Don't Miss

ಸೇನೆಯ ಖಾಸಗಿ ವಾಹನಗಳಿಗೂ ಟೋಲ್ ಶುಲ್ಕ ವಿನಾಯಿತಿಯ ವಿಸ್ತರಣೆ? ವೈರಲ್ ಪೋಸ್ಟ್ ಕುರಿತು ಸತ್ಯ ಪರಿಶೀಲನೆ

Claim/ಹೇಳಿಕೆ: ರಕ್ಷಣಾ ಸಿಬ್ಬಂದಿಗಳ ಖಾಸಗಿ ವಾಹನಗಳಿಗೂ ಟೋಲ್ ತೆರಿಗೆ ವಿನಾಯಿತಿ ಇದೆ ಎಂದು ಒಂದು ವೈರಲ್ ಸಲಹಾ ಪತ್ರ ಹೇಳುತ್ತದೆ.

Conclusion/ಕಡೆನುಡಿ: ಪತ್ರವು ನಕಲಿಯಾಗಿದೆ ಮತ್ತು ಅದನ್ನು ಬಿಟ್ಟುಕೊಡುವ ಹಲವು ಸುಳಿವುಗಳನ್ನು ಅದರಲ್ಲಿ ಕಾಣಬಹುದು. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ನೀಡಿರುವ ಸ್ಪಷ್ಟೀಕರಣಗಳ ಪ್ರಕಾರ, ‘ಕರ್ತವ್ಯನಿರತರಾಗಿರುವ’ ವ್ಯಕ್ತಿಗಳಿಗೆ ಮಾತ್ರ ವಿನಾಯಿತಿ ಲಭ್ಯವಿರುತ್ತದೆ ಮತ್ತು ಅದು ನಿವೃತ್ತ ಸಿಬ್ಬಂದಿಗೆ ಅನ್ವಯಿಸುವುದಿಲ್ಲ ಎಂದು ಅದು ಹೇಳುತ್ತದೆ. ವೈಯಕ್ತಿಕ ವಾಹನವನ್ನು ಯಾವುದೇ ಅಧಿಕೃತ ಕರ್ತವ್ಯವನ್ನು ನಿರ್ವಹಿಸಲು ಬಳಸಲಾಗುತ್ತಿಲ್ಲ ಎಂದಾದಲ್ಲಿ ಬಳಕೆಯ ಮೇಲೆ ಯಾವುದೇ ವಿನಾಯಿತಿ ಲಭ್ಯವಿರುವುದಿಲ್ಲ. ಮಾಹಿತಿ ಹಕ್ಕು ಕಾಯ್ದೆಯ ಪ್ರಶ್ನೆಗಳಿಗೆ ಉತ್ತರಿಸಿದ NHAI ಕೂಡ ಇದನ್ನೇ ಹೇಳಿದೆ.

ರೇಟಿಂಗ್:ತಪ್ಪು ನಿರೂಪಣೆ

ಸತ್ಯ ಪರಿಶೀಲನೆ ವಿವರಗಳು:

‘ರಕ್ಷಣಾ ಸಿಬ್ಬಂದಿಯ ಖಾಸಗಿ ವಾಹನಗಳಿಗೆ ಟೋಲ್ ಶುಲ್ಕವಿಲ್ಲ’ ಎಂಬ ಸಲಹಾ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಒಂದು ಪುಟದ ಸಲಹಾ ಪತ್ರವು ಭಾರತೀಯ ಟೋಲ್ (ಸೇನೆ, ವಾಯುಪಡೆ) ಕಾಯ್ದೆ, 1901ರಲ್ಲಿ  ಬದಲಾವಣೆಯಾಗಿದೆ ಎಂಬ ಹೇಳಿಕೆಯನ್ನಿತ್ತಿದೆ.

ಬದಲಾವಣೆಗಳ ಅನುಸಾರ, ಹೊಸ ನಿಯಮವು ಹೇಳುವಂತೆ ಸೇನಾ ಸಿಬ್ಬಂದಿಗೆ ಟೋಲ್ ಶುಲ್ಕದ ವಿನಾಯಿತಿಯೊಂದಿಗೆ, ಗುರುತಿನ ಚೀಟಿಗಳನ್ನು ತೋರಿಸಿದಲ್ಲಿ ಅವರ ಖಾಸಗಿ ವಾಹನಗಳಿಗೂ ಸಹ ವಿನಾಯಿತಿ ನೀಡಲಾಗಿದೆ. ಈ ಮಾಹಿತಿಯನ್ನು ತ್ವರಿತವಾಗಿ ಟೋಲ್ ಸಿಬ್ಬಂದಿಗೆ ತಲುಪಿಸಬೇಕೆಂದೂ ಸಹ  ಪತ್ರದಲ್ಲಿ ತಿಳಿಸಲಾಗಿದೆ.

