆ 3 ಮಿಲಿಗ್ರಾಂಗಳ ಮಟ್ಟಿಗೆ ಇರಿಸಿಕೊಳ್ಳುತ್ತವೆ, ಇದು ಅನುಮತಿಸಲಾದ ಮಿತಿಯೊಳಗಿದ್ದು ಉಪ್ಪನ್ನು ಬಳಕೆಗೆ ಸುರಕ್ಷಿತವಾಗಿಸುತ್ತದೆ.” ಎಫ್.ಎಸ್.ಎಸ್.ಎ.ಐ ಪ್ರಕಾರ ಪೊಟ್ಯಾಸಿಯಮ್ ಫೆರೋಸೈನೈಡ್ ಅನುಮತಿಸಲಾದ ಆಹಾರ ಸಂಯೋಜಕವಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಜೂನ್ 2019 ರಲ್ಲಿ, ಟಾಟಾ ಉಪ್ಪನ್ನು ತಯಾರಿಸುವ ಟಾಟಾ ಕೆಮಿಕಲ್ಸ್ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿತು. ತಮ್ಮ ಹೇಳಿಕೆಯಲ್ಲಿ, “ಉಪ್ಪಿನಲ್ಲಿ ಪಿಎಫ್‌ಸಿ ಬಳಕೆಯನ್ನು ಅನುಮತಿಸಲಾಗಿದೆ ಮತ್ತು ಅನುಮೋದಿತ ಮಟ್ಟಗಳಲ್ಲಿ ಸೇವಿಸಿದಾಗ ಮಾನವ ದೇಹಕ್ಕೆ ಸುರಕ್ಷಿತ ಮತ್ತು ನಿರುಪದ್ರವವಾಗಿದೆ. ನಿಬಂಧನೆಗಳಲ್ಲಿ ಸೂಚಿಸಲಾದ ರೀತಿಯಲ್ಲಿಯೇ ಇದನ್ನು ಟಾಟಾ ಉಪ್ಪಿನ ಪದಾರ್ಥಗಳ ಪಟ್ಟಿಯಲ್ಲಿ ಸ್ಪಷ್ಟವಾಗಿ ಘೋಷಿಸಲಾಗಿದೆ.” ಎಂದಿದ್ದಾರೆ. “ಭಾರತದ ಅತ್ಯಂತ ವಿಶ್ವಾಸಾರ್ಹ ಬ್ರಾಂಡ್‌ಗಳಲ್ಲಿ ಒಂದಾಗಿ, ಟಾಟಾ ಉಪ್ಪು ಪ್ರತಿಷ್ಠಿತ ಮತ್ತು ಜವಾಬ್ದಾರಿಯುತ ಬ್ರ್ಯಾಂಡ್ ಆಗಿರುವುದಕ್ಕಾಗಿ ಹೆಮ್ಮೆಪಡುತ್ತದೆ ಮತ್ತು ಸುರಕ್ಷಿತ, ಆರೋಗ್ಯಕರ ಮತ್ತು ಉತ್ತಮ-ಗುಣಮಟ್ಟದ ಉತ್ಪನ್ನವನ್ನು ಗ್ರಾಹಕರಿಗೆ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಾದ ಗುಣಮಟ್ಟದ ನಿಯಂತ್ರಣ ಪ್ರಕ್ರಿಯೆಗಳನ್ನು ಅನುಸರಿಸುತ್ತದೆ.” ಎಂದೂ ಹೇಳಿದ್ದಾರೆ.

ಶುದ್ಧೀಕೃತ ಪುಡಿ ಉಪ್ಪಿನಲ್ಲಿ ಪೊಟ್ಯಾಸಿಯಮ್ ಫೆರೋಸೈನೈಡ್ ಅನ್ನು ಆಂಟಿ-ಕೇಕಿಂಗ್ ಏಜೆಂಟ್ ಆಗಿ ಬಳಸಲಾಗುತ್ತದೆ. ಇದು ಉಪ್ಪಿನಲ್ಲಿ ತೇವಾಂಶ ಬರದಿರಲು ಸಹಾಯ ಮಾಡುತ್ತದೆ ಮತ್ತು ಉಪ್ಪಿನ ಕಣಗಳು ಗಂಟು ಕಟ್ಟುವುದನ್ನು ತಪ್ಪಿಸುತ್ತದೆ.

ಹೀಗಾಗಿ, ವೈರಲ್ ಆಗಿರುವ ಚಿತ್ರ ಮಾಡಿರುವ ಆರೋಪ ಸುಳ್ಳು.

ಇದನ್ನೂ ಓದಿ:

ಲಾಸ್ ಏಂಜಲೀಸ್ನಲ್ಲಿ ಬ್ಲ್ಯಾಕ್ ಫ್ರೈಡೆಯಂದು ನೈಕಿ ಅಂಗಡಿಯಲ್ಲಿ ದರೋಡೆಯಾಗಿದೆಯೇ? ಸತ್ಯ ಪರಿಶೀಲನೆ

ವಿಶ್ವಕಪ್ 2023ರ ಫೈನಲ್ನಲ್ಲಿ 1.5 ಲಕ್ಷ ಜನರು ಹನುಮಾನ್ ಚಾಲೀಸಾ ಪಠಿಸಿದರಾ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*