Don't Miss

ಲಾಸ್ ಏಂಜಲೀಸ್ನಲ್ಲಿ ಬ್ಲ್ಯಾಕ್ ಫ್ರೈಡೆಯಂದು ನೈಕಿ ಅಂಗಡಿಯಲ್ಲಿ ದರೋಡೆಯಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಲಾಸ್ ಎಂಜಲೀಸ್ ನಲ್ಲಿ ನೈಕಿ ಶೂ ರೀಟೈಲ್ ಅಂಗಡಿಯನ್ನು ಆಫ್ರಿಕನ್ ಅಮೇರಿಕನ್ನರು ದೋಚಿದ್ದಾರೆ.

ಕಡೆನುಡಿ:/Conclusion: ಮೂರು ವರ್ಷಗಳ ಹಿಂದಿನ ವೀಡಿಯೊವನ್ನು ಇತ್ತೀಚಿನ ಬ್ಲ್ಯಾಕ್ ಫ್ರೈಡೆಗೆ ಮಾರಾಟಕ್ಕೆ ಸಂಬಂಧಿಸಿದ ಘಟನೆ ಎಂದು ಚಿತ್ರಿಸಲಾಗಿದೆ.

ರೇಟಿಂಗ್:ದಾರಿತಪ್ಪಿಸುವ -

Fact Check ವಿವರಗಳು:

ಥ್ಯಾಂಕ್ಸ್‌ಗಿವಿಂಗ್ ಡೇ ಶಾಪಿಂಗ್ ಉನ್ಮಾದವನ್ನು ಗುರುತಿಸುವ ಬ್ಲ್ಯಾಕ್ ಫ್ರೈಡೆಯಂದು, ಯುನೈಟೆಡ್ ಸ್ಟೇಟ್ಸ್ ಸಾಮಾಜಿಕ ಜಾಲತಾಣಗಳಲ್ಲಿ ರೀಟೈಲ್ ವ್ಯಾಪಾರಿಗಳ ವಿಭಿನ್ನ ಕೊಡುಗೆಗಳು, ರಿಯಾಯಿತಿಗಳು ಮತ್ತು ಕೂಪನ್‌ಗಳು ಅಬ್ಬರಿಸುತ್ತಿದ್ದವು. ಈ ಶಾಪಿಂಗ್ ಉನ್ಮಾದದ ಮಧ್ಯೆ, ಆಫ್ರಿಕನ್-ಅಮೆರಿಕನ್ನರು ಲಾಸ್ ಏಂಜಲೀಸ್‌ನಲ್ಲಿ ನೈಕಿ ಅಂಗಡಿಯನ್ನು ದರೋಡೆ ಮಾಡಿದ್ದಾರೆ ಎನ್ನುವ ಒಂದು ವೈರಲ್ ವೀಡಿಯೊ ಸುದ್ದಿ ಮಾಡುತ್ತಿದೆ. ಅದೇ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಶೀರ್ಷಿಕೆಗಳು ಅಥವಾ ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗಿದೆ. ಅವುಗಳನ್ನು ಇಲ್ಲಿ ನೋಡಿ:

Best Black Friday ever!
Most of the offer was at 100% “off” and only for blacks!
Way to go Nike! pic.twitter.com/gcpxbeMssE

— Csaba 🇭🇺 (@cybakk) December 1, 2023

BREAKING: Nike had a “Black” Friday sale that will make you want to run. Everything’s free if you’re the right person.

Will this behavior ever end?

How should it be stopped?

pic.twitter.com/iGfWa7HTLT

— ᴊᴀᴄᴋ ᴅᴀɴɢᴇʀ (@AmericazOutlaw) November 27, 2023

 

ಇದನ್ನು ಇಲ್ಲಿ ಮತ್ತು ಇಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಸತ್ಯ ಪರಿಶೀಲನೆ