ಈ ಪತ್ರವು ಫಾರ್ವರ್ಡ್ ಸಂದೇಶಗಳ ಮೂಲಕ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಈ ಹೇಳಿಕೆಯ ಸತ್ಯ ಪರಿಶೀಲನೆ ಮಾಡಬೇಕೆಂದು ಡಿಜಿಟೈ ಇಂಡಿಯಾಗೆ ವಾಟ್ಸಾಪ್‌ನಲ್ಲಿ ಒಂದು ವಿನಂತಿ ಬಂದಿತು.

 ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಪತ್ರವನ್ನು ಪರಿಶೀಲಿಸಿದಾಗ, ಪತ್ರವು ನಕಲಿ ಎಂದು ಹಲವು ಸುಳಿವುಗಳು ಕಂಡುಬಂದವು.

ಪತ್ರದ ಶಿರೋಲೇಖದಲ್ಲಿ (ಹೆಡರ್) ಅದನ್ನು ಹೊರಡಿಸಿದ ಸಚಿವಾಲಯದ ಕುರಿತು ಯಾವುದೇ ಉಲ್ಲೇಖವಿರಲಿಲ್ಲ. ದಿನಾಂಕ ಆಗಸ್ಟ್ 25, 2023 ಎಂಬುದು ಕೈಬರಹದಲ್ಲಿದ್ದು ಅದನ್ನು ನಂತರ ಫೋಟೋಸ್ಟ್ಯಾಟ್ ಮಾಡಲಾಗಿದೆ. ಪತ್ರದಲ್ಲಿ ಪದಗಳನ್ನು ಸಂಕ್ಷಿಪ್ತ ರೂಪದಲ್ಲಿ ಬಳಸಲಾಗಿದೆ; “service pers, reg forces, gtd on pvt vehs of def pers, comes, Rks, indl, fmn channel” ಮುಂತಾದ ಪದಗಳನ್ನು ಬಳಸಲಾಗಿದೆ. ಅಧಿಕೃತ ಸಲಹಾ ಪಾತ್ರದಲ್ಲಿರಬೇಕಾದ ಸರಿಯಾದ ಬಳಕೆಯು ಹೀಗಿದೆ “service personnel, registered forces, granted on private vehicles of defence personnel, individual”. ಸರ್ಕಾರದ ಯಾವುದೇ ಅಧಿಕೃತ ಪ್ರಕಟಣೆಯು ಇಂತಹ ಬುದ್ದಿಹೀನ ಸಂಕ್ಷಿಪ್ತ ಮತ್ತು ಕಿರು ರೂಪಗಳನ್ನು ಬಳಸುವುದಿಲ್ಲ.

ನಾವು 1901ರ ಭಾರತೀಯ ಟೋಲ್ (ಸೇನೆ, ವಾಯುಪಡೆ) ಕಾಯ್ದೆಯನ್ನು ನೋಡಿದೆವು. ಕಾಯ್ದೆಯ ಪರಿಚ್ಛೇದ 3 ಹೇಳುವಂತೆ ಎಲ್ಲಾ ಅಧಿಕಾರಿಗಳು, ಸೈನಿಕರು, ಏರ್‌ಮೆನ್‌ ಮತ್ತು ಅಧಿಕಾರಿಗಳು, ಸೈನಿಕರು, ಏರ್‌ಮೆನ್ ಅಥವಾ ಅಧಿಕೃತ ಅನುಯಾಯಿಗಳ ಕುಟುಂಬಗಳ ಎಲ್ಲಾ ಸದಸ್ಯರಿಗೆ ಟೋಲ್ ಪಾವತಿಯಿಂದ ವಿನಾಯಿತಿ ಇರುತ್ತದೆ.

