ಈ ವರ್ಷದ ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿ ವಿಜೇತ ಕ್ಲಾಡಿಯಾ ಗೋಲ್ಡಿನ್ ರವರ ಹೆಸರಿನಲ್ಲಿರುವ X ಕಾರ್ಪ್ (ಈ ಹಿಂದೆ ಟ್ವಿಟರ್) ಹ್ಯಾಂಡಲ್ ನಿಂದ ಅಕ್ಟೋಬರ್ 10 ರಂದು ಅನುಭವಿ ಭಾರತೀಯ ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಅಮರ್ತ್ಯ ಸೇನ್ ರವರ ಮರಣದ ಬಗ್ಗೆ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿದವು.
ಹೆಚ್ಚಿನ ಸುದ್ದಿವಾಹಿನಿಗಳು ಈ ಸುದ್ದಿಯನ್ನು ಎತ್ತಿಕೊಂಡವು ಮತ್ತು ಪರಿಶೀಲಿಸದ ಖಾತೆಯ ಒಂದು ಟ್ವೀಟ್‌ನ ಆಧಾರದ ಮೇಲೆ ಪಿಟಿಐ ಬ್ರೇಕಿಂಗ್ ನ್ಯೂಸ್ ಅನ್ನು ಸಹ ಹಾಕಿತು. ಕ್ಲಾಡಿಯಾ ಗೋಲ್ಡಿನ್ ರವರನ್ನು ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತರಾಗಿ ಅಕ್ಟೋಬರ್ 9, 2023ರಂದು ಘೋಷಿಸಲಾಯಿತು, ಆದ್ದರಿಂದ ಅವರ ಹೆಸರಿನ ಈ ಖಾತೆ ಆಶ್ಚರ್ಯಕರ. ಹೇಳಿಕೆ ವೈರಲ್ ಆದ ನಂತರದ ಒಂದು ರಿಟ್ವೀಟ್ ಇಲ್ಲಿದೆ.
A Terrible News.
Professor Amartya Sen has died.
RIP ॐ शांति #AmartyaSen pic.twitter.com/lpSVjWCM2r— BeatalPret (@beatalPret) October 10, 2023
ಕ್ಲಾಡಿಯಾ ಗೋಲ್ಡಿನ್ ರವರ ಹೆಸರನ್ನು ಬಳಸಿಕೊಂಡು ಮಾಡಲಾದ ಮೂಲ ಟ್ವೀಟ್ ನ (ಈಗ ಡಿಲೀಟ್ ಮಾಡಲಾಗಿದೆ) ಹೇಳಿಕೆ ಹೀಗಿತ್ತು: “ಒಂದು ಭಯಾನಕ ಸುದ್ದಿ. ನನ್ನ ಆತ್ಮೀಯ ಪ್ರೊಫೆಸರ್ ಅಮರ್ತ್ಯ ಸೇನ್ ಕೆಲವೇ ನಿಮಿಷಗಳ ಹಿಂದೆ ನಿಧನರಾದರು. ಶಬ್ದಗಳಿಲ್ಲ”. ಟೈಮ್ಸ್ ಆಫ್ ಇಂಡಿಯಾ, ಡೆಕ್ಕನ್ ಹೆರಾಲ್ಡ್, ಝೀ ನ್ಯೂಸ್, ಫ್ರೀ ಪ್ರೆಸ್ ಜರ್ನಲ್, ಡೆಕ್ಕನ್ ಕ್ರಾನಿಕಲ್, ಫಸ್ಟ್‌ಪೋಸ್ಟ್, ಮನಿಕಂಟ್ರೋಲ್ ಹಿಂದಿ ಮತ್ತು ಈಟಿವಿ ಭಾರತ್ ಸೇರಿದಂತೆ ಹಲವಾರು ಸುದ್ದಿ ಮಾಧ್ಯಮಗಳು ಸತ್ಯವನ್ನು ಪರಿಶೀಲಿಸದೆ ಅದೇ ಸುದ್ದಿಯನ್ನು ಪ್ರಕಟಿಸಿದವು.
FACT CHECK
ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಅಬ್ಬರಿಸುತ್ತಿದ್ದಾಗ, ಅಮರ್ತ್ಯ ಸೇನ್ ರವರ ಪುತ್ರಿ ನಂದನಾ ದೇಬ್ ಸೇನ್ ರವರು ಟ್ವೀಟ್‌ನಲ್ಲಿ ಸ್ಪಷ್ಟೀಕರಣ ನೀಡಿದರು, ಈ ಟ್ವೀಟ್ ನಲ್ಲಿ ಅವರು ವದಂತಿಗಳನ್ನು ನಿರಾಕರಿಸಿದರು ಮತ್ತು ತಮ್ಮ ತಂದೆ ಆರೋಗ್ಯವಾಗಿದ್ದಾರೆ ಮತ್ತು ಜೀವಂತವಾಗಿದ್ದಾರೆ ಎಂದು ಹೇಳಿದರು.
ಅಮರ್ತ್ಯ ಸೇನ್ ರವರ ಮರಣಕ್ಕೆ ಸಂಬಂಧಿಸಿದ ಸುದ್ದಿಯನ್ನು ಹಿಂಪಡೆಯುತ್ತಿರುವುದಾಗಿ ಪಿಟಿಐ ಕೂಡ ಪ್ರಕಟಿಸಿತು.
Deleting tweet on Amartya Sen based on a post from an unverified account in the name of Claudia Goldin. Actor Nandana Dev Sen denies news of death of her father, Nobel prize winner Amartya Sen.
— Press Trust of India (@PTI_News) October 10, 2023
ಹಾಗಾಗಿ, ಅಮರ್ತ್ಯ ಸೇನ್ ರವರ ಮರಣದ ಸಂಪೂರ್ಣ ಸುದ್ದಿಯು ಹೊಸದಾಗಿ ರಚಿಸಲಾದ ಪರಿಶೀಲಿಸಿರದ ಟ್ವಿಟರ್ ಖಾತೆಯ ಮೇಲೆ ಆಧಾರಿತವಾಗಿದೆ ಮತ್ತು ಎರಡು ದಿನಗಳ ಹಿಂದೆಯಷ್ಟೇ ಅವರನ್ನು ಭೇಟಿಯಾದ ಅವರ ಮಗಳಿಂದ ಸ್ಪಷ್ಟನೆ ಬರುವವರೆಗೂ ಈ ಸುದ್ದಿ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿತ್ತು.
Claim:ಟ್ವಿಟರ್ ಹೇಳಿಕೆ, “ಅಮರ್ತ್ಯ ಸೇನ್ ಮರಣಹೊಂದಿದ್ದಾರೆ” ಎಂದು ಹೇಳುತ್ತದೆ.
Conclusion: ಇಲ್ಲ, ಅವರ ಮಗಳು ಖಚಿತಪಡಿಸಿರುವಂತೆ ಅಮರ್ತ್ಯ ಸೇನ್ ಮರಣಹೊಂದಿಲ್ಲ.
ನಮ್ಮ ಮುದ್ರೆ :ಸಂಪೂರ್ಣವಾಗಿ ಸುಳ್ಳು—
[ಇದನ್ನೂ ಓದಿ : ಈ ದೀಪಾವಳಿಗೆ ಚೀನಾದ ಪಟಾಕಿಗಳನ್ನು ಖರೀದಿಸುವುದನ್ನು ತಪ್ಪಿಸಬೇಕೆಂದು ಗೃಹ ಸಚಿವಾಲಯವು ಜನರಿಗೆ ಹೇಳಿದೆಯೇ? ಸತ್ಯ ಪರಿಶೀಲನೆ ;