1982ರ ಭಾರತೀಯ ಅಂಚೆ ಚೀಟಿ ಎಂದು ಆರೋಪಿಸಲಾಗುತ್ತಿರುವ ಒಂದು ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಅಂಚೆ ಚೀಟಿಯಲ್ಲಿ ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯೊಂದಿಗೆ ಕುಸ್ತಿಯಾಡುತ್ತಿದ್ದು ಆ ಎರಡನೆಯ ವ್ಯಕ್ತಿಯನ್ನು ನೆಲದಿಂದ ಮೇಲೆತ್ತಿರುವುದನ್ನು ಕಾಣಬಹುದು.
ಚಿತ್ರದ ಜೊತೆಗೆ ವೈರಲ್ ಆಗುತ್ತಿರುವ ಹೇಳಿಕೆಯ ಪ್ರಕಾರ ಈ ಅಂಚೆ ಚೀಟಿಯು ಮುಸ್ಲಿಂ ಕುಸ್ತಿಪಟುವೊಬ್ಬನು ಅಗ್ರ ಹಿಂದೂ ಪಟುವನ್ನು ಹೊಡೆಯುತ್ತಿರುವುದನ್ನು ಚಿತ್ರಿಸುತ್ತದೆ. ಹೇಳಿಕೆಯಲ್ಲಿರುವ ವಿಷಯ ಹೀಗಿದೆ:
1982ರಲ್ಲಿ ಏಷ್ಯನ್ ಕ್ರೀಡಾಕೂಟದ ಸಮಯದಲ್ಲಿ ಇಂದಿರಾ ಗಾಂಧಿ ಈ ಅಂಚೆಚೀಟಿಯನ್ನು ಬಿಡುಗಡೆ ಮಾಡಿದರು. ಈ ಅಂಚೆ ಚೀಟಿಯು ಒಬ್ಬ ಒಟ್ಟೋಮನ್ ಮುಸ್ಲಿಂ ಕುಸ್ತಿಪಟುವು ಒಬ್ಬ ಹಿಂದೂ ಅಗ್ರ ಪಟೂವನ್ನು ಹೊಡೆಯುತ್ತಿರುವುದನ್ನು ಚಿತ್ರಿಸುತ್ತದೆ. ಕಾಂಗ್ರೆಸ್‌ನ ಮನಸ್ಥಿತಿ ಏನೆಂದು ನೀವು ಇದರಿಂದ ಯೋಚಿಸಬಹುದು.
ಈ ಚಿತ್ರವು 2019 ರಿಂದ X (ಈ ಹಿಂದೆ ಟ್ವಿಟರ್) ನಲ್ಲಿ ವೈರಲ್ ಆಗುತ್ತಿದೆ.
Only in #SickularIndia–This "ethnic looking"stamp was issued to commemorate #AsianGames1982 in Delhi when @INCIndia was in power. Am I reading it right that a Muslim wrestler is shown ready to thrash a Brahmin wrestler?This is neither good politics not good aesthetic. pic.twitter.com/9peMldtLlA
— Madhu Purnima Kishwar (@madhukishwar) May 8, 2019
ಈ Claim/ಹೇಳಿಕೆ ಸತ್ಯ ಪರಿಶೀಲನೆ ನಡೆಸಲು ಡಿಜಿಟೈ ಇಂಡಿಯಾಗೆ ವಾಟ್ಸಾಪ್‌ನಲ್ಲಿ ಒಂದು ಕೋರಿಕೆ ಬಂತು.
FACT CHECK
ಈ ಸಮರ್ಥನೆಯ ಸತ್ಯಾಸತ್ಯತೆಯನ್ನು ಸ್ಥಾಪಿಸಲು, ನಾವು 1982ರ ಏಷ್ಯನ್ ಕ್ರೀಡಾಕೂಟವನ್ನು ಅಂತರ್ಜಾಲದಲ್ಲಿ ಹುಡುಕಿದೆವು. ಫಲಿತಾಂಶಗಳ ಅನುಸಾರ, ಭಾರತವು ನವೆಂಬರ್ 19 ರಿಂದ ಡಿಸೆಂಬರ್ 4, 1982 ರವರೆಗೆ ದೆಹಲಿಯಲ್ಲಿ 9ನೇ ಏಷ್ಯನ್ ಕ್ರೀಡಾಕೂಟವನ್ನು ಆಯೋಜಿಸಿತ್ತು. ಈ ಘಟನೆಯ ಸ್ಮರಣಾರ್ಥ, ಆಗಿನ ಪ್ರಧಾನಿಗಳಾದ ಇಂದಿರಾ ಗಾಂಧಿಯವರು ಏಷ್ಯನ್ ಕ್ರೀಡಾಕೂಟದಲ್ಲಿ ಆಡಲಾದ ಕ್ರೀಡೆಗಳನ್ನು ತೋರಿಸುವ ಅನೇಕ ಸ್ಮರಣಾರ್ಥ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದ್ದರು. ಇಂಡಿಯಾ ಪೋಸ್ಟ್ ಬಿಡುಗಡೆ ಮಾಡಿದ ಕೆಲವು ಅಂಚೆಚೀಟಿಗಳು ಕ್ರೀಡಾನೌಕೆ ಯಾಟ್ ಚಲಾಯಿಸುವಿಕೆ, ದೋಣಿ ಚಲಾಯಿಸುವಿಕೆ, ಸೈಕ್ಲಿಂಗ್, ಜಾವೆಲಿನ್ ಎಸೆತ, ಡಿಸ್ಕಸ್ ಥ್ರೋ, ಫುಟ್‌ಬಾಲ್, ಕುಸ್ತಿ ಇತ್ಯಾದಿ ಕ್ರೀಡೆಗಳನ್ನು ಒಳಗೊಂಡಿವೆ.