ಕೆಲವು ತಪ್ಪುತಿಳುವಳಿಕೆಗಳಿಗೆ ಸಂಬಂಧಿಸಿದಂತೆ ಜೂನ್ 17, 2014ರಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ನೀಡಿದ ಸ್ಪಷ್ಟೀಕರಣವು ನಮ್ಮ ಕೈಸೇರಿತು. ಸ್ಪಷ್ಟೀಕರಣದ ನಂತರ, ಸಚಿವಾಲಯವು ಹೀಗೆ ಹೇಳಿತ್ತು: “ಈ ಸಮಸ್ಯೆಯನ್ನು ಮರುಪರಿಶೀಲಿಸಲಾಗಿದೆ ಮತ್ತು 1901ರ ಭಾರತೀಯ ಟೋಲ್ (ಸೇನೆ ಮತ್ತು ವಾಯುಪಡೆ) ಕಾಯ್ದೆಯ ಅಡಿಯಲ್ಲಿ, ವಿನಾಯಿತಿಯು ‘ಕರ್ತವ್ಯದಲ್ಲಿರುವ’ ವ್ಯಕ್ತಿಗಳಿಗೆ ಮಾತ್ರ ಲಭ್ಯವಿರುತ್ತದೆ ಮತ್ತಿದು ನಿವೃತ್ತರಿಗೆ  ಸಂಬಂಧಿಸಿಲ್ಲ ಎಂದು ಈಗ ಸ್ಪಷ್ಟಪಡಿಸಲಾಗುತ್ತಿದೆ. ವಾಹನವು ಮೇಲ್ಕಂಡ ಅಧಿಕಾರಿಯೊಂದಿಗೆ ಇದ್ದರೂ ಸಹ, ಅದನ್ನು ಯಾವುದೇ ಅಧಿಕೃತ ಉದ್ದೇಶ ಮತ್ತು ಕರ್ತವ್ಯಕ್ಕಾಗಿ ಬಳಸಲಾಗುತ್ತಿಲ್ಲವೆಂದಾದಲ್ಲಿ, ವೈಯಕ್ತಿಕ ವಾಹನದ ಬಳಕೆಯ ಮೇಲೆ ಯಾವುದೇ ವಿನಾಯಿತಿ ಲಭ್ಯವಿರುವುದಿಲ್ಲ. 1942ರ ಭಾರತೀಯ ಟೋಲ್‌ (ಸೇನೆ ಮತ್ತು ವಾಯುಪಡೆ) ನಿಯಮಗಳಲ್ಲಿ ನಿರ್ದಿಷ್ಟಪಡಿಸಿರುವ ಪಾಸ್ ತೋರಿಸಿದರೆ ಮಾತ್ರವೇ ಈ ವಿನಾಯಿತಿ ಲಭ್ಯವಿರುವುದು.”

ಕರ್ತವ್ಯನಿರತ ಸಿಬ್ಬಂದಿಗೆ ಮಾತ್ರ ಟೋಲ್ ವಿನಾಯಿತಿ ಲಭ್ಯವಿದೆ ಎಂದು ಸಚಿವಾಲಯವು ನಿರ್ದಿಷ್ಟವಾಗಿ ಸ್ಪಷ್ಟಪಡಿಸಿದೆ. ಇದು ನಿವೃತ್ತ ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲ. ಅಧಿಕೃತ ಉದ್ದೇಶ ಮತ್ತು ಕರ್ತವ್ಯಕ್ಕೆ ಬಳಸಿದರೆ ಮಾತ್ರ ಖಾಸಗಿ ವಾಹನಗಳಿಗೆ ವಿನಾಯಿತಿ ನೀಡಲಾಗುವುದು ಎಂದು ಸಹ ಅದು ಸ್ಪಷ್ಟಪಡಿಸಿದೆ.

ರಕ್ಷಣಾ ಸಿಬ್ಬಂದಿಗಳು ಕರ್ತವ್ಯನಿರತರಾಗಿ  ಪ್ರಯಾಣಿಸುತ್ತಿದ್ದರೆ ಮಾತ್ರವೇ ಅವರಿಗೆ ಟೋಲ್ ತೆರಿಗೆ ವಿನಾಯಿತಿ ಇದೆ ಎಂದು ಮಾಹಿತಿ ಹಕ್ಕು ಕಾಯ್ದೆಯ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ NHAI (ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ) ಹೇಳಿದೆಯೆಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಫೆಬ್ರವರಿ 20, 2020ರಂದು ವರದಿಯಲ್ಲಿ ಬರೆದಿತ್ತು. ಅವರು ಕರ್ತವ್ಯದಲ್ಲಿಲ್ಲದಿದ್ದರೆ ಅವರ ಖಾಸಗಿ ವಾಹನಗಳಿಗೆ ಯಾವುದೇ ವಿನಾಯಿತಿ ನೀಡಲಾಗಿಲ್ಲ.

ಆದ್ದರಿಂದ, ಆದೇಶದ ಪ್ರತಿಯೊಂದಿಗೆ ವೈರಲ್ ಆಗಿರುವ ಹೇಳಿಕೆ ಸುಳ್ಳು.

ಇದನ್ನೂ ಓದಿ:

ಇಲ್ಲ, ರಾಹುಲ್ ಗಾಂಧಿಯವರು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಉಚಿತ ಮೊಬೈಲ್ ರೀಚಾರ್ಜ್ ಅನ್ನು ಘೋಷಿಸಿಲ್ಲ

ಈ ದೀಪಾವಳಿಗೆ ಚೀನಾದ ಪಟಾಕಿಗಳನ್ನು ಖರೀದಿಸುವುದನ್ನು ತಪ್ಪಿಸಬೇಕೆಂದು ಗೃಹ ಸಚಿವಾಲಯವು ಜನರಿಗೆ ಹೇಳಿದೆಯೇ? ಸತ್ಯ ಪರಿಶೀಲನೆ

 

Leave a Reply

Your email address will not be published. Required fields are marked *

*