ಈ ವಿಷಯದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಡಿಜಿಟೈ ಇಂಡಿಯಾಗೆ ವಾಟ್ಸಾಪ್ ನಲ್ಲಿ ವಿನಂತಿ ಬಂದಿತು. ನಾವು ಪ್ರಮುಖ ಫ್ರೇಮ್‌ಗಳನ್ನು ತೆಗೆದುಕೊಂಡು ಅವುಗಳನ್ನು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟದಲ್ಲಿ ಹುಡುಕಿದಾಗ, ಇದು ಮೇ 31, 2020 ರಂದು ಬಜ಼್ ನ್ಯೂಸ್ ಯೂಟ್ಯೂಬ್ ವಾಹಿನಿಯಲ್ಲಿ ಅಪ್‌ಲೋಡ್ ಮಾಡಲಾದ ಹಳೆಯ ವೀಡಿಯೊ ಎಂದು ನಮಗೆ ಫಲಿತಾಂಶಗಳ ಮೂಲಕ ತಿಳಿಯಿತು. ವೀಡಿಯೊದ ಶೀರ್ಷಿಕೆಯಲ್ಲಿ ‘ನೈಕಿ ಅಂಗಡಿಯೊಳಗೆ ನುಗ್ಗಿ ಸಂಪೂರ್ಣವಾಗಿ ಲೂಟಿ ಮಾಡಲಾಗಿದೆ’ ಎಂದು ಹೇಳಲಾಗಿದೆ.

ಆ ಘಟನೆ ನಿಜವಾಗಿತ್ತು ಮತ್ತದನ್ನು ಸ್ಥಳೀಯ ಸುದ್ದಿವಾಹಿನಿಗಳಲ್ಲಿಯೂ ಪ್ರಸಾರ ಮಾಡಲಾಗಿತ್ತು. ಎನ್.ಬಿ.ಸಿ ಚಿಕಾಗೋ ಇದನ್ನು ಮೇ 30, 2020 ರಂದು ಪ್ರಕಟಿಸಿ, 2020ರಲ್ಲಿ ಜಾರ್ಜ್ ಫ್ಲಾಯ್ಡ್ ಹತ್ಯೆಗಾಗಿ ಪ್ರತಿಭಟಿಸುತ್ತಾ ಕೋಪಗೊಂಡ ಜನಸಮೂಹವು ಚಿಕಾಗೋದ ಮಿಚಿಗನ್ ಆವೆನ್ಯೂದಲ್ಲಿ ಹಲವಾರು ರೀಟೈಲ್ ಅಂಗಡಿಗಳನ್ನು ಧ್ವಂಸಗೊಳಿಸಿದ ಘಟನೆಯ ಬಗ್ಗೆ ವರದಿ ಮಾಡಿತ್ತು.

ಜಾರ್ಜ್ ಫ್ಲಾಯ್ಡ್ $20ರ ನಕಲಿ ನೋಟನ್ನು ನೀಡಿದ್ದಾನೆ ಎಂದು ಅಂಗಡಿಯ ಗುಮಾಸ್ತರೊಬ್ಬರ ದೂರಿನ ಮೇರೆಗೆ ಮೇ 25, 2020ರಂದು ಮಿನ್ನೇಸೋಟಾದ ಮಿನ್ನಿಯಾಪೋಲಿಸ್‌ನಲ್ಲಿ ಬಿಳಿಯರಾದ ಪೋಲೀಸ್ ಅಧಿಕಾರಿಯಿಂದ ಆಫ್ರಿಕನ್-ಅಮೆರಿಕನ್ ಫ್ಲಾಯ್ಡ್ ಕೊಲ್ಲಲ್ಪಟ್ಟರು ಎಂಬುದನ್ನು ನೆನಪಿಸಿಕೊಳ್ಳಬಹುದು. ಈ ಘಟನೆಯಿಂದಾಗಿ ದೇಶಾದ್ಯಂತ  #BlacklivesMatter ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಪ್ರತಿಭಟನೆಗಳು ಗರಿಗೆದರಿದ್ದವು.

ಇದನ್ನೂ ಓದಿ:

ಈ ವೀಡಿಯೊ 170-ವರ್ಷ-ಹಳೆಯ ಟಿಸ್ಸಾಟ್ ವಾಚ್ನ ಮರುಸ್ಥಾಪನೆಯನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಈ ದೀಪಾವಳಿಗೆ ಚೀನಾದ ಪಟಾಕಿಗಳನ್ನು ಖರೀದಿಸುವುದನ್ನು ತಪ್ಪಿಸಬೇಕೆಂದು ಗೃಹ ಸಚಿವಾಲಯವು ಜನರಿಗೆ ಹೇಳಿದೆಯೇ? ಸತ್ಯ ಪರಿಶೀಲನೆ]