1982ರಲ್ಲಿ ಬಿಡುಗಡೆಯಾದ ಅಂಚೆಚೀಟಿಗಳಲ್ಲಿ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಅಂಚೆ ಚೀಟಿ. ಈ ಅಂಚೆ ಚೀಟಿಯನ್ನು ಅಕ್ಟೋಬರ್ 30, 1982ರಂದು ಬಿಡುಗಡೆ ಮಾಡಲಾಯಿತು. ನಾವು ಅಂಚೆ ಚೀಟಿಯ ಕುರಿತು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಫಲಿತಾಂಶಗಳಲ್ಲೊಂದು ನಮ್ಮನ್ನು ಕಾಲ್ನೆಕ್ಟ್‌ನಲ್ಲಿನ ಈ ಪುಟಕ್ಕೆ ಕರೆದೊಯ್ಯಿತು, ಇದು ಅಂಚೆ ಚೀಟಿಯ ವಿವರಗಳನ್ನು ಬಹಿರಂಗಪಡಿಸಿತು. ಈ ಅಂಚೆ ಚೀಟಿಯನ್ನು ಎ.ರಾಮಚಂದ್ರನ್ ರವರು ವಿನ್ಯಾಸಗೊಳಿಸಿದ್ದರು.
ನಾವು ಕೀವರ್ಡ್ ಹುಡುಕಾಟವನ್ನು ನಡೆಸಿದಾಗ ಎ ರಾಮಚಂದ್ರನ್ ರವರ ಈ ಚಿತ್ರವು ಜಾನಕಿಯವರ ಪರ್ಷಿಯನ್ ವರ್ಣಚಿತ್ರದ ನಕಲು ಎಂದು ನಮಗೆ ತಿಳಿದುಬಂತು. ಈ ಕಲೆಯು 17ನೇ ಶತಮಾನದ ಆರಂಭದ ಮುಘಲ ಶೈಲಿಯನ್ನು ಪ್ರತಿಬಿಂಬಿಸುತ್ತದೆ. ಮೂಲ ವರ್ಣಚಿತ್ರವನ್ನು ದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಕಾಣಬಹುದು. ಫಲಿತಾಂಶಗಳು ಯಾವುದೇ ಧರ್ಮದ ಉಲ್ಲೇಖವನ್ನು ಮಾಡುವುದಿಲ್ಲ.
ಹಾಗಾಗಿ, ಅಂಚೆಚೀಟಿಯು ಧಾರ್ಮಿಕ ಅರ್ಥವನ್ನು ಹೊಂದಿದೆಯೆಂಬ ಹೇಳಿಕೆ ಸುಳ್ಳು.
Claim/ಹೇಳಿಕೆ:ಇಂದಿರಾ ಗಾಂಧಿಯವರು ಬಿಡುಗಡೆ ಮಾಡಿದ 1982ರ ಸ್ಮರಣಾರ್ಥ ಅಂಚೆಚೀಟಿಯು ಮುಸ್ಲಿಂ ಕುಸ್ತಿಪಟುವೊಬ್ಬ ಹಿಂದೂ ಕುಸ್ತಿಪಟುವನ್ನು ಥಳಿಸುತ್ತಿರುವುದನ್ನು ತೋರಿಸುತ್ತದೆ.
CONCLUSION/ಕಡೆನುಡಿ: 1982 ರಲ್ಲಿ, ಇಂದಿರಾ ಗಾಂಧಿಯವರು ದೆಹಲಿಯಲ್ಲಿ ನಡೆದ 9ನೇ ಏಷ್ಯನ್ ಕ್ರೀಡಾಕೂಟದ ನೆನಪಿಗಾಗಿ ಅನೇಕ ಸ್ಮರಣಾರ್ಥ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದರು. ಪರ್ಷಿಯನ್ ವರ್ಣಚಿತ್ರವನ್ನಾಧರಿಸಿ ಎ. ರಾಮಚಂದ್ರನ್ ರವರು ವೈರಲ್ ಆಗಿರುವ ಅಂಚೆ ಚೀಟಿಯನ್ನು ವಿನ್ಯಾಸಗೊಳಿಸಿದ್ದರು. ಈ ಚಿತ್ರಕಲೆಗೆ ಯಾವುದೇ ಧಾರ್ಮಿಕ ಅರ್ಥವಿಲ್ಲ.
ರೇಟಿಂಗ್:ತಪ್ಪು ನಿರೂಪಣೆ–???
[ಇದನ್ನೂ ಓದಿ: ಈ ದೀಪಾವಳಿಗೆ ಚೀನಾದ ಪಟಾಕಿಗಳನ್ನು ಖರೀದಿಸುವುದನ್ನು ತಪ್ಪಿಸಬೇಕೆಂದು ಗೃಹ ಸಚಿವಾಲಯವು ಜನರಿಗೆ ಹೇಳಿದೆಯೇ? ಸತ್ಯ ಪರಿಶೀಲನೆ ;